Vaidehi Parinaya Serial: ಜೀ ಕನ್ನಡ ವಾಹಿನಿಯಲ್ಲಿ ಶೀಘ್ರದಲ್ಲಿ ಪ್ರಸಾರಗೊಳ್ಳಲಿದೆ ವೈದೇಹಿ ಪರಿಣಯ

ಜೀ ತೆಲುಗು ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ವೈದೇಹಿ ಪರಿಣಯ ಧಾರಾವಾಹಿಯ ಡಬ್ ಆಗಿತ್ತಿರುವ ಕನ್ನಡದ ವೈದೇಹಿ ಪರಿಣಯವು ಪ್ರೇಕ್ಷಕರನ್ನು ಮನರಂಜಿಸಲು ತಯಾರಾಗಿದೆ.

ವೈದೇಹಿ ಪರಿಣಯ

ವೈದೇಹಿ ಪರಿಣಯ

 • Share this:
  ಜೀ ಕನ್ನಡ (Zee Kannada) ವಾಹಿನಿಯು ಸದಾ ಹೊಸ ಹೊಸ ಧಾರಾವಾಹಿಗಳನ್ನು ಪ್ರಸಾರ ಮಾಡಿ ಪ್ರೇಕ್ಷಕರಿಗೆ ಮನರಂಜನೆ ನೀಡುವ ಕಾರ್ಯ ಹಲವು ವರ್ಷಗಳಿಂದ ಮಾಡುತ್ತಾ ಬಂದಿದೆ. ಇದೀಗ ಮತ್ತೆ ಹೊಸ ಧಾರಾವಾಹಿ ಮೂಲಕ ಜೀ ಕನ್ನಡ ಪ್ರೇಕ್ಷಕರನ್ನು ಮನರಂಜಿಸಲು ತಯಾರಾಗಿದೆ. ಹೌದು ವೈದೇಹಿ ಪರಿಣಯ (Vaidehi Parinaya) ಎನ್ನುವ ಧಾರಾವಾಹಿಯು ಶೀಘ್ರದಲ್ಲಿ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರಗೊಳ್ಳಲಿದೆ. ಈಗಾಗಲೇ ವಾಹಿನಿಯವರು ಇದರ ಪ್ರೋಮೋವನ್ನು (Promo) ಕೂಡ ಹರಿಬಿಟ್ಟಿದ್ದಾರೆ.  ಜೀ ತೆಲುಗು (Zee Telugu)  ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿರುವ ವೈದೇಹಿ ಪರಿಣಯ ಧಾರಾವಾಹಿಯ ಡಬ್ ಆಗಿತ್ತಿರುವ ಕನ್ನಡದ ವೈದೇಹಿ ಪರಿಣಯವು ಪ್ರೇಕ್ಷಕರನ್ನು ಮನರಂಜಿಸಲು ತಯಾರಾಗಿದೆ.


  View this post on Instagram


  A post shared by Zee Kannada (@zeekannada)


  ಪವನ್ ರವೀಂದ್ರ ವೈದೇಹಿ ಪರಿಣಯದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ

  ಈಗಾಗಲೇ ಡಬ್ಬಿಂಗ್ ಧಾರಾವಾಹಿಗಳನ್ನು ವೀಕ್ಷಕರು ಇಷ್ಟಪಡುತ್ತಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಮಧ್ಯಾಹ್ನ ಪ್ರಸಾರಗೊಳ್ಳುತ್ತಿರುವ ಎಲ್ಲಾ ಧಾರಾವಾಹಿಗಳು ತೆಲುಗಿನ ಜೀ ಡಬ್ಬಿಂಗ್ ಆಗಿದ್ದು, ಇದನ್ನು ವೀಕ್ಷಕರು ಬಹಳ ಇಷ್ಟಪಟ್ಟು ನೋಡುತ್ತಿದ್ದಾರೆ.

  ಇನ್ನೂ ವಿಶೇಷವೆಂದರೆ ಸದ್ಯ ತೆಲುಗಿನ ಅಂಗಳದಲ್ಲಿ ಕನ್ನಡದ ಕಿರುತೆರೆಯ ನಟ-ನಟಿಯರು ಮಿಂಚುತ್ತಿದ್ದಾರೆ. ಈ ಸಾಲಿಗೆ ಸೇರ್ಪಡೆಗೊಂಡ ನಟ ಪವನ್ ರವೀಂದ್ರ ಕೂಡ ಕನ್ನಡದ ಕಿರುತೆರೆ ನಟ.

  ಉತ್ತಮ ಕಥೆಯನ್ನು ಹೊಂದಿರುವ ಈ ಧಾರಾವಾಹಿಯು ಕನ್ನಡದಲ್ಲಿ ಕೂಡ ಸಕ್ಸಸ್ ಆಗುವ ಸೂಚನೆಗಳು ಕಾಣುತ್ತಿದೆ. ಉದಯ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಕಾವ್ಯಾಂಜಲಿ ಧಾರಾವಾಹಿಯಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದ ಪವನ್ ರವೀಂದ್ರ ಅವರು ವೈದೇಹಿ ಪರಿಣಯದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಯುಕ್ತ ಮಲ್ನಾಡ್ ಇವರು ಪ್ರಮುಖ ನಟಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.

  ಇದನ್ನೂ ಓದಿ: Puttakkana Makkalu: ಕಂಠಿಗೆ ಕಾದಿದೆಯಾ ಸಂಕಷ್ಟ? ಶುರುವಾಗುವ ಮುನ್ನವೇ ಅಂತ್ಯವಾಗುತ್ತಾ ಪ್ರೀತಿ?

  ಒಂದು ಕೌಟುಂಬಿಕ ಪ್ರಣಯ ಕಥೆಯಾಧಾರಿತ ಧಾರಾವಾಹಿ ವೈದೇಹಿ ಪರಿಣಯ

  ಇದು ಒಂದು ಕೌಟುಂಬಿಕ ಪ್ರಣಯ ಕಥೆಯಾಧಾರಿತ ಧಾರಾವಾಹಿ ಆಗಿದ್ದು, ನಟ ಮತ್ತು ನಟಿ ಆಕಸ್ಮಿಕವಾಗಿ ಇದರಲ್ಲಿ ಭೇಟಿಯಾಗಿ ಮುಂದೆ ಅವರ ಸುತ್ತ ಕಥೆ ಸುತ್ತುವರಿಯುತ್ತದೆ.

  ಪ್ರಮುಖ ನಟ ರಾಮ್ ತನ್ನ ಸಹೋದರನ ಮದುವೆ ಮುರಿದುಬಿದ್ದ ವಿಚಾರದಲ್ಲಿ ಸೋತು ಹೋಗಿ ಮದುವೆ ಎನ್ನುವ ಪವಿತ್ರ ಬಂಧನವನ್ನು ದ್ವೇಷಿಸಲು ಆರಂಭಿಸುತ್ತಾನೆ. ಮುಂದೆ ಅವರ ಬೇಟಿ ಬಳಿಕ ಅವರಿಬ್ಬರ ನಡುವೆ ಪ್ರೀತಿ ಹೇಗೆ ಹುಟ್ಟುತ್ತದೆ ಎನ್ನುವುದೇ ಕಥೆಯ ಸಾರಾಂಶ.

  ಅಜ್ಜಿಯ ಒತ್ತಾಯಕ್ಕೆ ಮಣಿದು ಭಾರತಕ್ಕೆ ಆಗಮಿಸುತ್ತಾನೆ ದೇವಾಂಶ್

  ಅಜ್ಜಿಯ ಒತ್ತಾಯಕ್ಕೆ ಮಣಿದು ವಿದೇಶದಿಂದ ಭಾರತಕ್ಕೆ ಆಗಮಿಸುತ್ತಾನೆ ದೇವಾಂಶ್. ಅಸಲಿಗೆ ದೇವಾಂಶ್ ತಂದೆ ಆತನಿಗೆ ಮದುವೆ ಮಾಡುವ ಪ್ಲಾನ್‌ನಿಂದ ಕರೆಸಿಕೊಂಡಿರುತ್ತಾರೆ. ಅಣ್ಣನ ಮದುವೆ ಮುರಿದು ಬಿದ್ದ ಕಾರಣ ದೇವಾಂಶ್ ಮದುವೆ ವಿಚಾರದಲ್ಲಿ ನಂಬಿಕೆ ಕಳೆದುಕೊಂಡಿರುತ್ತಾನೆ. ಆದರೆ ವಿಧಿಯಾಟವೇ ಬೇರೆಯೇ ಆಗಿರುತ್ತೆ. ವೈದೇಹಿ ಎಂಬ ಹುಡುಗಿಯನ್ನು ಪ್ರೀತಿಸಲು ಆರಂಭಿಸುತ್ತಾನೆ. ಇದರ ಸುತ್ತ ಧಾರಾವಾಹಿ ನಡೆದುಕೊಂಡು ಹೋಗುತ್ತದೆ

  ಇದನ್ನೂ ಓದಿ: Samantha: ಸಮಂತಾ ಇನ್ನು ಲೇಡಿ ಬಿಗ್ ಬಾಸ್! ಮಾಜಿ ಮಾವನಿಗೆ ಸೆಡ್ಡು ಹೊಡೆದ್ರಾ ಸೊಸೆ?

  ವೈದೇಹಿ ಪರಿಣಯವು ಮಧ್ಯಾಹ್ನ ಸ್ಲಾಟ್‌ನಲ್ಲಿ ಪ್ರಸಾರವಾಗಲಿದೆ

  'ವೈದೇಹಿ ಪರಿಣಯ' ಶೀಘ್ರದಲ್ಲೇ ತೆರೆಕಾಣುವ ಸಾಧ್ಯತೆ ಇದೆ. ಇತ್ತೀಚಿನ ವರದಿಗಳ ಪ್ರಕಾರ, ವೈದೇಹಿ ಪರಿಣಯವು ಮಧ್ಯಾಹ್ನ ಸ್ಲಾಟ್‌ನಲ್ಲಿ ಪ್ರಸಾರವಾಗಲಿದೆ. ಜೀ ಕನ್ನಡ ವಾಹಿನಿಯಲ್ಲಿ ಮಧ್ಯಾಹ್ನದ ಸ್ಲಾಟ್ ನಲ್ಲಿ ಈಗಾಗಲೇ ತೆಲುಗು ಡಬ್ ಧಾರವಾಹಿಗಳು ಪ್ರಸಾರಗೊಳ್ಳುತ್ತಿದೆ. ಕೃಷ್ಣ ಸುಂದರಿ, ತ್ರಿನಯನಿ, ಅಗ್ನಿಪರೀಕ್ಷೆ ಎಲ್ಲಾ ಧಾರಾವಾಹಿಗಳು ಯಶಸ್ವಿಯಾಗಿ ವಾಹಿನಿಯಲ್ಲಿ ಪ್ರಸಾರಗೊಳ್ಳುತ್ತಿದೆ. ಯಶಸ್ವಿ ಧಾರಾವಾಹಿಗಳ ಜೊತೆಗೆ ಇದೀಗ ವೈದೇಹಿ ಪರಿಣಯ ಕೂಡ ಜೊತೆ ಯಾಗಲಿದೆ.
  Published by:Swathi Nayak
  First published: