ಸುದೀಪ್​-ಶಿವಣ್ಣ ಅಭಿನಯದ ದಿ ವಿಲನ್​ ಯಾವಾಗ ರಿಲೀಸ್​ ಗೊತ್ತಾ?

news18
Updated:August 30, 2018, 1:10 PM IST
ಸುದೀಪ್​-ಶಿವಣ್ಣ ಅಭಿನಯದ ದಿ ವಿಲನ್​ ಯಾವಾಗ ರಿಲೀಸ್​ ಗೊತ್ತಾ?
news18
Updated: August 30, 2018, 1:10 PM IST
ನ್ಯೂಸ್​ 18 ಕನ್ನಡ 

ಒಂದಲ್ಲ ಒಂದು ಕಾರಣಗಳಿಂದಾಗಿ ಶಿವಣ್ಣ ಹಾಗೂ ಸುದೀಪ್​ ಅಭಿನಯದ 'ದಿ ವಿಲನ್​' ಸಿನಿಮಾ ರಿಲೀಸ್​ ದಿನಾಂಕ ಮುಂದಕ್ಕೆ ಹೋಗುತ್ತಿದೆ. ಅಲ್ಲದೆ ಸಿನಿಮಾದ ಟೀಸರ್​, ಆಡಿಯೋ ಲಾಂಚ್​ ಸಹ ಈ ಹಿಂದೆ ಹೇಳಿದ್ದ ಸಮಯಕ್ಕೆ ಆಗಿರಲಿಲ್ಲ. ಆದರೆ ಈಗ ನಿರ್ದೇಶಕ ಪ್ರೇಮ್​ ಸಿಹಿ ಸುದ್ದಿಯನ್ನು ನೀಡಿದ್ದಾರೆ.

ಹೌದು ಇತ್ತೀಚೆಗಷ್ಟೆ 'ದಿ ವಿಲನ್​' ಸಿನಿಮಾದ ಆಡಿಯೋ ಲಾಂಚ್​ ಕಾರ್ಯಕ್ರಮವನ್ನು ದುಬೈನಲ್ಲಿ ಮಾಡಲಾಗಿತ್ತು. ಈಗ ಸಿನಿಮಾ ಸೆನ್ಸಾರ್​ ಮಂಡಳಿ ಮುಂದಿದೆ. ಅದಕ್ಕೆ ಸೆನ್ಸಾರ್​ ಮಂಡಳಿ ಹಸಿರು ನಿಶಾನೆ ತೋರುತ್ತಿದ್ದಂತೆಯೇ ಸಿನಿಮಾ ಚಿತ್ರಮಂದಿರಕ್ಕೆ ಲಗ್ಗೆ ಇಡಲಿದೆಯಂತೆ.

ಹೀಗೆಂದು ಹೇಳುತ್ತಿರುವುದು ನಾವಲ್ಲ. ಖುದ್ದು ಸಿನಿಮಾದ ನಿರ್ದೇಶಕ ಪ್ರೇಮ್​ ಈ ಮಾತನ್ನು ಹೇಳುತ್ತಿದ್ದಾರೆ. ತಮ್ಮ ಟ್ವಿಟರ್​ ಮೂಲಕ ಜೋಗಿ ಪ್ರೇಮ್​ ಶೀಘ್ರದಲ್ಲೇ ಸಿನಿಮಾದ ರಿಲೀಸ್​ ದಿನಾಂಕ ಪ್ರಕಟಿಸುವುದಾಗಿ ಹೇಳಿದ್ದಾರೆ.ಸಿನಿಮಾಗೆ ಸೆನ್ಸಾರ್ ಮಂಡಳಿಯಿಂದ 'ಎ' ಪ್ರಮಾಣಪತ್ರ ಸಿಕ್ಕಿದ್ದು, ಅಂದುಕೊಂಡಂತೆ ಎಲ್ಲ ಸರಿಯಾಗಿ ಆದರೆ ಇದೇ ಗಣಪತಿ ಹಬ್ಬಕ್ಕೆ 'ದಿ ವಿಲನ್​' ಸಿನಿಮಾ ಪ್ರೇಕ್ಷಕನಿಗೆ ನೋಡಲು ಸಿಗಲಿದೆ.
First published:August 30, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...