ಅದ್ದೂರಿಯಾಗಿ ನೆರವೇರಿದ ಯುವ ರಾಜ್​ಕುಮಾರ್​ ವಿವಾಹ; ಆರತಕ್ಷತೆಗೆ ಸ್ಯಾಂಡಲ್​ವುಡ್​, ಕಾಲಿವುಡ್​, ಟಾಲಿವುಡ್ ತಾರೆಯರು!

ಪುನೀತ್ ರಾಜ್​ಕುಮಾರ್,‌ಶಿವರಾಜ್ ಕುಮಾರ್ ಸೇರಿ ರಾಜ್ ಕುಟುಂಬದವರು ಮತ್ತು ಚಿತ್ರರಂಗದ ‌ಆಪ್ತರು ಪಾಲ್ಗೊಂಡಿದ್ದಾರೆ. ವಕ್ಕಲಿಗ ಸಂಪ್ರದಾಯದಂತೆ ಮದುವೆ ಶಾಸ್ತ್ರ ನೆರವೇರಿದೆ.

Rajesh Duggumane | news18
Updated:May 26, 2019, 2:15 PM IST
ಅದ್ದೂರಿಯಾಗಿ ನೆರವೇರಿದ ಯುವ ರಾಜ್​ಕುಮಾರ್​ ವಿವಾಹ; ಆರತಕ್ಷತೆಗೆ ಸ್ಯಾಂಡಲ್​ವುಡ್​, ಕಾಲಿವುಡ್​, ಟಾಲಿವುಡ್ ತಾರೆಯರು!
ನವ ದಂಪತಿ
Rajesh Duggumane | news18
Updated: May 26, 2019, 2:15 PM IST
ಬೆಂಗಳೂರು (ಮೇ 26): ರಾಜ್​ಕುಮಾರ್​ ಕುಟುಂಬದಲ್ಲಿ ಇಂದು ಮದುವೆ ಸಂಭ್ರಮ. ಯುವ ರಾಜ್​ಕುಮಾರ್ ಹಾಗೂ ಶ್ರೀದೇವಿ ಭೈರಪ್ಪ ಮದುವೆ ಅದ್ಧೂರಿಯಾಗಿ ನೆರವೇರಿದೆ. ಬೆಳಗ್ಗೆ 10:00 ಗಂಟೆಯ ಶುಭ ಮುಹೂರ್ತ ಕಟಕ ಲಗ್ನದಲ್ಲಿ ಶ್ರೀದೇವಿ ಅವರನ್ನು ಯುವ ರಾಜ್​ಕುಮಾರ್​ ವರಿಸಿದ್ದಾರೆ.

ಪುನೀತ್ ರಾಜ್​ಕುಮಾರ್,‌ಶಿವರಾಜ್ ಕುಮಾರ್ ಸೇರಿ ರಾಜ್ ಕುಟುಂಬದವರು ಮತ್ತು ಚಿತ್ರರಂಗದ ‌ಆಪ್ತರು ಪಾಲ್ಗೊಂಡಿದ್ದಾರೆ. ವಕ್ಕಲಿಗ ಸಂಪ್ರದಾಯದಂತೆ ಮದುವೆ ಶಾಸ್ತ್ರ ನೆರವೇರಿದೆ. ಇಂದು ಸಂಜೆ 7 ಗಂಟೆಗೆ ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮ ನಡೆಯಲಿದೆ.

ಮೊದಲಿನಿಂದಲೂ ರಾಜ್​ಕುಮಾರ್​ ಕುಟುಂಬ ಟಾಲಿವುಡ್​, ಕಾಲಿವುಡ್​ ಕಲಾವಿದರ ಜೊತೆ ಗೆಳೆತನ ಹೊಂದಿದೆ. ಇತ್ತೀಚೆಗಷ್ಟೇ ಚಿರಂಜೀವಿ ಕುಟುಂಬಕ್ಕೆ ಪುನೀತ್​ ರಾಜ್​ಕುಮಾರ್​, ಯುವ, ವಿನಯ್​ ಹೋಗು ಆಮಂತ್ರಣ ನೀಡಿ ಬಂದಿದ್ದ ಫೋಟೋ ವೈರಲ್​ ಆಗಿತ್ತು. ಹಾಗಾಗಿ, ಇಂದು ಮದುವೆಗೆ ಸ್ಯಾಂಡಲ್​ವುಡ್​, ಟಾಲಿವುಡ್, ಕಾಲಿವುಡ್ ತಾರೆಯರು ಆಗಮಿಸುವ ಸಾಧ್ಯತೆ ಇದೆ.

ಇದನ್ನೂ ಓದಿ: 'ಮೆಗಾಸ್ಟಾರ್' ಚೀರಂಜೀವಿ ಜೊತೆ 'ಪವರ್​ಸ್ಟಾರ್' ಪುನೀತ್ ರಾಜ್​ಕುಮಾರ್​; ಏನಿದರ ಗುಟ್ಟು?

First published:May 26, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...