Krithi Shetty: ಬಾಲಯ್ಯನ ಸಿನಿಮಾ ರಿಜೆಕ್ಟ್​ ಮಾಡಿದ ಕನ್ನಡತಿ, ಸಕ್ಸಸ್​ ಕಾಣುವಾಗ ಈ ಧಿಮಾಕು ಬೇಕಾ ಎಂದ ನೆಟ್ಟಿಗರು!

ಯಾರಾದರೂ ಯುವ ನಟಿಯರಿಗೆ ದೊಡ್ಡ ಸ್ಟಾರ್​ ನಟನ ಜೊತೆ ನಟಿಸುವ ಅವಕಾಶ ಸಿಕ್ಕರೆ ಬಿಡುತ್ತಾರಾ? ಆದರೆ, ಇಲ್ಲಿ ಕೃತಿ ಶೆಟ್ಟಿ ಟಾಲಿವುಡ್​ನ ಲೆಜೆಂಡ್​ ಬಾಲಯ್ಯ ಅವರ ಸಿನಿಮಾವನ್ನು ರಿಜೆಕ್ಟ್​ ಮಾಡಿದ್ದಾರಂತೆ.

ಕೃತಿ ಶೆಟ್ಟಿ, ಬಾಲಯ್ಯ

ಕೃತಿ ಶೆಟ್ಟಿ, ಬಾಲಯ್ಯ

  • Share this:
ಕೃತಿ ಶೆಟ್ಟಿ(Kriti Shetty).. ಕನ್ನಡದ ಮುದ್ದು ಮುಖದ ಹುಡುಗಿ, ನ್ಯಾಷನಲ್​ ಕ್ರಶ್​(National Crush) ರಶ್ಮಿಕಾ ಮಂದಣ್ಣ(Rashmika Mandanna) ಅವರನ್ನು ಬಿಟ್ಟರೆ ಟಾಲಿವುಡ್​​(Tollywood)ನಲ್ಲಿ ಶೈನ್​ ಆಗುತ್ತಿರುವ ನಟಿ ಅಂದರೆ ಕೃತಿ ಶೆಟ್ಟಿ. ನೋಡಲು ಮುದ್ದಾಗಿ ಕಾಣುವ ಈ ಹುಡುಗಿ ಉಪ್ಪೇನ(Uppena) ಚಿತ್ರದ ಮೂಲಕ ಟಾಲಿವುಡ್​ಗೆ ಎಂಟ್ರಿಯಾಗಿದ್ದಾರು. ಈಕೆಯ ನಟನೆ ಕಂಡು ಎಲ್ಲರೂ ಫಿದಾ ಆಗಿದ್ದರು. ಇದಾದ ಬಳಿಕ ನಾಗಾರ್ಜುನ(Nagarajuna) ಅವರ ಪುತ್ರ ನಾಗಚೈತನ್ಯ(Naga Chaitanya) ಸಿನಿಮಾದಲ್ಲಿ ನಟಿಸಿದರು. ಇತ್ತೀಚೆಗೆ ನಾನಿ(Nani) ಜೊತೆ ಶ್ಯಾಮ್​ ಸುಂದರ್​ ರಾಯ್(Shyam Sundar Roy) ಸಿನಿಮಾದಲ್ಲೂ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸದ್ಯಕ್ಕೆ ಟಾಲಿವುಡ್​ನಲ್ಲಿ ಈಕೆಗೆ ಒಳ್ಳೆ ಬೇಡಿಕೆ(Demand) ಇದೆ.ಕೃತಿ ಶೆಟ್ಟಿಗೆ ಅದಾಗಲೇ ಅಭಿಮಾನಿ ಬಳಗ ಕೂಡ ಹುಟ್ಟಿಕೊಂಡಿದೆ. ಅವರ ಮುಂದಿನ ಸಿನಿಮಾ ಯಾವುದು ಅಂತ ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿರುತ್ತಾರೆ. ಇದೇ ವೇಳೆ ಈ ನಟಿಯ ಮುಂದಿನ ಸಿನಿಮಾದ ಬಗ್ಗೆ ಹೆಚ್ಚು ಸುದ್ದಿಯಾಗುತ್ತಿದೆ. ಅದು ಸಿನಿಮಾ ಒಪ್ಪಿದ್ದಕ್ಕಲ್ಲ, ರಿಜೆಕ್ಟ್(Reject)​ ಮಾಡಿದ್ದಕ್ಕೆ.

ಬಾಲಯ್ಯನ ಸಿನಿಮಾಗೆ ನೋ ಎಂದ ಕೃತಿ ಶೆಟ್ಟಿ!

ಯಾರಾದರೂ ಯುವ ನಟಿಯರಿಗೆ ದೊಡ್ಡ ಸ್ಟಾರ್​ ನಟನ ಜೊತೆ ನಟಿಸುವ ಅವಕಾಶ ಸಿಕ್ಕರೆ ಬಿಡುತ್ತಾರಾ? ಆದರೆ, ಇಲ್ಲಿ ಕೃತಿ ಶೆಟ್ಟಿ ಟಾಲಿವುಡ್​ನ ಲೆಜೆಂಡ್​ ಬಾಲಯ್ಯ ಅವರ ಸಿನಿಮಾವನ್ನು ರಿಜೆಕ್ಟ್​ ಮಾಡಿದ್ದಾರಂತೆ. ನಂದಮೂರಿ ಬಾಲಕೃಷ್ಣ ಅವರು ಸದ್ಯಕ್ಕೆ ಅಖಂಡ ಸಿನಿಮಾ ಸಕ್ಸಸ್​ ಅಲೆಯಲ್ಲಿ ತೆಲುತ್ತಿದ್ದಾರೆ. ಸದ್ಯಕ್ಕೆ ಬಾಲಯ್ಯ ತಮ್ಮ 107ನೇ ಸಿನಿಮಾದ  ಶೂಟಿಂಗ್​ನಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾವನ್ನೇ ಕೃತಿ ಶೆಟ್ಟಿ ರಿಜೆಕ್ಟ್​ ಮಾಡಿದ್ದಾರಂತೆ. . ಈ ಚಿತ್ರವನ್ನು ನಿರ್ದೇಶಕ ಗೋಪಿಚಂದ್ ಮಾಲಿನೇನಿ ನಿರ್ದೇಶನ ಮಾಡುತ್ತಿದ್ದು, ದೊಡ್ಡ ಬಜೆಟ್‌ನಲ್ಲಿ ಸಿನಿಮಾ ತಯಾರಾಗುತ್ತಿದೆ. ಆದರೆ, ಇಂತಹ ಸಿನಿಮಾವನ್ನು ಯುವ ನಟಿ ರಿಜೆಕ್ಟ್​ ಮಾಡಿದ್ದಾರೆ.

ವಯಸ್ಸಿನ ಅಂತರ ಕಾರಣ ಕೊಟ್ರಾ ಕೃತಿ?

ಹೌದು, ಕೃತಿ ಶೆಟ್ಟಿ ಈ ಸಿನಿಮಾವನ್ನು ರಿಜೆಕ್ಟ್​ ಮಾಡಿದಾಗಿನಿಂದಲೂ ಈ ಬಗ್ಗೆ ಸಖತ್​ ಚರ್ಚೆಯಾಗುತ್ತಿದೆ. ಯಾವ ಕಾರಣಕ್ಕೆ ಸ್ಟಾರ್​ ನಟನ ಸಿನಿಮಾ ತಿರಸ್ಕರಿಸಿದ್ದರು ಎಂದು ಎಲ್ಲರೂ ಮಾತನಾಡಿಕೊಳ್ಳುತ್ತಿದ್ದಾರೆ. ಮೂಲಗಳ ಪ್ರಕಾರ ಈ ಸಿನಿಮಾವನ್ನು ತಿರಸ್ಕರಿಸಲು ಕಾರಣ ವಯಸ್ಸಿನ ಅಂತರ ಎನ್ನಲಾಗುತ್ತಿದೆ. ಬಾಲಯ್ಯ ಚಿತ್ರರಂಗದಲ್ಲಿ, ಅಭಿನಯದ ಅನುಭವದಲ್ಲಿ ಮಾತ್ರ ಅಲ್ಲ ವಯಸ್ಸಿನಲ್ಲೂ ಕೂಡ ಕೃತಿಗಿಂತಾ ತುಂಬಾನೇ ಸೀನಿಯರ್. ಈ ಇಬ್ಬರು ಜೋಡಿ ಆಗುತ್ತಾರೆ ಎನ್ನುವುದನ್ನು ನೆನೆದರೇ ಆ ಜೋಡಿ ಸರಿ ಹೊಂದುವುದಿಲ್ಲ ಎನಿಸುತ್ತದೆ.

ಇದನ್ನೂ ಓದಿ: ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ನಟಿ! ನಿರ್ಮಾಪಕನ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡ್ತಿದ್ದಾರೆ ಕಾವ್ಯ

ಬಾಲಯ್ಯಗೆ 61, ಕೃತಿ ಶೆಟ್ಟಿ 18 !

ಲೆಜೆಂಡ್ ಬಾಲಯ್ಯಗೆ 61 ವರ್ಷ. ಇತ್ತ ಯುವ ನಟಿ ಕೃತಿ ಶೆಟ್ಟಿ 18 ವರ್ಷ ಇದೆ ಕಾರಣಕ್ಕೆ ಕೃತಿ ಬಾಲಯ್ಯನ ಜೊತೆಗೆ ಅಭಿನಯಿಸುವ ಆಫರ್ ಬೇಡ ಎಂದಿದ್ದಾರಂತೆ. ಸದ್ಯಕ್ಕೆ ಕೃತಿ ಚಿತ್ರರಂಗದಲ್ಲಿ ಹೆಚ್ಚು ವಯಸ್ಸಾಗಿರುವ ಹಿರಿಯ ನಟರ ಜೊತೆಗೆ ಅಭಿನಯ ಮಾಡುವುದಿಲ್ಲ ಅಂತೆ. ಇತ್ತ ಸಿನಿಮಾ ರಿಜೆಕ್ಟ್ ಮಾಡಿದ ನಟಿಯನ್ನು ಕೆಲವರು ಟ್ರೋಲ್​ ಮಾಡುತ್ತಿದ್ದಾರೆ. ಸಕ್ಸಸ್​ ಅಲೆಯಲ್ಲಿ ಇರುವಾಗ ಈ ಧಿಮಾಕು ಬೇಕಾ ಎಂದು ನಟಿ ಕ್ಲಾಸ್ ತೆಗೆದುಕೊಂಡಿದ್ದಾರೆ.

ಇದನ್ನೂ ಓದಿ : ಕೆಜಿಎಫ್​ ಗತ್ತು ಇಡೀ ವಿಶ್ವಕ್ಕೇ ಗೊತ್ತು! ಗೂಗಲ್ ಮ್ಯಾಪ್​ನಲ್ಲೂ ರಾಕಿ ಭಾಯ್​ ಸಿನಿಮಾದೇ ಹವಾ..

ಈ ಹಿಂದೆಯೂ 2 ಸಿನಿಮಾ ರಿಜೆಕ್ಟ್ ಮಾಡಿದ್ದ ನಟಿ!

ಈ ಹಿಂದೆಯೂ ಎರಡು ಮೂರು ಸಿನಿಮಾಗಳನ್ನು ತಿರಸ್ಕರಿಸಿ ಕೃತಿ ಶೆಟ್ಟಿ ಸುದ್ದಿ ಆಗಿದ್ದರು. ಈ ಹಿಂದೆ ನಟ ನಿಖಿಲ್ ಅಭಿನಯದ '18 ಪೇಜಸ್' ಸಿನಿಮಾದಲ್ಲಿ ಕೃತಿಗೆ ಅತಿಥಿ ಪಾತ್ರ ಮಾಡುವಂತೆ ಕೇಳಲಾಗಿತ್ತಂತೆ. ಮತ್ತು ಸಾಯಿ ಧರಂ ತೇಜ್ ಅವರ 15ನೇ ಚಿತ್ರದಲ್ಲಿ ನಾಯಕಿಯಾಗಿ ನಟಿಸಲು ಆಫರ್ ಬಂದಿತ್ತು. ಆದರೆ, ಈ ಸಿನಿಮಾಗಳಿಗೂ ಕೃತಿ ನೋ ಅಂದಿದ್ದರು.
Published by:Vasudeva M
First published: