Zee Kannada: ಯಕ್ಷಗಾನ ಪ್ರಿಯರ ಕ್ಷಮೆಯಾಚಿಸಿದ ಜೀ ಕನ್ನಡ; ಡಾನ್ಸ್ ಕರ್ನಾಟಕ ಡಾನ್ಸ್​ನಲ್ಲೇ ಕ್ಷಮೆ ಕೇಳಲು ಆಗ್ರಹ

ನಮ್ಮ ಅತ್ಯುತ್ತಮ ಕೆಲಸಗಳಿಗೆ ನೀವು ಕೊಟ್ಟ ಗೌರವ ಹಾಗೂ ನಾವು ಎಡವಿದಾಗ ನೀವು ಕೊಡುವ ಸಲಹೆಯನ್ನು ಸಹ ನಾವು ಸ್ವಾಗತಿಸುತ್ತೇವೆ. ಇಲ್ಲಿಯವರೆಗೆ ನೀವು ಕೊಟ್ಟ ಪ್ರೋತ್ಸಾಹ, ಬೆಂಬಲ ಹಾಗೆಯೇ ಮುಂದುವರೆಯಲಿ ಎಂದು ಜೀ ಕನ್ನಡ ವಾಹಿನಿ ಆಶಿಸುತ್ತದೆ ಎಂದು ಬರೆದುಕೊಂಡಿದೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

 • Share this:
  ಜೀ ಕನ್ನಡ ವಾಹಿನಿಯು ಯಕ್ಷಗಾನ ಪ್ರಿಯರಲ್ಲಿ ಕ್ಷಮೆಯಾಚಿಸಿದೆ. ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ವೇದಿಕೆಯಲ್ಲಿ ಯಕ್ಷಗಾನವನ್ನುಅಸಂಪ್ರದಾಯಿಕವಾಗಿ ಅಳವಡಿಸಿದ್ದನ್ನು ಸಾಮಾಜಿಕ ಜಾಲತಾಣಗಳಲ್ಲಿ ಯಕ್ಷಗಾನ ಪ್ರಿಯರು (Yakshagana) ಖಂಡಿಸಿ ಬಾಯ್​ಕಾಟ್ ಜೀ ಕನ್ನಡ (Zee Kannada) ಅಭಿಯಾನ ನಡೆಸಿದ್ದರು. ಈ ಹಿನ್ನೆಲೆಯಲ್ಲಿ ಜೀ ಕನ್ನಡ ವಾಹಿನಿ ಯಕ್ಷಗಾನ ಪ್ರಿಯರ ಕ್ಷಮೆ ಕೋರಿದೆ.  ಈಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿರುವ ಜೀ ಕನ್ನಡ ವಾಹಿನಿ, ಕಳೆದ ವಾರ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಕಾರ್ಯಕ್ರಮದಲ್ಲಿ ಪ್ರಸಾರವಾದ ಯಕ್ಷಗಾನ ಕೆಲವರ ಭಾವನೆಗಳಿಗೆ ಧಕ್ಕೆಯಾಗಿದ್ದು ನಮ್ಮ ಗಮನಕ್ಕೆ ಬಂದಿದೆ. ಇದು ಉದ್ದೇಶಪೂರ್ವಕವಾಗಿ ಆಗಿಲ್ಲವೆಂದು ವಾಹಿನಿ ಸ್ಪಷ್ಟೀಕರಿಸಲು ಬಯಸುತ್ತದೆ ಮತ್ತು ಈ ಮೂಲಕ ಕ್ಷಮೆಯಾಚಿಸುತ್ತೇವೆ" ಎಂದು ಬರೆದುಕೊಂಡಿದೆ. 

  "ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ (Dance Karnataka Dance) ವೇದಿಕೆಯ ಮೂಲಕ ಅನೇಕ ಕಲಾ ಪ್ರಕಾರಗಳನ್ನು ಗೌರವಿಸುತ್ತ ನಾಡಿನ ಜನತೆಗೆ ಪರಿಚಯಿಸುತ್ತಲೇ ಬಂದಿದ್ದೇವೆ. ನಮ್ಮ ವೇದಿಕೆಯಲ್ಲಿ ಯಕ್ಷಗಾನಕ್ಕೂ ಸಹ ಪ್ರಾಮುಖ್ಯತೆ ನೀಡಿದ್ದು, ನೃತ್ಯಾಭಿಮಾನಿಗಳ ಪ್ರಶಂಸೆ ಪಡೆದಿದ್ದೇವೆ ಎಂದು ವಾಹಿನಿ ಬರೆದುಕೊಂಡಿದೆ.  ಸಲಹೆಗೆ ಸದಾ ಸ್ವಾಗತ ಎಂದ ವಾಹಿನಿ

  "ನಮ್ಮ ಅತ್ಯುತ್ತಮ ಕೆಲಸಗಳಿಗೆ ನೀವು ಕೊಟ್ಟ ಗೌರವ ಹಾಗೂ ನಾವು ಎಡವಿದಾಗ ನೀವು ಕೊಡುವ ಸಲಹೆಯನ್ನು ಸಹ ನಾವು ಸ್ವಾಗತಿಸುತ್ತೇವೆ. ಇಲ್ಲಿಯವರೆಗೆ ನೀವು ಕೊಟ್ಟ ಪ್ರೋತ್ಸಾಹ, ಬೆಂಬಲ ಹಾಗೆಯೇ ಮುಂದುವರೆಯಲಿ" ಎಂದು ಜೀ ಕನ್ನಡ ವಾಹಿನಿ ಆಶಿಸುತ್ತದೆ ಎಂದು ಬರೆದುಕೊಂಡಿದೆ.

  ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲೇ ಕ್ಷಮೆ ಕೇಳಿ
  ಆದರೆ ಹಲವು ಯಕ್ಷಗಾನ ಪ್ರಿಯರು ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲಿ ಯಕ್ಷಗಾನ ಕಲೆಗೆ ಮಾಡಿದ ಅವಮಾನಕ್ಕೆ ಡಾನ್ಸ್ ಕರ್ನಾಟಕ ಡಾನ್ಸ್ ವೇದಿಕೆಯಲ್ಲೇ ಕ್ಷಮೆ ಕೇಳುವಂತೆ ಆಗ್ರವ ವ್ಯಕ್ತಪಡಿಸುತ್ತಿದ್ದಾರೆ.

  ಏನೇ ಆದರೂ ವಾಹಿನಿ ಪದೇ ಪದೇ ಯಕ್ಷಪ್ರಿಯರ ಕೆಂಗಣ್ಣಿಗೆ ಗುರಿಯಾಗುತ್ತಿದ್ದು, ಕರ್ನಾಟಕದ ಸಂಸ್ಕೃತಿ, ಕಲೆ ಮುಂತಾದವುಗಳ ಕುರಿತು ಸೂಕ್ಷ್ಮತೆ ವಹಿಸಬೇಕೆಂಬ ಅಭಿಪ್ರಾಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಕ್ತವಾಗುತ್ತಿದೆ.

  ಈ ಕುರಿತು ಸಾಮಾಜಿಕ ಜಾಲತಾಣದಲ್ಲಿ ವ್ಯಕ್ತವಾದ ಅಭಿಪ್ರಾಯವೊಂದು ಹೀಗಿದೆ

  ವೈಯಕ್ತಿಕವಾಗಿ ನಾನು ಯಕ್ಷಗಾನದ ಅಭಿಮಾನಿಯಲ್ಲ. ಆದರೆ ಕರಾವಳಿಯ ಜಿಲ್ಲೆಗಳಲ್ಲಿ ಯಕ್ಷಗಾನದ ಮಹತ್ವವನ್ನ,ಯಕ್ಷಗಾನದೆಡೆಗಿನ ಕರಾವಳಿಗರ ಪ್ರೀತಿಯನ್ನು ಕಂಡು ಬಲ್ಲೆ.ಅದರಲ್ಲೂ ದಕ್ಷಿಣ ಕರಾವಳಿಗರಿಗೆ ಯಕ್ಷಗಾನ ಬರಿ ಪ್ರಾಚೀನ ನಾಟ್ಯದ ಪ್ರಕಾರವಲ್ಲ.ಅದು ಸಾಗರ ತೀರದವರಿಗೊಂದು ಭಾವುಕತೆ.ಅವರ ಬದುಕಿನ ದೈವೀಕ ಕಲೆ.ದೇವರೆದರು ಸಂಕಲ್ಪ ಹೇಳಿಕೊಂಡು ಹರಕೆ ಪೂರೈಸುವ ವಿಧಿಯೂ ಹೌದು.ಎಷ್ಟೊ ಕಡೆಗಳಲ್ಲಿ ಯಕ್ಷಗಾನಕ್ಕೆ ಹರಕೆ ಆಟ, ದೇವರಾಟ ಎನ್ನುವ ಹೆಸರುಗಳೂ ಉಂಟು.

  ಇದನ್ನೂ ಓದಿ: Katrina -Vicky: ವಿಕ್ಕಿ- ಕತ್ರಿನಾಗೆ ಜೀವ ಬೆದರಿಕೆ ಹಾಕಿದ್ದ ಆರೋಪಿ ಅಂದರ್, ವಿಚಾರಣೆ ನಡೆಸುತ್ತಿರುವ ಮುಂಬೈ ಪೊಲೀಸರು

  ಪಾತ್ರಧಾರಿಗಳು ಭಕ್ತಿಯಿಂದ ಪಾತ್ರ ಧರಿಸುವ,ಪ್ರೇಕ್ಷಕರು ಭಕ್ತಿಯಿಂದಲೇ ರಾತ್ರಿಯಿಡಿ ಕೂತು ಅನುಭವಿಸುವ ಧ್ಯಾನದಂಥಾ ವಿಶಿಷ್ಟ ಕಲೆ ಯಕ್ಷಗಾನ ಎಂದರೆ ತಪ್ಪಾಗಲಾರದು.ಹೀಗೆ ಬದುಕಿನ ಅವಿಭಾಜ್ಯ ಅಂಗವೇ ಆಗಿರುವ ಕಲೆಯೊಂದನ್ನು ವಾಹಿನಿಯೊಂದು ಅವಮಾನಿಸಿರುವಾ ಕರಾವಳಿಯ ಜನ ಕೆರಳಿರುವುದು ಸಹಜವೇ.
  ಇಷ್ಟಾಗಿಯೂ ಇದು ಕೇವಲ ಮಾಧ್ಯಮದವರ ತಪ್ಪಾ..?  ಯಾಕೆ ಪ್ರತಿ ಬಾರಿಯೂ ಯಕ್ಷಗಾನವೇ ಇವರ ವ್ಯಂಗ್ಯಕ್ಕೆ ,ಅಪಹಾಸ್ಯಕ್ಕೆ ಗುರಿಯಾಗುತ್ತದೆ ಎನ್ನುವ ಪ್ರಶ್ನೆಗಳನ್ನು ಕೇಳಿಕೊಂಡಾಗ ಇಲ್ಲಿ ಯಕ್ಷಗಾನ ಕಲಾವಿದರ ಅಥವಾ ಮಂಡಳಿಗಳ ತಪ್ಪೂ ಕಾಣಿಸದೇ ಇಲ್ಲ. ತಲೆಮಾರಿನಿಂದ ತಲೆಮಾರಿಗೆ ನಮಗೆ ಗೊತ್ತಿದ್ದ,ಗೊತ್ತಿಲ್ಲದ ಪುರಾಣದ ಕತೆಗಳನ್ನ,ಸಂಸ್ಕೃತಿಯ ಭಾವಗಳನ್ನ ಹಂಚಿಕೊಂಡು ಬಂದಿದ್ದ ಗಂಭೀರ ಕಲೆ ಅದೇಕೊ ಒಂದು ಹಂತಕ್ಕೆ ತನ್ನ ಗಾಂಭೀರ್ಯದಿಂದ ಕೊಂಚ ಸರಿಯಿತು.  ಇದನ್ನೂ ಓದಿ: Raghuveer: ಇವ್ನ ಮುಸುಡಿ ನೋಡಿ ಹೀರೋ ಆಗ್ತಾನಾ! ಅವಮಾನ ಮಾಡಿದವ್ರ ಮುಂದೆಯೇ ಗೆದ್ದು ಬೀಗಿದ್ದ ನಟ ರಘುವೀರ್​

  ಏನೇ ಆದರೂ ಒಂದು ವರ್ಗದ ಜನರನ್ನ ಭಾವುಕವಾಗಿ ಮೀಟುವ ,ಸಮುದಾಯದ ಆಚರಣೆಯ ಭಾಗವಾಗಿರುವ ಯಕ್ಷಗಾನದಂಥಹ ಕಲೆಯನ್ನು ಮಾಧ್ಯಮವೊಂದು ಅಪಹಾಸ್ಯದ ವಸ್ತುವಾಗಿ ಬಳಸಿಕೊಳ್ಳುವುದು ಖಂಡಿತವಾಗಿಯೂ ತಪ್ಪು.ಅದನ್ನು ವಿರೋಧಿಸಲೇಬೇಕು.
  Published by:guruganesh bhat
  First published: