news18-kannada Updated:May 26, 2020, 3:14 PM IST
ಕತ್ರಿನಾ ಕೈಫ್-ಚಹಾಲ್
ಟೀಂ ಇಂಡಿಯಾ ಸ್ಪಿನ್ನರ್ ಯಜುವೇಂದ್ರ ಚಹಾಲ್ ಬೌಲಿಂಗ್ ಅಲ್ಲದೆ ಸಾಕಷ್ಟು ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅವರು ಮಾಡುವ ಟಿಕ್ ಟಾಕ್ ವಿಡಿಯೋ ಸಾಕಷ್ಟು ವೈರಲ್ ಆಗಿವೆ. ಈ ಮಧ್ಯೆ ಕತ್ರಿನಾ ಕೈಫ್ ಲೈವ್ ಚ್ಯಾಟ್ನಲ್ಲಿ ಚಹಾಲ್ ಎಂಟ್ರಿ ಕೊಟ್ಟಿದ್ದು ಸಾಕಷ್ಟು ವೈರಲ್ ಆಗುತ್ತಿದೆ.
ನಾನು ಕತ್ರಿನಾ ಕೈಫ್ ದೊಡ್ಡ ಫ್ಯಾನ್. ಅವರ ನಗು ತುಂಬಾನೇ ಇಷ್ಟ. ಸೆಲೆಬ್ರೆಟಿ ಕ್ರಶ್ ಸಾಲಿನಲ್ಲಿ ಕತ್ರಿನಾ ಮೊದಲು ನಿಲ್ಲುತ್ತಾರೆ ಎಂದು ಚಹಾಲ್ ಸಾಕಷ್ಟು ಬಾರಿ ಹೇಳಿಕೊಂಡಿದ್ದಿದೆ. ಕತ್ರಿನಾ ಬಗ್ಗೆ ಮಾತನಾಡಲು ಅವರು ಎಂದಿಗೂ ಮುಚ್ಚು ಮರೆ ಮಾಡಿಕೊಂಡವರೇ ಅಲ್ಲ.
ಅಚ್ಚರಿ ಎಂದರೆ, ಇತ್ತೀಚೆಗೆ ಕತ್ರಿನಾ ಇನ್ಸ್ಟಾಗ್ರಾಂನಲ್ಲಿ ಲೈವ್ ಬಂದಿದ್ದರು. ಈ ವೇಳೆ ಲಾಕ್ಡೌನ್ ಸಮಯದಲ್ಲಿ ಫಿಟ್ನೆಸ್ ಕಾಯ್ದುಕೊಳ್ಳೋದು ಹೇಗೆ ಎನ್ನುವ ಬಗ್ಗೆ ಕತ್ರಿನಾ ಮಾಹಿತಿ ನೀಡುತ್ತಿದ್ದರು. ಈ ವೇಳೆ ಚಹಾಲ್ ಕೂಡ ತಮ್ಮ ಮೊಬೈಲ್ನಲ್ಲಿ ಲೈವ್ ವಿಡಿಯೋ ನೋಡುತ್ತಿದ್ದರು.
ಇಷ್ಟಕ್ಕೆ ಸುಮ್ಮನಾಗದ ಚಹಾಲ್, ಹಾಯ್, ಕತ್ರಿನಾ ಮ್ಯಾಮ್ ಎಂದು ಕಮೆಂಟ್ ಮಾಡಿದ್ದಾರೆ. ಇದನ್ನು ನೋಡಿದ ಅಭಿಮಾನಿಗಳು ಭಾರೀ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಈ ಸ್ಕ್ರೀನ್ಶಾಟ್ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ. ಅಷ್ಟೇ ಅಲ್ಲ, ಕತ್ರಿನಾ ಅವರ ಫ್ಯಾನ್ ಎನ್ನುವುದನ್ನು ಚಹಾಲ್ ಮತ್ತೆ ಪ್ರೂವ್ ಮಾಡಿದ್ದಾರೆ ಎಂದಿದ್ದಾರೆ.
First published:
May 26, 2020, 3:03 PM IST