DKD-Jodi No 01: ಡಿಕೆಡಿ-ಜೋಡಿ ನಂಬರ್ 1 ಮಹಾಸಂಗಮ! ಅಭಿಜಿತ್ ಎನರ್ಜಿಗೆ ಶಿವಣ್ಣ ಫಿದಾ

ಅಭಿಜಿತ್ ಪತ್ನಿ ಬೇಸರದಿಂದ ಕಣ್ಣೀರು ಹಾಕುತ್ತಿದ್ದಾಗ,  ಬಂದ ಶಿವಣ್ಣ ನನ್ನ ಮುಂದಿನ ಸಿನಿಮಾದಲ್ಲಿ ನೀವು ಅಭಿಜಿತ್ ಅವರುನ್ನು ನೋಡ್ತೀರಿ ಎಂದು ಭರವಸೆ ಕೊಟ್ಟರು. ಅದಕ್ಕೆ ಅಭಿಜಿತ್ ಶಿವಣ್ಣನನ್ನು ಎತ್ತಿಕೊಂಡು ಡ್ಯಾನ್ಸ್ ಮಾಡಿದ್ರು. ಜೊತೆಗೆ ಇರ್ತಿನಿ ಅಂದ್ರಲ್ಲಾ ಅಷ್ಟೇ ಸಾಕು ಎಂದು ಖುಷಿಯಾದ್ರು. ನಂತರ ಇಬ್ಬರು ಸೇರಿ ಡ್ಯಾನ್ಸ್ ಮಾಡಿದ್ರು.

ಶಿವಣ್ಣ

ಶಿವಣ್ಣ

 • Share this:
  ಜೀ ಕನ್ನಡ (Zee Kannada) ವಾಹಿನಿ ಜನರನ್ನು ರಂಜಿಸಲು ಸದಾ ಮುಂದೆ ಇರುತ್ತೆ. ಪ್ರತಿದಿನ ಧಾರಾವಾಹಿಗಳ (Serials) ಮೂಲಕ ಜನರನ್ನು ಸೆಳೆದ್ರೆ, ವೀಕೆಂಡ್‍ನಲ್ಲಿ ವಿಭಿನ್ನವಾದ ಕಾರ್ಯಕ್ರಮ ರಿಯಾಲಿಟಿ ಶೋಗಳ (Reality Show) ಮೂಲಕ ಜನ ಟಿ.ವಿ ಮುಂದೆಯೇ ಕೂರುವಂತೆ ಮಾಡುತ್ತೆ. ಡ್ರಾಮಾ ಜೂನಿಯರ್ಸ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance), ಜೋಡಿ ನಂಬರ್ 1 (Jodi No 01), ಸರಿಗಮಪ ಮೂಲಕ ಹೆಸರುವಾಸಿಯಾಗಿದೆ. ಸದ್ಯ ಪ್ರತಿ ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಡೆಯುತ್ತಿದೆ. ಮತ್ತು ಶನಿವಾರ, ಭಾನುವಾರ ಸಂಜೆ 6.30ಕ್ಕೆ ಜೋಡಿ ನಂಬರ್ ಕಾರ್ಯಕ್ರಮ ಬರುತ್ತೆ. ಎರಡು ಕಾರ್ಯಕ್ರಮಗಳು ಅದ್ಭುತವಾಗಿ ಬರುತ್ತಿವೆ. ಇನ್ನು ಎರಡು ಒಟ್ಟಿಗೆ ಸೇರಿದ್ರೆ ಹೇಗಿರುತ್ತೆ. ಹೌದು ಈ ವಾರ ಜೋಡಿ ನಂಬರ್ ಒನ್, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ಮಹಾಸಂಗಮ ಕಾರ್ಯಕ್ರಮ ಇದೆ.

  ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ
  ಪ್ರತಿ ಶನಿವಾರ, ಭಾನುವಾರ ರಾತ್ರಿ 9 ಗಂಟೆಗೆ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋ ನಡೆಯುತ್ತಿದೆ. ಕಾರ್ಯಕ್ರಮದಲ್ಲಿ ಸ್ಪರ್ಧಿಗಳು ಕುಣಿತ ನೋಡುವುದೇ ಕಣ್ಣಿಗೆ ಹಬ್ಬ. ಪ್ರತಿವಾರವೂ ಒಂದೊಂದು ಥೀಮ್‍ನಲ್ಲಿ ಡ್ಯಾನ್ಸ್ ಮಾಡ್ತಾರೆ. ಆಂಕರ್ ಅನುಶ್ರೀ ಈ ಕಾರ್ಯಕ್ರಮವನ್ನು ನಡೆಸಿಕೊಡುತ್ತಾರೆ. ಜಡ್ಜ್ ಗಳಾಗಿ, ನಟ ಶಿವರಾಜ್ ಕುಮಾರ್, ನಟಿ ರಕ್ಷಿತಾ, ಅರ್ಜುನ್ ಜನ್ಯ, ಚಿನ್ನಿ ಮಾಸ್ಟರ್ ತೀರ್ಪು ನೀಡುತ್ತಾರೆ.

  ಜೋಡಿ ನಂ. 01 ಕಾರ್ಯಕ್ರಮ
  ಇದು ಪತಿ-ಪತ್ನಿಯರ ಸಂಬಂಧ ಎಷ್ಟು ಗಟ್ಟಿಯಾಗಿದೆ ಎಂದು ಆಟದ ಮೂಲಕ ಜೀವನ ಪಾಠ ಹೇಳಿಕೊಡುವ ಕಾರ್ಯಕ್ರಮ. ಈ ಕಾರ್ಯಕ್ರಮದ ನಿರೂಪಣೆಯನ್ನು ಶ್ವೇತಾ ಚೆಂಗಪ್ಪನವರು ನಡೆಸಿ ಕೊಡುತ್ತಾರೆ. ಜಡ್ಜ್ ಗಳಾಗಿ, ನಟಿ ಮಾಳ್ವಿಕಾ ಅವಿನಾಶ್, ನಟ ನೆನಪಿರಲಿ ಪ್ರೇಮ್ ಇದ್ದಾರೆ. ಸ್ಪರ್ಧಿಗಳ ಅಭಿನಯಕ್ಕೆ ತಕ್ಕಂತೆ ಜಡ್ಜ್ ಮೆಂಟ್ ನೀಡುತ್ತಾರೆ.

  ಇದನ್ನೂ ಓದಿ: Kendasampige: ಹೆಣ್ಣು ಕೇಳೋಕೆ ಮನೆಗೆ ಬಂದಿದ್ದಾಳೆ ವಿಜಯ, ಸುಮಿ ತಮ್ಮ-ವಿಜಿ ಮಗನ ನಡುವೆ ಜೋರು ಗಲಾಟೆ!

  ಡಿಕೆಡಿ ಮತ್ತು ಜೋಡಿ ನಂ. 01 ಮಹಾಸಂಗಮ
  ಈ ವಾರ ಜನರಿಗೆ ಮನರಂಜನೆ ನೀಡಲು ಎರಡು ಕಾರ್ಯಕ್ರಮಗಳ ಮಹಾಸಂಗಮ ಇದೆ. ಒಂದು ಕಾರ್ಯಕ್ರಮವೇ ನೋಡಲು ಮಜಾವಾಗಿರುತ್ತೆ. ಇನ್ನು ಎರಡು ಕಾರ್ಯಕ್ರಮ ಒಟ್ಟಿಗೆ ಸೇರಿದ್ರೆ ಹೇಗಿರಬೇಡ ಹೇಳಿ. ಸೋ ಮಿಸ್ ಮಾಡ್ದೆ ಈ ಬಾರಿ ಡಿಕೆಡಿ ಮತ್ತು ಜೋಡಿ ನಂ. 01 ಮಹಾಸಂಗಮ ನೋಡಿ.

  ಅಭಿಜಿತ್ ಎನರ್ಜಿಗೆ ಫಿದಾ ಆಯ್ತು ಡಿಕೆಡಿ ಸ್ಟೇಜ್
  ನಟ ಅಭಿಜಿತ್ ಮತ್ತು ಅವರ ಪತ್ನಿ ಈ ಬಾರಿಯ ಜೋಡಿ ನಂಬರ್ ಒನ್ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾರೆ. ಮಹಾಸಂಗಮದಲ್ಲಿ ಚೆಲುವೆ ನೀನು ನಕ್ಕರೆ ಸಾಂಗ್‍ಗೆ ಡ್ಯಾನ್ಸ್ ಮಾಡಿದ್ದಾರೆ. ಅಭಿಜಿತ್ ಡ್ಯಾನ್ಸ್ ಮಾಡಿದ್ದನ್ನು ನೋಡಿ, ಅಭಿಜಿತ್ ಎನರ್ಜಿಗೆ ಡಿಕೆಡಿ ಸ್ಟೇಜ್ ಫಿದಾ ಆಗಿದೆ.

  ಅಭಿಜಿತ್ ಅಪ್ಪಿಕೊಂಡು ಸಂಭ್ರಮಿಸಿದ ಶಿವಣ್ಣ
  ಅಭಿಜಿತ್ ಡ್ಯಾನ್ಸ್‍ಗೆ ಸ್ಟೇಜ್ ಫಿದಾ ಆಗಿದ್ದು, ಎಲ್ಲಾ ಜಡ್ಜ್ ಗಳು ಎದ್ದು ನಿಂತು ಚಪ್ಪಾಳೆ ತಟ್ಟಿದ್ದಾರೆ. ಒಳ್ಳೆ ಕಲಾವಿದರಿಗೆ ಸಾವೇ ಇಲ್ಲ ಎಂದು ಅರ್ಜುನ್ ಜನ್ಯ ಹೇಳಿದ್ದಾರೆ. ಅಭಿಜಿತ್ ಒಬ್ಬ ಹೋರಾಟಗಾರ, ಜೀವನದಲ್ಲೂ ಫೈಟ್ ಮಾಡ್ತಾ ಇದಾರೆ. ಅಭಿಜಿತ್ ಅಪ್ಪಿಕೊಂಡು ಸಂಭ್ರಮಿಸಿದ ಶಿವಣ್ಣ ಸಂಭ್ರಮಿಸಿದ್ದಾರೆ.

  ಕಣ್ಣಿರಿಟ್ಟ ಅಭಿಜಿತ್ ಪತ್ನಿ
  ಸ್ಟೇಜ್ ಮೇಲೆ ಅಭಿಜಿತ್ ಪತ್ನಿ ಕಣ್ಣೀರಿಟ್ಟಿದ್ದಾರೆ. ಅಭಿಜಿತ್ ಒಬ್ಬ ಒಳ್ಳೆಯ ನಟ. ಆದ್ರೆ ದೇವರು ಅಷ್ಟೊಂದು ಒಳ್ಳೆ ಸ್ಥಾನ ಕೊಟ್ಟಿಲ್ಲ ಅವರಿಗೆ ಎಂದು ಹೇಳುತ್ತಾರೆ. ಅದಕ್ಕೆ ಶಿವಣ್ಣ ಸ್ಟೇಜ್ ಗೆ ಎದ್ದು ಬರುತ್ತಾರೆ.

  ಇದನ್ನೂ ಓದಿ: Ramachari Serial: ಕೊನೆಗೂ ಜೈಲಿನಿಂದ ಹೊರಬಂದ ರಾಮಾಚಾರಿ, ಅನ್ಯಾಯ ಮಾಡಿದ್ದ ಚಾರು ಕಂಬಿ ಎಣಿಸ್ತಾರಾ?

  ನನ್ನ ಮುಂದಿನ ಸಿನಿಮಾದಲ್ಲಿ ಅಭಿಜಿತ್ ಇರ್ತಾರೆ
  ಅಭಿಜಿತ್ ಪತ್ನಿ ಬೇಸರದಿಂದ ಕಣ್ಣೀರು ಹಾಕುತ್ತಿದ್ದಾಗ,  ಬಂದ ಶಿವಣ್ಣ ನನ್ನ ಮುಂದಿನ ಸಿನಿಮಾದಲ್ಲಿ ನೀವು ಅಭಿಜಿತ್ ಅವರುನ್ನು ನೋಡ್ತೀರಿ ಎಂದು ಭರವಸೆ ಕೊಟ್ಟರು. ಅದಕ್ಕೆ ಅಭಿಜಿತ್ ಶಿವಣ್ಣನನ್ನು ಎತ್ತಿಕೊಂಡು ಡ್ಯಾನ್ಸ್ ಮಾಡಿದ್ರು. ಜೊತೆಗೆ ಇರ್ತಿನಿ ಅಂದ್ರಲ್ಲಾ ಅಷ್ಟೇ ಸಾಕು ಎಂದು ಖುಷಿಯಾದ್ರು. ನಂತರ ಇಬ್ಬರು ಸೇರಿ ಡ್ಯಾನ್ಸ್ ಮಾಡಿದ್ರು.
  Published by:Savitha Savitha
  First published: