Dance Karnataka Dance: ಈ ವೀಕೆಂಡ್‍ನಲ್ಲಿ ಡಿಕೆಡಿ ಫಿನಾಲೆ, ಗೆದ್ದವರ ಕೈ ಸೇರಲಿದೆ ಅಪ್ಪು 'ಪವರ್ ಸ್ಟಾರ್ ಟ್ರೋಫಿ'

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಗೆಲ್ಲುವವರಿಗೆ ಈ ಬಾರಿ ಅಪ್ಪು ಇವರು ವಿಶೇಷ 'ಪವರ್ ಸ್ಟಾರ್ ಟ್ರೋಫಿ' ಸಿಗಲಿಗೆ. ಪುನೀತ್ ನೆನಪಿಗಾಗಿ ಈ ಬಾರಿ ಪವರ್ ಸ್ಟಾರ್ ಟ್ರೋಫಿಯನ್ನು ಭರ್ಜರಿಯಾಗಿ ಅನಾವರಣಗೊಳಿಸಲಾಗಿತ್ತು. ಈಗ ಇದು ಯಾರ ಪಾಲಾಗಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.

ಡಿಕೆಡಿ ಫಿನಾಲೆ- 'ಪವರ್ ಸ್ಟಾರ್ ಟ್ರೋಫಿ'

ಡಿಕೆಡಿ ಫಿನಾಲೆ- 'ಪವರ್ ಸ್ಟಾರ್ ಟ್ರೋಫಿ'

 • Share this:
  ಜೀ ಕನ್ನಡ (Zee Kannada) ವಾಹಿನಿ ಪ್ರತಿದಿನ ಧಾರಾವಾಹಿಗಳ (Serials) ಮೂಲಕ ಜನರನ್ನು ಸೆಳೆದ್ರೆ, ವೀಕೆಂಡ್‍ನಲ್ಲಿ ವಿಭಿನ್ನವಾದ ಕಾರ್ಯಕ್ರಮ ರಿಯಾಲಿಟಿ ಶೋಗಳ (Reality show) ಮೂಲಕ ಟಿ.ವಿ ಮುಂದೆಯೇ ಕೂರುವಂತೆ ಮಾಡುತ್ತೆ. ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance), ಸರಿಗಮಪ ಮೂಲಕ ಹೆಸರುವಾಸಿಯಾಗಿದೆ. ಸದ್ಯ ಪ್ರತಿ ಶನಿವಾರ, ಭಾನುವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಡೆಯುತ್ತಿದೆ. ಸ್ಪರ್ಧಿಗಳು ಕುಣಿತ ನೋಡುವುದೇ ಕಣ್ಣಿಗೆ ಹಬ್ಬ. ಪ್ರತಿವಾರವೂ ಒಂದೊಂದು ಥೀನ್‍ನಲ್ಲಿ ಡ್ಯಾನ್ಸ್ ಮಾಡ್ತಾರೆ. ನಿರೂಪಣೆಯನ್ನು ಅನುಶ್ರೀ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಜಡ್ಜ್ ಗಳಾಗಿ, ನಟ ಶಿವರಾಜ್ ಕುಮಾರ್  (Hero Shiva Raj Kumar), ನಟಿ ರಕ್ಷಿತಾ, ಅರ್ಜುನ್ ಜನ್ಯ, ಚಿನ್ನಿ ಮಾಸ್ಟರ್ ತೀರ್ಪು ನೀಡುತ್ತಾರೆ. ಇದೇ ಶನಿವಾರ ಸಂಜೆ 6 ಗಂಟೆಗೆ ಗ್ರಾಂಡ್ ಫಿನಾಲೆ (Finale) ಕಾರ್ಯಕ್ರಮ ಇದೆ. ಗೆದ್ದವರಿಗೆ ಪವರ್ ಸ್ಟಾರ್ ಟ್ರೋಫಿ (Power Star Trophy) ಸಿಗಲಿದೆ.

  ಶಿವರಾಜ್‍ಕುಮಾರ್ ಅವರು ಡ್ಯಾನ್ಸಿಂಗ್ ಮಹಾಗುರು
  ಡ್ಯಾನ್ಸ್ ಕರ್ನಾಟಕ ಡ್ಯಾನ್ ಸೀಸನ್ 6 ಶುರುವಾಗಿ ಐದು ತಿಂಗಳು ಆಗಿದೆ. ಈ 5 ತಿಂಗಳು ಕಾಲ ವೀಕ್ಷಕರನ್ನು ಕುಣಿಸಿ ರಂಜಿಸಿದ್ದಾರೆ. ಈ ಕಾರ್ಯಕ್ರಮ ಕಳೆದ ಐದು ಸೀಸನ್‍ಗಳಿಗಿಂತ ಭಿನ್ನವಾಗಿತ್ತು. ಈ ಬಾರಿ ಡಿಕೆಡಿಗೆ ಕರುನಾಡ ಚಕ್ರವರ್ತಿ ಡಾ ಶಿವರಾಜ್‍ಕುಮಾರ್ ಅವರು ಡ್ಯಾನ್ಸಿಂಗ್ ಮಹಾಗುರುವಾಗಿ ಆಗಮಿಸಿದ್ದರು.

  ಶಿವಣ್ಣನನ್ನು ನೋಡಲು ಅದೆಷ್ಟೋ ಅಭಿಮಾನಿಗಳು ಕಾರ್ಯಕ್ರಮ ನೋಡ್ತಾ ಇದ್ರೂ. ಶಿವಣ್ಣನ್ನೂ ಸಹ ಸ್ಪರ್ಧಿಗಳಿಗೆ ಸಾಥ್ ನಿಡ್ತಾ ಇದ್ರು. ಜಡ್ಜ್ ಗಳಾಗಿ, ನಟಿ ರಕ್ಷಿತಾ, ಅರ್ಜುನ್ ಜನ್ಯ, ಚಿನ್ನಿ ಮಾಸ್ಟರ್ ತೀರ್ಪು ನೀಡುತ್ತಿದ್ರು.

  ಇದನ್ನೂ ಓದಿ: Dance Karnataka Dance: ಅಬ್ಬಬ್ಬಾ ಏನ್ ಗುರು ಶಿವಣ್ಣನ ಡ್ಯಾನ್ಸ್! ಜೋಗಿ ಕುಣಿದ್ರೆ ಅಲ್ಲಿ ಸೃಷ್ಟಿಯಾಗೋದು ಜಾತ್ರೆನೆ ಅಲ್ವಾ?

  ಪವರ್ ಸ್ಟಾರ್ ಟ್ರೋಫಿ
  ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಗೆಲ್ಲುವವರಿಗೆ ಈ ಬಾರಿ ಅಪ್ಪು ಇವರು ವಿಶೇಷ 'ಪವರ್ ಸ್ಟಾರ್ ಟ್ರೋಫಿ' ಸಿಗಲಿಗೆ. ಪುನೀತ್ ನೆನಪಿಗಾಗಿ ಈ ಬಾರಿ ಪವರ್ ಸ್ಟಾರ್ ಟ್ರೋಪಿಯನ್ನು ಭರ್ಜರಿಯಾಗಿ ಅನಾವರಣಗೊಳಿಸಲಾಗಿತ್ತು. ಈಗ ಇದು ಯಾರ ಪಾಲಾಗಲಿದೆ ಎನ್ನುವ ಕುತೂಹಲ ಹೆಚ್ಚಾಗಿದೆ.
  View this post on Instagram


  A post shared by Zee Kannada (@zeekannada)
  ಫಿನಾಲೆ ಹಂತಕ್ಕೆ ತಲುಪಿದ 7 ಜೋಡಿಗಳು
  ಡಿಕೆಡಿ ಕಾರ್ಯಕ್ರಮವು ಭರ್ಜರಿ ರೇಟಿಂಗ್ ಗಳಿಸುತ್ತಾ ಬಂದಿದೆ. ವಿವಿಧ ಜೋಡಿಗಳ ಪೈಕಿ 7 ಜೋಡಿಗಳು ಫಿನಾಲೆ ಹಂತಕ್ಕೆ ತಲುಪಿದ್ದಾರೆ. ಶಶಾಂಕ್ -ತ್ರಿಷಾ, ದಕ್ಷಿತ್ ಗೌಡ- ಪ್ರಣನ್ಯ, ಗಗನ್ ಶೆಟ್ಟಿ- ದಿಶಾ ದೇಚಮ್ಮ, ಸದ್ದಿನ್ ಎಸ್ ಶೆಟ್ಟಿ- ಶಾರಿಕಾ ಶೆಟ್ಟಿ, ಋಷಿಕೇಶ್-ಶ್ರಾವ್ಯ,
  ಕೀತಾ ಜಾನ್ಸ್- ಆಶ್ರಿತಾ ಎಸ್ ವಿ, ಮಹೇಶ್-ಚಾಹತ್ ಶಬೀರ್. ಇವರಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲ ಹೆಚ್ಚಾಗಿದೆ. ಎಲ್ಲರೂ ಅದ್ಭುತವಾಗಿ ಡ್ಯಾನ್ಸ್ ಮಾಡ್ತಾರೆ.

  ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (


  ಸ್ಪರ್ಧಿಗಳಿಗೆ ಸಾಥ್ ನೀಡುವ ಶಿವಣ್ಣ
  ಶಿವಣ್ಣ ಪ್ರತಿ ವಾರವೂ ಸ್ಪರ್ಧಿಗಳಿಗೆ ಸಾರ್ತ ನಿಡ್ತಾ ಇದ್ರು. ಪ್ರತಿ ವಾರವೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಸ್ಪರ್ಧಿಗಳನ್ನು ಹುರಿದುಂಬಿಸುತ್ತಾರೆ. ತಮಗೆ ಹಾಡು ಇಷ್ಟ ಆದ್ರೆ, ಡ್ಯಾನ್ಸ್ ಮಾಡಬೇಕು ಅನ್ನಿಸಿದ್ರೆ, ತಕ್ಷಣವೇ ಎದ್ದು ಹೋಗಿ ಡ್ಯಾನ್ಸ್ ಮಾಡುತ್ತಾರೆ. ಈ ಬಾರಿಯೇ ಶಿವಣ್ಣ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಜಡ್ಜ್ ಆಗಿ ಹೋಗಿದ್ದಾರೆ. ಎಲ್ಲರ ಮನಸ್ಸನ್ನು ಮತ್ತೆ ಮತ್ತೆ ಕದಿಯುತ್ತಾರೆ ಈ ಜೋಗಿ. ಇವರನ್ನು ಶೋನಲ್ಲಿ ನೋಡೋದೇ ಚೆಂದ.

  ಇದನ್ನೂ ಓದಿ: Lakshana Serial: ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ಮೌರ್ಯ ಎಸ್ಕೇಪ್! ಹೊಸ ವಿಲನ್ ಎಂಟ್ರಿ, ಯಾರದು?

  ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ -6 ನ ಗ್ರಾಂಡ್ ಫಿನಾಲೆ ಚಿತ್ರೀಕರಣ ಇಂದು ಸಂಜೆ 5.30ಕ್ಕೆ ಕನಕಪುರದ ರೂರಲ್ ಡಿಗ್ರಿ ಕಾಲೇಜ್ ಮೈದಾನದಲ್ಲಿ ನಡೆಯಲಿದೆ. ಕನಕಪುರದ ಕಲಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕಾಗಿ ವಾಹಿನಿ ವಿನಂತಿಸಿದೆ.
  Published by:Savitha Savitha
  First published: