Yuvarathnaa: ಪುನೀತ್​ ನಟನೆಯ ಯುವರತ್ನ ಸಿನಿಮಾ ಕುರಿತಾದ ಮತ್ತೊಂದು ಅಪ್ಡೇಟ್​ ಇಲ್ಲಿದೆ

Yuvarathnaa Rampage Soon: ಸಂತೋಷ್​ ಆನಂದ್​ ರಾಮ್​ ಹಾಡಿನ ಚಿತ್ರೀಕರಣದ ಕುರಿತಾಗಿ ಟ್ವೀಟ್ ಮಾಡಿದ ಇನ್ನೂ ವಾರ ಕಳೆದಿಲ್ಲ. ಅಷ್ಟರಲ್ಲೇ ಮತ್ತೊಂದು ಸುದ್ದಿ ಹೊರ ಹಾಕಿದ್ದಾರೆ.

Anitha E | news18-kannada
Updated:September 10, 2020, 9:59 AM IST
Yuvarathnaa: ಪುನೀತ್​ ನಟನೆಯ ಯುವರತ್ನ ಸಿನಿಮಾ ಕುರಿತಾದ ಮತ್ತೊಂದು ಅಪ್ಡೇಟ್​ ಇಲ್ಲಿದೆ
ಯುವರತ್ನ ಸಿನಿಮಾದಲ್ಲಿ ಪುನೀತ್​ ರಾಜ್​ಕುಮಾರ್​
  • Share this:
ಪುನೀತ್​ ರಾಜ್​ಕುಮಾರ್ ಮತ್ತೊಮ್ಮೆ ಕಾಲೇಜು ವಿದ್ಯಾರ್ಥಿಯಾಗಿ ಕಾಣಿಸಿಕೊಳ್ಳಲಿರುವ ಸಿನಿಮಾ ಯುವರತ್ನ. ರಾಜಕುಮಾರ ಸಿನಿಮಾದ ನಂತರ ಪುನೀತ್​ ಹಾಗೂ ಸಂತೋಷ್​ ಆನಂದ್​ ರಾಮ್​ ಮತ್ತೆ ಈ ಸಿನಿಮಾಗಾಗಿ ಒಂದಾಗಿರುವುದು ಅಭಿಮಾನಿಗಳಲ್ಲಿನ ಕುತೂಹಲಕ್ಕೆ ಕಾರಣವಾಗಿದೆ. ಈ ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿಯ ಪಾತ್ರಕ್ಕಾಗಿ ಪುನೀತ್​ ಸಖತ್​ ವರ್ಕೌಟ್​ ಸಹ ಮಾಡಿದ್ದಾರೆ. ಈ ಸಿನಿಮಾದ ಬಹತೇಕ ಭಾಗ ಚಿತ್ರೀಕರಣ ಮುಗಿದಿದ್ದು, ಲಾಕ್​ಡೌನ್​ನಿಂದಾಗಿ ಚಿತ್ರೀಕರಣ ನಿಂತಿತ್ತು. ಈಗ ಇನನ್ನೇನು ಇದೇ ತಿಂಗಳ 20ರಿಂದ ಸಿನಿಮಾದ ಶೂಟಿಂಗ್​ ಆರಂಭವಾಗಲಿದೆ. ಈ ಸಲ ಸಿನಿಮಾದ ಹಾಡಿನ ಚಿತ್ರೀಕರಣ ನಡೆಯಲಿದೆ. ಇದು ಯುವರತ್ನನನ್ನು ಪರಿಚಯ ಮಾಡಿಕೊಡುವ ಹಾಡಾಗಿದ್ದು, ಸಖತ್​ ಮಾಸ್​ ಹಾಗೂ ಕ್ಲಾಸಿಯಾಗಿರಲಿದೆಯಂತೆ. ಈ ಕುರಿತಾಗಿಯೇ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಇತ್ತೀಚೆಗೆ ಟ್ವೀಟ್​ ಮಾಡಿದ್ದರು. ಜೊತೆಗೆ ಸಂಗೀತ ನಿರ್ದೇಶಕ ಸಹ ಹಾಡುಗಳ ಬಗ್ಗೆ ಅಪ್ಡೇಟ್ ಜೊಟ್ಟಿದ್ದರು.

ಸಂತೋಷ್​ ಆನಂದ್​ ರಾಮ್​ ಹಾಡಿನ ಚಿತ್ರೀಕರಣದ ಕುರಿತಾಗಿ ಟ್ವೀಟ್ ಮಾಡಿದ ಇನ್ನೂ ವಾರ ಕಳೆದಿಲ್ಲ. ಅಷ್ಟರಲ್ಲೇ ಮತ್ತೊಂದು ಸುದ್ದಿ ಹೊರ ಹಾಕಿದ್ದಾರೆ. ಪುನೀತ್​ ಅಂದರೆ ಯುರತ್ನ ಚಿತ್ರದ ನಾಯಕನನ್ನು ಪರಿಚಯಸಲೆಂದು ಮಾಡುತ್ತಿರುವ ಹಾಡಿಗೆ ಸಾಹಿತ್ಯ ಬರೆಯುವ ಕೆಲಸ ಬಹುತೇಕ ಮುಗಿದಿದೆಯಂತೆ. ಇದು ಫ್ಯಾನ್​ ಆ್ಯಂಥೆಮ್ ಆಗಲಿದೆ​ ಎಂದು ಸಂತೋಷ್​ ಆನಂದ್​ ರಾಮ್​ ಟ್ವೀಟ್​ ಮಾಡಿದ್ದಾರೆ.
ಇನ್ನು ನಿರ್ದೇಶಕನ ಟ್ವೀಟ್​ ನೋಡಿದ ಸಂಗೀತ ನಿರ್ದೇಶಕ ತಮನ್​, ಹಾಡನ್ನು ಕೇಳಲು ಕಾತರನಾಗಿದ್ದೇನೆ ಎಂದು ಪ್ರತಿಕ್ರಿಯಿಸಿದ್ದಾರೆ. ಅದಕ್ಕೆ ಸಂತೋಷ್​ ಆನಂದ್​ ರಾಮ್​, ಈ ಹಾಡಿಗೆ ಹಿಂದೆಂದೂ ಕೊಟ್ಟಿರದ ಬೀಟ್ಸ್​ ಕೊಡಬೇಕು ಅಂದರೆ, 'ನೆವರ್​ ಬಿಫೋರ್​ ಟೈಪ್ಸ್'​ ಅಂತ ಹೇಳಿದ್ದಾರೆ.


ಯುವರತ್ನ ಸಿನಿಮಾದಲ್ಲಿ ಸಯೇಷಾ ಸೈಗಲ್​ ನಾಯಕಿಯಾಗಿ ನಟಿಸುತ್ತಿದ್ದು, ಅವರು ಇತ್ತೀಚೆಗೆ ಬಾಕ್ಸಿಂಗ್​ ಅಭ್ಯಾಸದಲ್ಲಿ ತೊಡಗಿದ್ದಾರೆ. ಇನ್ನು ಪುನೀತ್​ ಜೊತೆ ಈ ಚಿತ್ರದಲ್ಲಿ ಸುಧಾರಾಣಿ ಸಹ ತೆರೆ ಹಂಚಿಕೊಂಡಿದ್ದಾರೆ. ಇನ್ನು ಚಿತ್ರತಂಡ ಲಾಕ್​ಡೌನ್​ ಸಡಿಲಗೊಂಡ ನಂತರ ಈ ಸಿನಿಮಾ ಕುರಿತಾದ ಅಪ್ಡೇಟ್​ ನೀಡುತ್ತಿದ್ದು, ಅಭಿಮಾನಿಗಳು ಕೊಂಚ ನಿರಾಳರಾಗಿದ್ದಾರೆ.ಲಾಕ್​ಡೌನ್​ನಲ್ಲಿ ಯುವರತ್ನ ಸಿನಿಮಾದಿಂದ ಒಂದೇ ಒಂದು ಹಾಡನ್ನಾದರೂ ರಿಲೀಸ್​ ಮಾಡಿ ಎಂದು ಅಪ್ಪು ಫ್ಯಾನ್ಸ್​ ಪಟ್ಟು ಹಿಡಿದಿದ್ದರು. ಆದರೆ, ಲಾಕ್​ಡೌನ್​ನಿಂದಾಗಿ ಅದು ಸಾಧ್ಯವಾಗುತ್ತಿಲ್ಲ ಎಂದು ಸಂಗೀತ ನಿರ್ದೇಶಕ ತಮನ್​ ಸ್ವಲ್ಪ ದಿನ ಕಾಯುವಂತೆ ಮನವಿ ಮಾಡಿದ್ದರು.
Published by: Anitha E
First published: September 10, 2020, 8:40 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading