90ರ ದಶಕದ ಹಿಂದಿ ಚಿತ್ರರಂಗದಲ್ಲಿ (Hindi cinema) ಸಾಕಷ್ಟು ಜನಪ್ರೀಯವಾಗಿದ್ದ ಬಾಲಿವುಡ್ ನಟ (Bollywood actor) ಹಾಗೂ ಸಂಜು ಬಾಬಾ ಎಂದೇ ಪ್ರಸಿದ್ಧಿ ಪಡೆದಿರುವ ಸಂಜಯ್ ದತ್ (Sanjay Dutt) ಇತ್ತೀಚೆಗೆ ಬಹು ಭಾಷೆಗಳಲ್ಲಿ ಜಗತ್ತಿನಾದ್ಯಂತ ಬಿಡುಗಡೆಯಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಇತಿಹಾಸವನ್ನೇ ರಚಿಸಿರುವ ತಮ್ಮ ಮೊದಲ ಕನ್ನಡ ಚಲನಚಿತ್ರ (Kannada Movie) ಕೆಜಿಎಫ್ ಚಾಪ್ಟರ್ 2 ರಿಂದಾಗಿ ಈಗ ಮತ್ತೆ ಮುನ್ನೆಲೆಗೆ ಬಂದಿದ್ದಾರೆಂದರೆ ತಪ್ಪಾಗಲಾರದು. ಇತ್ತೀಚೆಗೆ ಅವರು ತಮ್ಮ ಕುಟುಂಬ ದುಬೈನಲ್ಲಿ (Dubai) ನೆಲೆಸಿರುವ ಬಗ್ಗೆ ಮನ ಬಿಚ್ಚಿ ಮಾತನಾಡಿದ್ದಾರೆ. ಅವರು ಈ ಕುರಿತು ತಮ್ಮ ಇಬ್ಬರು ಅವಳಿ ಸಂತಾನಗಳಾದ ಶಹರಾನ್ (Shahran) ಹಾಗೂ ಇಕ್ರಾ (Iqra) ತಮ್ಮ ತಾಯಿ ಮಾನ್ಯತಾ ದತ್ (Manyatha Dutt) ಅವರೊಂದಿಗೆ ಕಳೆದ ಎರಡು ವರ್ಷಗಳಿಂದ ದುಬೈನಲ್ಲಿ ನೆಲೆಸಿರುವ ಬಗ್ಗೆ ಹೇಳಿಕೊಂಡಿದ್ದಾರೆ.
ಅವರ ಪ್ರಕಾರ, ತಮ್ಮ ಕುಟುಂಬ ದುಬೈಗೆ ತೆರಳಿರುವುದು ಯೋಜಿತವಾದುದಲ್ಲ, ಆದರೆ ಅವರು ಅಲ್ಲಿ ಸಂತಸದಿಂದಿದ್ದು ತಮ್ಮ ಮಕ್ಕಳ ಸಂತಸವೇ ಅವರ ಪ್ರಮುಖ ಆದ್ಯತೆಯಾಗಿದೆಯಂತೆ.
ಮಕ್ಕಳ ಬಗ್ಗೆ ಸಂಜಯ್ ದತ್ತ್ ಹೇಳಿದ್ದು ಹೀಗೆ
ಟೈಮ್ಸ್ ಮಾಧ್ಯಮದೊಂದಿಗೆ ಮಾತನಾಡಿರುವ ಸಂಜಯ್ ಅವರು ಹೇಳುತ್ತಾರೆ, "ನನ್ನ ಇಬ್ಬರು ಮಕ್ಕಳು ಅಲ್ಲಿ ಕಲಿಯುತ್ತಿರುವುದು ನನಗೆ ಸಂತಸ ತಂದಿದೆ, ಅಲ್ಲದೆ ಮಾನ್ಯತಾಳಿಗೂ ಅಲ್ಲಿ ಅವಳದ್ದೆ ಆದ ಕೆಲಸಗಳಿವೆ" ಎಂದಿದ್ದಾರೆ. ಮುಂದುವರೆಯುತ್ತ ಅವರು ಹೇಳುತ್ತಾರೆ, ಭಾರತದಲ್ಲಿ ಅವರು ಕೆಲಸದಿಂದ ವಿರಾಮ ಪಡೆದಾಗಲೆಲ್ಲ ದುಬೈಗೆ ಹೋಗಿ ತನ್ನ ಕುಟುಂಬದೊಡನೆ ಸಮಯ ಕಳೆಯುತ್ತಾರೆ. "ಪ್ರತಿ ಬೇಸಿಗೆ ರಜೆಯಲ್ಲಿ ನಾನು ಅವರೊಡನೆ ಇರುತ್ತೇನೆ, ಅವರು ಎಲ್ಲೆ ಇದ್ದರೂ ಸಹ ನಾನು ಅವರನ್ನು ಭೇಟಿ ಮಾಡುತ್ತೇನೆ" ಎಂದು ಹೇಳಿದ್ದಾರೆ.
ತಮ್ಮ ಮಕ್ಕಳು ತಂದೆಯೊಂದಿಗೆ ಇಲ್ಲಿಯೇ ಇರಬಹುದಾಗಿತ್ತೆಂಬುದರ ಬಗ್ಗೆ ಅವರು ಈ ರೀತಿ ಪ್ರತಿಕ್ರಿಯಿಸಿದ್ದಾರೆ, "ಅವರು ಖಂಡಿತವಾಗಿಯೂ ಇಲ್ಲಿಯೇ ಇರಬಹುದಾಗಿತ್ತು, ಆದರೆ ಅವರಿಗೆ ಅಲ್ಲಿರುವುದು ತುಂಬ ಇಷ್ಟವಾಗಿದೆ. ಅವರಿಗೆ ಅಲ್ಲಿನ ಶಾಲೆ ಹಾಗೂ ಅಲ್ಲಿನ ಚಟುವಟಿಕೆಗಳು ತುಂಬ ಇಷ್ಟವಾಗಿದೆ, ಅಲ್ಲದೆ ನನ್ನ ಹೆಂಡತಿಯ ಉದ್ದಿಮೆಯೂ ಸಹ ಅಲ್ಲೇ ನೆಲೆಸಿದೆ" ಎನ್ನುತ್ತಾರೆ.
ಇದನ್ನೂ ಓದಿ: Athiya Shetty: ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ ಅತಿಯಾ ಶೆಟ್ಟಿ-ರಾಹುಲ್! ಮದ್ವೆ ಡೇಟ್ ಕೂಡ ಫಿಕ್ಸ್ ಆಗಿದ್ಯಂತೆ
ಆದಾಗ್ಯೂ ಅವರು ಈ ಎಲ್ಲವೂ ಮುಂಚಿತವಾಗಿಯೇ ಯೋಜಿತವಾದುದಲ್ಲ ಅಕಸ್ಮಾತಾಗಿ ನಡೆದು ಹೋಗಿವೆ ಎನ್ನುವುದನ್ನು ಮರೆಯುವುದಿಲ್ಲ. ಮಾನ್ಯತಾ ಅಲ್ಲಿ ಒಂದು ಉದ್ದಿಮೆ ಮಾಡಲು ಪ್ರಾರಂಭಿಸಿದರು ಅದು ಯಶಸ್ಸುಗಳಿಸಿತು, ತದನಂತರ ಅವಳು ಅಲ್ಲಿಯೇ ಸೆಟಲ್ ಆದರು ಹಾಗೂ ಮಕ್ಕಳೂ ಸಹ ಅವಳ ಜೊತೆ ಇರಲು ಅಲ್ಲಿಗೆ ತೆರಳಿರುವುದಾಗಿ ಸಂಜಯ್ ದತ್ ವಿವರಿಸುತ್ತಾರೆ.
ಪತ್ನಿ ಬಗ್ಗೆ ಸಂಜಯ್ ದತ್ತ್ ಹೇಳಿದ್ದೇನು?
ಮಾನ್ಯತಾ ದತ್ ಅವರು ಸಂಜಯ್ ದತ್ ಅವರನ್ನು ಅವರು ಜೈಲಿನಲ್ಲಿ ಇದ್ದ ಸಂದರ್ಭದಿಂದಲೂ ಬೆಂಬಲಿಸುತ್ತ ಬಂದಿದ್ದಾರೆ, ಅಲ್ಲದೆ, ಸಂಜಯ್ ಅವರು 2020 ರಲ್ಲಿ ಶ್ವಾಸಕೋಶದ ಕ್ಯಾನ್ಸರ್ ಕಾಯಿಲೆಗೆ ತುತ್ತಾದಾಗ ಮಾನ್ಯತಾ ಅವರು ಸಂಜಯ್ ಅವರನ್ನು ಆರೈಕೆ ಮಾಡುತ್ತಲೇ ಬಂದಿದ್ದಾರೆ. ಅಷ್ಟಕ್ಕೂ ಮಾನ್ಯತಾ ಸಹ ಸಂಜಯ್ ದತ್ ಅವರ ಬಗ್ಗೆ ಅಪಾರವಾದ ಕಾಳಜಿ ಹಾಗೂ ಪ್ರೀತಿ ಹೊಂದಿದ್ದಾರೆ. ಅವರು ತಮ್ಮ ಒಂದು ಸಂದರ್ಶನದಲ್ಲಿ ಈ ರೀತಿ ಹೇಳಿದ್ದರು, "ನನ್ನ ಎಲ್ಲ ಕಷ್ಟದ ಸಂದರ್ಭಗಳಲ್ಲೂ ಸಂಜು ನನ್ನ ಜೊತೆಯಾಗಿಯೇ ಇದ್ದರು. ನಾನು ಅವರನ್ನು ಒಂಭತ್ತು ವರ್ಷಗಳಿಂದ ಬಲ್ಲೆ, ಅವರಿಗೆ ನನ್ನ ಗತ ಜೀವನದ ಬಗ್ಗೆ ಎಲ್ಲವೂ ತಿಳಿದಿದೆ, 2005 ರಲ್ಲಿ ನಾವಿಬ್ಬರೂ ಗಂಭೀರವಾಗಿ ಡೇಟಿಂಗ್ ಪ್ರಾರಂಭಿಸಿದೆವು. ನನ್ನ ಬಗ್ಗೆ ಅವರಿಗೆ ಎಲ್ಲವೂ ತಿಳಿದಿದೆ" ಎಂದಿದ್ದರು.
ಇದನ್ನೂ ಓದಿ: Raja Rani 2: ಇದು ರಿಯಲ್ ಜೋಡಿಗಳ ರಿಯಾಲಿಟಿ ಗೇಮ್ ಶೋ, ಶುರುವಾಗ್ತಿದೆ 'ರಾಜಾ-ರಾಣಿ' ಸೀಸನ್ 2
ಸಂಜಯ್ ದತ್ ಹಾಗೂ ಮಾನ್ಯತಾ 2008 ರಲ್ಲಿ ಮದುವೆಯಾಗಿದ್ದರು. 2010 ರಲ್ಲಿ ಅವರಿಬ್ಬರಿಗೂ ಅವಳಿ ಸಂತಾನ ಹುಟ್ಟಿದರು. 2020 ರಲ್ಲಿ ಭಾರತದಲ್ಲಿ ಕೋವಿಡ್ ಸಂಕ್ರಮಣಕ್ಕೆ ಸಂಬಂಧಿಸಿದಂತೆ ಹಾಕಲಾದ ಮೊದಲ ಲಾಕ್ಡೌನ್ ಮುಂಚೆಯೇ ಮಾನ್ಯತಾ ಅವರು ತಮ್ಮ ಮಕ್ಕಳೊಂದಿಗೆ ದುಬೈಗೆ ತೆರಳಿದ್ದರು. ಅಂದಿನಿಂದ ಮಾನ್ಯತಾ ತಮ್ಮ ಮಕ್ಕಳೊಂದಿಗೆ ದುಬೈನಲ್ಲೇ ನೆಲೆಸಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ