Shiva Rajkumar-Coffee Nadu Chandu: ನಿಮ್ಮಂಥಾ ಅಭಿಮಾನಿ ಪಡೆದಿದ್ದು ಪುಣ್ಯ ಎಂದ ಹ್ಯಾಟ್ರಿಕ್ ಹೀರೋ, ಕಾಫಿ ನಾಡು ಚಂದು ಖುಷ್

ಡಿಕೆಡಿ ವೇದಿಕೆಗೆ ಬಂದ ಕಾಫಿ ನಾಡು ಚಂದು ಶಿವಣ್ಣ ಮುಂದೆ ತಮ್ಮದೇ ಶೈಲಿಯಲ್ಲಿ ಹಾಡು ಹೇಳಿದ್ದಾರೆ. ನಾನು ಕಾಫಿ ನಾಡು ಚಂದು, ಅಪ್ಪು, ಶಿವಣ್ಣನ ಅಭಿಮಾನಿ ಎಂದು ಹೇಳಿದ್ದಾರೆ. ಈ ಮೂಲಕ ಶಿವಣ್ಣನ ಮನಸ್ಸು ಕದಿದ್ದಾರೆ. ಶಿವಣ್ಣ ಸಹ ವೇದಿಗೆ ಬಂದು ಕಾಫಿ ನಾಡು ಚಂದುವನ್ನು ತಬ್ಬಿಕೊಂಡು, ನಿಮ್ಮಂಥಾ ಅಭಿಮಾನಿ ಪಡೆದಿದ್ದು ನಮ್ಮ ಪುಣ್ಯ ಎಂದಿದ್ದಾರೆ.

ಕಾಫಿ ನಾಡು ಚಂದು, ಶಿವರಾಜ್​ಕುಮಾರ್​

ಕಾಫಿ ನಾಡು ಚಂದು, ಶಿವರಾಜ್​ಕುಮಾರ್​

  • Share this:
    ಡಿಫರೆಂಟ್ (Different) ಬರ್ತ್ ಡೇ (Birth Day Wish) ವಿಶ್ ಮೂಲಕ ರಾಜ್ಯದಲ್ಲಿ ಸೆನ್ಸೇಷನ್ ಸೃಷ್ಟಿ ಮಾಡಿದ್ದಾರೆ ಕಾಫಿ ನಾಡು ಚಂದು (Coffee Naadu Chandu). ನಾನು ಅಪ್ಪು, ಶಿವಣ್ಣ ಅಭಿಮಾನಿ ಅಂತ ಹೇಳುತ್ತಲೇ ಫೇಮಸ್ ಆಗಿದ್ದಾರೆ. ಅವರು ಬರ್ತ್ ಡೇಗೆ ವಿಶ್ ಮಾಡೋದು ಎಲ್ಲ ಕಡೆ ಟ್ರೆಂಡ್ ಆಗಿದೆ. ಸೋಶಿಯಲ್ ಮಿಡಿಯಾದಲ್ಲಿ ಕಾಫಿ ನಾಡು ಚಂದು ಅವರನ್ನು ಸಾಕಷ್ಟು ಅಭಿಮಾನಿಗಳು ಫಾಲೋ ಮಾಡ್ತಾ ಇದ್ದಾರೆ. ಕಾಫಿ ನಾಡು ಚಂದುಗೆ ಹ್ಯಾಟ್ರಿಕ್ ಹೀರೋ ಶಿವರಾಜ್  ಕುಮಾರ್ ಅವರನ್ನು (Shiva Raj Kumar) ಭೇಟಿ ಮಾಡಲು ತುಂಬಾ ಆಸೆ ಇತ್ತು. ಅದನ್ನು ಅನುಶ್ರೀ ಅವರಿಗೆ ಚಂದು ಕೇಳಿಕೊಂಡಿದ್ದರು. ಅನುಶ್ರೀ ಶಿವರಾಜ್ ಕುಮಾರ್ ಅವರಿಗೆ ಸುದ್ದಿ ಮುಟ್ಟಿಸಿದ್ದರು. ಕಾಫಿ ನಾಡು ಚಂದು ಆಸೆಯನ್ನು ಜೀ ಕನ್ನಡ (Zee K) ವಾಹಿನಿ ಈಡೇರಿಸಿದೆ. ಈ ಬಾರಿಯ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಕರೆಸಿದೆ. ಶಿವಣ್ಣ ಸಹ ನಿಮ್ಮಂಥಾ ಅಭಿಮಾನಿ ಪಡೆಯೋಕೆ ಪುಣ್ಯ ಮಾಡಿರಬೇಕು ಎಂದಿದ್ದಾರೆ.

    ಡಿಕೆಡಿ ವೇದಿಕೆಯಲ್ಲಿ ಕಾಫಿ ನಾಡು ಚಂದು

    ಡಿಕೆಡಿ ಈ ವಾರದ ಮಹಾಸಂಚಿಕೆಯಲ್ಲಿ ಕಾಫಿನಾಡು ಚಂದು ಶಿವಣ್ಣನನ್ನು ಭೇಟಿಯಾಗಿದ್ದಾರೆ. ಶಿವಣ್ಣ ನಿಮ್ಮನ್ನು ನೋಡಬೇಕು, ನಿಮ್ಮ ಜೊತೆ ಕಾಫಿ ಕುಡಿಬೇಕು, ನಿಮ್ಮನ್ನ ಮೀಟ್ ಮಾಡಲೇ ಬೇಕು ಎಂದು ಕಾಫಿನಾಡಿನ ಚಂದು ಹಾಡಿದ್ದರು. ಆಂಕರ್ ಅನುಶ್ರೀ ಅವರಿಗೂ ವಿಶೇಷ ವಿಡಿಯೋ ಮೂಲಕ ಶಿವಣ್ಣ ಅವರನ್ನು ಮೀಟ್ ಮಾಡಿಸುವಂತೆ ಕೇಳಿಕೊಂಡಿದ್ದರು. ಅಂತೆಯೇ ಈ ಬಾರಿ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಶಿವಣ್ಣನನ್ನು ಭೇಟಿ ಮಾಡೋ ಅವಕಾಶ ಸಿಕ್ಕಿದೆ.

    ನಿಮ್ಮಂಥಾ ಅಭಿಮಾನಿ ಪಡೆದಿದ್ದು ಪುಣ್ಯ

    ಡಿಕೆಡಿ ವೇದಿಕೆಗೆ ಬಂದ ಕಾಫಿ ನಾಡು ಚಂದು ಶಿವಣ್ಣ ಮುಂದೆ ತಮ್ಮದೇ ಶೈಲಿಯಲ್ಲಿ ಹಾಡು ಹೇಳಿದ್ದಾರೆ. ನಾನು ಕಾಫಿ ನಾಡು ಚಂದು, ಅಪ್ಪು, ಶಿವಣ್ಣನ ಅಭಿಮಾನಿ ಎಂದು ಹೇಳಿದ್ದಾರೆ. ಈ ಮೂಲಕ ಶಿವಣ್ಣನ ಮನಸ್ಸು ಕದಿದ್ದಾರೆ. ಶಿವಣ್ಣ ಸಹ ವೇದಿಗೆ ಬಂದು ಕಾಫಿ ನಾಡು ಚಂದುವನ್ನು ತಬ್ಬಿಕೊಂಡು, ನಿಮ್ಮಂಥಾ ಅಭಿಮಾನಿ ಪಡೆದಿದ್ದು ನಮ್ಮ ಪುಣ್ಯ ಎಂದಿದ್ದಾರೆ.

    ಇದನ್ನೂ ಓದಿ: Dance Karnataka Dance: ಅಬ್ಬಬ್ಬಾ ಏನ್ ಗುರು ಶಿವಣ್ಣನ ಡ್ಯಾನ್ಸ್! ಜೋಗಿ ಕುಣಿದ್ರೆ ಅಲ್ಲಿ ಸೃಷ್ಟಿಯಾಗೋದು ಜಾತ್ರೆನೆ ಅಲ್ವಾ?

    ಶಿವಣ್ಣನಿಗೆ ಉಡುಗೊರೆ ನೀಡಿದ ಕಾಫಿ ನಾಡು ಚಂದು
    ಅಲ್ಲದೇ ಶಿವಣ್ಣಿಗೆ ಕಾಫಿ ನಾಡು ಚಂದು ಉಡುಗೊರೆಯೊಂದನ್ನು ನೀಡಿದ್ದಾರೆ. ಪುನೀತ್, ಶಿವಣ್ಣ ಇರೋ ಫೋಟೋ ವನ್ನು ಗಿಫ್ಟ್ ಆಗಿ ನೀಡಿ, ಜೊತೆಗೆ ಫೋಟೋ ತೆಗೆಸಿಕೊಂಡಿದ್ದಾರೆ.


    ಡ್ಯಾನ್ಸ್ ಕಿಂಗ್ ಕುಣಿದ್ರೆ ಅಲ್ಲಿ ಕ್ರಿಯೇಟ್ ಆಗೋದು ಜಾತ್ರೆ
    ಕರುನಾಡ ಚಕ್ರವರ್ತಿ ಶಿವಣ್ಣನಿಗೆ ಡ್ಯಾನ್ಸ್ ಎಂದ್ರೆ ಮೊದಲೇ ಇಷ್ಟ. ಅವರಿಗೆ ಯಾವುದಾದ್ರೂ ಸಾಂಗ್ ಇಷ್ಟ ಆದ್ರೆ ಸ್ಟೇಜ್ ಮೇಲೆ ಹೋಗಿ ಡ್ಯಾನ್ಸ್ ಮಾಡುತ್ತಾರೆ. ಈ ವಾರವು ಸಹ ಚಾಂಗು ಬಡ ಚಾಂಗುರೇ ನೋಡು ಮಗಾ ಊರ ತುಂಬಾ ಜಾತರೆ’ ಹಾಡಿಗೆ ಸಖತ್ ಆಗಿ ಹೆಜ್ಜೆ ಹಾಕಿದ್ದಾರೆ. ಶಿವಣ್ಣನ ಡ್ಯಾನ್ಸ್ ನೋಡಿ, ಅಲ್ಲಿ ಕೂತಿದ್ದವರು ಹಾಗೂ ಕರುನಾಡು ಫಿದಾ ಆಗಿದೆ.

    ಇದನ್ನೂ ಓದಿ: Kendasampige: ತಂದೆ ಪ್ರಾಣ ಉಳಿಸಿಕೊಳ್ಳಲು ಸುಮಿ ಪರದಾಟ, ದುಡ್ಡು ಕೊಟ್ಟು ತನ್ನ ಮಗನನ್ನು ಮದುವೆ ಮಾಡಿಕೋ ಎಂದ ವಿಜಯ!

    ಸ್ಪರ್ಧಿಗಳಿಗೆ ಸಾಥ್ ನೀಡುವ ಶಿವಣ್ಣ
    ಶಿವಣ್ಣ ಇದೊಂದೆ ಹಾಡಿಗೆ ಹೆಜ್ಜೆ ಹಾಕಿಲ್ಲ. ಪ್ರತಿ ವಾರವೂ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋನಲ್ಲಿ ಸ್ಪರ್ಧಿಗಳನ್ನು ಹುರಿದುಂಬಿಸುತ್ತಾರೆ. ತಮಗೆ ಹಾಡು ಇಷ್ಟ ಆದ್ರೆ, ಡ್ಯಾನ್ಸ್ ಮಾಡಬೇಕು ಅನ್ನಿಸಿದ್ರೆ, ತಕ್ಷಣವೇ ಎದ್ದು ಹೋಗಿ ಡ್ಯಾನ್ಸ್ ಮಾಡುತ್ತಾರೆ. ಈ ಬಾರಿಯೇ ಶಿವಣ್ಣ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಶೋಗೆ ಜಡ್ಜ್ ಆಗಿ ಹೋಗಿದ್ದಾರೆ. ಎಲ್ಲರ ಮನಸ್ಸನ್ನು ಮತ್ತೆ ಮತ್ತೆ ಕದಿಯುತ್ತಾರೆ ಈ ಜೋಗಿ. ಇವರನ್ನು ಶೋನಲ್ಲಿ ನೋಡೋದೇ ಚೆಂದ.
    Published by:Savitha Savitha
    First published: