Saaho: ಅಮೆಜಾನ್​ ಪ್ರೈಂನಲ್ಲಿ ಸಾಹೋ ರಿಲೀಸ್​ಗೆ ದಿನಾಂಕ ಫಿಕ್ಸ್​..!

Prabhas: ಯಂಗ್​ ರೆಬೆಲ್​ ಸ್ಟಾರ್​ ಪ್ರಭಾಸ್​ ಅಭಿನಯದ ಸಾಹೋ ಸದ್ಯ ಚಿತ್ರಮಂರಗಳಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ. ಅದರ ಜೊತೆಗೆ ಈ ಚಿತ್ರ ಈಗ ನಿಮ್ಮ ಬೆರಳ ತುದಿಗೆ ಆ್ಯಪ್​ನಲ್ಲಿ ಕಾಣಿಸಿಕೊಳ್ಳೋಕೆ ದಿನಾಂಕ ನಿಗದಿಯಾಗಿದೆ.

Anitha E | news18-kannada
Updated:October 16, 2019, 12:51 PM IST
Saaho: ಅಮೆಜಾನ್​ ಪ್ರೈಂನಲ್ಲಿ ಸಾಹೋ ರಿಲೀಸ್​ಗೆ ದಿನಾಂಕ ಫಿಕ್ಸ್​..!
ಸಾಹೋ ಚಿತ್ರದ ಪೋಸ್ಟರ್​
Anitha E | news18-kannada
Updated: October 16, 2019, 12:51 PM IST
ಡಿಜಿಟಲ್​ ಯುಗ ಆರಂಭವಾದಾಗಿನಿಂದ ಸಿನಿಮಾ ನಿರ್ಮಾಪಕರಿಗೆ ಇದು ವರವಾಗಿ ಬದಲಾಗಿದೆ ಎಂದರೆ ತಪ್ಪಾಗದು. ಸಿನಿಮಾಗಳು ಚಿತ್ರಮಂದಿರಗಳಿಗೆ ಲಗ್ಗೆ ಇಡುವ ಮುನ್ನವೇ ಅವುಗಳ ಡಿಜಿಟಲ್​ ಹಕ್ಕುಗಳು ಮಾರಾಟವಾಗುತ್ತವೆ. ಜತೆಗೆ ಚಿತ್ರಗಳು ಚಿತ್ರಮಂದಿರಗಳಿಂದ ಮರೆಯಾಗುವ ಮುನ್ನವೇ ಆ್ಯಪ್​ಗಳಲ್ಲಿ ಅವುಗಳನ್ನು ನೋಡುವ ಅವಕಾಶ ಸಿನಿ ಪ್ರಿಯರದ್ದಾಗುತ್ತದೆ. ಈಗ ಪ್ರಭಾಸ್​ ಅಭಿನಯದ 'ಸಾಹೋ' ಸಿನಿಮಾ ಸಹ ಅಮೆಜಾನ್​ ಪ್ರೈಂಗೆ ಲಗ್ಗೆ ಇಡಲಿದೆ.

ಹೌದು, ಯಂಗ್​ ರೆಬೆಲ್​ ಸ್ಟಾರ್​ ಪ್ರಭಾಸ್​ ಅಭಿನಯದ 'ಸಾಹೋ' ಸದ್ಯ ಚಿತ್ರಮಂರಗಳಲ್ಲಿ ಅಲ್ಲಲ್ಲಿ ಕಾಣಸಿಗುತ್ತದೆ. ಅದರ ಜೊತೆಗೆ ಈ ಚಿತ್ರ ಈಗ ನಿಮ್ಮ ಬೆರಳ ತುದಿಗೆ ಆ್ಯಪ್​ನಲ್ಲಿ ಕಾಣಿಸಿಕೊಳ್ಳೋಕೆ ದಿನಾಂಕ ನಿಗದಿಯಾಗಿದೆ.



ಈ ಚಿತ್ರದ ಡಿಜಿಟಲ್​ ಹಕ್ಕನ್ನು ಖರೀದಿಸಿದ್ದ ಅಮೆಜಾನ್​ ಪ್ರೈಂನಲ್ಲಿ 'ಸಾಹೋ' ಆದಷ್ಟು ಬೇಗ ರಿಲೀಸ್​ ಆಗಲಿದೆ. ಸಿನಿಮಾ ಬಿಡುಗಡೆಗೆ ಮುನ್ನವೇ ಚಿತ್ರತಂಡ ಅಮೆಜಾನ್​ ಪ್ರೈಂ ಜೊತೆ ಒಂದು ಒಪ್ಪಂದ ಮಾಡಿಕೊಂಡಿದೆಯಂತೆ. ಅದರ ಪ್ರಕಾರ ಸಿನಿಮಾ ಬಿಡುಗಡೆಯಾಗಿ 60 ದಿನಗಳವರೆಗೆ ಆ್ಯಪ್​ನಲ್ಲಿ ಬಿಡುಗಡೆಯಾಗುವಂತಿಲ್ಲ. ಒಂದುವೇಳೆ ಈ ಸಿನಿಮಾವನ್ನು 50 ದಿನಕ್ಕೇ ರಿಲೀಸ್​ ಮಾಡುವುದಾದರೆ ಇದೇ 18ಕ್ಕೆ ಅಮೆಜಾನ್​ನಲ್ಲಿ 'ಸಾಹೋ' ನೋಡಬಹುದಾಗಿದೆ. ಇಲ್ಲವಾದಲ್ಲಿ 60 ದಿನಗಳು ಎಂದು ಒಪ್ಪಂದ ಮಾಡಿಕೊಂಡಿದ್ದೇ ಆದಲ್ಲಿ, ಇದೇ ತಿಂಗಳ 28ಕ್ಕೆ ಚಿತ್ರ ರಿಲೀಸ್​ ಆಗಲಿದೆ.

ನಾನಿ ಅಭಿನಯದ 'ಗ್ಯಾಂಗ್​ ಲೀಡರ್​' ಸಿನಿಮಾ ರಿಲೀಸ್​ ಆಗಿ 28 ದಿನಗಳಿಗೆ ಅಮೆಜಾನ್​ ಪ್ರೈಂನಲ್ಲಿ ಬಿಡುಗಡೆಯಾಯಿತು. ಇದರಿಂದಾಗಿ ಸಿನಿಮಾ ನಿರ್ಮಾಪಕರ ಜೊತೆಗೆ ವಿತರಕರು ನಷ್ಟವನ್ನು ಎದುರಿಸುತ್ತಿದ್ದಾರೆ.

ಒಟ್ಟಾರೆ ತೆಲುಗಿನಲ್ಲಿ 15 ಕೋಟಿ ನಷ್ಟಹೊಂದಿರುವ ಈ ಸಿನಿಮಾ ಹಿಂದಿಯಲ್ಲಿ ಮಾತ್ರ 50 ಕೋಟಿ ಲಾಭ ತಂದುಕೊಟ್ಟಿದೆ. ಸುಜಿತ್​ ನಿರ್ದೇಶನದ ಈ ಸಿನಿಮಾದಲ್ಲಿ ಪ್ರಭಾಸ್​ಗೆ ಜೊತೆಯಾಗಿ ಶ್ರದ್ಧಾ ಕಪೂರ್​ ಅಭಿನಯಿಸಿದ್ದಾರೆ.

Pranitha: ಹಾಟ್​ ಯೋಗಾದಿಂದ ಅಭಿಮಾನಿಗಳ ಮನಸ್ಸು ಕದ್ದ ಕನ್ನಡತಿ ಪ್ರಣೀತಾ
Loading...

First published:October 16, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...