• Home
  • »
  • News
  • »
  • entertainment
  • »
  • Yuvarathna Movie: `ಯುವರತ್ನ'ನಿಗಾಗಿ ಬಂದ ಗ್ಲಾಮರ್ ಬೆಡಗಿ: ನಟ ಆರ್ಯನ್​ ಪ್ರೇಯಸಿ ಈಗ ಪುನೀತ್​ ನಾಯಕಿ

Yuvarathna Movie: `ಯುವರತ್ನ'ನಿಗಾಗಿ ಬಂದ ಗ್ಲಾಮರ್ ಬೆಡಗಿ: ನಟ ಆರ್ಯನ್​ ಪ್ರೇಯಸಿ ಈಗ ಪುನೀತ್​ ನಾಯಕಿ

'ಯುವರತ್ನ' ಸಿನಿಮಾದಲ್ಲಿ ಪುನೀತ್​ ಹಾಗೂ ಆಯೇಷಾ

'ಯುವರತ್ನ' ಸಿನಿಮಾದಲ್ಲಿ ಪುನೀತ್​ ಹಾಗೂ ಆಯೇಷಾ

  • News18
  • Last Updated :
  • Share this:

- ರಕ್ಷಾ ಜಾಸ್ಮೀನ್, 

ಪವರ್​ಸ್ಟಾರ್​ ಪುನೀತ್ ರಾಜ್‍ಕುಮಾರ್-ಸಂತೋಷ್ ಆನಂದ್‍ರಾಮ್ ಕಾಂಬಿನೇಷನ್‍ನಲ್ಲಿ 'ಯುವರತ್ನ' ಅನೌನ್ಸ್ ಆದಾಗಿನಿಂದ್ಲೇ ಈ ಸಿನಿಮಾ ನಾಯಕಿ ಯಾರಾಗಬಹುದು ಅನ್ನೋ ಚರ್ಚೆ ಶುರುವಾಗಿತ್ತು. ತಮನ್ನಾ, ಕೀರ್ತಿ ಸುರೇಶ್ ಹೆಸರು ಈ ಪಟ್ಟಿಯಲ್ಲಿ ಓಡಾಡುತ್ತಿತ್ತು. ಸದ್ಯ ಕೊನೆಗೂ 'ಯುವರತ್ನ'ನಿಗೆ ನಾಯಕಿ ಸಿಕ್ಕಿದ್ದಾಳೆ.

ಇದನ್ನೂ ಓದಿ: KGF: 20 ವರ್ಷದ ನಂತರ ಕನ್ನಡಕ್ಕೆ ಟಿಪ್​ ಟಿಪ್​ ಹುಡುಗಿ : 'ಕೆ.ಜಿ.ಎಫ್​' ಚಾಪ್ಟರ್​ 2ನಲ್ಲಿ ರವೀನಾ ಟಂಡನ್​..!

ಪುನೀತ್ ಅಭಿನಯನದ 'ನಟಸಾರ್ವಭೌಮ' ಸಿನಿಮಾದ ನಂತರದಲ್ಲಿ ಎಲ್ಲರೂ ಕಾತರರಾಗಿ ಕಾಯುತ್ತಿರೋ ಸಿನಿಮಾ 'ಯುವರತ್ನ'. ಈ ಚಿತ್ರ ಸೆಟ್ಟೇರೋಕು ಮುಂಚೆಯೇ ಸಾಕಷ್ಟು ಹೈಪ್ ಕ್ರೀಯೇಟ್ ಮಾಡಿರುವ 'ಯುವರತ್ನ ಸಿನಿಮಾ, ಟೈಟಲ್ ಮೂಲಕವೇ ಅಪ್ಪು ಅಭಿಮಾನಿಗಳನ್ನ ಆಕರ್ಷಿಸಿತ್ತು. ಸದ್ಯ 'ಯುವರತ್ನ' ಅಡ್ಡಾದಿಂದ ಮತ್ತೊಂದು ಆಸಕ್ತಿಕರ ಸುದ್ದಿ ಕೂಡ ಹೊರ ಬಂದಿದ್ದು, ಅಪ್ಪುಗೆ ಜೋಡಿಯಾಗ್ತಿರೋ ನಾಯಕಿ ಯಾರು ಅನ್ನೋದರ ಗುಟ್ಟು ರಟ್ಟು ಮಾಡಿದೆ.

'ಯುವರತ್ನ' ಸಿನಿಮಾಗೆ ನಾಯಕಿ ಆಯ್ಕೆಯಾಗಿರುವ ಕುರಿತು ಹೊಂಬಾಳೆ ಫಿಲ್ಮ್ಸ್​ ತನ್ನ ಟ್ವಿಟರ್​ ಖಾತೆಯಲ್ಲಿ ಟ್ವೀಟ್​ ಮಾಡಿದೆ.

Team #Yuvarathnaa welcomes @sayyeshaa on board🙌 she I’ll be playing the female lead opposite Namma power star 💪 Her shoot starts from 27th ...@hombalefilms @PuneethRajkumar @VKiragandur @Karthik1423 pic.twitter.com/ArfwL3RKe3



ಅಂದಹಾಗೇ 'ಯುವರತ್ನ' ಸಿನಿಮಾಗೆ ಪರಭಾಷ ನಟಿ ಎಂಟ್ರಿಯಾಗಿದ್ದು, ಅಪ್ಪು ಹೈಟು, ವೈಟು, ಕೆಮಿಸ್ಟ್ರಿಗೆ ಮ್ಯಾಚ್ ಆಗೋ ಮುಂಬೈ ಬೆಡಗಿಯನ್ನ ಆಯ್ಕೆ ಮಾಡಿಕೊಳ್ಳಲಾಗಿದೆ. ಅದು ಮತ್ಯಾರು ಅಲ್ಲ ಈಗಾಗಲೇ ಹಿಂದಿ, ತಮಿಳು, ತೆಲುಗು ಸೇರಿದಂತೆ ಹಲವು ಸಿನಿಮಾಗಳಲ್ಲಿ ತನ್ನದೇ ಆದ ಗುರುತು ಮಾಡಿಕೊಂಡಿರುವ ನಟಿ ಆಯೇಷಾ ಸೈಗಲ್.

ಈ ಕುರಿತು ಆಯೇಷಾ ಕೂಡ ಖುಷಿ ವ್ಯಕ್ತಪಡಿಸಿದ್ದು, 'ಕನ್ನಡದಲ್ಲಿ ಡೆಬ್ಯು ಸಿನಿಮಾದ ಬಗ್ಗೆ ಸಾಕಷ್ಟು ಉತ್ಸುಕಳಾಗಿದ್ದೇನೆ.. ಪುನೀತ್  ಜೊತೆ ತೆರೆ ಹಂಚಿಕೊಳ್ಳುತ್ತಿರುವುದಕ್ಕೆ ತುಂಬ ಖುಷಿಯಾಗಿದೆ' ಎಂದು ಟ್ವೀಟ್ ಮಾಡಿಡಿದ್ದಾರೆ.

ನಟಿ ಆಯೇಷಾ ಸೈಗಲ್​



ಒಟ್ಟಾರೆ ಸಂತೋಷ್ ಆನಂದ್ ರಾಮ್ ನಿರ್ದೇಶನದಲ್ಲಿ 'ಯುವರತ್ನ' ಸಿನಿಮಾ ಬರುತ್ತಿದ್ದು, ಅಭಿಮಾನಿಗಳು ಸಿನಿಮಾವನ್ನ ಆದಷ್ಟು ಬೇಗ ಕಣ್ತುಂಬಿಕೊಳ್ಳಲು ಕಾತರರಾಗಿದ್ದಾರೆ.

PHOTOS: ಜಿಮ್​ಗೆ ಹೋಗುವ ಮುನ್ನ ಕ್ಯಾಮೆರಾಗೆ ಪೋಸ್​ ಕೊಟ್ಟ ನಟಿ ಸಾರಾ ಅಲಿಖಾನ್​ರ ಕೆಲ ಚಿತ್ರಗಳು..!

First published: