HOME » NEWS » Entertainment » YUVARATHNAA ACTOR PUNEETH RAJKUMAR FANS PROTESTING AGAINST KARNATAKA GOVERNMENT TO ALLOW YUVARATHNAA MOVIE FULL SHOW SCT

Yuvarathnaa: ಯುವರತ್ನ ಸಿನಿಮಾಗೆ ಶೇ.100 ಆಸನ ಭರ್ತಿಗೆ ಅವಕಾಶ ನೀಡಲು ಒತ್ತಾಯಿಸಿ ಪುನೀತ್ ರಾಜ್​ಕುಮಾರ್ ಅಭಿಮಾನಿಗಳಿಂದ ಪ್ರತಿಭಟನೆ

Karnataka Covid-19 Guidelines: ಸರ್ಕಾರ ಥಿಯೇಟರ್​ಗಳಲ್ಲಿ ಶೇ. 50ರಷ್ಟು ಸೀಟುಗಳ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಯುವರತ್ನ ಸಿನಿಮಾಗೆ ವಿನಾಯಿತಿ ನೀಡುವಂತೆ ಒತ್ತಾಯಿಸಿ ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ.

news18
Updated:April 3, 2021, 2:24 PM IST
Yuvarathnaa: ಯುವರತ್ನ ಸಿನಿಮಾಗೆ ಶೇ.100 ಆಸನ ಭರ್ತಿಗೆ ಅವಕಾಶ ನೀಡಲು ಒತ್ತಾಯಿಸಿ ಪುನೀತ್ ರಾಜ್​ಕುಮಾರ್ ಅಭಿಮಾನಿಗಳಿಂದ ಪ್ರತಿಭಟನೆ
ಯುವರತ್ನ ಸಿನಿಮಾದಲ್ಲಿ ಪುನೀತ್ ರಾಜ್​ಕುಮಾರ್​
  • News18
  • Last Updated: April 3, 2021, 2:24 PM IST
  • Share this:
ಬೆಂಗಳೂರು (ಏ. 3): ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇರುವುದರಿಂದ ಕೊರೋನಾ ನಿಯಂತ್ರಣಕ್ಕಾಗಿ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ ಶೇ. 50ರಷ್ಟು ಮಾತ್ರ ಸೀಟುಗಳ ಭರ್ತಿಗೆ ಅವಕಾಶ ನೀಡಿದೆ. ಇದೇ ವಾರ ಪುನೀತ್ ರಾಜ್​ಕುಮಾರ್ ಅವರ ಬಹುನಿರೀಕ್ಷಿತ ಸಿನಿಮಾ ಯುವರತ್ನ ರಿಲೀಸ್ ಆಗಿರುವುದರಿಂದ ಸರ್ಕಾರದ ಈ ನಿರ್ಧಾರದಿಂದ ಸಿನಿಮಾ ಕಲೆಕ್ಷನ್​ಗೆ ಆರಂಭದಲ್ಲೇ ಅಡ್ಡಿಯಾಗಿದೆ ಎಂದು ಚಿತ್ರತಂಡ ಅಸಮಾಧಾನ ವ್ಯಕ್ತಪಡಿಸಿದೆ. ನಟ ಪುನೀತ್ ರಾಜ್​ಕುಮಾರ್ ಕೂಡ ಸರ್ಕಾರದ ಈ ದಿಢೀರ್ ನಿರ್ಧಾರವನ್ನು ವಿರೋಧಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸರ್ಕಾರದ ವಿರುದ್ಧ ಪುನೀತ್ ರಾಜ್​ಕುಮಾರ್ ಅಭಿಮಾನಿಗಳು ಇಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಎದುರು ಪ್ರತಿಭಟನೆ ನಡೆಸಿದ್ದಾರೆ.

ಸರ್ಕಾರ ಥಿಯೇಟರ್​ಗಳಲ್ಲಿ ಶೇ. 50ರಷ್ಟು ಸೀಟುಗಳ ನಿರ್ಬಂಧ ಹೇರಿದ ಹಿನ್ನೆಲೆಯಲ್ಲಿ ಪುನೀತ್ ರಾಜಕುಮಾರ್ ಅಭಿಮಾನಿಗಳಿಂದ ಪ್ರತಿಭಟನೆ ನಡೆಸಲಾಗುತ್ತಿದೆ. ಯುವರತ್ನ ಸಿನಿಮಾಗೆ ವಿನಾಯಿತಿ ನೀಡುವಂತೆ ಒತ್ತಾಯಿಸಿ ಚಲನಚಿತ್ರ ವಾಣಿಜ್ಯ ಮಂಡಳಿ ಮುಂದೆ ಪ್ರತಿಭಟನೆ ನಡೆಸಲಾಗುತ್ತಿದೆ. ಸರ್ಕಾರದ ನಿರ್ಧಾರದಿಂದ ಇಂದು ಸಿಎಂ ಯಡಿಯೂರಪ್ಪನವರ ನಿವಾಸ ಕಾವೇರಿ ಬಳಿಯೂ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಪ್ರತಿಭಟನೆ ನಡೆಸುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ಬಿಗಿ ಪೊಲೀಸ್ ಬಂದೋಬಸ್ತ್ ವಹಿಸಲಾಗಿದೆ.

ಇನ್ನು, ಸರ್ಕಾರದ ನಿಯಮಾವಳಿ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಚಿನ್ನೇಗೌಡ, ಸರ್ಕಾರ ಏಕಾಏಕಿ ಥಿಯೇಟರ್​ಗಳ ಮೇಲೆ ನಿರ್ಬಂಧ ಮಾಡಿದ್ದು ಸರಿಯಲ್ಲ. ಯುವರತ್ನ ಸಿನಿಮಾ ರಿಲೀಸ್ ಆಗಿ ಎರಡೇ ದಿನಕ್ಕೆ ಈ ರೀತಿಯ ನಿರ್ಧಾರ ಮಾಡಿದ್ದಾರೆ. ಯುವರತ್ನ ಸಿನಿಮಾ‌ ದೊಡ್ಡ ಬಜೆಟ್ ಸಿನಿಮಾ. ಸರ್ಕಾರ ಮೊದಲೇ ನಿರ್ಬಂಧದ ಬಗ್ಗೆ ಹೇಳಬೇಕಿತ್ತು. ಮೊದಲೇ ಸೂಚನೆ ಕೊಟ್ಟಿದ್ದರೆ ಸಿನಿಮಾವನ್ನು ಈಗ ರಿಲೀಸ್ ಮಾಡುತ್ತಿರಲಿಲ್ಲ. ಸಿನಿಮಾ‌ ಮಂದಿರಗಳ ಮೇಲೆ ಯಾವುದೇ ನಿರ್ಬಂಧ ಇಲ್ಲ ಎಂದು ಸಿಎಂ ಯಡಿಯೂರಪ್ಪ ಕೆಲವೇ ದಿನಗಳ ಹಿಂದೆ ಹೇಳಿದ್ದರು. ಸಿಎಂ ಮಾತು ನಂಬಿ ಯುವರತ್ನ ಸಿನಿಮಾ‌ ಬಿಡುಗಡೆಯಾಗಿದೆ. ಈಗ ದಿಢೀರ್ ಹೇರಿಕೆ ಮಾಡಿರುವುದು ಸರಿಯಲ್ಲ ಎಂದಿದ್ದಾರೆ.

ಥಿಯೇಟರ್ ಹಾಗೂ ಮಲ್ಟಿಪ್ಲೆಕ್ಸ್ ಗಳಲ್ಲಿ ಮತ್ತೆ ಶೇಕಡಾ 50ರಷ್ಟು ನಿರ್ಬಂಧ ವಿಧಿಸಿರುವ ರಾಜ್ಯ ಸರ್ಕಾರದ ನಡೆಗೆ ನಟ ರೋರಿಂಗ್ ಸ್ಟಾರ್ ಶ್ರೀಮುರಳಿ ಕೂಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ರಾಜ್ಯ ಸರ್ಕಾರದ ನಡೆಯಿಂದ ಮನಸ್ಸಿಗೆ ತುಂಬ ನೋವಾಗಿದೆ. ನಿನ್ನೆಯಷ್ಟೆ ಯುವರತ್ನ ರಿಲೀಸ್ ಆಗಿದೆ, ಅದಕ್ಕೂ ಮುನ್ನ ರಾಬರ್ಟ್ ರಿಲೀಸ್ ಆಗಿದೆ. ಈಗ ರಿಲೀಸ್ ಆಗಿರೋ ಸಿನಿಮಾಗಳು ಏನು ಮಾಡಬೇಕು? ರಿಲೀಸ್ ಗೆ ರೆಡಿಯಿರುವ ಸಿನಿಮಾಗಳು ಏನು ಮಾಡಬೇಕು? ನೂರಾರು ಕುಟುಂಬಗಳು ಚಿತ್ರರಂಗವನ್ನೇ ನಂಬಿಕೊಂಡಿವೆ. ನಾವೆಲ್ಲಾ ಏನು ಮಾಡಬೇಕು? ನಮಗೆ ಗೊತ್ತಿರೋದು ಇದೊಂದೇ ಕೆಲಸ. ನಿರ್ಮಾಪಕರು ಈಗ ಏನು ಮಾಡಬೇಕು? ಕೊರೋನಾ ಲಸಿಕೆ ಬಂದಿದ್ದರೂ ಯಾಕೆ ಈ ನಿರ್ಧಾರ? ದಯವಿಟ್ಟು ಮೊದಲಿನಂತೆ ಶೇಕಡಾ ನೂರರಷ್ಟು ಆಸನಕ್ಕೆ ಅನುಮತಿ ಕೊಡಿ ಎಂದು ಮನವಿ ಮಾಡಿದ್ದಾರೆ.

ನಿರ್ಮಾಪಕ ಸಾರಾ ಗೋವಿಂದು ಕೂಡ ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದು, ಈಗಾಗಲೇ ದೊಡ್ಡ ಬಜೆಟ್​ನ ಸಿನಿಮಾಗಳಾದ ಪೊಗರು, ರಾಬರ್ಟ್, ಯುವರತ್ನ ಬಿಡುಗಡೆಯಾಗಿವೆ. 100% ಸಾಮರ್ಥ್ಯ ಇದ್ದ ಕಾರಣಕ್ಕೆ ಅವು ರಿಲೀಸ್ ಆಗಿವೆ. ದೊಡ್ಡ ಬಜೆಟ್ ಸಿನಿಮಾಗಳನ್ನು 50% ನಿರ್ಬಂಧದಲ್ಲಿ ರಿಲೀಸ್ ಮಾಡಲು ಆಗುವುದಿಲ್ಲ. ಸಣ್ಣ ಬಜೆಟ್ ಸಿನಿಮಾಗಳು ತೆರೆಗೆ ಬರಬಹುದು. ಯುವರತ್ನ ಸಿನಿಮಾ ರಿಲೀಸ್ ಆಗಿ ಎರಡು ದಿನ ಆಗಿದೆ. ಈಗ ಸರ್ಕಾರ ನಿರ್ಬಂಧ ಹೇರಿದೆ. ಇದು ಯುವರತ್ನ ಸಿನಿಮಾವನ್ನು ಸರ್ಕಾರವೇ ಕೊಲೆ‌ ಮಾಡಿದಂತೆ ಆಗಿದೆ. ಯುವರತ್ನ ಸಿನಿಮಾ 100% ಸೀಟು ಎಂದುಕೊಂಡೇ ಬಿಡುಗಡೆಯಾಗಿದೆ. ಹೀಗಾಗಿ ಆ ಸಿನಿಮಾಗೆ ಸರ್ಕಾರ ವಿನಾಯ್ತಿ ನೀಡಲಿ. ಮುಂದೆ 50% ನಿರ್ಬಂಧದಲ್ಲೂ ಸಿನಿಮಾ ರಿಲೀಸ್ ಮಾಡಲು ಇಚ್ಚಿಸಿದರೆ ಬೇರೆಯವರು ಮಾಡಲಿ. ಆದರೆ ಯುವರತ್ನ ಸಿನಿಮಾಗೆ 100% ಸೀಟು ಕೊಡಬೇಕು ಎಂದು ಒತ್ತಾಯಿಸಿದ್ದಾರೆ.
Published by: Sushma Chakre
First published: April 3, 2021, 2:21 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories