• Home
  • »
  • News
  • »
  • entertainment
  • »
  • Sayyeshaa: ಬಾಕ್ಸಿಂಗ್​ ಅಭ್ಯಾಸದಲ್ಲಿ ತೊಡಗಿರುವ ಯುವರತ್ನ ಸಿನಿಮಾದ ನಾಯಕಿ ಸಯೇಷಾ..!

Sayyeshaa: ಬಾಕ್ಸಿಂಗ್​ ಅಭ್ಯಾಸದಲ್ಲಿ ತೊಡಗಿರುವ ಯುವರತ್ನ ಸಿನಿಮಾದ ನಾಯಕಿ ಸಯೇಷಾ..!

ಗಂಡ ಆರ್ಯ ಜೊತೆ ಬಾಕ್ಸಿಂಗ್​ ಅಭ್ಯಾಸ ಮಾಡುತ್ತಿರುವ ನಟಿ ಸಯೇಷಾ

ಗಂಡ ಆರ್ಯ ಜೊತೆ ಬಾಕ್ಸಿಂಗ್​ ಅಭ್ಯಾಸ ಮಾಡುತ್ತಿರುವ ನಟಿ ಸಯೇಷಾ

Yuvarathnaa: ಲಾಕ್​ಡೌನ್​ನಿಂದಾಗಿ ಸದ್ಯ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿತ್ತು. ಇದರಿಂದಾಗಿ ಮನೆಯಲ್ಲೇ ಇದ್ದ ಸಯೇಷಾ, ಈಗ ಬಾಕ್ಸಿಂಗ್​ ಅಭ್ಯಾಸ ಮಾಡುತ್ತಿದ್ದಾರೆ. ಹೌದು, ಈ ಕುರಿತಾಗಿ ವಿಡಿಯೋ ಹಂಚಿಕೊಂಡಿರುವ ನಟಿಯ ಪತಿ ಆರ್ಯ, ನನ್ನ ಹೊಸ ಬಾಕ್ಸಿಂಗ್​ ಪಾರ್ಟ್​ನರ್ ಎಂದು ಸಯೇಷಾ ಅಭ್ಯಾಸ ಮಾಡುತ್ತಿರುವ ವಿಡಿಯೋ ಪೋಸ್ಟ್​ ಮಾಡಿದ್ದಾರೆ.

ಮುಂದೆ ಓದಿ ...
  • Share this:

ಕಾಲಿವುಡ್ ನಟಿ ಸಯೇಷಾ ಸೈಗಲ್ ಮೂಲತಃ ಮುಂಬೈನವರಾದರೂ ಹೆಸರು ಪಡೆದಿದ್ದು ಮಾತ್ರ ತೆಲುಗು ಹಾಗೂ ತಮಿಳು ಚಿತ್ರರಂಗದಲ್ಲಿ. ಸ್ಟಾರ್ ದಂಪತಿ ಸಾಯಿರಾ ಬಾನು ಹಾಗೂ ದಿಲೀಪ್‌ ಕುಮಾರ್ ಅವರ ಮೊಮ್ಮಗಳಾಗಿರುವ ಸಾಯೇಷಾ, 2015ರಲ್ಲಿ ಚಿತ್ರರಂಗಕ್ಕೆ ಕಾಲಿಟ್ಟರು. ಕಳೆದ ವರ್ಷ ಅಂದರೆ 2019ರಲ್ಲಿ ತಮಿಳು ನಟ ಆರ್ಯ ಅವರನ್ನು ವಿವಾಹವಾದ ಸಯೇಷಾ, ನಂತರದಲ್ಲಿ ಸ್ಯಾಂಡಲ್​ವುಡ್​ ಸಿನಿಮಾ ಯುವರತ್ನ ಚಿತ್ರದಲ್ಲಿ ಪುನೀತ್​ಗೆ ನಾಯಕಿಯಾಗಿ ಆಯ್ಕೆಯಾದರು. ಪುನೀತ್​ ಅವರ ಸಿನಿಮಾ ಪ್ರಕಟವಾಗುತ್ತಿದ್ದಂತೆಯೇ ಈ ಚಿತ್ರಕ್ಕೆ ನಾಯಕಿ ಯಾರಿರಬಹುದು ಎಂದು ಅಂದಾಜಿಸಲಾಗುತ್ತಿತ್ತು., ಆಗಲೇ ನಿರ್ದೇಶಕ ಸಂತೋಷ್​ ಆನಂದ್​ ರಾಮ್​ ಸಯೇಷಾ ಹೆಸರನ್ನು ಬಹಿರಂಗೊಳಿಸಿದ್ದರು. ಲಾಕ್​ಡೌನ್​ ಆರಂಭಕ್ಕೂ ಮೊದಲು ಸಯೇಷಾ ಯುವರತ್ನ ಚಿತ್ರೀಕರಣದಲ್ಲಿ ಭಾಗಿಯಾಗಿದ್ದರು. ಸಯೇಷಾ ಅವರ ಹುಟ್ಟುಹಬ್ಬದಂದು ಯುವರತ್ನ ಚಿತ್ರತಂಡದ ಕಡೆಯಿಂದ ಉಡುಗೊರೆಯಾಗಿ ಹೊಸ ಪೋಸ್ಟರ್​ ರಿಲೀಸ್​ ಮಾಡಲಾಗಿತ್ತು.


ಲಾಕ್​ಡೌನ್​ನಿಂದಾಗಿ ಸದ್ಯ ಸಿನಿಮಾ ಚಿತ್ರೀಕರಣಕ್ಕೆ ಬ್ರೇಕ್​ ಬಿದ್ದಿತ್ತು. ಇದರಿಂದಾಗಿ ಮನೆಯಲ್ಲೇ ಇದ್ದ ಸಯೇಷಾ, ಈಗ ಬಾಕ್ಸಿಂಗ್​ ಅಭ್ಯಾಸ ಮಾಡುತ್ತಿದ್ದಾರೆ. ಹೌದು, ಈ ಕುರಿತಾಗಿ ವಿಡಿಯೋ ಹಂಚಿಕೊಂಡಿರುವ ನಟಿಯ ಪತಿ ಆರ್ಯ, ನನ್ನ ಹೊಸ ಬಾಕ್ಸಿಂಗ್​ ಪಾರ್ಟ್​ನರ್ ಎಂದು ಸಯೇಷಾ ಅಭ್ಯಾಸ ಮಾಡುತ್ತಿರುವ ವಿಡಿಯೋ ಪೋಸ್ಟ್​ ಮಾಡಿದ್ದಾರೆ.ಇನ್ನು ಆರ್ಯ ಫಿಟ್ನೆಸ್​ಗಾಗಿ ಬಹ ಸಮಯದಿಂದ ತಮ್ಮ ಸ್ನೇಹಿತರೊಂದಿಗೆ ಬಾಕ್ಸಿಂಗ್​ ಪ್ರಾಕ್ಟೀಸ್​ ಮಾಡುತ್ತಿದ್ದಾರೆ. ಈಗ ಸಯೇಷಾ ಸಹ ಇದಕ್ಕೆ ಕೈ ಜೋಡಿಸಿದ್ದಾರೆ. ಆರ್ಯ ಪೋಸ್ಟ್​ ಮಾಡಿರುವ ಪ್ರಕಾರ ಫಿಟ್ನೆಸ್​ಗಾಗಿ ಈ ಅಭ್ಯಾಸ ಆರಂಭಿಸಿರುವುದು ತಿಳಿಯುತ್ತದೆ. ಆದರೆ ಸಯೇಷಾ ಈಗ ಅಭ್ಯಾಸ ಆರಂಭಿಸಿರುವುದನ್ನು ನೋಡಿದರೆ, ಯುವರತ್ನ ಸಿನಿಮಾಗೂ ಇದಕ್ಕೂ ಸಂಬಂಧ ಇರಬಹುದಾ ಅನ್ನೋ ಅನುಮಾನ ಸಹ ಕಾಡುತ್ತದೆ.

View this post on Instagram

Partner in action 🥊🥊🥊💪💪💪 #boxing #fitness @sayyeshaa @chennaimmatrainingacademy


A post shared by Arya (@aryaoffl) on

ಇನ್ನೇನು ಇದೇ ತಿಂಗಳ 20ರಿಂದ ಯುವರತ್ನ ಸಿನಿಮಾದ ಚಿತ್ರೀಕರಣ ಆರಂಭವಾಗಲಿದೆ ಎಂದು ನಿರ್ದೇಶಕ ಸಂತೋಷ್ ಆನಂದ್​ ರಾಮ್​ ಇತ್ತೀಚೆಗಷ್ಟೆ ಟ್ವೀಟ್​ ಮಾಡಿದ್ದರು. ಇನ್ನು ಪುನೀತ್​ ರಾಜ್​ಕುಮಾರ್​ ಅವರ ಪಾತ್ರವನ್ನು ಪರಿಚಯಿಸುವ ಹಾಡಿನ ಚಿತ್ರೀಕರಣ ನಡೆಯಲಿದೆ.

Published by:Anitha E
First published: