Dance Karnataka Dance ಶೋನಲ್ಲಿ ದಿಗ್ಗಜರ ಸಮಾಗಮ: ಜಗ್ಗೇಶ್, ರವಿಚಂದ್ರನ್, ಶಿವಣ್ಣ ಮೋಡಿ

ಇವತ್ತು ಡ್ಯಾನ್ ಕರ್ನಾಟಕ ಡ್ಯಾನ್ಸ್ ಶೋಗೆ ಇಬ್ಬರು ಮಹಾನ್ ದಿಗ್ಗಜರು ಬರಲಿದ್ದಾರೆ. ಚಂದನ ವನದ ಚರ್ಕವರ್ತಿಗಳ ಅದ್ಧೂರಿ ಎಂಟ್ರಿಯಾಗಲಿದೆ. ಮೊದಲು ಕಾರ್ಯಕ್ರಮಕ್ಕೆ ಚಂದನವನದಲ್ಲಿ ವಿನೂತನ ಪರ್ವವನ್ನು ಆರಂಭ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅದ್ಧೂರಿ ಎಂಟ್ರಿಯಾಗಿದೆ.ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ನಟ ಜಗ್ಗೇಶ್ ಸಹ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ.

ಡಿಕೆಡಿ ಕಾರ್ಯಕ್ರಮ
(ಕೃಪೆ: ಜೀ ಕನ್ನಡ)

ಡಿಕೆಡಿ ಕಾರ್ಯಕ್ರಮ (ಕೃಪೆ: ಜೀ ಕನ್ನಡ)

 • Share this:
  ಜೀ ಕನ್ನಡ (Zee Kannada) ವಾಹಿನಿ ಪ್ರತಿದಿನ ಧಾರಾವಾಹಿಗಳ ಮೂಲಕ ಜನರನ್ನು ಸೆಳೆದ್ರೆ, ವೀಕೆಂಡ್‍ನಲ್ಲಿ ವಿಭಿನ್ನವಾದ ಕಾರ್ಯಕ್ರಮ ರಿಯಾಲಿಟಿ ಶೋಗಳ (Reality show) ಮೂಲಕ ಜನ ಟಿ.ವಿ ಮುಂದೆಯೇ ಕೂರುವಂತೆ ಮಾಡುತ್ತೆ. ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance), ಸರಿಗಮಪ ಮೂಲಕ ಹೆಸರುವಾಸಿಯಾಗಿದೆ. ಸದ್ಯ ಪ್ರತಿ ಶನಿವಾರ, ಭಾನುವಾರ (Sunday) ರಾತ್ರಿ 9 ಗಂಟೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಡೆಯುತ್ತಿದೆ. ಸ್ಪರ್ಧಿಗಳು ಕುಣಿತ ನೋಡುವುದೇ ಕಣ್ಣಿಗೆ ಹಬ್ಬ. ಪ್ರತಿವಾರವೂ ಒಂದೊಂದು ಥೀಮ್‍ನಲ್ಲಿ ಡ್ಯಾನ್ಸ್ ಮಾಡ್ತಾರೆ. ಆಂಕರ್ ಅನುಶ್ರೀ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಜಡ್ಜ್ ಗಳಾಗಿ, ನಟ ಶಿವರಾಜ್ ಕುಮಾರ್, ನಟಿ ರಕ್ಷಿತಾ, ಅರ್ಜುನ್ ಜನ್ಯ, ಚಿನ್ನಿ ಮಾಸ್ಟರ್ ತೀರ್ಪು ನೀಡುತ್ತಾರೆ. ಇವತ್ತು ಶೋನಲ್ಲಿ ದಿಗ್ಗಜರ ಸಮಾಗಮವಾಗಲಿದೆ. ಜಗ್ಗೇಶ್, ರವಿಚಂದ್ರನ್ (Ravichandran) ಬರಲಿದ್ದಾರೆ.

  ಸ್ಯಾಂಡಲ್ ವುಡ್ ಸೂಪರ್ ಹಿಟ್ ರೌಂಡ್
  ಈ ಬಾರಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಸ್ಯಾಂಡಲ್‍ವುಡ್ ಸೂಪರ್ ಹಿಟ್ ರೌಂಡ್ ಇದೆ. ಅದಕ್ಕೆ ಪ್ರತಿಯೊಂದ ಜೋಡಿಗಳು ಸೂಪರ್ ಹಿಟ್ ಹಾಡನ್ನು ಸೆಲೆಕ್ಟ್ ಮಾಡಿ ಸಖತ್ ಆಗಿ ಹೆಜ್ಜೆ ಹಾಕಲಿದ್ದಾರೆ. ಒಂದೊಂದು ಪಾರ್ಪಾಮೆನ್ಸ್ ನೋಡಲು ಕಣ್ಣಿಗೆ ಹಬ್ಬ. ಸ್ಪರ್ಧಿಗಳ ಮನ ಮೋಹಕ ಡ್ಯಾನ್ಸ್ ನೋಡಿ ಜಡ್ಜ್ ಗಳು ಪಿದಾ ಆಗಿದ್ದಾರೆ. ಎಲ್ಲವೂ, ಎಲ್ಲರೂ ಸಖತ್ ಆಗಿ ಹೆಜ್ಜೆ ಹಾಕಲಿದ್ದಾರೆ.

  ಚಂದನವನದ ದಿಗ್ಗಜರ ಅದ್ಧೂರಿ ಆಗಮನ
  ಇವತ್ತು ಡ್ಯಾನ್ ಕರ್ನಾಟಕ ಡ್ಯಾನ್ಸ್ ಶೋಗೆ ಇಬ್ಬರು ಮಹಾನ್ ದಿಗ್ಗಜರು ಬರಲಿದ್ದಾರೆ. ಚಂದನ ವನದ ಚರ್ಕವರ್ತಿಗಳ ಅದ್ಧೂರಿ ಎಂಟ್ರಿಯಾಗಲಿದೆ. ಮೊದಲು ಕಾರ್ಯಕ್ರಮಕ್ಕೆ ಚಂದನವನದಲ್ಲಿ ವಿನೂತನ ಪರ್ವವನ್ನು ಆರಂಭ ಮಾಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅದ್ಧೂರಿ ಎಂಟ್ರಿಯಾಗಿದೆ. ಸಿನಿಮಾ ಅಂದ್ರೆ ವಿಶೇಷವಾಗಿರಬೇಕು ಎಂದು ಹೇಳಿದ ಕನಸುಗಾರ ರವಿಚಂದ್ರನ್.

  ಇದನ್ನೂ ಓದಿ: Shiva Rajkumar: ಶಿವಣ್ಣ-ಗೀತಕ್ಕ ಲಗ್ನ ಪತ್ರಿಕೆಯಲ್ಲಿ ಏನಂತ ಹೆಸರು ಬರೆಸಿದ್ದರು ರಾಜಣ್ಣ? ವೈರಲ್ ಆಯ್ತು ದೊಡ್ಮನೆ ದೊಡ್ಮಗನ ಮದ್ವೆ ಇನ್ವಿಟೇಶನ್ 

  ರವಿ ಬೋಪಣ್ಣ ಸಿನಿಮಾ ಬಗ್ಗೆ ಮಾತು
  ರವಿಚಂದ್ರನ್ ಅವರು ಅವರ ಚಿತ್ರ ರವಿ ಬೋಪಣ್ಣ ಬಗ್ಗೆ ಡಿಕೆಡಿ ವೇದಿಕೆಯಲ್ಲಿ ಮಾತುಗಳನ್ನು ಆಡಿದ್ದಾರೆ. ರವಿಚಂದ್ರನ್ ಅಂದ್ರೆ ಪ್ರೀತಿ. ಲವ್ ಇಲ್ಲದೇ ರವಿಚಂದ್ರನ್ ಇಲ್ಲ. ಈ ಸಿನಿಮಾದಲ್ಲಿ ಎರೆಡೆರೆಡು ಲವ್ ಸ್ಟೋರಿ ಇದೆ. ನೋವಿಲ್ಲದೇಯೂ ರವಿಚಂದ್ರನ್ ಇಲ್ಲ. ಅದು ಈ ಕಥೆಯಲ್ಲಿ ಇದೆ. ಕುಟುಂಬದವರು ಕೂತು ನೋಡಬಹುದಾದ ಸಿನಿಮಾ ಎಂದಿದ್ದಾರೆ. ಅಲ್ಲದೇ ಈಶ್ವರಿ ಪ್ರೋಡಕ್ಷನ್‍ಗೆ 58 ವರ್ಷ ಆಗಿದೆಯಂತೆ. ಅದನ್ನು ಸಹ ನೆನೆದಿದ್ದಾರೆ.

  ರವಿ ಅಂದ್ರೆ ಸೂರ್ಯ, ಡಿಕೆಡಿ ಬೆಳಕು ಬಂದಂತೆ ಎಂದ ಶಿವಣ್ಣ
  ರವಿಚಂದ್ರನ್, ಶಿವರಾಜ್ ಕುಮಾರ್ ಮೊದಲಿನಿಂದಲೂ ಒಳ್ಳೆಯ ಸ್ನೇಹಿತರು. ಯಾವಾಗಲೂ ಅದೇ ಆತ್ಮೀಯತೆಯನ್ನು ಮುಂದುವರೆಸಿಕೊಂಡು ಬಂದಿದ್ದಾರೆ. ರವಿಚಂದ್ರ್ ಕಾರ್ಯಕ್ರಮಕ್ಕೆ ಬಂದಿದ್ದಕ್ಕೆ, ಶಿವಣ್ಣ ರವಿ ಅಂದ್ರೆ ಬೆಳಕು. ಅವರು ಬಂದಿರೋದೇ ಖುಷಿ. ಡಿಕೆಡಿ ವೇದಿಕೆಗೆ ಬೆಳಕು ಬಂದಂತೆ ಆಯ್ತು ಎಂದಿದ್ದಾರೆ.

  ಇದನ್ನೂ ಓದಿ: Anchor Shalini: ನವಿಲು, ವೀಳ್ಯದೆಲೆ, ಬಾಳೆಹಣ್ಣು ಎಲ್ಲಾ ಆಯ್ತು ಇದೀಗ ದೇವಿ ದರ್ಶನ; ಶಾಲಿನಿ ಬ್ಲೌಸ್ ಡಿಸೈನರ್​ಗೆ ನಮೋ ನಮಃ

  ಅದ್ಧೂರಿಯಾಗಿ ಕಾರ್ಯಕ್ರಮಕ್ಕೆ ಎಂಟ್ರಿ ಕೊಟ್ಟ ಜಗ್ಗೇಶ್
  ಇನ್ನು ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ನಟ ಜಗ್ಗೇಶ್ ಸಹ ಅದ್ಧೂರಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ನಾನು ರಾಜ್ ಕುಮಾರ್ ಅವರ ದೊಡ್ಡ ಅಭಿಮಾನಿ ಎಂದಿದ್ದಾರೆ. ಅಲ್ಲದೇ ಶಿವಣ್ಣ, ಜಗ್ಗೇಶ್, ವಿ. ರವಿಚಂದ್ರನ್ ಮೂವರು ಸೇರಿ ಹುಟ್ಟಿದರೆ ಕನ್ನಡ ನಾಡಿನಲ್ಲಿ ಹುಟ್ಟಬೇಕು ಹಾಡಿಗೆ ಹೆಜ್ಜೆ ಹಾಕಿದ್ದಾರೆ. ಜಗ್ಗೇಶ್ ಅವರು ಟುಡೇ ಈಸ್ ದ ಬೆಸ್ಟ್ ಡೇ ಎಂದಿದ್ದಾರೆ.
  View this post on Instagram


  A post shared by Zee Kannada (@zeekannada)
  ಮೂವರು ದಿಗ್ಗಜರ ಸಮಾಗಮ ನೋಡಬೇಕು, ಅವರ ಮಾತು ಕೇಳಬೇಕು, ಅವರ ಡ್ಯಾನ್ಸ್ ನೋಡಬೇಕು ಅಂದ್ರೆ ಇವತ್ತಿನ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮ ತಪ್ಪದೇ ನೋಡಿ.
  Published by:Savitha Savitha
  First published: