ಕನ್ನಡದ ಕಣ್ಮಣಿ ನಟ ಪವರ್ ಸ್ಟಾರ್ ಪುನೀತ್ರಾಜ್ಕುಮಾರ್ (Power Star Puneeth Rajkumar) ನಮ್ಮನ್ನಗಲಿ ಎರೆಡು ತಿಂಗಳಾಗಿದೆ. ಅವರ ನೆನಪು ಕನ್ನಡಿಗರಲ್ಲಿ ಅಚ್ಚಳಿಯದೆ ಉಳಿದಿದೆ. ಅವರನ್ನ ನೆನೆಯದ ದಿನಗಳೇ ಇಲ್ಲ ಎನ್ನುವಂತಾಗಿದೆ. ಅವರನ್ನ ಮರೆಯುವುದು ಅಸಾಧ್ಯ. ಜನಮಾನಸದಲ್ಲಿ ಅಪ್ಪು (Appu) ಎಂದಿಗೂ ಅಮರ ಎಂದರೆ ತಪ್ಪಲ್ಲ. ಅವರು ಇಲ್ಲ ಎನ್ನುವ ಸುದ್ದಿ ಬಂದಾಗಿನಿಂದಲೂ ಅವರ ಬಗ್ಗೆ ಒಂದೆಲ್ಲ ಒಂದು ವಿಚಾರಗಳು ಹೊರಬರುತ್ತಿವೆ. ಅವರ ಸಾಮಾಜಿಕ ಕೆಲಸಗಳು, ಅವರು ಅಭಿಮಾನಿಗಳ ಜೊತೆ ಇರುತ್ತಿದ್ದ ರೀತಿ ಎಲ್ಲವೂ ಮಾದರಿ. ಪುನೀತ್ ರಾಜ್ಕುಮಾರ್ ಬಗ್ಗೆ ಇಡೀ ಜಗತ್ತೇ ಮಾತಾಡಿದೆ. ಅಪ್ಪು ಅವರು ಬದುಕಿದ್ದಾಗ ತೆರೆಕಂಡ ಕಡೆಯ ಚಿತ್ರ ಅಂದರೆ ಅದು ‘ಯುವರತ್ನ’(Yuvarathna) ಸಿನಿಮಾ. ಇದೀಗ ಸಂಕ್ರಾಂತಿ ಹಬ್ಬದ ಪ್ರಯುಕ್ತ ಉದಯ ಟವಿ(Udaya Tv)ಯಲ್ಲಿ ಜನವರಿ 15ರಂದು ಕಿರುತೆರೆಯಲ್ಲಿ ಈ ಸಿನಿಮಾ ಪ್ರಸಾರವಾಯಿತು. ಈ ಸಿನಿಮಾವನ್ನು ಜನರು ಬರಮಾಡಿಕೊಂಡ ರೀತಿ ನೋಡಿದರೆ ಎಂಥವರ ಕಣ್ಣಲ್ಲು ನೀರು ಬರುತ್ತೆ. ಅಪ್ಪು ಇನ್ನೂ ಜೀವಂತ. ನಮ್ಮ ಜೊತೆಯಲ್ಲಿ ಅಪ್ಪು ಇರುತ್ತಾರೆ ಅನ್ನುವುದಕ್ಕೆ ಇದೇ ಸಾಕ್ಷಿ. ಪುನೀತ್ ರಾಜ್ಕುಮಾರ್ ಮೇಲೆ ಅವರ ಅಭಿಮಾನಿಗಳು ಇಟ್ಟಿರುವ ಪ್ರೀತಿಯನ್ನು ಅಳತೆ ಮಾಡಲು ಸಾಧ್ಯವೆ?
ಟಿವಿಗೆ ಹಾರ ಹಾಕಿ, ಆರತಿ ಎತ್ತಿ ‘ಯುವರತ್ನ’ನಿಗೆ ಸ್ವಾಗತ!
ಪುನೀತ್ಗೆ ದೊಡ್ಡ ಅಭಿಮಾನಿ ಬಳಗ ಇದೆ. ಚಿಕ್ಕ ಮಕ್ಕಳಿಂದ ಹಿಡಿದು ಹಿರಿಯರವರೆಗೆ ಅವರನ್ನು ಆರಾಧಿಸುವ ಸಾಕಷ್ಟು ಮಂದಿ ಇದ್ದಾರೆ. ಅವರ ಸಿನಿಮಾ ರಿಲೀಸ್ ಆಗುತ್ತಿದೆ ಎಂದರೆ ಅಭಿಮಾನಿಗಳು ಸಂಭ್ರಮಿಸುತ್ತಿದ್ದರು. ಅವರ ಕಟೌಟ್ಗೆ ಮಾಲೆ ಹಾಕಿ, ಹಾಲಿನ ಅಭಿಷೇಕ ಮಾಡುತ್ತಿದ್ದರು. ಇನ್ನೂ ‘ಯುವರತ್ನ’ ಸಿನಿಮಾವನ್ನು ಕಿರುತೆರೆ ಪ್ರೇಕ್ಷಕರು ಇದೇ ರೀತಿಯಲ್ಲೇ ಸ್ವಾಗತ ಮಾಡಿಕೊಂಡಿದ್ದಾರೆ. ‘ಯುವರತ್ನ’ ಸಿನಿಮಾ ಪ್ರಸಾರವಾಗುತ್ತಿದ್ದಂತೆ ಅವರ ಅಭಿಮಾನಿಗಳು ಟಿವಿಗೆ ಹಾರ ಹಾಕಿ ಪೂಜೆ ಮಾಡಿದ್ದಾರೆ. ಅನೇಕರು ಇದೇ ರೀತಿ ‘ಯುವರತ್ನ’ನನ್ನು ಸ್ವಾಗತಿಸಿದ್ದಾರೆ. ಸದ್ಯ, ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಯೋ ನೋಡಿದ ಕರುನಾಡಿಗರ ಕಣ್ಣು ತೇವವಾಗಿದೆ.
It's all about yesterday scenerio across Karnataka State#Yuvarathnaa #PuneethRajkumar @PuneethRajkumar @SanthoshAnand15 @hombalefilms pic.twitter.com/7tRo0Jno0q
— Appu 💔😭 (@PlzComeBackAppu) January 16, 2022
ನಿಮ್ಮ ರೇಂಜಿಗೆ ಯಾರಿಲ್ಲ ಅನ್ನುತ್ತಿದ್ದಾರೆ ಫ್ಯಾನ್ಸ್!
ಅಪ್ಪು ನಮ್ಮೊಂದಿಗೆ ಇಲ್ಲ ಅನ್ನುವುದನ್ನೇ ಅರಗಿಸಿಕೊಳ್ಳಲು ಆಗುತ್ತಿಲ್ಲ. ಇದೀಗ ಯುವರತ್ನ ಸಿನಿಮಾವನ್ನು ಪ್ರೇಕ್ಷಕರು ಈ ರೀತಿಯಾಗಿ ಸ್ವಾಗತ ಕೋರಿರುವುದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ಇನ್ನು ಮುಂದೆ ಯಾರ ಸಿನಿಮಾವನ್ನು ನೋಡುವುದು. ಯಾರ ಕಟೌಟ್ಗೆ ಅಭಿಷೇಕ ಮಾಡುವುದು. ಅಪ್ಪು ಅವರ ಗಂಧದ ಗುಡಿ ಸಿನಿಮಾನೇ ಚಿತ್ರಮಂದಿರದಲ್ಲಿ ನಾವು ನೋಡುವ ಕಡೆಯ ಸಿನಿಮಾ ಎಂದು ಅವರ ಅಭಿಮಾನಿಗಳು ಹೇಳುತ್ತಿದ್ದಾರೆ. ರಾಜನೇ ಇಲ್ಲದ ಮೇಲೆ ನಮಗೇನು ಕೆಲಸ. ಇನ್ನೇಂದು ಚಿತ್ರಮಂದಿರದಲ್ಲಿ ಸಿನಿಮಾ ನೋಡುವುದಿಲ್ಲ ಎಂದು ಹೇಳುತ್ತಿದ್ದಾರೆ.
#Yuvarathnaa Craze Level 🔥🔥
Fan Girls......😍#KingAppu #PuneethRajkumar pic.twitter.com/YFXNWn4d9s
— ಪವರ್ ಸ್ಟಾರ್™ / 𝙅𝙖𝙢𝙚𝙨ᵀʰᵉ ᵀʳᵃᵈᵉᴹᵃʳᵏ (@AppuBossFan) January 15, 2022
ಇದನ್ನು ಓದಿ: ಹಳ್ಳಿಗಳಲ್ಲಿ ಈ ಬಾರಿ ಸಂಕ್ರಾಂತಿ ಹಬ್ಬ ಮಾಡಿಲ್ಲ.. ಅಪ್ಪು ಅಭಿಮಾನದ ಕ್ರಾಂತಿ ಸೃಷ್ಠಿ ಮಾಡವ್ರೆ!
ಜೇಮ್ಸ್ ಚಿತ್ರದಲ್ಲಿ ಅಪ್ಪು ಪಾತ್ರಕ್ಕೆ ಶಿವಣ್ಣ ಧ್ವನಿ?
ಜೇಮ್ಸ್ ಸಿನಿಮಾದಲ್ಲಿ ಅಪ್ಪು ಅವರಿಗೆ ಯಾರ ಧ್ವನಿ ನೀಡಬಹುದು ಎಂಬ ಚರ್ಚೆ ಹೊರಗಡೆ ನಡೆಯುತ್ತಿದೆ. ಒಂದಷ್ಟು ಮಂದಿ ಅವರದ್ದೇ ಧ್ವನಿಯನ್ನು ಉಳಿಸಿಕೊಳ್ಳುತ್ತಾರೆ ಎಂದಿದ್ದಾರೆ.ಶಿವಣ್ಣ ಡಬ್ಬಿಂಗ್ ಮಾಡಿಕೊಡುತ್ತೇನೆ ಎಂದಿದ್ದಾರೆ. ಇವೆಲ್ಲ ನಮಗೆ ಗೊತ್ತಾಗಲು ಇನ್ನೂ ಹದಿನೈದು ದಿನಗಳಷ್ಟು ಸಮಯ ಹಿಡಿಯುತ್ತದೆ. ಟೆಕ್ನಿಕಲಿ ಒಂದಷ್ಟು ಕೆಲಸಗಳಿವೆ. ಈ ಸಿನಿಮಾವನ್ನು ಎಷ್ಟು ಚೆನ್ನಾಗಿ ತೆರೆಯ ಮೇಲೆ ತರಬೇಕೋ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ’ ಎಂದು ಜೇಮ್ಸ್ ಚಿತ್ರದ ನಿರ್ದೇಶಕ ಚೇತನ್ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ