Yuvarathnaa Movie: ಹುಬ್ಬಳ್ಳಿಯಲ್ಲಿ ಯುವರತ್ನ ಸಿನಿಮಾಗೆ ವಿಭಿನ್ನ ಸ್ವಾಗತ; ವಿಕಲಚೇತನರಿಗೆ ಕೃತಕ ಕಾಲು ಜೋಡಿಸಿ, ಉಚಿತ ಟಿಕೆಟ್ ವಿತರಣೆ

ಪವರ್ ಸ್ಟಾರ್‌ ಪುನೀತ್ ರಾಜಕುಮಾರ್ ಅಭಿಮಾನಿಗಳು ಕೃತಕ ಕಾಲು ವಿತರಣೆ ಮಾಡೋ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದ ಬಳಿ ಜೈ ರಾಜವಂಶ ಸಂಘಟನೆಯಿಂದ ಕೃತಕ ಕಾಲು ವಿತರಣೆ ಮಾಡಲಾಯಿತು.

ವಿಕಲಚೇತನರಿಗೆ ಕೃತಕ ಕಾಲು ಜೋಡಿಸಿ ಉಚಿತ ಸಿನಿಮಾ ಟಿಕೆಟ್ ವಿತರಿಸಿದ ಅಪ್ಪು ಅಭಿಮಾನಿಗಳು

ವಿಕಲಚೇತನರಿಗೆ ಕೃತಕ ಕಾಲು ಜೋಡಿಸಿ ಉಚಿತ ಸಿನಿಮಾ ಟಿಕೆಟ್ ವಿತರಿಸಿದ ಅಪ್ಪು ಅಭಿಮಾನಿಗಳು

  • Share this:
ಹುಬ್ಬಳ್ಳಿ(ಏ.02):  ಯುವರತ್ನ ಚಿತ್ರ ಬಿಡುಗಡೆಯನ್ನು ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ವಿನೂತನವಾಗಿ ಆಚರಿಸಿದ್ದಾರೆ. ನಿನ್ನೆ ರಂಗ ಪಂಚಮಿ ಇದ್ದ ಹಿನ್ನೆಲೆಯಲ್ಲಿ ಇಂದು ಹುಬ್ಬಳ್ಳಿಯಲ್ಲಿ ಅಭಿಮಾನಿಗಳು ಸಂಭ್ರಮಾಚರಣೆ ನಡೆಸಿ, ಭರ್ಜರಿಯಾಗಿ ಸ್ವಾಗತಿಸಿದರು.

ಪವರ್ ಸ್ಟಾರ್‌ ಪುನೀತ್ ರಾಜಕುಮಾರ್ ಅಭಿಮಾನಿಗಳು ಕೃತಕ ಕಾಲು ವಿತರಣೆ ಮಾಡೋ ಮೂಲಕ ಮಾನವೀಯತೆ ಮೆರೆದಿದ್ದಾರೆ. ಹುಬ್ಬಳ್ಳಿಯ ಅಪ್ಸರಾ ಚಿತ್ರಮಂದಿರದ ಬಳಿ ಜೈ ರಾಜವಂಶ ಸಂಘಟನೆಯಿಂದ ಕೃತಕ ಕಾಲು ವಿತರಣೆ ಮಾಡಲಾಯಿತು.

ಚಿತ್ರ ಮಂದಿರದ ಎದುರೇ 15 ಜನ ವಿಕಲಚೇತನರಿಗೆ ಕೃತಕ ಕಾಲು ಜೋಡಣೆ ಮಾಡಲಾಯಿತು. ಫಿಲ್ಮ್ ಡಿಸ್ಟ್ರಿಬ್ಯೂಟರ್ ಮಯೂರ್ ಮೋರೆ ಕೃತಕ ಕಾಲು ವಿತರಣೆಗೆ ಚಾಲನೆ ನೀಡಿದರು. ಕೇವಲ ಕೃತಕ ಕಾಲು ಜೋಡಿಸಿ ಸುಮ್ಮನಾಗದ ಅಭಿಮಾನಿಗಳು, ವಿಕಲಚೇತರಿಗೆ ಸನ್ಮಾನಿಸಿ ಗೌರವಿಸಿದರು. ಜೊತೆಗೆ ಉಚಿತವಾಗಿ ಯುವರತ್ನ ಚಿತ್ರದ ಟಿಕೆಟ್ ವಿತರಣೆ ಮಾಡಿದರು.

IT Returns: 2020-21ರ ಐಟಿ ರಿಟರ್ನ್ಸ್‌ ಅರ್ಜಿ ನಮೂನೆಗಳನ್ನು ಪ್ರಕಟಿಸಿದ ಕೇಂದ್ರ: ನೀವು ತಿಳಿದುಕೊಳ್ಳಬೇಕಾದ ಎಲ್ಲ ಮಾಹಿತಿ ಇಲ್ಲಿದೆ..!

ಕೃತಕ ಕಾಲು ಜೋಡಿಸಿಕೊಂಡ ಖುಷಿಯಲ್ಲಿಯೇ ವಿಕಲಚೇತನರು ಅಪ್ಸರಾ ಚಿತ್ರಮಂದಿರದಲ್ಲಿ ಸಿನಿಮಾ ವೀಕ್ಷಣೆಗೆ ತೆರಳಿದರು. ಅಪ್ಪು ಅಭಿಮಾನಿಗಳಿಗೆ ಈ ವೇಳೆ ವಿಕಲಚೇತನರು ಧನ್ಯವಾದ ತಿಳಿಸಿದರು. ಕೃತಕ ಕಾಲು ಜೋಡಿಸುವ ಜೊತೆಗೆ ಸನ್ಮಾನಿಸಿದ್ದಾರೆ. ಉಚಿತವಾಗಿ ಟಿಕೆಟ್ ನೀಡಿ ಯುವರತ್ನ ಸಿನೆಮಾ ನೋಡಲು ಅನುವು ಮಾಡಿಕೊಟ್ಟಿದ್ದು, ಸಿನೆಮಾಕ್ಕೆ ಶುಭವಾಗಲಿ ಎಂದು ಹಾರೈಸಿದರು.

ಈ ವೇಳೆ ಪಟಾಕಿ ಸಿಡಿಸಿ ಸಂಭ್ರಮಿಸಿದ ಪುನಿತ್ ಅಭಿಮಾನಿಗಳು, ಯುವರತ್ನ ಚಿತ್ರ ಯಶಸ್ಸಿಗೆ ಪ್ರಾರ್ಥಿಸಿದರು. ಈ ವೇಳೆ ಮಾತನಾಡಿದ ಜೈ ರಾಜವಂಶ ಸಂಘಟನೆ ಅಧ್ಯಕ್ಷ ರಘು, ಯುವರತ್ನ ಉತ್ತರ ಕರ್ನಾಟಕ ಭಾಗದಲ್ಲಿಯೂ ಚಿತ್ರೀಕರಣಗೊಂಡಿದೆ.

ಚಿತ್ರ ಖಂಡಿತಾ ಯಶಸ್ಸು ಕಾಣುತ್ತೆ. ಆದ್ರೆ ಯಾರೂ ಸಿನೆಮಾದ ಪೈರಸಿ ಮಾಡಬಾರದು. ಯುವರತ್ನ ಒಂದೇ ಅಲ್ಲ ಯಾವುದೇ ಚತ್ರವಿದ್ದರೂ ಪೈರಸಿ ಮಾಡಬಾರದು. ಪೈರಸಿಯಿಂದಾಗಿ ಚಿತ್ರೋದ್ಯಮಕ್ಕೆ ಧಕ್ಕೆಯಾಗಲಿದೆ ಎಂದರು.
Published by:Latha CG
First published: