ಜೀ ಕನ್ನಡ (Zee Kannada) ವಾಹಿನಿ ಪ್ರತಿದಿನ ಧಾರಾವಾಹಿಗಳ ಮೂಲಕ ಜನರನ್ನು ಸೆಳೆದ್ರೆ, ವೀಕೆಂಡ್ನಲ್ಲಿ ವಿಭಿನ್ನವಾದ ಕಾರ್ಯಕ್ರಮ ರಿಯಾಲಿಟಿ ಶೋಗಳ (Reality Show) ಮೂಲಕ ಟಿ.ವಿ ಮುಂದೆಯೇ ಕೂರುವಂತೆ ಮಾಡುತ್ತೆ. ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance), ಸರಿಗಮಪ ಮೂಲಕ ಹೆಸರುವಾಸಿಯಾಗಿದೆ. ಸದ್ಯ ಪ್ರತಿ ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಡೆಯುತ್ತಿದೆ. ಸ್ಪರ್ಧಿಗಳು ಕುಣಿತ ನೋಡುವುದೇ ಕಣ್ಣಿಗೆ ಹಬ್ಬ. ಪ್ರತಿವಾರವೂ ಒಂದೊಂದು ಥೀಮ್ನಲ್ಲಿ ಡ್ಯಾನ್ಸ್ ಮಾಡ್ತಾರೆ. ಆಂಕರ್ ಅನುಶ್ರೀ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಜಡ್ಜ್ಗಳಾಗಿ, ನಟ ಶಿವರಾಜ್ ಕುಮಾರ್ (Shiva Raj Kumar), ನಟಿ ರಕ್ಷಿತಾ, ಅರ್ಜುನ್ ಜನ್ಯ, ಚಿನ್ನಿ ಮಾಸ್ಟರ್ ತೀರ್ಪು ನೀಡುತ್ತಾರೆ. ಅಬ್ಬಾ, ಇವತ್ತು ಶಿವಣ್ಣ ಡ್ಯಾನ್ಸ್ ವಿತ್ ಮಿ ಸಾಂಗ್ಗೆ ಹೆಜ್ಜೆ ಹಾಕಲಿದ್ದಾರೆ.
ಡಿಸ್ಕೋ ಥೀಮ್ನಲ್ಲಿ ನವೀನ್-ಹರ್ಷಿತಾ ಡ್ಯಾನ್ಸ್
ನವೀನ್ ಹಾಗೂ ಹರ್ಷಿತಾ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನ ಸ್ಪರ್ಧಿಗಳು. ಇಬ್ಬರೂ ಮೊದಲಿನಿಂದಲೂ ತಮ್ಮ ಡ್ಯಾನ್ಸ್ ಮೂಲಕ ಜಡ್ಸ್ ಹಾಗೂ ಜನರ ಮನಸ್ಸು ಕದಿಯುವಲ್ಲಿ ಯಶಸ್ವಿಯಾಗಿದ್ದಾರೆ. ಅಮೋಘವಾಗಿ ನೃತ್ಯ ಮಾಡ್ತಾರೆ. ಇಂದು ಡಿಸ್ಕೋ ಥೀಮ್ನಲ್ಲಿ ಡ್ಯಾನ್ಸ್ ವಿತ್ ಮಿ ಹಾಡಿಗೆ ಹೆಜ್ಜೆ ಹಾಕಲಿದ್ದಾರೆ. ಅದೇ ಸ್ಟೈಲ್ನಲ್ಲಿ ರೆಡಿ ಆಗಿ ಬಂದಿರುವ ನವೀನ್, ಹರ್ಷಿತ ಧೂಳೆಬ್ಬಿಸುವ ರೀತಿಯಲ್ಲಿ ಡ್ಯಾನ್ಸ್ ಮಾಡಿದ್ದಾರೆ.
ನವೀನ್-ಹರ್ಷಿತಾ ಡ್ಯಾನ್ಸ್ ಗೆ ಏನಂದ್ರು ಜಡ್ಜ್ ಗಳು?
ನವೀನ್ ಮತ್ತು ಹರ್ಷಿತಾ ಡ್ಯಾನ್ಸ್ ನಾಲ್ವರು ಜಡ್ಜ್ ಗಳು ಫಿದಾ ಆಗಿದ್ದಾರೆ. ನಿಮ್ಮ ಲುಕ್ ಜೊತೆ ಡ್ಯಾನ್ಸ್ ಸೂಪರ್ ಆಗಿತ್ತು ಎಂದು ಅರ್ಜುನ್ ಜನ್ಯ ಹೇಳಿದ್ರು. ಈ ಹಾಡು ಪುಲ್ ಎನರ್ಜಿಟಿಕ್ ಆಗಿತ್ತು. ಇಟ್ಸ್ ರಿಯಲಿ ಡನ್ ನೈಸ್ ಎಂದು ರಕ್ಷಿತಾ ಅವರು ಹೇಳಿದ್ದಾರೆ. ಜಸ್ಟ್ ಲವಡ್ ಇಟ್, ನಾನು ಫ್ಲಾಶ್ ಬ್ಯಾಕ್ ಗೆ ಹೋದೆ ಎಂದು ಚಿನ್ನಿ ಮಾಸ್ಟರ್ ಹೇಳಿದ್ದಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಶಿವಣ್ಣ ಮಾಡಿದ್ದೇನು, ಓದಿ.
ಸ್ಟೇಜ್ ಮೇಲೆ ಹೋಗಿ ಡ್ಯಾನ್ಸ್ ಮಾಡಿದ ಶಿವಣ್ಣ
ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಡ್ಯಾನ್ಸ್ ಎಂದ್ರೆ ಮೊದಲೇ ಇಷ್ಟ. ಅವರು ಈ ಹಾಡಿಗೆ ಸ್ಟೇಜ್ ಮೇಲೆ ಹೋಗಿ ಅದ್ಭುತವಾಗಿ ಹೆಜ್ಜೆ ಹಾಕಿದ್ದಾರೆ. ಶಿವಣ್ಣ ಡ್ಯಾನ್ಸ್ ವಿತ್ ಮಿ, ಮೇರಿ ಮೇರಿ ಡಿಸ್ಕೋಗೆ ಅಲ್ಲಿ ಕೂತಿದ್ದವರು ಹಾಗೂ ಕರುನಾಡು ಫಿದಾ ಆಗಿದೆ.
ಶಂಕರನಾಗ್ ಅಭಿಯದ ಗೀತಾ ಚಿತ್ರದ ಸಾಂಗ್
ಡ್ಯಾನ್ ವಿತ್ ಮಿ, ಈ ಹಾಡು ಶಂಕರನಾಗ್ ಅಭಿನಯದ ಗೀತಾ ಚಿತ್ರದ್ದು. ಡಿಸ್ಕೋ ಸಾಂಗ್ ಆಗಿದ್ದು, ಎಸ್.ಪಿ ಬಾಲಸುಬ್ರಮಣ್ಯಂ, ಪಿ ಸುಶೀಲಾ ಅವರು ಹಾಡಿದ್ದಾರೆ. ಆ ಕಾಲದಲ್ಲೇ ಈ ಸಾಂಗ್ ಪ್ರಚಲಿತವಾಗಿತ್ತು. ಈಗಲೂ ಕೂಡ ಅಷ್ಟೇ ಎನರ್ಜಿ ಕೊಡುತ್ತೆ. ಶಂಕರನಾಗ್ ಅವರು ನೆನಪಾಗ್ತಾರೆ.
ಇದನ್ನೂ ಓದಿ: Sandalwood: ಕನ್ನಡ ಸಿನಿಮಾದಲ್ಲಿ ಮತ್ತೆ ರೆಟ್ರೊ ಸ್ಟೈಲ್ ಕಾಸ್ಟ್ಯೂಮ್ ಟ್ರೆಂಡ್ ಶುರು, KGFನಲ್ಲಿ ನೋಡ್ಲಿಲ್ವಾ?
ಸ್ಪರ್ಧಿಗಳಿಗೆ ಸಾಥ್ ನೀಡುವ ಶಿವಣ್ಣ
ಶಿವಣ್ಣ ಇದೊಂದೆ ಹಾಡಿಗೆ ಹೆಜ್ಜೆ ಹಾಕಿಲ್ಲ. ಪ್ರತಿ ವಾರವೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಸ್ಪರ್ಧಿಗಳನ್ನು ಹುರಿದುಂಬಿಸುತ್ತಾರೆ. ತಮಗೆ ಹಾಡು ಇಷ್ಟ ಆದ್ರೆ, ಡ್ಯಾನ್ಸ್ ಮಾಡಬೇಕು ಅನ್ನಿಸಿದ್ರೆ, ತಕ್ಷಣವೇ ಎದ್ದು ಹೋಗಿ ಡ್ಯಾನ್ಸ್ ಮಾಡುತ್ತಾರೆ. ಈ ಬಾರಿಯೇ ಶಿವಣ್ಣ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಜಡ್ಜ್ ಆಗಿ ಹೋಗಿದ್ದಾರೆ. ಎಲ್ಲರ ಮನಸ್ಸನ್ನು ಮತ್ತೆ ಮತ್ತೆ ಕದಿಯುತ್ತಾರೆ ಈ ಜೋಗಿ. ಇವರನ್ನು ಶೋನಲ್ಲಿ ನೋಡೋದೇ ಚೆಂದ.
ಇದನ್ನೂ ಓದಿ: Ismart Jodi: ನನ್ನ ದುಡಿಮೆಯಲ್ಲೇ ನನ್ನ ಗಂಡ ಕೂತು ತಿನ್ನುತ್ತಾನೆ! ಹೀಗ್ಯಾಕೆ ಅಂದ್ರು ಈ ನಟಿ?
ಇನ್ನು ನೀವು ಶಿವಣ್ಣನ ಪೂರ್ತಿ ಡ್ಯಾನ್ಸ್ ನೋಡಬೇಕು ಎಂದ್ರೆ ಇವತ್ತಿನ ಶೋ ನೋಡಿ. ನಿಮ್ಮ ವೀಕೆಂಡ್ ಮಜವಾಗಿರುತ್ತೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ