Actress Sudha Rani: ಶ್ರೀರಸ್ತು ಶುಭಮಸ್ತು ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಮರಳುತ್ತಿದ್ದಾರೆ ಚಂದನವನದ ಸುಂದರಿ ಸುಧಾರಾಣಿ

ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮುಖ್ಯ ಪೋಷಕ ನಟಿಯಾಗಿ ಸುಧಾರಾಣಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ವಾಹಿನಿಯು ಪ್ರೋಮೊವನ್ನು ಹರಿ ಬಿಟ್ಟಿದ್ದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. 

ಸುಧಾರಾಣಿ

ಸುಧಾರಾಣಿ

  • Share this:
    ಜೀ ಕನ್ನಡ (Zee Kannada) ವಾಹಿನಿಯ ಸದಾ ಹೊಸ ಹೊಸ ಧಾರಾವಾಹಿಗಳ (Serial) ಮೂಲಕ ವಿಭಿನ್ನ ಕಥೆಗಳಿಂದ ಪ್ರೇಕ್ಷಕರನ್ನು ಹಲವು ವರ್ಷಗಳಿಂದ ಮನರಂಜಿಸುತ್ತಾ ಬಂದಿದೆ. ಕೌಟುಂಬಿಕ (Family Series), ಸಾಮಾಜಿಕ ಹಾಗೆ ಪೌರಾಣಿಕ (Mythalogical Serial) ಕಥೆಗಳ ಮೂಲಕ ಸಮಾಜಕ್ಕೆ ಉತ್ತಮ ಸಂದೇಶವನ್ನು ಸಾರುವ ಕಥೆಗಳನ್ನು ನೀಡುವಲ್ಲಿ ಜೀ ಕನ್ನಡ ವಾಹಿನಿಯು ಯಶಸ್ವಿಯಾಗಿದೆ. ಇದೀಗ ಜೀ ಕನ್ನಡ ವಾಹಿನಿಯಲ್ಲಿ ಅತಿ ಶೀಘ್ರದಲ್ಲಿ ಹೊಸ ಒಂದು ಧಾರಾವಾಹಿ ಪ್ರಾರಂಭವಾಗಲಿದೆ. ಏನಪ್ಪಾ ಹೊಸ ವಿಷಯ ಎಂದರೆ ಈ ಧಾರಾವಾಹಿಯಲ್ಲಿ ಚಂದನವನದ ಸುಂದರಿ. ಡಾ.ಸುಧಾರಾಣಿಯವರು (Dr. Sudharani) ಮೊದಲ ಬಾರಿಗೆ ಪೂರ್ಣ ಪ್ರಮಾಣದಲ್ಲಿ ಕಿರುತೆರೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ.ತಮ್ಮ ಅದ್ಬುತ ನಟನೆಯಿಂದ ಇವರು ದಶಕಗಳಿಂದ ಪ್ರೇಕ್ಷಕರ ಪ್ರೀತಿಯನ್ನು ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮುಖ್ಯ ಪೋಷಕ ನಟಿಯಾಗಿ ಸುಧಾರಾಣಿ

    ಹೌದು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮುಖ್ಯ ಪೋಷಕ ನಟಿಯಾಗಿ ಸುಧಾರಾಣಿ ಅವರು ಕಾಣಿಸಿಕೊಳ್ಳಲಿದ್ದಾರೆ. ಈಗಾಗಲೇ ವಾಹಿನಿಯು ಪ್ರೋಮೊವನ್ನು ಹರಿ ಬಿಟ್ಟಿದ್ದು ಪ್ರೇಕ್ಷಕರ ಕುತೂಹಲವನ್ನು ಹೆಚ್ಚಿಸಿದೆ. ಅಂದ ಹಾಗೆ ಸುಧಾರಾಣಿಯವರು ಈ ಹಿಂದೆ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

    ಇದನ್ನೂ ಓದಿ: Bridal Look: ಭುವಿಯ ಬ್ರೈಡಲ್ ಲುಕ್ ವೈರಲ್, ಮದುವೆಗೆ ಹೀಗೆ ಸಿಂಗರಿಸಿಕೊಳ್ಳಿ

    ನಮ್ಮನೆ ಯುವರಾಣಿ ಖ್ಯಾತಿಯ ದೀಪಕ್ ಬಿ.ಆರ್ ಗೌಡ ನಾಯಕ ನಟ

    ಅಂದಹಾಗೆ ಈ ಧಾರಾವಾಹಿಯ ನಾಯಕ ನಟನಾಗಿ ನಮ್ಮನೆ ಯುವರಾಣಿ ಖ್ಯಾತಿಯ ಅನಿಕೇತ್ ಅಲಿಯಾಸ್ ದೀಪಕ್ ಬಿ.ಆರ್ ಗೌಡ ಅವರು ಅಭಿನಯಿಸುತ್ತಿದ್ದಾರೆ.  ನಮ್ಮನೆ ಯುವರಣಿ ತಂಡದಿಂದ ಹೊರ ಬಂದ ಬಳಿಕ ಇದು ಅವರ ಮೊದಲ ಪ್ರಾಜೆಕ್ಟ್ ಎನ್ನುವುದು ವಿಶೇಷ. ನೀಲಾ ಪ್ರೊಡಕ್ಷನ್ ನಿರ್ಮಾಣದಲ್ಲಿ ಬರುತ್ತಿರುವ ಧಾರಾವಾಹಿ ಬಗ್ಗೆ ಪ್ರೇಕ್ಷಕರಲ್ಲಿ ಅತಿಯಾದ ಕುತೂಹಲವಾಗಿದೆ ಎಂದರೆ ಸುಳ್ಳಾಗದು.

    ಹೊರಗಿನ ಪ್ರಪಂಚವನ್ನು ಮರೆತು ತನ್ನ ಕುಟುಂಬವೇ ಒಂದು ಪ್ರಪಂಚ ಎಂದು ಬದುಕುತ್ತಿರುವ ಹೆಣ್ಣು ಮಕ್ಕಳ ಜೀವನದ ಬಗ್ಗೆ ಈ ಧಾರಾವಾಹಿಯ ಕಥೆ ಸುತ್ತುವರಿಯುತ್ತದೆ ಎಂದು ವಾಹಿನಿಯೂ ತನ್ನ ಪ್ರೋಮೋದಲ್ಲಿ ತಿಳಿಸಿದೆ.

    ಪ್ರೋಮೊದಲ್ಲಿ ಕಾಣಿಸಿರುವ ಅಂತೆ ನಟಿ ಸುಧಾರಾಣಿ ಅವರು ಧಾರಾವಾಹಿಯಲ್ಲಿ ತುಳಸಿ ಎಂಬ ಪಾತ್ರವನ್ನು ನಿರ್ವಹಿಸಲಿದ್ದಾರೆ. ಅದೇ ರೀತಿ ಒಂದು ಹೆಣ್ಣು ತಾಯಿಯಾಗಿ ಸೊಸೆಯಾಗಿ ಮನೆ ಹೀಗೆ ನಿಭಾಯಿಸಿಕೊಂಡು ಹೋಗುತ್ತಾಳೆ ಎನ್ನುವ ಬಗ್ಗೆ ಪ್ರೋಮೋದಲ್ಲಿ ತಿಳಿಸಿಕೊಟ್ಟಿದ್ದಾರೆ.

    ಸ್ಟಾರ್ ಸುವರ್ಣ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ಬೆಟ್ಟದ ಹೂವು ದಾರಾವಾಹಿಯಲ್ಲಿ ದೀಪ್ತಿ ಪಾತ್ರವನ್ನು ನಿರ್ವಹಿಸುತ್ತಿರುವ ಚಂದನ ರಾಘವೇಂದ್ರ ಅವರು ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಮುಖ್ಯ ಪಾತ್ರವನ್ನು ನಿರ್ವಹಿಸಲಿದ್ದಾರೆ.

    'ಅಗ್ಗಾಬಾಯಿ ಸನ್ಬಾಯಿ' ಧಾರಾವಾಹಿಯ ರಿಮೇಕ್!

    ಜೀ ಮರಾಠಿಯಲ್ಲಿ ಪ್ರಸಾರಗೊಳ್ಳುತ್ತಿದ್ದ 'ಅಗ್ಗಾಬಾಯಿ ಸನ್ಬಾಯಿ' ಎಂಬ ಧಾರಾವಾಹಿಯ ರಿಮೇಕ್ ಆಗಿ ಶ್ರೀರಸ್ತು ಶುಭಮಸ್ತು ಧಾರಾವಾಹಿಯ‌ ಕಥೆ ಇರಲಿದೆ ಎಂದು ಮೂಲಗಳು ಹೇಳುತ್ತಾ ಇವೆ. ಈ ಬಗ್ಗೆ ಧಾರಾವಾಹಿಯು ಪ್ರಸಾರಗೊಂಡ ಮೇಲಷ್ಟೇ ತಿಳಿಯಬಹುದು‌. ಧಾರಾವಾಹಿಯು ಯಾವ ಸಮಯಕ್ಕೆ ಪ್ರಸಾರಗೊಳ್ಳಲಿದೆ ಎನ್ನುವ ಬಗ್ಗೆ ಇನ್ನೂ ವಾಹಿನಿಯೂ ಮಾಹಿತಿ ಬಿಟ್ಟುಕೊಟ್ಟಿಲ್ಲ.

    ಇದನ್ನೂ ಓದಿ: Olavina Nildana: ಮಲೆನಾಡಿನ ಮಧುರ ಪ್ರೇಮಕಥೆ, ಶೀಘ್ರದಲ್ಲಿ ಬರ್ತಿದೆ ಒಲವಿನ ನಿಲ್ದಾಣ!

    ಅಗ್ಗಾಬಾಯಿ ಸನ್ಬಾಯಿ ಕಥೆ ಏನ್​ ಗೊತ್ತಾ?

    ಅಗ್ಗಾ ಬಾಯಿ ಸನ್ಬಾಯಿ ಸೀರಿಯಲ್​ ವಿಭಿನ್ನ ಕಥಾಹಂದರವನ್ನು ಹೊಂದಿದೆ. ಸಾಮಾನ್ಯ ಜನರನ್ನು ತಾಕುವ ಅವರಿಗೆ ತಮ್ಮದೇ ಕಥೆ ಎನಿಸುವ ನೈಜ ಭಾವನೆ ನೀಡುವ ಕಥೆಯಾಗಿದೆ.

    ದಿಟ್ಟ ಮಹಿಳೆ ತನ್ನ ವೈಯಕ್ತಿಕ ಜೀವನ ಹಾಗೂ ಉದ್ಯಮದ ಸವಾಲುಗಳನ್ನು ಹೇಗೆ ಎದುರಿಸುತ್ತಾಳೆ ಅನ್ನೋದು ಮುಖ್ಯ ವಿಷಯವಾಗಿದೆ. ಮರಾಠಿ ಜನರ ಮನಗೆದ್ದಿರೋ ಈ ಧಾರಾವಾಹಿ ನಮ್ಮ ಕನ್ನಡಿಗರನ್ನ ಹೇಗೆ ಸೆಳೆಯುತ್ತೆ ನೋಡಬೇಕಿದೆ. ಸೀರಿಯಲ್​ ಕುರಿತು ಚರ್ಚೆಗಳೆಲ್ಲಾ ಮುಗಿದಿದ್ದು, ಘೋಷಣೆಯಷ್ಟೆ ಬಾಕಿ ಇದೆ.
    Published by:Swathi Nayak
    First published: