• Home
  • »
  • News
  • »
  • entertainment
  • »
  • Banaras Movie Review: ಬನಾರಸ್​ನಲ್ಲಿ ಜೈದ್ ಕ್ಲಾಸ್ ಮಾಸ್ ಸ್ಟೈಲ್! ಸೆಕೆಂಡ್ ಹಾಫ್ ಬಗ್ಗೆ ಚರ್ಚೆ ಜೋರು

Banaras Movie Review: ಬನಾರಸ್​ನಲ್ಲಿ ಜೈದ್ ಕ್ಲಾಸ್ ಮಾಸ್ ಸ್ಟೈಲ್! ಸೆಕೆಂಡ್ ಹಾಫ್ ಬಗ್ಗೆ ಚರ್ಚೆ ಜೋರು

ಬನಾರಸ್

ಬನಾರಸ್

ಬನಾರಸ್ ಸಿನಿಮಾ ಮೂಲಕ ಸ್ಯಾಂಡಲ್​​ವುಡ್​ಗೆ ಎಂಟ್ರಿ ಕೊಟ್ಟಿರೋ ಜಮೀರ್ ಅಹ್ಮದ್ ಅವರ ಪುತ್ರ ಜೈದ್ ಗುಡ್ ಇಂಪ್ರೆಷನ್ ಕ್ರಿಯೇಟ್ ಮಾಡಿದ್ದಾರೆ. ಜೈದ್ ಮೊದಲ ಸಿನಿಮಾ ಹೇಗಿದೆ?

  • News18 Kannada
  • Last Updated :
  • Bangalore, India
  • Share this:

ಜಮೀರ್ ಅಹ್ಮದ್ ಅವರ ಪುತ್ರ ಜೈದ್ ಖಾನ್ (Zaid Khan) ಅವರ ಮೊದಲ ಸಿನಿಮಾ ಬನಾರಸ್ (Banaras) ಬಿಡುಗಡೆಯಾಗಿದೆ. ಸಿನಿಮಾ ವ್ಯಾಪಕ ಮೆಚ್ಚುಗೆಯನ್ನು ಗಳಿಸುತ್ತಿದೆ. ಸಿನಿಮಾದ ಸೆಕೆಂಡ್ ಹಾಫ್ ಹೆಚ್ಚು ಚರ್ಚೆಯಾಗಿದೆ. ಸಿದ್ಧಾರ್ಥ್ (ಜೈದ್ ಖಾನ್), 20 ವರ್ಷ ವಯಸ್ಸಿನ ಕಾಲೇಜು ವಿದ್ಯಾರ್ಥಿ, ಧನಿ (ಸೋನಲ್ ಮೊಂಟೆರೊ) ಜೊತೆ ತಮಾಷೆ ಮಾಡಲು ಪ್ರಯತ್ನಿಸುತ್ತಾನೆ. ಅದು ದೊಡ್ಡ ತಪ್ಪಾಗಿ ಬದಲಾಗುತ್ತದೆ. ಇದರಿಂದಾಗಿ ಅವಳು ಪಟ್ಟಣವನ್ನು ತೊರೆದು ಬನಾರಸ್‌ನಲ್ಲಿ ನೆಲೆ ಕಂಡುಕೊಳ್ಳುತ್ತಾಳೆ. ತಪ್ಪಿತಸ್ಥ ಭಾವದಿಂದ ಮುಳುಗಿದ, ಸಿದ್ಧಾರ್ಥ್ ಕ್ಷಮೆ ಕೇಳಲು  ಆಕೆಯ ಹಿಂದೆ ಹೊರಡುತ್ತಾನೆ. ಈ ಜರ್ನಿಯಲ್ಲಿ ಹೀರೋ  (Hero) ಜೀವನವನ್ನು ಬದಲಾಯಿಸುವ ಅನುಭವವನ್ನು ಎದುರಿಸುತ್ತಾನೆ. ಟೈಮ್ ಟ್ರಾವೆಲ್ (Time Travel) ಲಾಜಿಕ್ ಇರೋ ಸಿನಿಮಾದ ವಿಮರ್ಶೆ ಇಲ್ಲಿದೆ.


ಟೈಮ್ ಟ್ರಾವೆಲ್ ಸಿನಿಮಾ ಚಿತ್ರರಂಗಕ್ಕೆ ಹೊಸದಲ್ಲ. ಬೇರೆ ಭಾಷೆಗಳಲ್ಲಿ ಬಂದಿವೆ. ಹಾಲಿವುಡ್​​ನಲ್ಲಂತೂ ಬೇಕಾದಷ್ಟಿವೆ. ಕನ್ನಡದಲ್ಲಿ ಟೈಮ್ ಟ್ರಾವೆಲ್ ಜೊತೆ ಮಧುರ ಪ್ರೇಮ ಕಥೆ ನೀವಿಲ್ಲಿ ನೋಡಬಹುದು. ಮೊದಲನೆಯದಾಗಿ ಹೀರೋ, ಹೀರೋಯಿನ್ ಸಂಕೀರ್ಣ ಪ್ರಯಾಣದಲ್ಲಿ ಸುಂದರ ದೃಶ್ಯಗಳು ಪ್ರೇಕ್ಷಕನಿಗೆ ಸಿಗುತ್ತದೆ.


Kannada Banaras Film Pre-Release Event Organized at Hubballi on October 22
ಹುಬ್ಬಳ್ಳಿಯಲ್ಲಿ ಬನಾರಸ್ ರಿಲೀಸ್ ಮುಂಚಿನ ಸಂಭ್ರಮ


ಬೆಳಕಿನ ಕವಿತೆಯಲ್ಲಿ ಜೈದ್ ಡ್ಯಾನ್ಸ್


ನಟನೆ ಜೊತೆ ಜೈದ್ ಡ್ಯಾನ್ಸ್ ಕೂಡಾ ಪ್ರೇಕ್ಷಕರ ಗಮನ ಸೆಳೆಯುತ್ತದೆ. ಮೊದಲ ಸಿನಿಮಾ ಆದರೂ ಜೈದ್ ಮೈಚಳಿ ಬಿಟ್ಟು ನಟಿಸಿದ್ದಾರೆ.


ಸಮಸ್ಯೆಗಳಿಗೆ ಪರಿಹಾರವಾಗಿ ಟೈಮ್ ಲೂಪ್


ಜಯತೀರ್ಥ ಅವರ ಬನಾರಸ್ ಸಿನಿಮಾ ಡಿಫರೆಂಟಾಗಿದೆ. ಏಕೆಂದರೆ ಸಮಯದ ಲೂಪ್ ಅಥವಾ ಸಮಯಕ್ಕೆ ಹಿಂದಕ್ಕೆ ಮತ್ತು ಮುಂದಕ್ಕೆ ಪ್ರಯಾಣಿಸುವ ಪರಿಕಲ್ಪನೆಯು ಮುಖ್ಯವಾಗಿ ಮಾನವನ ಸಮಸ್ಯೆಯ ಪರಿಹಾರವಾಗಿ ಇಲ್ಲಿ ಬಳಸಲ್ಪಟ್ಟಿದೆ. ಬೆಲ್ ಬಾಟಮ್, ಬ್ಯೂಟಿಫುಲ್ ಮನಸಿಗಳು ಮತ್ತು ಒಲವೇ ಮಂದಾರದಂತಹ ಚಿತ್ರಗಳಿಗೆ ಹೆಸರುವಾಸಿಯಾದ ಜಯತೀರ್ಥ, ತೊಂದರೆಗೀಡಾದ ಪ್ರಣಯದ ಕಥೆಗಳ ಬಗ್ಗೆ ಮತ್ತೆ ತಮ್ಮ ಒಲವನ್ನು ಸಾಬೀತುಪಡಿಸಿದ್ದಾರೆ.


ಇದನ್ನೂ ಓದಿ: Banaras ಸಿನಿಮಾದ ಮತ್ತೊಂದು ಸಾಂಗ್ ರಿಲೀಸ್​, ಜಾನಪದ ಸೊಗಡಿನ ಹಾಡಿಗೆ ತಲೆದೂಗಿದ ಜನ


ಹಾಡುಗಳು ಹಿಟ್


ಬನಾರಸ್ ಸಿನಿಮಾದ ಮಾಯಾಗಂಗೆ ಸಾಂಗ್ ರಿಲೀಸ್​ ಆಗಿ ಉತ್ತಮ ಪ್ರತಿಕ್ರಿಯೆ ಗಳಿಸಿತ್ತು. ಕನ್ನಡ ಹಾಗೂ ಮಲೆಯಾಳಂ ನಲ್ಲಿ ಏಕಕಾಲಕ್ಕೆ ಈ ಹಾಡು ಬಿಡುಗಡೆಯಾಗಿತ್ತು. ತೆಲುಗು, ತಮಿಳು ಹಾಗೂ ಹಿಂದಿ ಭಾಷೆಗಳಲ್ಲಿ ಸಹ ಜನರಿಗೆ ಬಹಳ ಇಷ್ಟವಾಗಿ, ಎಲ್ಲೆಡೆ ಈ ಹಾಡಿನ ಬಗ್ಗೆ ಚರ್ಚೆಯಾಗಿತ್ತು. ಬನಾರಸ್ ಸಿನಿಮಾವನ್ನು  ಕನ್ನಡ, ತೆಲುಗು, ತಮಿಳು, ಮಲೆಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಈ ಚಿತ್ರ ನಿರ್ಮಾಣ ಮಾಡಲಾಗಿದೆ.


ಇದನ್ನೂ ಓದಿ: Banaras Pre Release Event: ಹುಬ್ಬಳ್ಳಿಯಲ್ಲಿ ಬನಾರಸ್ ಪ್ರೀ ರಿಲೀಸ್ ಸಂಭ್ರಮ; ಹೊಸ ಹುಡುಗನ ಚಿತ್ರಕ್ಕೆ ಸ್ಟಾರ್​​ಗಳ ಸಮಾಗಮ


ಅಜನೀಶ್ ಸಂಗೀತ


ಈ ಚಿತ್ರಕ್ಕೆ ಜಯತೀರ್ಥ ಆಕ್ಷನ್ ಕಟ್​ ಹೇಳಿದ್ದು, ತಿಲಕ್ ರಾಜ್ ಬಲ್ಲಾಳ್ ನಿರ್ಮಾಣ ಮಾಡಿದ್ದಾರೆ. ಈಗಾಗಲೇ ಕನ್ನಡದಲ್ಲಿ ಸೂಪರ್ ಹಿಟ್​ ಹಾಡುಗಳನ್ನು ಕೊಟ್ಟ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ. ಪಂಚತಂತ್ರ ಸಿನಿಮಾ ನಾಯಕಿ ಸೋನಾಲ್ ಮೊಂಟೆರೊ ಈ ಚಿತ್ರದ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ.


ಜೈದ್ ಖಾನ್ ಕ್ಲಿಕ್ ಆಗ್ತಾರೆ


ಸಿನಿಮಾದಲ್ಲಿ ಜೈದ್ ಖಾನ್ ಅವರ ಅಭಿನಯವನ್ನು, ಡ್ಯಾನ್ಸ್, ಡಯಲಾಗ್ ಡೆಲಿವರಿ, ಆ್ಯಕ್ಷನ್​​ ನೋಡಿದರೆ ನಟನಾಗಿ ಮಿಂಚುವ ಎಲ್ಲಾ ಸೂಚನೆಗಳನ್ನು ಈ ಸಿನಿಮಾದಲ್ಲಿ ಕಾಣಬಹುದು. ಮೊದಲ ಸಿನಿಮಾದಲ್ಲಿ ಗುಡ್ ಇಂಪ್ರೆಷನ್ ಕ್ರಿಯೇಟ್ ಮಾಡಿರುವ ಜೈದ್ ಅವರು ಸ್ಯಾಂಡಲ್​​ವುಡ್ ಸಿನಿ ಪ್ರೇಕ್ಷಕರ ನಿರೀಕ್ಷೆಗಳನ್ನು ಹುಸಿಗೊಳಿಸುವುದಿಲ್ಲ. ತಮ್ಮ ಮೊದಲ ಸಿನಿಮಾದಲ್ಲಿಯೇ ಕನ್ನಡ ಸಿನಿ ಪ್ರೇಮಿಗಳ ಮನಸನ್ನು ಗೆದ್ದ ಜೈದ್ ಅವರು ಭರವಸೆ ಮೂಡಿಸಿದ್ದಾರೆ.


ಜೈದ್​ ಪಾತ್ರಕ್ಕೆ ಡಬ್ಬಿಂಗ್


ಸಿನಿಮಾದ ಪೂರ್ತಿ ಡಬ್ಬಿಂಗ್ ಮುಗಿಸಿದ್ದ ಜೈದ್ ಅವರು ಅದನ್ನು ತಾವೇ ರಿಜೆಕ್ಟ್ ಮಾಡಿದ್ದಾರೆ. ತಾವು ಮಾತನಾಡುವಾಗ ಮುಸ್ಲಿಂ ಸ್ಲ್ಯಾಂಗ್ ಬರುತ್ತೆ ಎಂದ ನಟ ಬೇರೆಯವರಿಂದ ಡಬ್ಬಿಂಗ್ ಮಾಡಿಸಿಕೊಂಡಿದ್ದಾರೆ. ಅಂತೂ ಸಿನಿಮಾ ಉತ್ತಮ  ವಿಮರ್ಶೆ ಪಡೆದುಕೊಳ್ಳುತ್ತಿದೆ.

Published by:Divya D
First published: