ಅಪ್ಪು ಹುಟ್ಟುಹಬ್ಬಕ್ಕೆ ಅಭಿಮಾನಿ ದೇವರುಗಳಿಗೆ ಡಬಲ್ ಧಮಾಕಾ

ಈ ಹಿಂದೆ ದಸರಾ ಹಬ್ಬಕ್ಕೆ ಟೀಸರ್ ಗಿಫ್ಟ್ ಮಾಡಿದ್ದ ಯುವರತ್ನ ತಂಡ, ಚಿತ್ರದಲ್ಲಿನ ಪವರ್​ ಸ್ಟಾರ್ ಪುನೀತ್ ರಾಜ್​ ಕುಮಾರ್ ಅವರ ಪವರ್​ಫುಲ್ ಎಂಟ್ರಿಯನ್ನು ತೋರಿಸಿತ್ತು. ಚಿತ್ರದಲ್ಲಿ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದ ಅಪ್ಪು ಸಖತ್ತಾಗೆ ಮೋಡಿ ಮಾಡಿದ್ದರು.

ಪುನೀತ್​ ರಾಜ್​ ಕುಮಾರ್

ಪುನೀತ್​ ರಾಜ್​ ಕುಮಾರ್

 • Share this:
  ಪವರ್ ಸ್ಟಾರ್ ಪುನೀತ್ ರಾಜ್​ಕುಮಾರ್ ಹುಟ್ಟುಹಬ್ಬಕ್ಕೆ ಅಭಿಮಾನಿಗಳು ದಿನಗಣನೆ ಶುರುಮಾಡಿಕೊಂಡಿದ್ದಾರೆ. ಮಾರ್ಚ್​ 17 ರಂದು 44ನೇ ವಸಂತಕ್ಕೆ ಕಾಲಿಡುತ್ತಿರುವ 'ರಾಜರತ್ನ'ನಿಗೆ ವಿಶೇಷವಾಗಿ ವಿಶಸ್ ತಿಳಿಸಲು ಪವರ್ ಫ್ಯಾನ್ಸ್ ರೆಡಿಯಾಗಿದ್ದಾರೆ. ಅತ್ತ ಅಭಿಮಾನಿ ದೇವರುಗಳಿಗೆ ರಿಟರ್ನ್​ ಗಿಫ್ಟ್ ನೀಡಲು ಪವರ್​ ಸ್ಟಾರ್ ಟೀಂ ಕೂಡ ಸನ್ನದ್ಧವಾಗಿದೆ.

  ಅಪ್ಪು ಅಭಿಮಾನಿಗಳಿಗೆ ಡಬಲ್​ ಧಮಾಕಾ ನೀಡಲು ಎರಡು ಚಿತ್ರತಂಡಗಳು ಪ್ಲ್ಯಾನ್ ಮಾಡಿಕೊಂಡಿವೆ. ಅದರಲ್ಲೊಂದು ಯುವರತ್ನ. ಈಗಾಗಲೇ ಸ್ಯಾಂಡಲ್​ವುಡ್​ನಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿರುವ ಯುವರತ್ನ ಸಿನಿಮಾ ಮತ್ತೊಂದು ಝಲಕ್ ತೋರಿಸಲು ಸಕಲ ತಯಾರಿಯಲ್ಲಿದೆ.

  ಈ ಹಿಂದೆ ದಸರಾ ಹಬ್ಬಕ್ಕೆ ಟೀಸರ್ ಗಿಫ್ಟ್ ಮಾಡಿದ್ದ ಯುವರತ್ನ ತಂಡ, ಚಿತ್ರದಲ್ಲಿನ ಪವರ್​ ಸ್ಟಾರ್ ಪುನೀತ್ ರಾಜ್​ ಕುಮಾರ್ ಅವರ ಪವರ್​ಫುಲ್ ಎಂಟ್ರಿಯನ್ನು ತೋರಿಸಿತ್ತು. ಚಿತ್ರದಲ್ಲಿ ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದ ಅಪ್ಪು ಸಖತ್ತಾಗೆ ಮೋಡಿ ಮಾಡಿದ್ದರು. ಅಲ್ಲದೆ ಸಂತೋಷ್ ಆನಂದ್​ರಾಮ್ ಅವರ ನಿರ್ದೇಶನ ಮತ್ತೊಮ್ಮೆ ಮನಮೋಹಕವಾಗಿ ಮೂಡಿಬಂದಿದೆ ಎಂಬ ಮಾತುಗಳು ಕೇಳಿ ಬಂದಿತ್ತು.

  ಈ ದುನಿಯಾದಲ್ಲಿ ಮೂರು ಥರ ಗಂಡಸರು ಇರುತ್ತಾರೆ. ರೂಲ್​ನ ಫಾಲೋ ಮಾಡೋರು. ರೂಲ್​ನ ಬ್ರೇಕ್ ಮಾಡೋರು. ಮೂರನೇ ಅವರು ನನ್ ಥರ ರೂಲ್​ ಮಾಡೋರು ಎಂಬ ಡೈಲಾಗ್​ ಅಪ್ಪು ಅಭಿಮಾನಿಗಳಂತು ಹೊಸ ರೋಮಾಂಚನ ನೀಡಿತ್ತು. ಇದೀಗ ಮತ್ತೊಮ್ಮೆ ರೂಲ್ ಮಾಡೋಕೆ ಅಪ್ಪು ಸನ್ನದ್ಧವಾಗಿದ್ದು, ಹುಟ್ಟುಹಬ್ಬದಂದು ಯುವರತ್ನ ಚಿತ್ರದ ಡೈಲಾಗ್ ಟೀಸರ್ ಬಿಡುಗಡೆಯಾಗಲಿದೆ.

  ಹಾಗೆಯೇ ಕೆಲ ವರ್ಷಗಳಿಂದ ಜೇಮ್ಸ್ ಎಂಬ ಟೈಟಲ್ ಮೂಲಕವೇ ಸ್ಯಾಂಡಲ್​ವುಡ್​ನಲ್ಲಿ ಸೌಂಡ್ ಕ್ರಿಯೇಟ್ ಮಾಡಿರುವ ಪುನೀತ್ ರಾಜ್​ಕುಮಾರ್-ಬಹದ್ದೂರ್ ಚೇತನ್ ಕಾಂಬಿನೇಷನ್​ನ ಚಿತ್ರತಂಡ ಕೂಡ ಬರ್ತ್​ಡೇ ಗಿಫ್ಟ್ ನೀಡಲಿದೆ. ಇದಕ್ಕಾಗಿ ಈಗಾಗಲೇ ಭರ್ಜರಿ ಮೋಷನ್ ಪೋಸ್ಟರ್​ವೊಂದನ್ನು ನಿರ್ದೇಶಕ ಚೇತನ್ ಮತ್ತು ತಂಡ ರೆಡಿ ಮಾಡುತ್ತಿದ್ದು, ಅಪ್ಪುವಿನ ಹೊಸ ಲುಕ್ ನೋಡಲು ಮಾರ್ಚ್​ 17ರವರೆಗೆ ಕಾಯಬೇಕಿದೆ.
  First published: