ಸಾಕಷ್ಟು ಕುತೂಹಲ ಮೂಡಿಸಿರುವ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ನಟನೆಯ ‘ಯುವರತ್ನ’ ಸಿನಿಮಾದ ನ್ಯೂ ಲುಕ್ ಹೊಸ ವರ್ಷದ ನಿಮಿತ್ತ ಇಂದು 10 ಗಂಟೆಗೆ ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಪುನೀತ್ ಅಸ್ಥಿಪಂಜರ ಹೊತ್ತು ನಿಂತಿದ್ದು ಸಾಕಷ್ಟು ಕುತೂಹಲ ಮೂಡಿಸಿದೆ.
ಪುನೀತ್ ಹಿಂದಿನ ಸಿನಿಮಾ ‘ನಟಸಾರ್ವಭೌಮ’ ಹಾರರ್ ಅಂಶಗಳಿಂದ ಕೂಡಿತ್ತು. ಈಗ 'ಯುವರತ್ನ' ಹೊಸ ಲುಕ್ನಲ್ಲೂ ಹಾರರ್ ಅಂಶ ಸೇರಿಸಿದ್ದಾರೆ ನಿರ್ದೇಶಕ ಸಂತೋಷ್ ಆನಂದ್ ರಾಮ್. ಪುನೀತ್ ತಮ್ಮ ಹೆಗಲಿಗೆ ಅಸ್ಥಿಪಂಜರವೊಂದನ್ನು ಹೊತ್ತು ನಿಂತಿದ್ದಾರೆ. ಬ್ಯಾಕ್ಗ್ರೌಂಡ್ನಲ್ಲಿ ಡೈನೋಸಾರ್ ಅಸ್ಥಿ ಪಂಜರ ಕೂಡ ಇದೆ. ಹೀಗಾಗಿ ಫಸ್ಟ್ ಪೋಸ್ಟರ್ ಕುತೂಹಲದ ಗೂಡಾಗಿದೆ.
ಪುನೀತ್ ಕಾಲೇಜು ಹುಡುಗನಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸಿನಿಮಾದ ಕಥೆ ಬಹುತೇಕವಾಗಿ ಕಾಲೇಜಿನಲ್ಲೇ ಸಾಗಲಿದೆಯಂತೆ. ಹೀಗಾಗಿ, ಇದು ಕಾಲೇಜಿನ ಲ್ಯಾಬ್ನಲ್ಲಿರುವ ಅಸ್ಥಿಪಂಜರವೂ ಆಗಿರಬಹುದು ಎನ್ನುವುದು ಕೆಲವರ ಊಹೆ.
Wishing everyone a very #HappyNewYear from team #Yuvarathnaa❤️💥🎉#YuvarathnaaNewLook ☠️@PuneethRajkumar @SanthoshAnand15 @VKiragandur @hombalefilms @MusicThaman @sayyeshaa @Karthik1423 @diganthmanchale @Dhananjayaka pic.twitter.com/B18yKmeNDM
— Hombale Films (@hombalefilms) January 1, 2020
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ