Jodi No.1 Reality Show: ಶೀಘ್ರದಲ್ಲೇ ಜೀ‌ ಕನ್ನಡ ವಾಹಿನಿಯಲ್ಲಿ ಜೋಡಿ ನಂ.1 ರಿಯಾಲಿಟಿ ಶೋ

ಮನರಂಜನೆಯ ಮಂಟಪದಲ್ಲಿ ದಾಂಪತ್ಯದ ಉತ್ಸವಕ್ಕೆ ಶುಭ ಮೂಹೂರ್ತ ಕೂಡಿ ಬರುತ್ತಿದೆ. ಜೋಡಿ ನಂ. 1 ಶೀಘ್ರದಲ್ಲಿ ಎಂದು ಜೀ ಕನ್ನಡ ಪ್ರೋಮೋವನ್ನು ಬಿಡುಗಡೆ ಮಾಡಿದೆ. 

ಜೋಡಿ ನಂ.1

ಜೋಡಿ ನಂ.1

 • Share this:
  ವಿಭಿನ್ನ ಕ್ರಿಯಾಶೀಲತೆಯೊಂದಿಗೆ ಕಳೆದ ಹದಿನೈದು ವರ್ಷಗಳಿಂದ ಪ್ರೇಕ್ಷಕರನ್ನು ತನ್ನದೇ ಆದ ರೀತಿಯಲ್ಲಿ ರಂಜಿಸಿ ಕೊಂಡು ಬಂದ ಜೀ ಕನ್ನಡ (Zee Kannada) ವಾಹಿನಿ ಇದೀಗ ಒಂದು ಹೆಜ್ಜೆ ಮುಂದೆ ಇಟ್ಟು ಹೊಸದೊಂದು ಬಗೆಯ ಕಾರ್ಯಕ್ರಮವನ್ನು ನಡೆಸಿಕೊಡಲು ಮುಂದಾಗಿದೆ. ಇತ್ತೀಚೆಗಷ್ಟೇ ಗೋಲ್ಡನ್ ಗ್ಯಾಂಗ್ (Golden Gang) ಎಂಬ ಹೊಸ ರಿಯಾಲಿಟಿ ಶೋ (Reality Show) ಆರಂಭಿಸಿ ಜನಮನ್ನಣೆಯನ್ನು ಪಡೆದಿದ್ದ ಜೀ ಕನ್ನಡ ವಾಹಿನಿ ಇದೀಗ ದಂಪತಿಗಳಿಗಾಗಿ ಜೋಡಿ ನಂ.1 (Jodi No.1) ರಿಯಾಲಿಟಿ ಶೋ ಅನ್ನು ಆರಂಭಿಸಲು ಮುಂದಾಗಿದೆ.  ಈಗಾಗಲೇ ಮನರಂಜನೆಯ ಮಂಟಪದಲ್ಲಿ ದಾಂಪತ್ಯದ ಉತ್ಸವಕ್ಕೆ ಶುಭ ಮೂಹೂರ್ತ ಕೂಡಿ ಬರುತ್ತಿದೆ. ಜೋಡಿ ನಂ. 1 ನಲ್ಲಿ ಶೀಘ್ರದಲ್ಲಿ ಎಂದು ಪ್ರೋಮೋವನ್ನು ಬಿಡುಗಡೆ ಮಾಡಿದೆ. 

  ಪ್ರೇಕ್ಷಕರು ಯಾವಾಗ ಶುರುವಾಗುತ್ತೆ ಎಂದು ಕಾತುರರಾಗಿದ್ದಾರೆ

  ಪ್ರೋಮೋವನ್ನು ನೋಡಿ ಪ್ರೇಕ್ಷಕರು ಯಾವಾಗ ಶುರುವಾಗುತ್ತೆ ಎಂದು ಕಾತುರರಾಗಿದ್ದಾರೆ. ದಂಪತಿಗಳ ಬಬ್ಲಿ-ಬಬ್ಲಿ ಕಿತ್ತಾಟ, ಮುದ್ದು ಮುದ್ದು ಮುದ್ದಾಟ ನೋಡಿ ಅಭಿಮಾನಿಗಳ ಸಂತಸ ಪಡಲು ಕಾಯುತ್ತಿದ್ದಾರೆ. ದಂಪತಿಗಳನ್ನು ಆಟವಾಡಿಸಲು ವಾಹಿನಿ ಏನೋ ಸಿದ್ಧಗೊಂಡಿದೆ. ಆದರೆ, ಈ ಶೋನಲ್ಲಿ ಸೆಲಬ್ರಿಟಿ ದಂಪತಿಗಳಿರುತ್ತಾರಾ.? ಅಥವಾ ಯಾರಿರುತ್ತಾರೆ ಅನ್ನೋ ಪ್ರಶ್ನೆ ಎದ್ದಿದೆ. ಇದೆಲ್ಲದಕ್ಕೂ ಉತ್ತರ ಸಿಗಬೇಕೆಂದರೆ ರಿಯಾಲಿಟಿ ಶೋ ಆರಂಭವಾಗುವವರೆಗೂ ಕಾಯಲೇ ಬೇಕಿದೆ.

  ಇದನ್ನೂ ಓದಿ: Padmini Devanahalli: ತೆಲುಗಿಗೆ ಹೊರಟ 'ಹಿಟ್ಲರ್‌'ನ ಸೊಸೆ! 'ಪದ್ಮಿನಿ'ಯ 'ಪರಿಣಯ'ವನ್ನು ಜನ ಮೆಚ್ಚುತ್ತಾರಾ?

  ಮೂಲೆ ಮೂಲೆಗಳಿಂದ ಪ್ರತಿಭಾವಂತರ ಆಗಮನ

  ಈಗಾಗಲೇ ಈ ವಾಹಿನಿ ಹಲವು ರಿಯಾಲಿಟಿ ಶೋಗಳನ್ನು ನೀಡಿ ಪ್ರೇಕ್ಷಕರನ್ನು ರಂಜಿಸಿದೆ. ಡ್ಯಾನ್ಸ್ ಶೋ ಆದ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಗೆ ಕರ್ನಾಟಕದ ಮೂಲೆ ಮೂಲೆಗಳಿಂದ ಪ್ರತಿಭೆಗಳು ಬಂದಿದ್ದಾರೆ.ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ ಚಿನ್ನಿ ಮಾಸ್ಟರ್  ಅರ್ಜುನ್‌ ಜನ್ಯ ಅವರು ತೀರ್ಪುಗಾರರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಕಾರ್ಯಕ್ರಮಕ್ಕೆ ಪವರ್ ಹೆಚ್ಚಿಸಲು ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರು ಸ್ಪೆಷಲ್‌ ಜಡ್ಜ್‌ ಆಗಿ ಭಾಗಿಯಾಗುತ್ತಿದ್ದಾರೆ. ಪುಟ್ಟ ಮಕ್ಕಳ ಡ್ಯಾನ್ಸ್‌ಯಿಂದ ಹಿಡಿದು ವಯಸ್ಸಾದವರು ಡ್ಯಾನ್ಸ್‌ ಮಾಡಿ ಎಂದು ವೇದಿಕೆ ಮೇಲೆ ಕರೆದರೆ ಶಿವಣ್ಣ ಮೊದಲು ಹೋಗುತ್ತಾರೆ. ಅವರ ಎನರ್ಜಿ ಮತ್ತು ನಗು ನೋಡಿ ಅಭಿಮಾನಿಗಳು ಫುಲ್ ಫಿದಾ ಆಗಿದ್ದಾರೆ.

  ಡ್ರಾಮಾ ಜ್ಯೂನಿಯರ್ಸ್ ರಿಯಾಲಿಟಿ ಶೋ. ಈ ಶೋ ಮೂಲಕ ಪುಟಾಣಿಗಳು ಕೂಡ ತಮ್ಮ ನಟನೆಯ ಪ್ರತಿಭೆಯನ್ನು ಇಡೀ ಕರ್ನಾಟಕಕ್ಕೆ ತೋರಿಸಿಕೊಟ್ಟಿದೆ. ಕಾಮಿಡಿ ಕಿಲಾಡಿಗಳು ಕಾರ್ಯಕ್ರಮದ ಮೂಲಕ ಜೂನಿಯರ್ ಮಾಲಾಶ್ರೀ, ಜೂನಿಯರ್ ಜಗ್ಗೇಶ್ ಅಂತಹ ಹಾಸ್ಯ ಕಲಾವಿದರನ್ನು ಈ ಶೋ ನೀಡಿದೆ ಎಂದರೆ ತಪ್ಪಾಗಲಾರದು. ಇನ್ನು ಪುಟಾಣಿಗಳಿಗೂ ಜೀ ಕನ್ನಡ ವೇದಿಕೆ ನೀಡಿದೆ.  ಇನ್ನು ಜನ ಮೆಚ್ಚಿದ ದಿ ಬೆಸ್ಟ್ ರಿಯಾಲಿಟಿ ಶೋ ಬಿಗ್ ಬಾಸ್. ಬಿಗ್ ಬಾಸ್ ಮೂಲಕ ಪ್ರೇಕ್ಷಕರು ತಮ್ಮ ನೆಚ್ಚಿನ ಕಲಾವಿದರ ಆಟ-ತುಂಟಾಟಗಳನ್ನು ನೋಡಿ ಖುಷಿ ಪಟ್ಟಿದ್ದರು.

  ಇದನ್ನೂ ಓದಿ: Jothe Jotheyali: ಲಂಡನ್​ನಿಂದ ಬಂದ ಆರ್ಯವರ್ಧನ್​ಗೆ ಕಾದಿದೆ​ ಶಾಕ್​ - ಜೊತೆ ಜೊತೆಯಲಿ ಧಾರಾವಾಹಿಯಲ್ಲಿ ಬಿಗ್​ ಟ್ವಿಸ್ಟ್​

  ಹೊಸತನದೊಂದಿಗೆ ಶುರುವಾಗಿದ್ದ ಗೋಲ್ಡನ್ ಗ್ಯಾಂಗ್

  ಈ ವರ್ಷ ಜೀ ಕನ್ನಡ ವಾಹಿನಿ ಹೊಸ ರಿಯಾಲಿಟಿ ಶೋ ಅನ್ನು ಆರಂಭಿಸಿತ್ತು.  ಈ ರಿಯಾಲಿಟಿ ಶೋ ನಲ್ಲಿ ಹಲವು ವರ್ಷಗಳಿಂದ ಸ್ನೇಹಿತರಾಗಿದ್ದವರನ್ನು ಕರೆಸಿ ಮಾತನಾಡಿಸಿದ್ದರು, ಅವರನ್ನು ಆಟವಾಡಿಸಿ, ಕೆಲ ಸಿಹಿ-ಕಹಿ ಘಟನೆಗಳನ್ನು ಮೆಲುಕು ಹಾಕಲು ವೇದಿಕೆಯನ್ನು ಕಲ್ಪಿಸಲಾಗಿತ್ತು. ಅದೇ ಗೋಲ್ಡನ್ ಗ್ಯಾಂಗ್ ಶೋ. ಈ ಶೋ ಅನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ನಿರೂಪಣೆ ಮಾಡಿದ್ದರು. ಕಷ್ಟ-ಸುಖಗಳಲ್ಲಿ ಭಾಗಿಯಾದಿದ್ದ ಕಲಾವಿದ ಸ್ನೇಹಿತರು ಈ ಶೋನಲ್ಲಿ ಬಂದು ತಮ್ಮ ಹಳೆ ದಿನಗಳನ್ನು ನೆನೆದು ಭಾವುಕರಾಗಿದ್ದರು.
  Published by:Swathi Nayak
  First published: