Dance Karnataka Dance: ಅಬ್ಬಬ್ಬಾ ಏನ್ ಗುರು ಶಿವಣ್ಣನ ಡ್ಯಾನ್ಸ್! ಜೋಗಿ ಕುಣಿದ್ರೆ ಅಲ್ಲಿ ಸೃಷ್ಟಿಯಾಗೋದು ಜಾತ್ರೆನೆ ಅಲ್ವಾ?

ಶಿವಣ್ಣ ಪ್ರತಿ ವಾರವೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಸ್ಪರ್ಧಿಗಳನ್ನು ಹುರಿದುಂಬಿಸುತ್ತಾರೆ. ತಮಗೆ ಹಾಡು ಇಷ್ಟ ಆದ್ರೆ, ಡ್ಯಾನ್ಸ್ ಮಾಡಬೇಕು ಅನ್ನಿಸಿದ್ರೆ, ತಕ್ಷಣವೇ ಎದ್ದು ಹೋಗಿ ಡ್ಯಾನ್ಸ್ ಮಾಡುತ್ತಾರೆ. ಶಿವಣ್ಣ ಕುಣಿದರೆ ಅಲ್ಲಿ ಜಾತ್ರೆನೇ ಸೃಷ್ಟಿಯಾಗುತ್ತೆ. ಈ ಬಾರಿಯ ಡಿಕೆಡಿಯಲ್ಲಿ ಸ್ಪೆಷಲ್ ಗೆಸ್ಟ್​ ಕೂಡ ಒಬ್ಬರು ಬಂದಿದ್ದಾರೆ.

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್

ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್

  • Share this:
    ಜೀ ಕನ್ನಡ (Zee Kannada)ವಾಹಿನಿ ಪ್ರತಿದಿನ ಧಾರಾವಾಹಿಗಳ (Serials) ಮೂಲಕ ಜನರನ್ನು ಸೆಳೆದ್ರೆ, ವೀಕೆಂಡ್‍ನಲ್ಲಿ ವಿಭಿನ್ನವಾದ ಕಾರ್ಯಕ್ರಮ ರಿಯಾಲಿಟಿ ಶೋಗಳ (Reality show) ಮೂಲಕ ಟಿ.ವಿ ಮುಂದೆಯೇ ಕೂರುವಂತೆ ಮಾಡುತ್ತೆ. ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance), ಸರಿಗಮಪ ಮೂಲಕ ಹೆಸರುವಾಸಿಯಾಗಿದೆ. ಸದ್ಯ ಪ್ರತಿ ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಡೆಯುತ್ತಿದೆ. ಸ್ಪರ್ಧಿಗಳು ಕುಣಿತ ನೋಡುವುದೇ ಕಣ್ಣಿಗೆ ಹಬ್ಬ. ಪ್ರತಿವಾರವೂ ಒಂದೊಂದು ಥೀಮ್‍ನಲ್ಲಿ ಡ್ಯಾನ್ಸ್ ಮಾಡ್ತಾರೆ. ಆ್ಯಂಕರ್ ಅನುಶ್ರೀ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಜಡ್ಜ್ ಗಳಾಗಿ, ನಟ ಶಿವರಾಜ್ ಕುಮಾರ್ (Hero Shiva Raj Kumar), ನಟಿ ರಕ್ಷಿತಾ, ಅರ್ಜುನ್ ಜನ್ಯ, ಚಿನ್ನಿ ಮಾಸ್ಟರ್ ತೀರ್ಪು ನೀಡುತ್ತಾರೆ. ಶಿವಣ್ಣ ಕುಣಿದರೆ ಅಲ್ಲಿ ಜಾತ್ರೆನೇ ಸೃಷ್ಟಿಯಾಗುತ್ತೆ.

    ಸಂಬಂಧಗಳನ್ನು ಸಂಭ್ರಮಿಸೋ ಫ್ಯಾಮಿಲಿ ರೌಂಡ್
    ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಈ ಬಾರಿ ಸಂಬಂಧಗಳನ್ನು ಸಂಭ್ರಮಿಸೋ ಫ್ಯಾಮಿಲಿ ರೌಂಡ್ ಮಹಾಸಂಚಿಕೆ ಇದೆ. ಸ್ಪರ್ಧಿಗಳು ತನ್ನ ಕುಟುಂಬದವರ ಜೊತೆ ಹೆಜ್ಜೆ ಹಾಕಲಿದ್ದಾರೆ. ಭಾನುವಾರ ಸಂಜೆ 7ಕ್ಕೆ ಕಾರ್ಯಕ್ರಮ ಪ್ರಸಾರವಾಗಲಿದೆ. ಸ್ಪರ್ಧಿಗಳು ಕುಟುಂಬದವರ ಜೊತೆ ಹೇಗೆ ಡ್ಯಾನ್ಸ್ ಮಾಡ್ತಾರೆ ಅನ್ನೋದನ್ನು ನೋಡೋದಕ್ಕೆ ಡಿಕೆಡಿ ನೋಡಿ.

    ಶಿವಣ್ಣನನ್ನು ಭೇಟಿಯಾದ ಕಾಫಿನಾಡು ಚಂದು
    ಡಿಕೆಡಿ ಈ ವಾರದ ಮಹಾಸಂಚಿಕೆಯಲ್ಲಿ ಕಾಫಿನಾಡು ಚಂದು ಶಿವಣ್ಣನನ್ನು ಭೇಟಿಯಾಗಿದ್ದಾರೆ. ಶಿವಣ್ಣ ನಿಮ್ಮನ್ನು ನೋಡಬೇಕು, ನಿಮ್ಮ ಜೊತೆ ಕಾಫಿ ಕುಡಿಬೇಕು, ನಿಮ್ಮನ್ನ ಮೀಟ್ ಮಾಡಲೇ ಬೇಕು ಎಂದು ಕಾಫಿನಾಡಿನ ಚಂದು ಹಾಡಿದ್ದರು. ಆ್ಯಂಕರ್ ಅನುಶ್ರೀ ಅವರಿಗೂ ವಿಶೇಷ ವಿಡಿಯೋ ಮೂಲಕ ಶಿವಣ್ಣ ಅವರನ್ನು ಮೀಟ್ ಮಾಡಿಸುವಂತೆ ಕೇಳಿಕೊಂಡಿದ್ದರು. ಒಮ್ಮೆಯಾದರೂ ಶಿವರಾಜ್‍ಕುಮಾರ್ ಅವರನ್ನು ಭೇಟಿ ಆಗಬೇಕು ಎಂಬುದು ಚಂದು ಮನದ ಆಸೆ ಆಗಿತ್ತು. ಅದನ್ನು ಜೀ ಕನ್ನಡ ವಾಹಿನಿ ಈಡೇರಿಸಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಚಂದು ಅವರನ್ನು ಕರೆಸಲಾಗಿದೆ.

    ಇದನ್ನೂ ಓದಿ: Jote Joteyali: ಆಸ್ತಿ ಹಾಗೂ ಅನುವನ್ನು ಬಿಟ್ಟು ಹೋಗ್ತಾನಾ ಆರ್ಯವರ್ಧನ್​? ಇವತ್ತೇ ಅನಿರುದ್ಧ್ ಕೊನೇ ಸಂಚಿಕೆ!?

    ಶಿವಣ್ಣನ ಕಂಡು ಕುಣಿದು ಕುಪ್ಪಳಿಸಿದ ಚಂದು!
    ಈ ವೇಳೆ ಶಿವಣ್ಣನ ಎದುರು ಅವರು ತಮ್ಮದೇ ಶೈಲಿಯಲ್ಲಿ ಹಾಡು ಹೇಳಿ ಕಾಫಿನಾಡು ಚಂದು ರಂಜಿಸಿದ್ದಾರೆ. ಈ ಎಪಿಸೋಡ್ ನೋಡಲು ಫ್ಯಾನ್ಸ್ ಕಾದಿದ್ದಾರೆ. ಇದೇ ಭಾನುವಾರ ಮಹಾಸಂಚಿಕೆಯಲ್ಲಿ ಇದೆಲ್ಲಾ ಪ್ರಸಾರವಾಗಲಿದೆ.

    ಡ್ಯಾನ್ಸ್ ಕಿಂಗ್ ಕುಣಿದ್ರೆ ಅಲ್ಲಿ ಕ್ರಿಯೇಟ್ ಆಗೋದು ಜಾತ್ರೆ
    ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಡ್ಯಾನ್ಸ್ ಎಂದ್ರೆ ಮೊದಲೇ ಇಷ್ಟ. ಅವರಿಗೆ ಯಾವುದಾದ್ರೂ ಸಾಂಗ್ ಇಷ್ಟ ಆದ್ರೆ ಸ್ಟೇಜ್ ಮೇಲೆ ಹೋಗಿ ಡ್ಯಾನ್ಸ್ ಮಾಡುತ್ತಾರೆ. ಈ ವಾರವು ಸಹ ‘ಚಾಂಗು ಬಡ ಚಾಂಗುರೇ ನೋಡು ಮಗಾ ಊರ ತುಂಬಾ ಜಾತರೆ’ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಶಿವಣ್ಣನ ಡ್ಯಾನ್ಸ್ ನೋಡಿ, ಅಲ್ಲಿ ಕೂತಿದ್ದವರು ಹಾಗೂ ಕರುನಾಡು ಫಿದಾ ಆಗಿದೆ.








    View this post on Instagram






    A post shared by Zee Kannada (@zeekannada)






    ಇದನ್ನೂ ಓದಿ: Sa Ri Ga Ma Pa: ಹಾಡಿನಿಂದ ಮೋಡಿ ಮಾಡೋ ಮುದ್ದು ಮಕ್ಕಳಿಗೆ ಅವಕಾಶ, ಸರಿಗಮಪ ಸೀಸನ್-19 ಲಿಟಲ್ ಚಾಂಪ್ಸ್ ಆಡಿಷನ್ 

    ಸ್ಪರ್ಧಿಗಳಿಗೆ ಸಾಥ್ ನೀಡುವ ಶಿವಣ್ಣ
    ಶಿವಣ್ಣ ಇದೊಂದೆ ಹಾಡಿಗೆ ಹೆಜ್ಜೆ ಹಾಕಿಲ್ಲ. ಪ್ರತಿ ವಾರವೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಸ್ಪರ್ಧಿಗಳನ್ನು ಹುರಿದುಂಬಿಸುತ್ತಾರೆ. ತಮಗೆ ಹಾಡು ಇಷ್ಟ ಆದ್ರೆ, ಡ್ಯಾನ್ಸ್ ಮಾಡಬೇಕು ಅನ್ನಿಸಿದ್ರೆ, ತಕ್ಷಣವೇ ಎದ್ದು ಹೋಗಿ ಡ್ಯಾನ್ಸ್ ಮಾಡುತ್ತಾರೆ. ಈ ಬಾರಿಯೇ ಶಿವಣ್ಣ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಜಡ್ಜ್ ಆಗಿ ಹೋಗಿದ್ದಾರೆ. ಎಲ್ಲರ ಮನಸ್ಸನ್ನು ಮತ್ತೆ ಮತ್ತೆ ಕದಿಯುತ್ತಾರೆ ಈ ಜೋಗಿ. ಇವರನ್ನು ಶೋನಲ್ಲಿ ನೋಡೋದೇ ಚೆಂದ.
    Published by:Savitha Savitha
    First published: