• Home
  • »
  • News
  • »
  • entertainment
  • »
  • DKD Winner: ಸಧ್ವಿನ್-ಶಾರಿಕಾ ಕೈ ಸೇರಿತು 'ಪವರ್ ಸ್ಟಾರ್ ಟ್ರೋಫಿ'! ಡಿಕೆಡಿ ಸೀಸನ್ -06ರ ವಿಜೇತ ಜೋಡಿ ಇದು

DKD Winner: ಸಧ್ವಿನ್-ಶಾರಿಕಾ ಕೈ ಸೇರಿತು 'ಪವರ್ ಸ್ಟಾರ್ ಟ್ರೋಫಿ'! ಡಿಕೆಡಿ ಸೀಸನ್ -06ರ ವಿಜೇತ ಜೋಡಿ ಇದು

ಸಧ್ವಿನ್ -ಶಾರಿಕಾ ಕೈ ಸೇರಿತು 'ಪವರ್ ಸ್ಟಾರ್ ಟ್ರೋಫಿ

ಸಧ್ವಿನ್ -ಶಾರಿಕಾ ಕೈ ಸೇರಿತು 'ಪವರ್ ಸ್ಟಾರ್ ಟ್ರೋಫಿ

'ಪವರ್ ಸ್ಟಾರ್ ಟ್ರೋಫಿ' ಗೆಲ್ಲಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿತ್ತು. ಅಂತೆಯೇ ಈ ಬಾರಿಯ ಡಿಕೆಡಿ ಪಟ್ಟವನ್ನು ಸಧ್ವಿನ್ ಎಸ್ ಶೆಟ್ಟಿ ಮತ್ತು ಶಾರಿಕಾ ಶೆಟ್ಟಿ ಅಲಂಕರಿಸಿದ್ದಾರೆ. ಅಪ್ಪು ಟ್ರೋಫಿ ಕೈಲಿಡಿದು ಸಂಭ್ರಮಿಸಿದ್ದಾರೆ.

  • Share this:

    ಜೀ ಕನ್ನಡ (Zee Kannada)  ವಾಹಿನಿ ಪ್ರತಿದಿನ ಧಾರಾವಾಹಿಗಳ ಮೂಲಕ ಜನರನ್ನು ಸೆಳೆದ್ರೆ, ವೀಕೆಂಡ್‍ನಲ್ಲಿ ವಿಭಿನ್ನವಾದ ಕಾರ್ಯಕ್ರಮ ರಿಯಾಲಿಟಿ ಶೋಗಳ(Reality Show)ಮೂಲಕ ಟಿ.ವಿ ಮುಂದೆಯೇ ಕೂರುವಂತೆ ಮಾಡುತ್ತೆ. ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್  (Dance Karnataka Dance), ಸರಿಗಮಪ ಮೂಲಕ ಹೆಸರುವಾಸಿಯಾಗಿದೆ. ಸದ್ಯ ಪ್ರತಿ ಶನಿವಾರ, ಭಾನುವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಡೆಯುತ್ತಿತ್ತು. ಸ್ಪರ್ಧಿಗಳು ಕುಣಿತ ನೋಡುವುದೇ ಕಣ್ಣಿಗೆ ಹಬ್ಬಆಗಿತ್ತು. ಪ್ರತಿವಾರವೂ ಒಂದೊಂದು ಥೀಮ್‍ನಲ್ಲಿ ಡ್ಯಾನ್ಸ್ ಮಾಡ್ತಾ ಇದ್ರು. ನಿರೂಪಕಿ ಅನುಶ್ರೀ ಈ ಕಾರ್ಯಕ್ರಮವನ್ನು ನಡೆಸಿಕೊಡ್ತಾ ಇದ್ರು. ಜಡ್ಜ್ ಗಳಾಗಿ, ನಟ ಶಿವರಾಜ್ ಕುಮಾರ್ (Hero Shiva Raj Kumar), ನಟಿ ರಕ್ಷಿತಾ, ಅರ್ಜುನ್ ಜನ್ಯ, ಚಿನ್ನಿ ಮಾಸ್ಟರ್ ತೀರ್ಪು ನೀಡುತ್ತಿದ್ದು. ಕಾರ್ಯಕ್ರಮ ಮುಗಿದಿದ್ದು, ಸದ್ವಿನ್ ಎಸ್ ಶೆಟ್ಟಿ ಮತ್ತು ಶಾರಿಕಾ ಶೆಟ್ಟಿ ವಿನ್ನರ್ (Winner) ಆಗಿ ಹೊರಹೊಮ್ಮಿದ್ದಾರೆ.


    ಸಧ್ವಿನ್ -ಶಾರಿಕಾ ಮುಡಿಗೆ ವಿನ್ನರ್ ಪಟ್ಟ


    ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 06 ಭಾರೀ ಕುತೂಹಲ ಮೂಡಿಸಿತ್ತು. ಯಾರು ವಿನ್ ಆಗ್ತಾರೆ ಅಂತ ಕಾಯ್ತಾ ಇದ್ರು. ಯಾಕಂದ್ರೆ ಎಲ್ಲಾ ಸ್ಪರ್ಧಿಗಳು ಸಖತ್ ಪೈಪೋಟಿ ನೀಡಿದ್ರು. ಅಲ್ಲದೇ 'ಪವರ್ ಸ್ಟಾರ್ ಟ್ರೋಫಿ' ಗೆಲ್ಲಬೇಕು ಎನ್ನುವುದು ಪ್ರತಿಯೊಬ್ಬರ ಕನಸಾಗಿತ್ತು. ಅಂತೆಯೇ ಈ ಬಾರಿಯ ಡಿಕೆಡಿ ಪಟ್ಟವನ್ನು ಸದ್ದಿನ್ ಎಸ್ ಶೆಟ್ಟಿ ಮತ್ತು ಶಾರಿಕಾ ಶೆಟ್ಟಿ ಅಲಂಕರಿಸಿದ್ದಾರೆ. ಅಪ್ಪು ಟ್ರೋಫಿ ಕೈಲಿಡಿದು ಸಂಭ್ರಮಿಸಿದ್ದಾರೆ.


    ಸಧ್ವಿನ್ -ಶಾರಿಕಾ- ಅರುಣ್ ಮಾಸ್ಟರ್ ಗೆ 30 ಲಕ್ಷ


    ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 06 ವಿನ್ನರ್ ಗೆ ಪವರ್ ಸ್ಟಾರ್ ಟ್ರೋಫಿ ಜೊತೆ 30 ಲಕ್ಷ ಬಹುಮಾನ ಸಿಕ್ಕಿದೆ. ಈ ಬಹುಮಾನ ಮೂರು ಜನರಿಗೆ ಸಿಗಲಿದೆ. ಗೆದ್ದ ಜೋಡಿ ಸದ್ದಿನ್ ಎಸ್ ಶೆಟ್ಟಿ, ಶಾರಿಕಾ ಶೆಟ್ಟಿ ಮತ್ತು ಅರುಣ್ ಮಾಸ್ಟರ್ ಗೆ. ಬಹುಮಾನಕ್ಕಿಂತ ಪವರ್ ಸ್ಟಾರ್ ಟ್ರೋಫಿ ಕೈಲಿಡಿದಿರುವುದು ಖುಷಿಯಾಗಿತ್ತಂತೆ.


    ಗೆದ್ದವರು ಹೇಳಿದ್ದೇನು?


    ಸದ್ದಿನ್‍ಗೆ ಗೆದ್ದ ಖುಷಿಯಲ್ಲಿ ಮಾತೇ ಹೊರಡಲಿಲ್ಲ. ತಮಗೆ ಬೆಂಬಲಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದ್ರು. ಇನ್ನೂ ಶಾರಿಕಾ ಸಹ ಎಲ್ಲರಿಗೂ ತುಂಬು ಹೃದಯದ ಧನ್ಯವಾದ ತಿಳಿಸಿದ್ದು. ಇನ್ನು ಅರುಣ್ ಮಾಸ್ಟರ್ ಪವರ್ ಸ್ಟಾರ್ ಟ್ರೋಫಿ ನೋಡಿದಾಗಿನಿಂದ ಅದನ್ನು ನಾನು ತೆಗೆದುಕೊಳ್ಳಬೇಕು ಎಂದುಕೊಂಡಿದ್ರಂತೆ, ಅಂತೆಯೇ ಅವರ ಪರಿಶ್ರಮಕ್ಕೆ ಪವರ್ ಸ್ಟಾರ್ ಟ್ರೋಫಿ ಮನೆ ಸೇರಿದೆ.


    ಇದನ್ನೂ ಓದಿ: Amulya Gowda: ಬಿಗ್​ಬಾಸ್ ವೇದಿಕೆಯಲ್ಲಿ ಪ್ರಥಮ್ ಬಗ್ಗೆ ಅಮೂಲ್ಯ ಗೌಡ ಆರೋಪ


    ರನ್ನರ್ ಅಪ್ ಯಾರು?


    ಇನ್ನು ಡಿಕೆಡಿಯ ಮೊದಲು ರನ್ನರ್ ಅಪ್ ಆಗಿ ಮಹೇಶ್, ಚಾಹತ್ ಶಬೀರ್ ಶೇಖ್ ಹೊರ ಹೊಮ್ಮಿದ್ದಾರೆ. ಈ ಜೋಡಿಗೆ 20 ಲಕ್ಷ ರೂಪಾಯಿ ಬಹುಮಾನ ದೊರೆತಿದೆ.


    Zee Kannada program, Dance Karnataka Dance show, Shiva Raj Kumar, DKD Winnwe, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ,ಡಿಕೆಡಿ ಫಿನಾಲೆ, ಗೆದ್ದವರ ಕೈ ಸೇರಲಿದೆ ಅಪ್ಪು 'ಪವರ್ ಸ್ಟಾರ್ ಟ್ರೋಫಿ', ಸಧ್ವಿನ್ -ಶಾರಿಕಾ ಕೈ ಸೇರಿತು 'ಪವರ್ ಸ್ಟಾರ್ ಟ್ರೋಫಿ', Kannada news, Karnataka news,
    ರನ್ನರ್ ಅಪ್ ಮಹೇಶ್, ಚಾಹತ್ ಶಬೀರ್ ಶೇಖ್


    ಎರಡನೇ ರನ್ನರ್ ಅಪ್
    ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 06 ಎರಡನೇ ರನ್ನರ್ ಅಪ್ ಆಗಿ ದಕ್ಷತ್ ಗೌಡ ಎ, ಪ್ರಣನ್ಯ ಹೊರಹೊಮ್ಮಿದ್ದಾರೆ.


    Zee Kannada program, Dance Karnataka Dance show, Shiva Raj Kumar, DKD Winnwe, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆ,ಡಿಕೆಡಿ ಫಿನಾಲೆ, ಗೆದ್ದವರ ಕೈ ಸೇರಲಿದೆ ಅಪ್ಪು 'ಪವರ್ ಸ್ಟಾರ್ ಟ್ರೋಫಿ', ಸಧ್ವಿನ್ -ಶಾರಿಕಾ ಕೈ ಸೇರಿತು 'ಪವರ್ ಸ್ಟಾರ್ ಟ್ರೋಫಿ', Kannada news, Karnataka news,
    ಎರಡನೇ ರನ್ನರ್ ಅಪ್ ದಕ್ಷತ್ ಗೌಡ ಎ, ಪ್ರಣನ್ಯ


    ಫಿನಾಲೆ ಹಂತಕ್ಕೆ ತಲುಪಿದ್ದ 7 ಜೋಡಿಗಳು


    ಡಿಕೆಡಿ ಕಾರ್ಯಕ್ರಮವು ಭರ್ಜರಿ ರೇಟಿಂಗ್ ಗಳಿಸುತ್ತಾ ಬಂದಿತ್ತು. ವಿವಿಧ ಜೋಡಿಗಳ ಪೈಕಿ 7 ಜೋಡಿಗಳು ಫಿನಾಲೆ ಹಂತಕ್ಕೆ ತಲುಪಿದ್ದಾರೆ. ಶಶಾಂಕ್ -ತ್ರಿಷಾ, ದಕ್ಷಿತ್ ಗೌಡ- ಪ್ರಣನ್ಯ, ಗಗನ್ ಶೆಟ್ಟಿ- ದಿಶಾ ದೇಚಮ್ಮ, ಸದ್ದಿನ್ ಎಸ್ ಶೆಟ್ಟಿ- ಶಾರಿಕಾ ಶೆಟ್ಟಿ, ಋಷಿಕೇಶ್-ಶ್ರಾವ್ಯ, ಕೀತಾ ಜಾನ್ಸ್- ಆಶ್ರಿತಾ ಎಸ್ ವಿ, ಮಹೇಶ್-ಚಾಹತ್ ಶಬೀರ್.


    ಇದನ್ನೂ ಓದಿ: Actress Sara Annaiah: ತಾಜ್‍ಮಹಲ್ ಮುಂದೆ ರೆಡ್ ಡ್ರೆಸ್‍ನಲ್ಲಿ ಸಾರಾ ಅಣ್ಣಯ್ಯ ಮಿಂಚಿದ್ದು ಹೀಗೆ


    ಇವರಲ್ಲಿ ಯಾರು ಗೆಲ್ತಾರೆ ಅನ್ನೋ ಕುತೂಹಲ ಹೆಚ್ಚಾಗಿತ್ತು. ಎಲ್ಲರೂ ಅದ್ಭುತವಾಗಿ ಡ್ಯಾನ್ಸ್ ಮಾಡ್ತಾ ಇದ್ರು. ಈಗ ವಿನ್ನರ್ ಪಟ್ಟವನ್ನು ಸದ್ದಿನ್ ಎಸ್ ಶೆಟ್ಟಿ, ಶಾರಿಕಾ ಶೆಟ್ಟಿ ಮೂಡಿಗೇರಿಸಿಕೊಂಡಿದ್ದಾರೆ.

    Published by:Savitha Savitha
    First published: