Yash Raj Films: OTTಗೆ ಕಾಲಿಟ್ಟ YRF, ಭೋಪಾಲ್ ದುರಂತದ ಬಗ್ಗೆ ವೆಬ್ ಸೀರೀಸ್

Bhopal Tragedy :ಭೋಪಾಲ್ ಅನಿಲ ದುರಂತ ಸಂಭವಿಸಿದಾಗ ಸಾವಿರಾರು ಜನರ ಪ್ರಾಣ ಉಳಿಸಲು ಶ್ರಮಿಸಿದ ಭೋಪಾಲ್ ರೈಲು ನಿಲ್ದಾಣದ ಕಾರ್ಮಿಕರಿಗೆ ಗೌರವ ಸಲ್ಲಿಸಲು 'ದಿ ರೈಲ್ವೇ ಮೆನ್' ವೆಬ್ ಸೀರೀಸ್ ಅನ್ನು ಯಶ್ ರಾಜ್ ಫಿಲಂಸ್ ಬ್ಯಾನರ್ ತರುತ್ತಿದ್ದು, ಮುಂದಿನ ವರ್ಷ ಅಂದ್ರೆ 2022ರ ಡಿಸೆಂಬರ್ 2ರಿಂದ ಪ್ರಸಾರವಾಗಲಿದ್ದು, ನಿನ್ನೆಯಿಂದ ಚಿತ್ರೀಕರಣ ಆರಂಭವಾಗಿದೆ..

'ದಿ ರೈಲ್ವೇ ಮೆನ್'

'ದಿ ರೈಲ್ವೇ ಮೆನ್'

 • Share this:
  ವಿಶ್ವದ ದೊಡ್ಡ ಅನಿಲ ದುರಂತಗಳಲ್ಲಿ(Gas Tragedy) ಒಂದು ಎಂದು ಕುಖ್ಯಾತಿ ಪಡೆದಿರುವ ಭೋಪಾಲ್ ಅನಿಲ ದುರಂತ (Bhopal Gas Tragedy)ಸಂಭವಿಸಿ ಇಂದಿಗೆ ಬರೋಬ್ಬರಿ 37 ವರ್ಷ.. ಹೀಗಾಗಿ ಭಾರತದಾದ್ಯಂತ(India) ಭೂಪಾಲ ಅನಿಲ ದುರಂತದಲ್ಲಿ ಮೃತಪಟ್ಟವರಿಗೆ ಸಂತಾಪ ಸೂಚಿಸಲಾಗುತ್ತಿದೆ.. ಜೊತೆಗೆ ಸಾವಿರಾರು ಜನರನ್ನು ಬಂದೇ ರಾತ್ರಿಯಲ್ಲಿ ಬಲಿಪಡೆದ ಭೂಪಾಲ್ ಅನಿಲ ದುರಂತದ ಕುರಿತು, ಹಾಗೂ ಅನಿಲ ದುರಂತದಲ್ಲಿ ಮೃತಪಟ್ಟವರಿಗೆ ಗೌರವ ಸಲ್ಲಿಸಲು ಯಶ್ ರಾಜ್ ಫಿಲ್ಮ್ಸ್ (YRF) ತನ್ನ ಡಿಜಿಟಲ್ ಬ್ಯಾನರ್ YRF ಅಡಿಯಲ್ಲಿ ತನ್ನ ಮೊದಲ ದೊಡ್ಡ OTT ಯೋಜನೆ' ದಿ ರೈಲ್ವೇ ಮೆನ್'(The Railway Men) ಘೋಷಣೆ ಮಾಡಿದೆ..

  ಮುಂದಿನ ವರ್ಷ 'ದಿ ರೈಲ್ವೇ ಮೆನ್ 'ವೆಬ್ ಸಿರೀಸ್ ಪ್ರಸಾರ

  ಇನ್ನು ಭೋಪಾಲ್ ಅನಿಲ ದುರಂತ ಸಂಭವಿಸಿದಾಗ ಸಾವಿರಾರು ಜನರ ಪ್ರಾಣ ಉಳಿಸಲು ಶ್ರಮಿಸಿದ ಭೋಪಾಲ್ ರೈಲು ನಿಲ್ದಾಣದ ಕಾರ್ಮಿಕರಿಗೆ ಗೌರವ ಸಲ್ಲಿಸಲು 'ದಿ ರೈಲ್ವೇ ಮೆನ್' ವೆಬ್ ಸೀರೀಸ್ ಅನ್ನು ಯಶ್ ರಾಜ್ ಫಿಲಂಸ್ ಬ್ಯಾನರ್ ತರುತ್ತಿದ್ದು, ಮುಂದಿನ ವರ್ಷ ಅಂದ್ರೆ 2022ರ ಡಿಸೆಂಬರ್ 2ರಿಂದ ಪ್ರಸಾರವಾಗಲಿದ್ದು, ನಿನ್ನೆಯಿಂದ ಚಿತ್ರೀಕರಣ ಆರಂಭವಾಗಿದೆ..

  ಇದನ್ನೂ ಓದಿ :ಮೈನವಿರೇಳಿಸುವ '83' ಟ್ರೇಲರ್, ಕಪಿಲ್ ದೇವ್ ಪಾತ್ರದಲ್ಲಿ ರಣವೀರ್; ಕನ್ನಡದಲ್ಲಿ ಕಿಚ್ಚನ ವಾಯ್ಸ್

  ಇನ್ನು ದಿ ರೈಲ್ವೇ ಮೆನ್ ವೆಬ್ ಸೀರೀಸ್ ನಲ್ಲಿ ಆರ್ ಮಾಧವನ್, ಕೇ ಕೇ ಮೆನನ್, ದಿವ್ಯೇಂದು ಮತ್ತು ಬಾಬಿಲ್ ಖಾನ್ ನಾಯಕರಾಗಿ ನಟಿಸಿದ್ರೆ,ರೈಲ್ವೇ ಮೆನ್ ನಟ ಶಿವ್ ರಾವೈಲ್ YRF ಅಧ್ಯಕ್ಷ ಮತ್ತು MD ಆದಿತ್ಯ ಚೋಪ್ರಾ ಮಾರ್ಗದರ್ಶನದಲ್ಲಿ ನಿರ್ದೇಶನ ಮಾಡಿದ್ದಾರ  ಏನಿದು ಭೋಪಾಲ್ ಅನಿಲ ದುರಂತ...?

  1984ರ ಡಿಸೆಂಬರ್ 2 ಹಾಗೂ 3ರ ಮಧ್ಯರಾತ್ರಿ ಮಧ್ಯಪ್ರದೇಶದ ರಾಜಧಾನಿ ಭೋಪಾಲ್ ನಗರದಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿಯ ಕಾರ್ಖಾನೆಯಲ್ಲಿ,
  UICIL ಘಟಕದಲ್ಲಿದ್ದಾರೆ ಟ್ಯಾಂಕರ್ ನಂಬರ್ 651 ಸ್ವಚ್ಛಗೊಳಿಸುತ್ತಿದ್ದ ವೇಳೆ ಬರೋಬ್ಬರಿ 42 ಟನ್ ( ಮಿಥೈಲ್ ಐಸೋಸೈನೇಟ್) ಸೋರಿಕೆ ಆಯಿತು..
  ಪರಿಣಾಮ ಭೋಪಾಲ್ ಸುತ್ತಮುತ್ತಲಿನ ಪ್ರದೇಶಗಳಿಗೆ ವಿಷಾನಿಲ ಆವರಿಸಿ ಬರೋಬ್ಬರಿ 5 ಸಾವಿರಕ್ಕೂ ಅಧಿಕ ಜನರು ಮೃತಪಟ್ಟರು.. ಬಳಿಕ ಅಸ್ವಸ್ಥಗೊಂಡ 20 ಸಾವಿರಕ್ಕೂ ಅಧಿಕ ಜನರು ವಿಷಾನಿಲ ದುರಂತದಲ್ಲಿ ಮೃತಪಟ್ಟರೆ, ಬದುಕುಳಿದವರು ಅನಾರೋಗ್ಯ ಪೀಡಿತರಾಗಿ ಅಂಗವಿಕಲರಾಗಿ ಬದುಕು ನಡೆಸುವ ಸ್ಥಿತಿ ಇದೆ..

  ಇದನ್ನೂ ಓದಿ :ಶಮಿತಾ ಶೆಟ್ಟಿಗೆ ಇರೋದು ಇದೇ ಖಾಯಿಲೆ ಅಂತೆ, ಅದಕ್ಕೆ ಅವ್ರು ಅನ್ನ ತಿನ್ನೋದೂ ಕಷ್ಟ!

  ಆರೋಪಿಗಳಿಗೆ ಇನ್ನೂ ಸಿಗದ ಶಿಕ್ಷೆ

  ಇನ್ನು ಭೋಪಾಲ್ ಅನಿಲ ದುರಂತ ಈ ವಿಷಾನಿಲ ದುರಂತಕ್ಕೆ ಕಾರಣವಾದ ಯೂನಿಯನ್ ಕಾರ್ಬೈಡ್ ಕಂಪನಿಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿದ್ದ ವಾರೆನ್ ಆಂಡರ್ಸನ್ ಕದ್ದುಮುಚ್ಚಿ ಅಮೆರಿಕಾಗೆ ಪರಾರಿಯಾದರೆ, 2010, ಜೂನ್ 7ರಂದು ಭೋಪಾಲ್ ಕೋರ್ಟ್ ಯೂನಿಯನ್ ಕಾರ್ಬೈಡ್ ಇಂಡಿಯಾ ಲಿಮಿಟೆಡ್ ನ ಏಳು ಮಂದಿ ಎಕ್ಸಿಕ್ಯೂಟಿವ್ ಗಳು ಅಪರಾಧಿಗಳೆಂದು ತೀರ್ಪು ನೀಡಿ ಎರಡು ವರ್ಷ ಜೈಲು ಶಿಕ್ಷೆ ತೀರ್ಪು ನೀಡಿತ್ತು.  ಭಾರತದಲ್ಲಿ ಯೂನಿಯನ್ ಕಾರ್ಬೈಡ್ ಕಂಪನಿ ಚೇರ್ಮನ್ ಆಗಿದ್ದ ಕೇಶವ ಮಹೇಂದ್ರ ಹಾಗೂ ಇತರ ಆರೋಪಿಗಳಿಗೆ ಕೇವಲ 2 ವರ್ಷ ಶಿಕ್ಷೆ ನೀಡಿ ಕಣ್ಣೊರೆಸುವ ನಾಟಕವನ್ನು ಸರ್ಕಾರ ಮಾಡಿದೆ..

  ಇನ್ನು ಅನಿಲ ದುರಂತದ ಸಂತ್ರಸ್ತರ ಪರವಾಗಿ ಇಂದಿರಾ ಜೈಸಿಂಗ್, ಅನಿಲ್ ಸದ್ಗೋಪಾಲ್ ಸೇರಿದಂತೆ ಸಾವಿರಾರು ಜನ ಸುಧೀರ್ಘ ಹೋರಾಟ ನಡೆಸಿದ್ದಾರೆ. ಇಂದು ಸಂತ್ರಸ್ತರಿಗೆ ಅಷ್ಟೋ ಇಷ್ಟೊ ಪರಿಹಾರ ಸಿಗಲು ದೇಶದ ಲಕ್ಷಾಂತರ ಜನ ಬೀದಿಗಿಳಿದಿ ಹೋರಾಟ ಮಾಡಬೇಕಾದ ದುಸ್ಥಿತಿ ನಮ್ಮ ದೇಶದ್ದು. ಆದರು ಇಂದಿಗೂ ಎಲ್ಲರಿಗೂ ನ್ಯಾಯ ಮತ್ತು ಪರಿಹಾರ ಸಿಕ್ಕಿಲ್ಲ. 36 ವರ್ಷ ಕಳೆದರೂ ಇಂದಿಗೂ ಹಲವು ಸಂಘಟನೆಗಳು ದನಿಯೆತ್ತುತ್ತಲೇ ಇವೆ.
  Published by:ranjumbkgowda1 ranjumbkgowda1
  First published: