ಸ್ಯಾಂಡಲ್ವುಡ್ನಲ್ಲಿ ಸಖತ್ ಸೌಂಡ್ ಮಾಡಿದ್ದ ಯುವರತ್ನ ಇದೀಗ ಮತ್ತೊಮ್ಮೆಎಂಟ್ರಿ ಕೊಟ್ಟಿದೆ. ಅದು ಅಂತಿಂಥ ಎಂಟ್ರಿಯಲ್ಲ..ಖಡಕ್ ಖದರ್ ತುಂಬಿರೋ ಡೈಲಾಗ್ಗಳೊಂದಿಗಿನ ಎಂಟ್ರಿ ಎಂಬುದಷ್ಟೇ ವಿಶೇಷ. ಹೌದು, ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಹುಟ್ಟುಹಬ್ಬದ ಪ್ರಯುಕ್ತ ಯುವರತ್ನ ತಂಢ ಡೈಲಾಗ್ ಟೀಸರ್ ಬಿಡುಗಡೆ ಮಾಡಿದೆ.
ಈ ಹಿಂದೆ ದಸರಾ ಹಬ್ಬದಂದು ಬಿಡುಗಡೆಯಾಗಿದ್ದ ಈ ವಿಡಿಯೋ ತುಣುಕಿನಲ್ಲಿನ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪವರ್ಫುಲ್ ಎಂಟ್ರಿಯನ್ನು ತೋರಿಸಲಾಗಿತ್ತು. ರಗ್ಬಿ ಆಟಗಾರನಾಗಿ ಕಾಣಿಸಿಕೊಂಡಿದ್ದ ಅಪ್ಪು ಎಂಟ್ರಿಯಲ್ಲೇ ಮೋಡಿ ಮಾಡಿದ್ದರು. ಇನ್ನು ಸಂತೋಷ್ ಆನಂದ್ರಾಮ್ ಅವರ ನಿರ್ದೇಶನ ಮತ್ತೊಮ್ಮೆ ಮನಮೋಹಕವಾಗಿ ಮೂಡಿಬಂದಿದೆ ಎಂಬ ಮಾತುಗಳು ಕೇಳಿ ಬಂದಿತ್ತು.
ಅಲ್ಲದೆ ಈ ದುನಿಯಾದಲ್ಲಿ ಮೂರು ಥರ ಗಂಡಸರು ಇರುತ್ತಾರೆ. ರೂಲ್ನ ಫಾಲೋ ಮಾಡೋರು. ರೂಲ್ನ ಬ್ರೇಕ್ ಮಾಡೋರು. ಮೂರನೇ ಅವರು ನನ್ ಥರ ರೂಲ್ ಮಾಡೋರು ಎಂಬ ಡೈಲಾಗ್ ಝಲಕ್ ನೀಡಲಾಗಿತ್ತು. ಇದೀಗ ಡೈಲಾಗ್ ಟೀಸರನ್ನೇ ಅಭಿಮಾನಿಗಳ ಮುಂದಿಟ್ಟಿರುವ ರಾಜಕುಮಾರ ನಿರ್ದೇಶಕ ಚಿತ್ರದ ಮೇಲಿನ ನಿರೀಕ್ಷೆಯನ್ನು ಡಬಲ್ ಮಾಡಿದ್ದಾರೆ.
ಡಾಲಿ ಧನಂಜಯ್ ಡೇರಿಂಗ್ ಡೈಲಾಗ್ನೊಂದಿಗೆ ಶುರುವಾಗುವ ಟೀಸರ್ ಅಪ್ಪು ಅಭಿಮಾನಿಗಳಂತು ರಸದೌತಣ ಎನ್ನಬಹುದು. ಗಂಡಸ್ತನ, ಚರ್ಬಿ, ಮೀಟ್ರು, ಮಾರ್ಕೆಟ್ಟು..ಇವೆಲ್ಲ ಇರೋನು ಒಬ್ಬ ಬೇಕು ಎಂಬ ಡೈಲಾಗ್ ಮುಗಿಯುತ್ತಿದ್ದಂತೆ ಅತ್ತ ಅಪ್ಪು ಎಂಟ್ರಿಯಾಗುತ್ತಾನೆ. ಡಾನು, ಸೀಟು..ಕಾಲೇಜು ಸುತ್ತ ನಡೆಯುವ ಕಥೆಯ ಝಲಕ್ನ್ನು ಟೀಸರ್ನಲ್ಲಿ ತೆರೆದಿಡಲಾಗಿದೆ.
ಹಾಗೆಯೇ ಖದರ್ ಇಲ್ದ ಕಡೆ ನಮ್ ಹುಡುಗರೇ ಇರಲ್ಲ..ಇನ್ನು ನಾನಿರ್ತೀನಾ ಎಂಬ ಪವರ್ ಫುಲ್ ಡೈಲಾಗ್ಗಂತು ಅಭಿಮಾನಿಗಳಿಗಾಗಿ ಹೇಳಿಸಿದಂತಿದೆ. ಒಟ್ಟಿನಲ್ಲಿ ಪವರ್ ಸ್ಟಾರ್ ಕಡೆಯಿಂದ ಹುಟ್ಟುಹಬ್ಬಕ್ಕೆ ಪವರ್ಫುಲ್ ಟೀಸರ್ ನಿರೀಕ್ಷಿಸಿದ್ದ ಅಭಿಮಾನಿಗಳಿಗೆ ಪವರ್ ಪ್ಯಾಕ್ಡ್ ಟೀಸರನ್ನೇ ನಿರ್ದೇಶಕ ಸಂತೋಷ್ ಆನಂದ್ರಾಮ್ ನೀಡಿದ್ದಾರೆ.
ಇನ್ನು ಟೀಸರ್ನಲ್ಲಿ ಆರ್ಸಿಬಿ ಡೈಲಾಗ್ ಕೂಡ ಇದ್ದು, ಡಾಲಿಯ ಖಡಕ್ ಧ್ವನಿ ಮೂಲಕ ಹೊರಡುವ ಆರ್ಸಿಬಿ ಮ್ಯಾಚ್ ಗೆಲ್ಬಹುದು, ಕಪ್ ಗೆಲ್ಲಕ್ಕಾಗಲ್ಲ ಎಂಬ ಸಂಭಾಷನೆಗೆ ಕಂಚಿನ ಕಂಠದಲ್ಲಿ ಅಪ್ಪು ನೀಡುವ ಉತ್ತರವನ್ನು ನೀವು ಟೀಸರ್ನಲ್ಲೇ ಆಸ್ವಾದಿಸಬೇಕು.
ಶಿಕ್ಷಣ ವ್ಯವಸ್ಥೆಯ ಕುರಿತ ಕಥೆ ಯುವರತ್ನದಲ್ಲಿರಲಿದ್ದು, ಪವರ್ ಸ್ಟಾರ್ ಪುನೀತ್ ಜೊತೆ ಖ್ಯಾತನಟ ಪ್ರಕಾಶ್ ರಾಜ್, ರಾಧಿಕಾ ಶರತ್ ಕುಮಾರ್ ಬಣ್ಣಹಚ್ಚಿದ್ದಾರೆ. ಇನ್ನು ದೂದ್ಪೇಡ ದಿಗಂತ್ , 'ಇಂತೀ ನಿನ್ನ ಪ್ರೀತಿಯ' ಚಿತ್ರ ಖ್ಯಾತಿಯ ನಟಿ ಸೋನು ಗೌಡ ಪ್ರಮುಖ ಪಾತ್ರದಲ್ಲಿ ಎಂಟ್ರಿ ಕೊಡಲಿದ್ದಾರೆ.
ಹಾಗೆಯೇ ಚಿತ್ರದಲ್ಲಿ ಕಾಲಿವುಡ್ ನಟಿ ಸಯೇಶಾ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇದರೊಂದಿಗೆ ಸೋನು ಗೌಡರ ಎಂಟ್ರಿಯು ಚಿತ್ರವು ತ್ರಿಕೋನ ಪ್ರೇಮಕಥೆಯನ್ನು ಹೇಳಲಿದೆಯೇ ಎಂಬ ಕುತೂಹಲಕಾರಿ ಪ್ರಶ್ನೆಯನ್ನು ಸಿನಿಪ್ರಿಯರಲ್ಲಿ ಹುಟ್ಟುಹಾಕಿದೆ.
'ರಾಜಕುಮಾರ' ಚಿತ್ರದ ಬಳಿಕ ಸಂತೋಷ್ ಆನಂದ್ರಾಮ್ ನಿರ್ದೇಶಿಸುತ್ತಿರುವ ಈ ಚಿತ್ರದಲ್ಲಿ ಪುನೀತ್ ಕಾಲೇಜು ಕುಮಾರನಾಗಿ ಬಣ್ಣ ಹಚ್ಚುತ್ತಿದ್ದು, 'ರಾಜರತ್ನ'ನಿಗೆ ಟಕ್ಕರ್ ಕೊಡುವ ಪಾತ್ರದಲ್ಲಿ ಡಾಲಿ ಧನಂಜಯ್ ಕಾಣಿಸಿಕೊಂಡಿದ್ದಾರೆ. ಇನ್ನು ಮತ್ತೊಂದು ಪ್ರಮುಖ ಪಾತ್ರದಲ್ಲಿ ಅರು ಗೌಡ ಬಣ್ಣಹಚ್ಚಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ