HOME » NEWS » Entertainment » YUVARATHNAA DIRECTOR SANTHOSH ANAND RAM AND MUSIC DIRECTOR THAMAN S GAVE GOOD NEWS TO PUNEETH FANS AE

Yuvarathnaa: ಯುವರತ್ನ ಚಿತ್ರತಂಡದ ಕಡೆಯಿಂದ ಪುನೀತ್​ ಅಭಿಮಾನಿಗಳಿಗೆ ಸಿಕ್ತು ಡಬಲ್​ ಅಪ್ಡೇಟ್​..!

Yuvarathnaa Single: ಲಾಕ್​ಡೌನ್​ ಆರಂಭವಾದಾಗಿನಿಂದ ಯುವರತ್ನ ಸಿನಿಮಾದ ಅಪ್ಡೇಟ್​ಗಾಗಿ ಕಾಯುತ್ತಿದ್ದರು ಅಭಿಮಾನಿಗಳು. ಕೇವಲ ಪುನೀತ್ ಅವರ ಸ್ಟಿಲ್​ ಹಾಗೂ ವರ್ಕೌಟ್​ ವಿಡಿಯೋ ಹಂಚಿಕೊಳ್ಳುತ್ತಿದ್ದ ನಿರ್ದೇಶಕ ಸಂತೋಷ್​ ಆನಂದ್​ ರಾಮ್​, ಈಗ ಡಬಲ್​ ಅಪ್ಡೇಟ್​ ಕೊಟ್ಟಿದ್ದಾರೆ.

Anitha E | news18-kannada
Updated:September 7, 2020, 11:29 AM IST
Yuvarathnaa: ಯುವರತ್ನ ಚಿತ್ರತಂಡದ ಕಡೆಯಿಂದ ಪುನೀತ್​ ಅಭಿಮಾನಿಗಳಿಗೆ ಸಿಕ್ತು ಡಬಲ್​ ಅಪ್ಡೇಟ್​..!
ಪುನೀತ್​ ರಾಜ್​ಕುಮಾರ್​ ಹಾಗೂ ಸಂತೋಷ್​ ಆನಂದ್​ ರಾಮ್​
  • Share this:
ಪವರ್ ಸ್ಟಾರ್​ ಪುನೀತ್ ರಾಜ್​ಕುಮಾರ್​ ಅಭಿನಯದ ಸಿನಿಮಾ ಯುವರತ್ನ ಕುರಿತಾಗಿ ಅಪ್ಡೇಟ್​ ಕೊಡುವಂತೆ ಅಭಿಮಾನಿಗಳು ಲಾಕ್​ಡೌನ್ ಆರಂಭದಿಂದ ಕೇಳುತ್ತಲೇ ಇದ್ದಾರೆ. ಅಲ್ಲದೆ ಈ ಚಿತ್ರದ ಒಂದು ಹಾಡನ್ನಾದರೂ ರಿಲೀಸ್ ಮಾಡುವಂತೆ ಬಹಳ ಸಮಯದಿಂದ ಫ್ಯಾನ್ಸ್​ ಸಾಮಾಜಿಕ ಜಾಲತಾಣದಲ್ಲಿ ಒತ್ತಡ ಹೇರುತ್ತಿದ್ದಾರೆ. ಈ ಹಿಂದೆ ಈ ಸಿನಿಮಾದ ಸಂಗೀತ ನಿರ್ದೇಶಕ ತಮನ್​ ಸಿನಿಮಾದ ಆಡಿಯೋ ಕುರಿತಾಗಿ ಟ್ವೀಟ್​ ಮಾಡಿ, ಅಭಿಮಾನಿಗಳಿಗೆ ಮನವಿ ಮಾಡಿದ್ದರು. ಲಾಕ್​ಡೌನ್​ನಿಂದಾಗಿ ಗಾಯಕರು ಹಾಗೂ ತಂತ್ರಜ್ಞರು ಒಂದೊಂದು ಕಡೆ ಸಿಲುಕಿಕೊಂಡಿದ್ದಾರೆ. ಈ ಕಾರಣದಿಂದಾಗಿ ಸದ್ಯಕ್ಕೆ ಆಡಿಯೋ ಬಗ್ಗೆ ಅಪ್ಡೇಟ್​ ಕೊಡಲಾಗುತ್ತಿಲ್ಲ ಎಂದಿದ್ದರು. ಇದರ ನಡುವೆ ನಿರ್ದೇಶಕ ಸಂತೋಷ್​ ಆನಂದ್​ ರಾಮ್​, ಪುನೀತ್​ ಅವರು ಡಬ್ಬಿಂಗ್​ ಆರಂಭಿಸಿರುವ ಕುರಿತಾಗಿ ಫೋಟೋ ಪೋಸ್ಟ್ ಮಾಡಿದ್ದರು. ಈಗ ಇದೇ ಸಿನಿಮಾದ ಕುರಿತಾಗಿ ಎರಡೆರಡು ಅಪ್ಡೇಟ್​ ಹೊರ ಬಿದ್ದಿದೆ.

ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಸಿನಿಮಾದ ಚಿತ್ರೀಕರಣ ಆರಂಭವಾಗಲಿರುವ ಕುರಿತು ಮಾಹಿತಿ ಹಂಚಿಕೊಂಡಿದ್ದಾರೆ. ಯುವರತ್ನ ಸಿನಿಮಾದಲ್ಲಿ ನಾಯಕನನ್ನು ಪರಿಚಯಿಸಲಿರುವ ಹಾಡಿನ ಚಿತ್ರೀಕರಣ, ಇದೇ ತಿಂಗಳು ಅದಂರೆ ಸೆ.20ಕ್ಕೆ ಆರಂಭವಾಗಲಿದೆ ಎಂದು ಟ್ವೀಟ್​ ಮಾಡಿದ್ದಾರೆ.
ಈ ಹಾಡನ್ನು ಖ್ಯಾತ ನೃತ್ಯ ಸಂಯೋಜಕ​ ಜಾನಿ ಮಾಸ್ಟರ್​ ಕೊರಿಯೋಗ್ರಾಫ್​ ಮಾಡಲಿದ್ದಾರಂತೆ. ಇನ್ನು ಸಿನಿಮಾದ ಆಡಿಯೋ ರಿಲೀಸ್​ ಕುರಿತಂತೆ ಅಪ್ಡೇಟ್​ ಕೊಡುವಂತೆ ಈಗಲೂ ಸಹ ಅಪ್ಪು ಅಭಿಮಾನಿಗಳು ಪಟ್ಟಿ ಹಿಡಿದಿದ್ದಾರೆ. ಈ ವಿಷಯವಾಗಿಯೇ ಸಂಗೀತ ನಿರ್ದೇಶಕ ತಮನ್​ ಈಗ ಸಿಹಿ ಸುದ್ದಿ ಕೊಟ್ಟಿದ್ದಾರೆ.Lovely musical🎵 September ahead ♥️#Yuvarathnaasingle is on planning & Songs from #MissIndia which is very very close to my heart may come toooo 🎵🔊🎬❤️ಯುವರತ್ನ ಸಿನಿಮಾ ಮೊದಲ ಸಿಂಗಲ್​ಗಾಗಿ ರೆಡಿಯಾಗುತ್ತಿದ್ದಾರೆ ಅಪ್ಪು ಅಭಿಮಾನಿಗಳು. ಈಗಾಗಲೇ ಸೆಪ್ಟೆಂಬರ್​ನಲ್ಲೇ ಯುವರತ್ನ ಸಿನಿಮಾದ ಹಾಡಿನ ಪ್ಲಾನಿಂಗ್​ ನಡೆಯುತ್ತಿದೆ ಎಂದು ತಮನ್​ ಪೋಸ್ಟ್​ ಮಾಡಿದ್ದಾರೆ. ಆದರೆ ಈ ಹಾಡು ಯಾವಾಗ ರಿಲೀಸ್ ಆಗಲಿದೆ ಅಂತ ಮಾತ್ರ ಯಾವ ಸುಳಿವನ್ನೂ ನೀಡಿಲ್ಲ. ಆದರೆ ಅಪ್ಪು ಅಭಿಮಾನಿಗಳು ದಸರಾ ಹಬ್ಬಕ್ಕೆ ಹಾಡು ರಿಲೀಸ್ ಆಗಬಹುದು ಅನ್ನೋ ನಿರೀಕ್ಷೆಯಲ್ಲಿದ್ದಾರೆ.

ಅಪ್ಪು ಅಭಿನಯದ ಯುವರತ್ನ ಸಿನಿಮಾದ ಹಾಡಿನಲ್ಲಿ ಅಪ್ಪು ಹಾಕಲಿರುವ ಸಖತ್ ಸ್ಟೆಪ್ಸ್​ಗಾಗಿ ಅಭಿಮಾನಿಗಳು ಕಾತರರಾಗಿದ್ದಾರೆ. ಜೊತೆಗೆ ಚಿತ್ರದ ಹಾಡು ಹೇಗಿರಲಿದೆ ಅನ್ನೋ ಕುತೂಹಲ ಸಹ ಇದೆ.
Published by: Anitha E
First published: September 7, 2020, 11:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories