Gaalipata 2: ಭಟ್ರು-ಗಣಿ ಗಾಳಿಪಟಕ್ಕೆ ಡಿಮ್ಯಾಂಡಪ್ಪೋ ಡಿಮ್ಯಾಂಡ್, ದಾಖಲೆ ಮೊತ್ತಕ್ಕೆ `ಜೀ’ ಪಾಲಾಯ್ತು ಡಿಜಿಟಲ್​ ರೈಟ್ಸ್​!

‘ಗಾಳಿ ಪಟ-2 ’ ಚಿತ್ರ ರಿಲೀಸ್​​ಗೂ ಮೊದಲೇ ನಿರ್ಮಾಪಕ(Producer)ರ ಮುಖದಲ್ಲಿ ನಗುತರಿಸಿದೆ. ‘ಗಾಳಿಪಟ 2 ’  ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಭಟ್ರು ಬಳಗ ಬ್ಯುಸಿಯಾಗಿದೆ. ಈ ಗ್ಯಾಪ್​​ನಲ್ಲಿ ಗಾಳಿಪಟದ ಅಂಗಳದಿಂದ ಗೋಲ್ಡನ್‌ ಸುದ್ದಿಯೊಂದು ಗೋಲ್ಡನ್ ಸ್ಟಾರ್ ಅಭಿಮಾನಿಗಳ ಅಂಗಳ ಸೇರಿದೆ.

ದಿಗಂತ್​, ಗಣೇಶ್, ಪವನ್​

ದಿಗಂತ್​, ಗಣೇಶ್, ಪವನ್​

  • Share this:
ಗೋಲ್ಡನ್ ಸ್ಟಾರ್ ಗಣೇಶ್(Golden Star Ganesh) ಹಾಗೂ ವಿಕಟ ಕವಿ ಯೋಗರಾಜ್ ಭಟ್ಟರ(Yograj Bhat) ಗಾಳಿಪಟ- 2(Gaalipata 2) ಗೆ ಯೋಗ ಕೂಡಿ ಬಂದಿದೆ. ರಿಲೀಸ್​​ಗೂ  ಮೊದಲೆ ಭಟ್ರು- ಗಣಿ ಕಾಂಬಿ ನೇಷನ್​ಗೆ ಸಖತ್​​ ಡಿಮ್ಯಾಂಡ್(Demand) ಬಂದಿದೆ. ಕೊರೋನ(Corona) ಮೊದಲು ಭಟ್ರು ಗಣಪನ ಜೊತೆ ಎರಡನೇ ಗಾಳಿಪಟ ಹಾರಿಸ್ತೀನಿ ಅಂತ ಹೇಳಿದ ದಿನವೇ ಈ ಹಿಟ್ ಕಾಂಬೋ(Hit Combo) ಮೇಲೆ ನಿರೀಕ್ಷೆ ಹೆಚ್ಚಿತ್ತು. ಅದರಂತೆಯೇ ಈಗ ‘ಗಾಳಿ ಪಟ-2 ’ ಚಿತ್ರ ರಿಲೀಸ್​​ಗೂ ಮೊದಲೇ ನಿರ್ಮಾಪಕ(Producer)ರ ಮುಖದಲ್ಲಿ ನಗುತರಿಸಿದೆ. ‘ಗಾಳಿಪಟ 2 ’  ಶೂಟಿಂಗ್ ಮುಗಿಸಿ ಪೋಸ್ಟ್ ಪ್ರೊಡಕ್ಷನ್ ಕೆಲಸದಲ್ಲಿ ಭಟ್ರು ಬಳಗ ಬ್ಯುಸಿಯಾಗಿದೆ. ಈ ಗ್ಯಾಪ್​​ನಲ್ಲಿ ಗಾಳಿಪಟದ ಅಂಗಳದಿಂದ ಗೋಲ್ಡನ್‌ ಸುದ್ದಿಯೊಂದು ಗೋಲ್ಡನ್ ಸ್ಟಾರ್ ಅಭಿಮಾನಿಗಳ ಅಂಗಳ ಸೇರಿದೆ. ಇನ್ನೂ ಈ ಸುದ್ದಿ ಕೇಳಿ ಗಣಪನ‌ ಭಕ್ತರು ಗಾಳಿಪಟದಂತೆ ಆಕಾಶದಲ್ಲಿ ಹಾರಾಡ್ತಿದ್ದಾರೆ. ಹೌದು ಗಾಳಿ ಪಟ 2 ರಿಲೀಸ್​​ಗೂ ಮೊದಲೇ ಸ್ಯಾಟಲೈಟ್(Satellite) ಹಾಗೂ‌ ಒಟಿಟಿ ರೈಟ್ಸ್(OTT Rights) ಭರ್ಜರಿ ಬೆಲೆಗೆ ಸೇಲಾಗಿದೆ.

8 ಕೋಟಿಗೆ ‘ಜೀ’ ಪಾಲಾಯ್ತು ಗಾಳಿಪಟ - 2 ಸಿನಿಮಾ!

ಗಾಳಿಪಟ 2 ಚಿತ್ರದಸ್ಯಾಟಲೈಟ್ ಹಾಗೂ ಒಟಿಟಿ ರೈಟ್ಸ್​ ‘ಜೀ’ ಪಾಲಾಗಿದ್ದು, ಬರೋಬ್ಬರಿ 8 ಕೋಟಿ ಕೊಟ್ಟು ಭಟ್ರು- ಗಣಪನ ಗಾಳಿಪಟವನ್ನು ಖರೀದಿಸಿದ್ದಾರೆ. ಇನ್ನು ಗಣೇಶ್ ಸಿನಿ ಕೆರಿಯರ್​ನಲ್ಲೆ ಗಾಳಿಪಟ2 ಅತೀ ಹೆಚ್ಚು ಬೆಲೆಗೆ ಸೇಲಾದ ಸಿನಿಮಾ ಎಂಬ ದಾಖಲೆ ಬರೆದಿದೆ. ಸದ್ಯ ಗಾಳಿಪಟ 2 ಚಿತ್ರತಂಡ ಡಬ್ಬಿಂಗ್ , ರೀರೆಕಾರ್ಡಿಂಗ್ ಕೆಲಸ ಮುಗಿಸಿ, ಗ್ರಾಫಿಕ್ಸ್ ಕೆಲಸದಲ್ಲಿ ತೊಡಗಿಕೊಂಡಿದೆ. ಚಿತ್ರದಲ್ಲಿ ಬರೋಬ್ಬರಿ ಏಳು ಹಾಡುಗಳಿದ್ದು ಈಗಾಗಲೇ ಮೂರು ಹಾಡುಗಳ ರೆಕಾರ್ಡಿಂಗ್ ಕಂಪ್ಲೀಟ್ ಆಗಿದ್ದು, ವಿಜಯ್ ಪ್ರಕಾಶ್, ನವೀನ್ ಸಜ್ಜು ಹಾಗೂ ಟಿಪ್ಪು ಗಾಳಿಪಟಕ್ಕೆ ದನಿಯಾಗಿದ್ದಾರೆ.

ಸೆನ್ಸಾರ್​​ಗೆ ಸಜ್ಜಾದ ಭಟ್ಟರ ಸಿನಿಮಾ!

ಅರ್ಜುನ್​ ಜನ್ಯ ಮ್ಯಾಜಿಕಲ್ ಟ್ಯೂನ್​ಗೆ ಜಯಂತ್ ಕಾಯ್ಕಿಣಿ ಎರಡು ಹಾಡುಗಳನ್ನು ಬರೆದಿದ್ರೆ, ಉಳಿದ 5 ಹಾಡುಗಳು ಭಟ್ಟರ ಬತ್ತಳಿಕೆಯಿಂದ ಬಂದಿವೆ. ಅದಷ್ಟು ಬೇಗು ಗ್ರಾಫಿಕ್ ಕೆಲಸ ಮುಗಿಸಿ ಸೆನ್ಸಾರ್ ಮಾಡಿಸಲು ಸಜ್ಜಾಗಿರುವ ಯೋಗರಾಜ್ ಭಟ್ಟರು. ಗಾಳಿಪಟವನ್ನು ಮೇ- ಜೂನ್​​ನಲ್ಲಿ ಹಾರಿಸುವ ಸಾಧ್ಯತೆ ಇದೆಯಂತೆ. ಯಾಕೆಂದರೆ ಸ್ಯಾಂಡಲ್​ವುಡ್​ನಲ್ಲಿ ಬಿಗ್​ಬಜೆಟ್​ನ ಸಾಲು ಸಾಲು ಚಿತ್ರಗಳು ರಿಲೀಸ್​ಗೆ ರೆಡಿಯಾಗಿದ್ದು,  ಸರ್ಕಾರ. ಥಿಯೇಟರ್ ಗಳಿಗೆ 100% ಸಿಕ್ಕ ಕೂಡಲೆ ಬ್ಯಾಕ್ ಟು ಬ್ಯಾಕ್ ಚಿತ್ರಗಳು ತೆರೆಗೆ ಅಪ್ಪಳಿಸಲು ಸಜ್ಜಾಗಿವೆ.

ಇದನ್ನು ಓದಿ: Love Mocktail 2 ಟ್ರೈಲರ್​ ರಿಲೀಸ್​, ಮತ್ತೊಂದು ಮದ್ವೆಗೆ ರೆಡಿಯಾಗ್ತಿದ್ದಾರೆ ಆದಿ.. ಆದ್ರೆ, ನಿಧಿಮಾ ಬಿಡ್ತಾರಾ?

ನಿಧಾನವಾಗಿ ಪಟ ಹಾರಿಸುತ್ತಾರಂತೆ ನಿರ್ಮಾಪಕ!

ರಿಲೀಸ್​ಗೆ ರೆಡಿ ಇರುವ ಎಲ್ಲಾ ಚಿತ್ರಗಳಿಗೂ ದಾರಿ ಬಿಟ್ಟು ನಿಧಾನವಾಗಿ ಗಾಳಿಪಟವನ್ನು ಗಾಳಿಯಲ್ಲಿ ತೇಲಿಸಲು ನಿರ್ಮಾಪಕ ರಮೇಶ್ ರೆಡ್ಡಿ ಬಳಗ ಪ್ಲಾನ್ ಮಾಡಿ ಕೊಂಡಿದೆ. ಅದೇನೆ ಇರಲಿ ಸಾಲು ಸಾಲು ಸೋಲುಗಳಿಂದ ಕಂಗೆಟ್ಟಿರುವ ಗಣಪನಿಗೆ ಭಟ್ಟರ ಗಾಳಿಪಟ ಬಂಗಾರವಾಗುವ ಸೂಚನೆ ಸಿಕ್ಕಿದೆ ಅಂತಿದ್ದಾರೆ ಗಾಂಧಿ ನಗರ ಸಿನಿಪಂಡಿತರು. ಅಲ್ಲದೆ ಗಾಳಿಪಟ 2 ಚಿತ್ರವನ್ನು ಭರ್ಜರಿಯಾಗಿ ಹಾರಿಸಲು ಗಣಪನ ಅಭಿಮಾನಿಗಳು ಪ್ಲಾನ್ ಮಾಡಿಕೊಂಡಿದ್ದಾರೆ. ಜೊತೆಗೆ ಸಿನಿಮಾದಲ್ಲಿ ಗಣೇಶ್​ ಜೊತೆಯಾಗಿ ದಿಗಂತ್​ ಹಾಗೂ ಲೂಸಿಯಾ ಪವನ್​ ನಟಿಸಿದ್ದಾರೆ.

ಇದನ್ನು ಓದಿ: ಜೇಮ್ಸ್ ‘ಪವರ್’ ಮುಂದೆ ನಡೀಲಿಲ್ಲ ಪರಭಾಷಾ ಖದರ್! ಮಾರ್ಚ್ 17ಕ್ಕೆ ರಿಲೀಸ್ ಆಗಲ್ಲ ‘ಆರ್​ಆರ್​ಆರ್​'

ಸಖತ್​ ಕಮಾಲ್​ ಮಾಡಿತ್ತು ಗಾಳಿಪಟ 1!

ಗಾಳಿಪಟ ಸಿನಿಮಾದಲ್ಲಿ ಗಣೇಶ್​, ದಿಗಂತ್​, ರಾಜೇಶ್​ ಕೃಷ್ಣನ್ ಕಾಣಿಸಿಕೊಂಡಿದ್ದರು. ಈ ಸಿನಿಮಾ ಬಾಕ್ಸಾಫೀಸ್​ನಲ್ಲಿ ಸಖತ್​ ಕಮಾಲ್​ ಮಾಡಿತ್ತು. ರಿಲೀಸ್​ ಆದ ಸಮಯದಲ್ಲಿ ಅದ್ಭುತ ಯಶಸ್ಸನ್ನು ಕಂಡಿತ್ತು. ಇದೀಗ ರಾಜೇಶ್​ ಕೃಷ್ಣನ್​ ಬದಲಿಗೆ ಲೂಸಿಯಾ ಪವನ್​ ಗಣೇಶ್​ ಜೊತೆಯಾಗಿದ್ದಾರೆ. ಈ ಬಾರಿ ಈ ಮೂವರು ಸ್ನೇಹಿತರು ಹೇಗೆ ಜನರನ್ನು ರಂಜಿಸುತ್ತಾರೆ ಕಾದು ನೋಡಬೇಕಿದೆ.

(ವರದಿ - ಸತೀಶ್​ ಎಂ.ಬಿ)
Published by:Vasudeva M
First published: