Zayed Khan: ಮತ್ತೆ ಕಮ್ ಬ್ಯಾಕ್ ಮಾಡ್ತಿದ್ದಾರೆ ಯುವ ನಟ ಜಾಯೆದ್ ಖಾನ್! ಯಾವ ಸಿನಿಮಾ?

ನಟ ಜಾಯೇದ್‌ ಖಾದ್​

ನಟ ಜಾಯೇದ್‌ ಖಾದ್​

ಶೀಘ್ರದಲ್ಲೇ ಮತ್ತೊಂದು ಸಿನಿಮಾದಲ್ಲಿ ಮಿಂಚಲಿದ್ದಾರೆ ಜಾಯೆದ್‌ ಖಾನ್‌, ತಂದೆ ಸಂಜಯ್ ಖಾನ್ ಜೊತೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ.

  • Share this:

ಒಂದೊಮ್ಮೆ ಹಿಂದಿ ಚಿತ್ರರಂಗದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡು ತನ್ನದೇ ಆದ ಅಭಿಮಾನಿಗಳನ್ನು ಗಳಿಸಿದ್ದ ಸ್ಫುರದ್ರೂಪಿ ನಟ ಜಾಯೆದ್ ಖಾನ್ (Zayed Khan) ಬಗ್ಗೆ ಹಲವಾರು ತಿಳಿದಿರಬಹುದು. ಮೈ ಹೂ ನಾ ಚಿತ್ರದ ಮೂಲಕ ಸಾಕಷ್ಟು ಜನಪ್ರಿಯತೆಗಳಿಸಿದ್ದ ಈ ನಟ ನಂತರ ಚಿತ್ರರಂಗದಿಂದ ದೂರಹೋಗಿದ್ದರು. ಇದೀಗ ಮತ್ತೆ ಕಮ್ ಬ್ಯಾಕ್ (Come Back) ಮಾಡಲು ಅವರು ಸಜ್ಜಾಗಿದ್ದು ತಮ್ಮ ಜೀವನದ ಕುರಿತು ಕೆಲ ಇಂಟ್ರೆಸ್ಟಿಂಗ್‌ (Interesting) ಮಾಹಿತಿಗಳನ್ನು ಅಭಿಮಾನಗಳ ಮುಂದೆ ಶೇರ್‌ ಮಾಡಿಕೊಂಡಿದ್ದಾರೆ. ಅದರ ಕುರಿತು ಈ ಲೇಖನದಲ್ಲಿ ತಿಳಿಯೋಣ.


ಸಿನಿಮಾ ನಟರೆಂದರೆ ಕೇಳಬೇಕೆ ಆರಂಭದಲ್ಲಿ ಪ್ರತಿಯೊಬ್ಬರಿಗೂ ತಿರಸ್ಕಾರದ ಮಾತು ಎಲ್ಲೆಡೆ ಕೇಳಿ ಬಂದಿರುತ್ತದೆ. ಅದು ಸಹಜ. ಹಾಗೆಯೇ ಜಾಯೇದ್‌ ಖಾನ್‌ ಅವರ ಜೀವನದಲ್ಲೂ ಸಹ ಆಗಿರೋದು ಸಹಜ.




ಇವರು ಸಿನಿಮಾದಲ್ಲಿ ಹಲವಾರು ನಿರಾಕರಣೆಗಳ ನಂತರ ಸಾಕಷ್ಟು ನಿರಾಶೆಯನ್ನು ಅನುಭವಿಸಿದ್ದರು. ಇದರಿಂದ ಅವರಿಗೆ ತಮ್ಮ ಬಗ್ಗೆ ತಮಗೆ ಅಸಹ್ಯ ಮೂಡಿ ಕನ್ನಡಿಯಲ್ಲಿ ತಮ್ಮ ಮುಖ ನೋಡಿಕೊಳ್ಳುವುದನ್ನೆ ನಿಲ್ಲಿಸಿದರು. ’ಬೈಂಗನ್‌ (ಬದನೆಕಾಯಿ) ತರ ಕಾಣುತ್ತಿದ್ದೆ. ಅಂದರೆ ಬಹುತೇಕ ಹುಚ್ಚನಂತೆ ಕಾಣುತ್ತಿದ್ದೇನೆʼ ಎಂದು ಹೇಳಿಕೊಂಡಿದ್ದಾರೆ.


ಜಾಯೆದ್ ಖಾನ್ ಬಹಳ ದಿನಗಳಿಂದ ಸಿನಿಮಾಗಳಿಂದ ದೂರ ಉಳಿದಿದ್ದರು. 2004 ರ ಮೈ ಹೂ ನಾ ಚಿತ್ರದಲ್ಲಿ ಶಾರುಖ್ ಖಾನ್ ಅವರ ಸಹೋದರನ ಪಾತ್ರದ ಮೂಲಕ ಖ್ಯಾತಿಯನ್ನು ಪಡೆದರು ಜಾಯೇದ್‌ ಖಾನ್‌. 2015 ರಲ್ಲಿ ಚಲನಚಿತ್ರ ರಂಗದಿಂದ ಸಂಪೂರ್ಣವಾಗಿ ದೂರವಾಗುವ ಮೊದಲು ಹಲವು ಹಿಟ್‌ ಚಿತ್ರಗಳನ್ನು ಸಿನಿಮಾ ರಂಗಕ್ಕೆ ನೀಡಿದ್ದಾರೆ. ಈಗ ಅವರು ತಮ್ಮ ಕಮ್‌ ಬ್ಯಾಕ್‌ ಚಿತ್ರಕ್ಕಾಗಿ ಸಜ್ಜಾಗುತ್ತಿದ್ದಾರೆ ಮತ್ತು ಅದರ ಬಗ್ಗೆ ಮನತುಂಬಿ ಮಾತನಾಡಿದ್ದಾರೆ.


“ನಾನು ಆಗ ಇದ್ದ ಸಮಯ ಅತ್ಯಂತ ಕೆಟ್ಟ ಸಮಯವೆಂದು ಹೇಳಬಹುದು. ನನ್ನ ಜೀವನದಲ್ಲಿಯೇ ಅದು ಅತಿ ಕಷ್ಟದ ಸಮಯವಾಗಿದೆ. ಆದರೆ ಈಗ ಸಮಯ ಸುಧಾರಿಸಿದೆ. ಇತ್ತೀಚೆಗಷ್ಟೇ ತನ್ನ ಸ್ನೇಹಿತ ತನಗೆ ಒಂದು ಚಲನಚಿತ್ರಕ್ಕೆ ಆಫರ್‌ ಮಾಡುವ ಸಮಯದಲ್ಲಿ ಈಗ ಸೂಪರ್‌ ಸ್ಮಾರ್ಟ್‌ ಆಗಿದಿಯಾ ಆದರೆ ಆಗ ಒಳ್ಳೆ ಬದನೆಕಾಯಿ ತರಹ ಇದ್ದೆ ಎಂದು ಹೇಳಿದರು” ಎಂಬುದನ್ನು ಜಾಯೇದ್‌ ಖಾನ್‌ ನೇನಪಿಸಿಕೊಂಡಿದ್ದಾರೆ.


ಶೀಘ್ರದಲ್ಲೇ ಮತ್ತೊಂದು ಸಿನಿಮಾದಲ್ಲಿ ಜಾಯೆದ್‌ ಖಾನ್‌


ಶೀಘ್ರದಲ್ಲೇ ಮತ್ತೊಂದು ಸಿನಿಮಾದಲ್ಲಿ ನಟರಾಗಿ ಮಿಂಚಲಿದ್ದಾರೆ ಜಾಯೆದ್‌ ಖಾನ್‌. ಇದರಲ್ಲಿ ಅವರು ಯಂಗ್‌ ಆಗಿ ಮೊದಲ ಬಾರಿಗೆ ತಮ್ಮ ತಂದೆ ಸಂಜಯ್ ಖಾನ್ ಅವರೊಂದಿಗೆ ಪರದೆಯನ್ನು ಹಂಚಿಕೊಳ್ಳಲಿದ್ದಾರೆ. ಸಂಜಯ್ ನಿರ್ದೇಶನದ ದಿ ಸ್ವೋರ್ಡ್ ಆಫ್ ಟಿಪ್ಪು ಸುಲ್ತಾನ್, 1990 ರ ಟಿವಿ ಶೋನಲ್ಲಿ ಬಾಲ ಕಲಾವಿದನಾಗಿ ಟಿಪ್ಪು ಸುಲ್ತಾನ್ ಅವರ ಮಗನ ಪಾತ್ರವನ್ನು ಅವರು ನಿರ್ವಹಿಸಿದ್ದರು.


ಅವರ ಕಮ್‌ ಬ್ಯಾಕ್‌ ಚಿತ್ರಕ್ಕೆ ಆಫರ್ ಬಂದಿರುವ ಕುರಿತು ಮಾತನಾಡುತ್ತಾ, ಜಾಯೆದ್ ಖಾನ್‌ ಅವರು ಸುದ್ದಿ ಮಾಧ್ಯಮವಾದ ಬಾಲಿವುಡ್ ಹಂಗಾಮಾ ಸಂದರ್ಶನವೊಂದರಲ್ಲಿ, “ಸುಮಾರು ಒಂದೂವರೆ ವರ್ಷಗಳ ಹಿಂದೆ, ನಾನು ನನ್ನ ಜೀವನದ ಅತ್ಯಂತ ಕೆಳ ಹಂತದಲ್ಲಿದ್ದೆ. ನಾನು ನನ್ನ ಬಗ್ಗೆ ಕಾಳಜಿ ವಹಿಸದೆ ತುಂಬಾ ಸೊರಗಿ ಹೋಗಿದ್ದೆ. ನಾನು ಅಷ್ಟೊಂದು ನಿರಾಶೆಯಲ್ಲಿ ಮುಳುಗಿದ್ದೆ. ಏಕೆಂದರೆ ನಾನು ಬಹಳ ಜನರಿಂದ ಕೆಟ್ಟ ಮಾತುಗಳನ್ನು ಕೇಳಿದ್ದೇನೆ. ನಾನು ಯಾವತ್ತು ಸ್ಟಾರ್‌ ಎಂದು ಮೆರೆದವನಲ್ಲ. ಅದನ್ನೆಲ್ಲ ನಾನು ಯಾವಾಗಲೋ ಮರೆತಿದ್ದೇನೆ” ಎಂದಿದ್ದಾರೆ.


“ಆಗ ನನ್ನ ಬಳಿಗೆ ನನ್ನ ಸ್ನೇಹಿತ ಅಸೀಮ್ ಬಂದು ನೀನು ನನಗೂ ಎಲ್ಲಿಯೂ ಕೆಲಸ ಸಿಕ್ಕಿಲ್ಲ ಎಂದಾಗ ನನಗೆ ತುಂಬಾ ಆಶ್ಚರ್ಯವಾಗಿತ್ತು. ಏಕೆಂದರೆ ಅವನು ಸಹ ನೋಡಲು ತುಂಬಾ ಚೆನ್ನಾಗಿದ್ದ. ಆಗ ನನಗೆ ಸಿನಿಮಾ ರಂಗದಲ್ಲಿ ಇದೆಲ್ಲ ಸಾಮಾನ್ಯ ಎಂದು ಕೊಂಡು ಸುಮ್ಮನೆ ಆದೆ.




ಮತ್ತೆ ನನ್ನನ್ನು ಕನ್ನಡಿಯಲ್ಲಿ ನೋಡಿಕೊಂಡೆ, ಹೌದು ನನ್ನ ಮುಖ ತುಂಬಾ ಒರಟಾಗಿತ್ತು. ಆಗಿನಿಂದ ನಾನು ಮತ್ತೆ ನನ್ನ ಬಗ್ಗೆ ಕಾಳಜಿ ವಹಿಸಲು ಶುರು ಮಾಡಿದೆ. ಈಗ ನನಗೆ ಹೊಸ ಹೊಸ ಆಫರ್‌ಗಳು ಬರುತ್ತಿವೆ. ಇದರಿಂದ ನಾನು ಜೀವನದಲ್ಲಿ ಕಲಿತ ಪಾಠವೆಂದ್ರೆ ಜೀವನದಲ್ಲಿ ಎಂಥಹ ಪರಿಸ್ಥಿತಿಯೇ ಬರಲಿ ನಮ್ಮ ಬಗ್ಗೆ ನಮಗೆ ಆತ್ಮವಿಶ್ವಾಸ ಇರಬೇಕು” ಎಂದು ಜಾಯೇದ್‌ ನುಡಿದಿದ್ದಾರೆ.


ಇದನ್ನೂ ಓದಿ: Yash-Rashmika: ಯಶ್​ ಶೋ ಆಫ್ ನಟ ಎಂದಿದ್ದ ರಶ್ಮಿಕಾ, ಈಗ ರಾಕಿ ಭಾಯ್ ಬಗ್ಗೆ ಹೇಳಿದ್ದೇನು ಗೊತ್ತಾ?


ಇದರ ನಂತರ ಜಾಯೇದ್‌ ಮತ್ತು ಅವರ ಸ್ನೇಹಿತ ಇಬ್ಬರೂ ಜೊತೆಗೂಡಿ ಆರು ತಿಂಗಳ ಕಾಲ ಒಂದು ಸಿನಿಮಾಕ್ಕೆ ಚಿತ್ರಕಥೆ ಬರೆದರು. ಈಗ ಅದು OTT ಪ್ಲಾಟ್‌ಫಾರ್ಮ್‌ನಲ್ಲಿ ಬಿಡುಗಡೆಯಾಗಿದ್ದು, ಅದನ್ನು 10 ರಿಂದ 90 ವರ್ಷ ವಯಸ್ಸಿನ ಜನರು ಕೂಡ ಇಷ್ಟಪಟ್ಟಿದ್ದಾರೆ ಎಂದು ಜಾಯೆದ್ ಹೇಳಿದ್ದಾರೆ. ಜಾಯೆದ್ ಕೊನೆಯದಾಗಿ 2017 ರ ಟಿವಿ ಶೋ ಹಾಸಿಲ್‌ನಲ್ಲಿ ಕಾಣಿಸಿಕೊಂಡರು, ಇದು ಸುಮಾರು ನಾಲ್ಕು ತಿಂಗಳ ಕಾಲ ಪ್ರಸಾರವಾಗಿತ್ತು.

top videos
    First published: