Saaho Trailer: ಬಿಡುಗಡೆಯಾಯ್ತು ಪ್ರಭಾಸ್​ ಅಭಿನಯದ ಸಾಹೋ ಟ್ರೈಲರ್​

Saaho Trailer: ಬಾಹುಬಲಿ ನಂತರ ಪ್ರಭಾಸ್​ ಅಭಿಯಿಸಿರುವ ಸಿನಿಮಾ ಸಾಹೋ. 200 ಕೋಟಿ ಬಜೆಟ್​ನಲ್ಲಿ ನಿರ್ಮಿಸಲಾಗಿರುವ ಈ ಸಿನಿಮಾದ ಟ್ರೈಲರ್​ ಈಗಷ್ಟೆ ಬಿಡುಗಡೆಯಾಗಿದೆ. 

Anitha E | news18
Updated:August 10, 2019, 5:42 PM IST
Saaho Trailer: ಬಿಡುಗಡೆಯಾಯ್ತು ಪ್ರಭಾಸ್​ ಅಭಿನಯದ ಸಾಹೋ ಟ್ರೈಲರ್​
ಸಾಹೋ ಸಿನಿಮಾದಲ್ಲಿ ಪ್ರಭಾಸ್​
  • News18
  • Last Updated: August 10, 2019, 5:42 PM IST
  • Share this:
ಸುಜಿತ್ ನಿರ್ದೇಶನದ ನಟ ಪ್ರಭಾಸ್​ ಅಭಿನಯದ ಸಿನಿಮಾ 'ಸಾಹೋ'. ಭಾರಿ ಬಜೆಟ್​ ಹಾಗೂ ಫುಲ್​ ಆ್ಯಕ್ಷನ್​ ಪ್ಯಾಕೇಜ್​ ಇರುವ ಈ ಸಿನಿಮಾಗಾಗಿ ರೆಬೆಲ್​ ಸ್ಟಾರ್​ ಪ್ರಭಾಸ್ ಅಭಿಮಾನಿಗಳು ಕಾತರರಾಗಿ ಕಾಯುತ್ತಿದ್ದಾರೆ.

ಈ ಸಿನಿಮಾಗಾಗಿ ಪ್ರಭಾಸ್​ 'ಬಾಹುಬಲಿ' ನಂತರ ಬೇರೆ ಯಾವುದೇ ಸಿನಿಮಾಗಳನ್ನು ಒಪ್ಪಿಕೊಂಡಿಲ್ಲ. ಅಲ್ಲದೆ ಈ ಚಿತ್ರಕ್ಕಾಗಿ ಪ್ರಭಾಸ್​ಗೆ ದೊಡ್ಡ ಮೊತ್ತವೇ ಸಿಕ್ಕಿದೆ ಎಂಬ ಸುದ್ದಿಯೂ ಇದೆ. ಈ ಹಿಂದೆ ಸಿನಿಮಾ ಬಿಡುಗಡೆ ದಿನಾಂಕ ಮೂರು ಸಲ ಮುಂದಕ್ಕೆ ಹೋಗಿದೆ. ಇದರಿಂದಾಗಿ ಅಭಿಮಾನಿಗಳಿಗೆ ಕೊಂಚ ನಿರಾಶೆ ಆಗಿತ್ತು.

Saaho new poster
'ಸಾಹೋ' ಸಿನಿಮಾದ ಹೊಸ ಪೋಸ್ಟರ್​ನಲ್ಲಿ ಪ್ರಭಾಸ್​ ಹಾಗೂ ಶ್ರದ್ಧಾ ಕಪೂರ್​


ಇದರಿಂದಲೇ ಪ್ರಭಾಸ್ ತಮ್ಮ ಡಾರ್ಲಿಂಗ್​ ಅಭಿಮಾನಿಗಳಿಗಾಗಿ ಆಗಾಗ ಹೊಸ ಪೋಸ್ಟರ್ ಹಾಗೂ ಹಾಡುಗಳನ್ನು ಬಿಡುಗಡೆ ಮಾಡುತ್ತಿದ್ದರು.  ಆದರೆ ಈಗ ಪ್ರಭಾಸ್​ ಅಭಿಮಾನಿಗಳಿಗೆ ಕೊಂಚ ಖುಷಿಯಾಗಿದೆ. ಕಾರಣ ಇಂದು 'ಸಾಹೋ' ಸಿನಿಮಾದ ಟ್ರೈಲರ್​ ಬಿಡುಗಡೆಯಾಗಿದೆ.ಈ ಸಿನಿಮಾದ ಟ್ರೈಲರ್​ ನೋಡಿದರೆ ಯಾವುದೋ ಹಾಲಿವುಡ್ ಚಿತ್ರ ನೋಡಿದ ಅನುಭವ ಆಗುತ್ತದೆ. ಅಲ್ಲದೆ ನಿರ್ದೇಶಕ ಸುಜಿತ್​ ಹಾಗೂ ಪ್ರಭಾಸ್ ಮೇಲೆ ಇರುವ ನಿರೀಕ್ಷೆ ಟ್ರೈಲರ್​ನಿಂದ ಮತ್ತಷ್ಟು ಹೆಚ್ಚಾಗಿದೆ ಎನ್ನುತ್ತಿದ್ದಾರೆ ಪ್ರೇಕ್ಷಕರು.

ಇದನ್ನೂ ಓದಿ: Mardaani 2: ಮತ್ತೆ ಪೊಲೀಸ್​ ಅಧಿಕಾರಿಯಾಗಿ ರಾಣಿ ಮುಖರ್ಜಿ: ಮರ್ದಾನಿ 2 ರಿಲೀಸ್​ ಡೇಟ್​ ಫಿಕ್ಸ್​..!ಈ ಹಿಂದೆ ಆಗಸ್ಟ್​9ಕ್ಕೆ ತೆರೆ ಕಾಣಬೇಕಿದ್ದ ಈ ಸಿನಿಮಾ ಆಗಸ್ಟ್​ 15ಕ್ಕೆ ಮುಂದಕ್ಕೆ ಹೋಗಿತ್ತು. ನಂತರ ಅದು ಆಗಸ್ಟ್​ 30ಕ್ಕೆ ಹೋಯಿತು. ಆದರೆ ಈಗ ಟ್ರೈಲರ್ ನೋಡಿ ಖುಷಿ ಪಡುತ್ತಿರುವ ಅಭಿಮಾನಿಗಳಿಗೆ ಈ ರಿಲೀಸ್​ ದಿನಾಂಕ ಇನ್ನೂ ಮುಂದಕ್ಕೆ ಹೋಗದಿದ್ದರೆ ಸಾಕು ಎನ್ನುತ್ತಿದ್ದಾರೆ. ಈ ಸಿನಿಮಾದಲ್ಲಿ ಪ್ರಭಾಸ್​ಗೆ ನಾಯಕಿಯಾಗಿ ಬಾಲಿವುಡ್​ ಬೆಡಗಿ ಶ್ರದ್ಧಾ ಕಪೂರ್​ ಅಭಿನಯಿಸಿದ್ದಾರೆ.

Shah Rukh Khan: ಕಿಂಗ್​ ಖಾನ್​ ಶಾರುಕ್​ಗೆ ಡಾಕ್ಟರೇಟ್​ ನೀಡಿ ಗೌರವಿಸಿದ ಮೆಲ್ಬೋರ್ನ್​ನ ವಿಶ್ವವಿದ್ಯಾಲಯ..!
First published:August 10, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ