Prabhas: ಯುಗಾದಿ ಹಬ್ಬಕ್ಕೆ ಡಾರ್ಲಿಂಗ್ ಅಭಿಮಾನಿಗಳಿಗೆ ಡಬಲ್​ ಸರ್ಪ್ರೈಸ್​: ಹೊಸ ಸಿನಿಮಾದ ಫಸ್ಟ್​ಲುಕ್​ ಜೊತೆ ಮತ್ತೊಂದು ಸಿಹಿಸುದ್ದಿ ಕೊಡಲಿರುವ ಪ್ರಭಾಸ್​..!

Prabhas: ಪಿರಿಯಾಡಿಕ್​ ಲವ್​ ಸ್ಟೋರಿಯಾಗಿರುವ ಈ ಹೊಸ ಸಿನಿಮಾದ ಚಿತ್ರೀಕರಣ ಯುರೋಪ್​ನಲ್ಲಿ ಈಗಾಗಲೇ ಆರಂಭವಾಗಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಡಾರ್ಲಿಂಗ್​ ಪ್ರಭಾಸ್​ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ. 

ಪ್ರಭಾಸ್ ಹಾಗೂ ಪೂಜಾ ಹೆಗಡೆ

ಪ್ರಭಾಸ್ ಹಾಗೂ ಪೂಜಾ ಹೆಗಡೆ

  • Share this:
'ಸಾಹೋ' ಸಿನಿಮಾದ ನಂತರ ಪ್ರಭಾಸ್​ ನಟಿಸುತ್ತಿರುವ ಚಿತ್ರಕ್ಕೆ ಇನ್ನೂ ಟೈಟಲ್​ ಫಿಕ್ಸ್​ ಆಗಿಲ್ಲ. ರಾಧಾಕೃಷ್ಣ ಅವರ ನಿರ್ದೇಶನದಲ್ಲಿ ಈಗಾಗಲೇ ಸಿನಿಮಾದ ಚಿತ್ರೀಕರಣ ಆರಂಭವಾಗಿದೆ. 

ಪಿರಿಯಾಡಿಕ್​ ಲವ್​ ಸ್ಟೋರಿಯಾಗಿರುವ ಈ ಹೊಸ ಸಿನಿಮಾದ ಚಿತ್ರೀಕರಣ ಯುರೋಪ್​ನಲ್ಲಿ ಈಗಾಗಲೇ ಆರಂಭವಾಗಿದೆ. ಈ ಸಿನಿಮಾದಲ್ಲಿ ಪೂಜಾ ಹೆಗ್ಡೆ ಡಾರ್ಲಿಂಗ್​ ಪ್ರಭಾಸ್​ಗೆ ನಾಯಕಿಯಾಗಿ ನಟಿಸುತ್ತಿದ್ದಾರೆ.

Tollywood star Prabhas takes risk of going to Europe for his movie shooting amidst Corona Virus threat
ಒಂದು ಕಡೆ ಸ್ಯಾಂಡಲ್​ವುಡ್​ನ 'ರಾಬರ್ಟ್'​ ಹಾಗೂ 'ಯುವರತ್ನ' ಚಿತ್ರತಂಡ ಕರೋನಾ ಭೀತಿಯಿಂದಾಗಿ ವಿದೇಶದಲ್ಲಿ ಪ್ಲಾನ್​ ಮಾಡಿದ್ದ ತಮ್ಮ ಸಿನಿಮಾದ ಹಾಡುಗಳ ಚಿತ್ರೀಕರಣವನ್ನು ಸದ್ಯಕ್ಕೆ ನಿಲ್ಲಿಸಿದ್ದಾರೆ. ಆದರೆ ಪ್ರಭಾಸ್​ ಮಾತ್ರ ಚಿತ್ರೀಕರಣಕ್ಕಾಗಿ ಯುರೋಪ್​ನತ್ತ ತೆರಳಿದ್ದಾರೆ.


ಈ ಸಿನಿಮಾದಲ್ಲಿ ಕತೆ 1970-80ರಲ್ಲಿ ನಡೆಯುವ ಲವ್​ ಸ್ಟೋರಿಯಾಗಿದ್ದು, ಈ ಸಿನಿಮಾಗೆ 'ರಾಧೆಶ್ಯಾಮ್​' ಅಥವಾ 'ಓ ಡಿಯರ್​' ಎಂದು ಟೈಟಲ್​ ಇಡುವ ಸಾಧ್ಯತೆ ಇದೆಯಂತೆ. ಈ ಸಿನಿಮಾದಲ್ಲಿ ಪ್ರಭಾಸ್ ಅವರ ಫಸ್ಟ್​ಲುಕ್​ ಅನ್ನು ಯುಗಾದಿಗೆ ಬಿಡುಗಡೆ ಮಾಡಲು ಚಿತ್ರತಂಡ ಯೋಚಿಸುತ್ತಿದೆ. ಅಷ್ಟೇ ಅಲ್ಲ ನಾಗ್​ ಅಶ್ವಿನ್​ ಜೊತೆ ಪ್ರಭಾಸ್​ ಮಾಡಲಿರುವ ಸಿನಿಮಾ ಹಾಗೂ ಮತ್ತೊಂದು ಹೊಸ ಚಿತ್ರದ ಬಗ್ಗೆ ಅಂದೇ ಪ್ರಭಾಸ್​ ಪ್ರಕಟಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  
View this post on Instagram
 

Elated to share that I’m resuming shooting for my upcoming film. Looking forward to a fun schedule.


A post shared by Prabhas (@actorprabhas) on


ಪ್ರಭಾಸ್​ ಫಸ್ಟ್​ಲುಕ್​ ನೋಡಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದು, ಅವರಿಗೆ ಈಗ ಮತ್ತೊಂದು ಸಿಹಿ ಸುದ್ದಿ ಸಿಕ್ಕಿದೆ. ಅದು ಅಂದೇ ಸಿನಿಮಾದ ಟೈಟಲ್​ ಸಹ ರಿವೀಲ್​ ಆಗಲಿದೆಯಂತೆ. ಆದರೆ ಈ ಬಗ್ಗೆ ಚಿತ್ರತಂಡದ ವತಿಯಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಬಂದಿಲ್ಲ.

ಇದನ್ನೂ ಓದಿ: Holi Celebration By Pranitha: ಸರ್ಕಾರಿ ಶಾಲೆಗಳಿಗೆ ಬಣ್ಣ ಬಳಿದು ಹೋಳಿ ಆಚರಿಸಿದ್ದ ಪ್ರಣೀತಾ ಈ ಸಲ ಬಣ್ಣದ ಹಬ್ಬವನ್ನು ಸಂಭ್ರಮಿಸಿದ್ದು ಹೀಗೆ..!

ದೇಶದೆಲ್ಲೆಡೆ ಕೊರೋನಾ ವೈರಸ್ ಭೀತಿಯಿಂದಾಗಿ ಜನರು ತಮ್ಮ ವಿದೇಶಿ ಪ್ರವಾಸವನ್ನು ಕ್ಯಾನ್ಸಲ್​ ಮಾಡುತ್ತಿದ್ದಾರೆ. ಆದರೆ ಪ್ರಭಾಸ್ ಮಾತ್ರ ಇತ್ತೀಚೆಗಷ್ಟೆ ಇದೇ ಸಿನಿಮಾದ ಚಿತ್ರೀಕರಣಕ್ಕಾಗಿ ಯುರೋಪ್​ನತ್ತ ಸಾಗಿದ್ದು ಸುದ್ದಿಯಾಗಿತ್ತು.

ಗುಂಡು ಹೊಡೆಸಿದ್ದಕ್ಕೆ ಅಪ್ಪನನ್ನೇ ಗುರಾಯಿಸಿದ ಆಯ್ರಾ ..!
First published: