Actress Malavika: ವಿಶೇಷಚೇತನ ಮಗನ ನೆನೆದು ಕಣ್ಣೀರಿಟ್ಟ ಮಾಳವಿಕಾ ಅವಿನಾಶ್! ಡಿಕೆಡಿ, ಜೋಡಿ ನಂಬರ್ ವನ್ ಮಹಾಸಂಗಮದಲ್ಲಿ ಎಮೋಷನಲ್

ಮಾಳವಿಕಾ ಅವರ ಮಗನಿಗೆ ಮಾತನಾಡಲು ಬರುವುದಿಲ್ವಂತೆ. ನಡಿಗೆಯೂ ಹೆಚ್ಚಾಗಿ ಬಂದಿಲ್ವಂತೆ. ಬರ್ತಾ ಇದೆಯಂತೆ. ಡಾ. ರಾಜ್‍ಕುಮಾರ್, ಅರ್ಜುನ್ ಜನ್ಯ, ಶಿವಣ್ಣನ ಹಾಡು ಅಂದ್ರೆ ಮಾಳವಿಕಾ ಅವರ ಮಗನಿಗೆ ತುಂಬಾ ಇಷ್ಟ. 6-8ನೇ ತಿಂಗಳಿನಿಂದಲೇ ನನ್ನ ಮಗನಿಗೆ ಸಂಗೀತದ ಬಗ್ಗೆ ಅಭಿರುಚಿ ಇದೆ ಎಂದು ಮಾಳವಿಕಾ ಅವರು ಹೇಳಿದ್ದಾರೆ.

ಮಾಳವಿಕಾ ಅವಿನಾಶ್

ಮಾಳವಿಕಾ ಅವಿನಾಶ್

 • Share this:
  ಜೀ ಕನ್ನಡ (Zee Kannada) ವಾಹಿನಿ ಜನರನ್ನು ರಂಜಿಸಲು ಸದಾ ಮುಂದೆ ಇರುತ್ತೆ. ಪ್ರತಿದಿನ ಧಾರಾವಾಹಿಗಳ (Serials) ಮೂಲಕ ಜನರನ್ನು ಸೆಳೆದ್ರೆ, ವೀಕೆಂಡ್‍ನಲ್ಲಿ ವಿಭಿನ್ನವಾದ ಕಾರ್ಯಕ್ರಮ ರಿಯಾಲಿಟಿ ಶೋಗಳ (Reality Show) ಮೂಲಕ ಜನ ಟಿ.ವಿ ಮುಂದೆಯೇ ಕೂರುವಂತೆ ಮಾಡುತ್ತೆ. ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್, ಜೋಡಿ ನಂಬರ್ 01, ಸರಿಗಮಪ ಮೂಲಕ ಹೆಸರುವಾಸಿಯಾಗಿದೆ. ಸದ್ಯ ಪ್ರತಿ ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಡೆಯುತ್ತಿದೆ. ಮತ್ತು ಶನಿವಾರ, ಭಾನುವಾರ ಸಂಜೆ 6.30ಕ್ಕೆ ಜೋಡಿ ನಂಬರ್ ಕಾರ್ಯಕ್ರಮ ಬರುತ್ತೆ. ಎರಡು ಕಾರ್ಯಕ್ರಮಗಳು ಅದ್ಭುತವಾಗಿ ಬರುತ್ತಿವೆ. ಇನ್ನು ಎರಡು ಒಟ್ಟಿಗೆ ಸೇರಿದ್ರೆ ಹೇಗಿರುತ್ತೆ. ಹೌದು ಈ ವಾರ ಜೋಡಿ ನಂಬರ್ ಒನ್ (Jodi No 01), ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ (Dance Karnataka Dance) ಮಹಾಸಂಗಮ ಕಾರ್ಯಕ್ರಮ. ಕಾರ್ಯಕ್ರಮದಲ್ಲಿ ಮಗನನ್ನು ನೆನೆದು ಮಾಳವಿಕಾ (Malavika) ಅವಿನಾಶ್  ಅವರು ಕಣ್ಣೀರಿಟ್ಟಿದ್ದಾರೆ.

  ಸ್ಪೂರ್ತಿಯಾದ ಸಹನಾ ಡ್ಯಾನ್ಸ್
  ಡಿಕೆಡಿ ವೇದಿಯಲ್ಲಿ ಸಹಾನ ಬೆಟ್ಟದ ಅಂಚಿಂದ ಅನ್ನೋ ಹಾಡಿಗೆ ಅದ್ಭುತವಾಗಿ ಡ್ಯಾನ್ಸ್ ಮಾಡಿದ್ದಾರೆ. ಸಹನಾಗೆ ಕಿವಿ ಕೇಳಿಸಲ್ಲ. ವಿಶೇಷ ಚೇತನಳಾಗಿದ್ರೂ ತನ್ನ ಡ್ಯಾನ್ಸ್ ಮೂಲಕ ಎಲ್ಲರ ಮನ ಗೆಲ್ಲುತ್ತಾಳೆ. ಸಹನಾ ನೋಡಿ, ತನ್ನ ಮಗನನ್ನು ನೆನೆದ ಮಾಳವಿಕಾ ಅವಿನಾಶ್ ಭಾವುಕರಾಗಿದ್ದಾರೆ.

  ಕಣ್ಣೀರು ಹಾಕಿದ ಮಾಳವಿಕಾ
  ಎಲ್ಲ ಮಕ್ಕಳು ದೇವರ ಮಕ್ಕಳೇ. ಹೀಗೆ ಹುಟ್ಟಬೇಕು ಎಂದು ಯಾವ ಮಗನೂ ಅಂದುಕೊಂಡಿರಲ್ಲ. ಇಂತದ್ದೇ ಮನೆಯಲ್ಲಿ ಹುಟ್ಟಬೇಕು ಎಂದು ಯಾವ ಮಗನೂ ಅಂದುಕೊಂಡಿರಲ್ಲ. ದೇವರ ಪ್ರಸಾದ ಎಂದು ಸ್ವೀಕಾರ ಮಾಡ್ತೀವಿ. ಭಗವಂತ ಯಾವುದನ್ನೋ ಕಿತ್ತುಕೊಂಡ್ರು, ಇನ್ನೇನೋ ಕೊಡುತ್ತಾನೆ. ಅಪ್ಪ-ಅಮ್ಮನಿಗೆ ಅದೇ ಸಮಾಧಾನ ಎಂದು ಕಾರ್ಯಕ್ರಮದಲ್ಲಿ ಮಾಳವಿಕಾ ಕಣ್ಣೀರು ಹಾಕಿದ್ದಾರೆ.

  ಇದನ್ನೂ ಓದಿ: DKD-Jodi No 01: ಡಿಕೆಡಿ-ಜೋಡಿ ನಂಬರ್ 1 ಮಹಾಸಂಗಮ! ಅಭಿಜಿತ್ ಎನರ್ಜಿಗೆ ಶಿವಣ್ಣ ಫಿದಾ

  ಮಾಳವಿಕಾ ಅವರ ಮಗ ವಿಶೇಷಚೇತನ
  ಮಾಳವಿಕಾ ಅವರ ಮಗನಿಗೆ ಮಾತನಾಡಲು ಬರುವುದಿಲ್ವಂತೆ. ನಡಿಗೆಯೂ ಹೆಚ್ಚಾಗಿ ಬಂದಿಲ್ವಂತೆ. ಬರ್ತಾ ಇದೆಯಂತೆ. ಡಾ. ರಾಜ್‍ಕುಮಾರ್, ಅರ್ಜುನ್ ಜನ್ಯ, ಶಿವಣ್ಣನ ಹಾಡು ಅಂದ್ರೆ ಮಾಳವಿಕಾ ಅವರ ಮಗನಿಗೆ ತುಂಬಾ ಇಷ್ಟ. 6-8ನೇ ತಿಂಗಳಿನಿಂದಲೇ ನನ್ನ ಮಗನಿಗೆ ಸಂಗೀತದ ಬಗ್ಗೆ ಅಭಿರುಚಿ ಇದೆ ಎಂದು ಮಾಳವಿಕಾ ಅವರು ಹೇಳಿದ್ದಾರೆ. ಸಂಗೀತಾ ಅಂದ್ರೆ ಶಾಸ್ತ್ರೀ ಸಂಗೀತಾ, ಶಾಸ್ತ್ರೀಯ ನೃತ್ಯ ಇಷ್ಟ ಅಂತೆ. ಭಕ್ತಿ ಸಂಗೀತ ನನ್ನ ಮಗನಿಗೆ ಇಷ್ಟ ಎಂದಿದ್ದಾರೆ.
  View this post on Instagram


  A post shared by Zee Kannada (@zeekannada)
  ಸಂಜೆ 6 ಗಂಟೆ ಮೇಲೆ ಮಾಳವಿಕಾ ಅವರು ಎಲ್ಲೇ ಇದ್ರು ಮನೆಗೆ ಹೋಗ್ತಾರಂತೆ. 8.30ಕ್ಕೆ ತಮ್ಮ ಮಗನಿಗೆ ಊಟ ಮಾಡಿಸಲು. ಮಗನಿಗೆ ಊಟ ಮಾಡಿಸಲು ಮಾಳವಿಕಾ ಅವರು ಕನ್ನಡ ಹಾಡುಗಳನ್ನು ಕೇಳಿಸುತ್ತಾರೆ. ಮಗನಿಗೆ ಅರ್ಥ ಆಗೋದು ಸಂಗೀತ ಮಾತ್ರವಂತೆ. ಅದಕ್ಕೆ ಯಾವಾಗಲೂ ಹಾಡುಗಳನ್ನು ಹಾಕಿ ಊಟ ಮಾಡಿಸುತ್ತಾರಂತೆ.

  ಇದನ್ನೂ ಓದಿ: Aishwarya Rai: ಶ್ರೀಮಂತ ಗಣಪನ ದರ್ಶನ ಪಡೆದ ಐಶ್ವರ್ಯಾ ರೈ! ಭಕ್ತಿಯಲ್ಲಿ ಮುಳುಗೆದ್ದ ಮಾಜಿ ವಿಶ್ವಸುಂದರಿ

  ಅರ್ಜುನ್ ಜನ್ಯ ಹಾಡ್ತಾರಂತೆ
  ಮಾಳವಿಕಾ ಅವರ ಮನೆಗೆ ಹೋಗಿ, ಅವರ ಮಗನಿಗಾಗಿ ಅರ್ಜುನ್ ಜನ್ಯ ಹಾಡ್ತಾರಂತೆ. ನಾನು ಎಲ್ಲೋ ದೂರದಲ್ಲಿ ಹಾಡು ಮಾಡಿದ್ದು ಅವರ ಮನೆಗೆ ಇಷ್ಟ ಆಗ್ತಿದೆ ಅಂದ್ರೆ, ಅದು ನನ್ನ ಜವಾಬ್ದಾರಿ ಆಗುತ್ತೆ. ನಾನು ಅಲ್ಲೇ ಬಂದು ಹಾಡ್ತೀನಿ. ನನ್ನ ಕೈಯಲ್ಲಿ ಸೇವೆ ಮಾಡೋಕೆ ಆದ್ರೆ, ಖಂಡಿತವಾಗಿಯೂ ಮಾಡ್ತೀನಿ ಎಂದು ಅರ್ಜುನ್ ಜನ್ಯ ಹೇಳಿದ್ದಾರೆ.
  Published by:Savitha Savitha
  First published: