ವೈರಲ್​ ಆಯಿತು ರಾಜ್​ ಕುಟುಂಬದ ಕುಡಿ ಯುವರಾಜ್​ಕುಮಾರ್​ ವಿಡಿಯೋ!

news18
Updated:July 2, 2018, 1:14 PM IST
ವೈರಲ್​ ಆಯಿತು ರಾಜ್​ ಕುಟುಂಬದ ಕುಡಿ ಯುವರಾಜ್​ಕುಮಾರ್​ ವಿಡಿಯೋ!
news18
Updated: July 2, 2018, 1:14 PM IST
ನ್ಯೂಸ್​ 18 ಕನ್ನಡ 

ಇತ್ತೀಚೆಗೆ ಎಲ್ಲಿ ನೋಡಿದರೂ  ಫಿಟ್‍ನೆಸ್ ವಿಡಿಯೋಗಳದ್ದೆ ಕಾರುಬಾರು. ಸ್ಟಾರ್ ಸೆಲೆಬ್ರಿಟಿಗಳಿಂದ ಹಿಡಿದು ಎಲ್ಲರು ತಮ್ಮ ತಮ್ಮ ಪಿಟ್​ನೆಸ್​ ವಿಡಿಯೋಗಳನ್ನ ಮಾಡಿ ಸಾಮಾಜಿಕ ಜಾಲತಣಗಳಲ್ಲಿ ಶೇರ್ ಮಾಡುತ್ತಿದ್ದಾರೆ. ಹೀಗಿರುವಾಗಲೇ ರಾಜ್ ಕುಟುಂಬದ ಕುಡಿಕೂಡ ಇದೀಗ ಬೊಂಬಾಟ್ ಫಿಟ್‍ನೆಸ್ ವಿಡಿಯೋ ಒಂದನ್ನ ಹರಿ ಬಿಟ್ಟಿದ್ದಾರೆ.ಡಾ ರಾಜ್ ಕುಟುಂಬದ ಕುಡಿ ಯುವರಾಜ್​ಕುಮಾರ್ ವಿಡಿಯೋ ಒಂದನ್ನ ಶೇರ್ ಮಾಡಿದ್ದಾರೆ. ಈ ವಿಡಿಯೋವನ್ನ ನೋಡುತ್ತಿದ್ದರೆ ಯುವ ರಾಜ್‍ಕುಮಾರ್ ಹೀಗೂ ಮಾಡುತ್ತಾರಾ ಎಂದು ಅನ್ನಿಸಿ ಬಿಡುತ್ತದೆ.

ಎದುರಿನಿಂದ ಬರುವ ಫುಟ್ಬಾಲ್​ ಅನ್ನುಒದ್ದು, ಹಿಮ್ಮುಖವಾಗಿ ಜಂಪ್ ಮಾಡೋ ಯುವರಾಜ್ ಅವರ ಈ ವಿಡಿಯೋ, ಇದೀಗ ವೈರಲ್ ಆಗುತ್ತಿದೆ. ಹಾಗೇ ಸಾಕಷ್ಟು ಮೆಚ್ಚುಗೆ ಕೂಡ ವ್ಯಕ್ತವಾಗುತ್ತಿದೆ.

ಯುವರಾಜ್​ಕುಮಾರ್​ ಚಿತ್ರರಂಗಕ್ಕೆ ಬರುತ್ತಿದ್ದಾರೆ ಎಂಬ ಮಾತುಗಳ ನಡುವೆ, ಇದೀಗ ಈ ವಿಡಿಯೋ ಕೂಡ ಹೊರಬಂದಿರೋದು ಮತ್ತಷ್ಟು ಕುತೂಹಲಕ್ಕೆ ಕಾರಣವಾಗಿದೆ.

 
Loading...

 
First published:July 2, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...