Bigg Boss 8: ಬಿಗ್​ ಬಾಸ್​ 8 ಕಾರ್ಯಕ್ರಮವನ್ನು 24 ಗಂಟೆ ನೋಡುವ ಅವಕಾಶ ನಿಮ್ಮದಾಗಲಿದೆ..!

BBK8: ಬಿಗ್​ ಬಾಸ್​ ಕಾರ್ಯಕ್ರಮದ ತಂತ್ರಜ್ಞರು ಹಾಗೂ ಸಿಬ್ಬಂದಿಗಳನ್ನು ಕ್ವಾರಂಟೈನ್​ ಮಾಡಲಾಗಿದೆ. ಪ್ರತಿ ದಿನ ರಾತ್ರಿ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಮನೆ ಒಳಗೆ ಪ್ರವೇಶಿಸಲಿರುವ ಅತಿಥಿಗಳಿಗೂ ಸಹ ಕ್ವಾರಂಟೈನ್​ ಕಡ್ಡಾಯ ಮಾಡಲಾಗಿದೆಯಂತೆ.

ಕನ್ನಡ ಬಿಗ್​ ಬಾಸ್​ ಸೀಸನ್​ 8

ಕನ್ನಡ ಬಿಗ್​ ಬಾಸ್​ ಸೀಸನ್​ 8

  • Share this:
ಕಲರ್ಸ್​ ಕನ್ನಡದಲ್ಲಿ ಪ್ರಸಾರವಾಗಲಿರುವ ರಿಯಾಲಿಟಿ ಶೋ ಬಿಗ್​ ಬಾಸ್​ 8ನೇ ಆವೃತ್ತಿ ನಾಳೆಯಿಂದ ಅದ್ಧೂರಿಯಾಗಿ ಆರಂಭವಾಗಲಿದೆ. ಭಾನುವಾರ ಸಂಜೆ 6ಕ್ಕೆ ಬಿಗ್​ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಈ ಸಲ ಯಾರೆಲ್ಲ ಬಿಗ್​ ಬಾಸ್​ ಮನೆಗೆ ಸ್ಪರ್ಧಿಗಳಾಗಿ ಎಂಟ್ರಿ ಕೊಡಲಿದ್ದಾರೆ ಅನ್ನೋದು ಬಹಿರಂಗವಾಗಲಿದೆ. ಇನ್ನು ಈಗಾಗಲೇ ಈ ಕಾರ್ಯಕ್ರಮದಲ್ಲಿ ಈ ಸಲ ಭಾಗಿಯಾಗಲಿರುವ ಸಾಂಭಾವ್ಯ ಸ್ಪರ್ಧಿಗಳ ಹೆಸರು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ನೆನಪಿರಲಿ ಪ್ರೇಮ್​, ರವಿಶಂಕರ್ ಗೌಡ, ಹನುಮಂತ, ಗೀತಾ, ಭಾರತಿ ಭಟ್​, ರಾಗಿಣಿ ದ್ವಿವೇದಿ ಅವರ ಹೆಸರು ಕೇಳಿ ಬಂದಿದೆ. ಈಗಾಗಲೇ ಆಯ್ಕೆ ಮಾಡಿರುವ ಬಿಗ್​ಬಾಸ್​ ಕಾರ್ಯಕ್ರಮದ ಸ್ಪರ್ಧಿಗಳನ್ನು ಹೋಟೆಲ್​ನಲ್ಲಿ ಕ್ವಾರಂಟೈನ್​ ಮಾಡಲಾಗಿದೆ. 17 ಮಂದಿ ಸ್ಪರ್ಧಿಗಳಲ್ಲಿ ಕೊನೆ ಕ್ಷಣದಲ್ಲಿ ಯಾರಿಗಾದರೂ ಕೊರೋನಾ ಪಾಸಿಟಿವ್​ ಬಂದರೆ  ಬದಲಾವಣೆಯಾಗುವ ಸಾಧ್ಯತೆ ಇದೆಯಂತೆ. 

ಇನ್ನು ಬಿಗ್​ ಬಾಸ್​ ಮನೆಯಲ್ಲಿ ಈ ಸಲ ವಿಶೇಷ ವೈದ್ಯಕೀಯ ತಂಡವೂ ಇರಲಿದೆಯಂತೆ. ಕೊರೋನಾ ಕಾರಣದಿಂದಾಗಿ ಸಾಕಷ್ಟು ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆಯಂತೆ. ಹೊಸ ಲುಕ್​ ಜೊತೆ ಇಂಟರೆಸ್ಟಿಂಗ್​ ಥೀಮ್​ನೊಂದಿಗೆ ಈ ಸಲವೂ ಬಿಗ್​ ಬಾಸ್​ ಮನೆ ಪ್ರೇಕ್ಷಕರನ್ನು ರಂಜಿಸಲು ಸಿದ್ಧವಾಗಿದೆ.


View this post on Instagram


A post shared by Param (@parameshwargundkal)


ಬಿಗ್​ ಬಾಸ್​ ಕಾರ್ಯಕ್ರಮದ ತಂತ್ರಜ್ಞರು ಹಾಗೂ ಸಿಬ್ಬಂದಿಗಳನ್ನು ಕ್ವಾರಂಟೈನ್​ ಮಾಡಲಾಗಿದೆ. ಪ್ರತಿ ದಿನ ರಾತ್ರಿ ಈ ಕಾರ್ಯಕ್ರಮ ಪ್ರಸಾರವಾಗಲಿದ್ದು, ಮನೆ ಒಳಗೆ ಪ್ರವೇಶಿಸಲಿರುವ ಅತಿಥಿಗಳಿಗೂ ಸಹ ಕ್ವಾರಂಟೈನ್​ ಕಡ್ಡಾಯ ಮಾಡಲಾಗಿದೆಯಂತೆ.
24 ಗಂಟೆ ವೀಕ್ಷಿಸುವ ಅವಕಾಶ

ಪ್ರತಿ ರಾತ್ರಿ 9:30ಕ್ಕೆ ಪ್ರಸಾರವಾಗಲಿರುವ ಬಿಗ್​ ಕಾರ್ಯಕ್ರಮವನ್ನು ಎಂದಿನಂತೆ ವೂಟ್​ ಆ್ಯಪ್​ನಲ್ಲಿ ವೀಕ್ಷಿಸಬಹುದಾಗಿದೆ. ಜೊತೆಗೆ ಅನ್​ಕಟ್​ ಸೀನ್​ಗಳನ್ನೂ ಸಹ ಇಲ್ಲಿ ನೋಡಬಹುದಾಗಿದೆ. ಇದರ ಜೊತೆಗೆ ಈ ಸಲ 24 ಗಂಟೆಗಳೂ ಈ ಕಾರ್ಯಕ್ರಮವನ್ನು ವೀಕ್ಷಿಸುವ ಅವಕಾಶವನ್ನು ಕಲ್ಪಿಸುವ ತಯಾರಿಯಲ್ಲಿದೆ ಬಿಗ್​ ಬಾಸ್​ ತಂಡ. ಕಾರ್ಯಕ್ರಮದ 24 ಪ್ರಸಾರಕ್ಕೆಂದೇ ಪ್ರತ್ಯೇಕವಾಗಿ ಪಿಸಿಆರ್ ವ್ಯವಸ್ಥೆ ಸಹ ಮಾಡಲಾಗಿದೆಯಂತೆ.ಹೇಗಿರಲಿದೆ ಗೊತ್ತಾ ಬಿಗ್​ ಬಾಸ್​ ಮನೆ

ಬೆಂಗಳೂರಿನ ಬಿಡದಿಯಲ್ಲಿರುವ ಬಿಗ್​ ಬಾಸ್​ ಮನನೆಯಲ್ಲಿನ ಕ್ಯಾಮೆರಾಗಳು... ವರ್ಣರಂಜಿತ ಇಂಟೀರಿಯರ್​.... ಆಸಕ್ತಿದಾಯಕ ಥೀಮ್​ ಜೊತೆಗೆ ಮನೆಯನ್ನು ವಿನ್ಯಾಸ ಮಾಡಲಾಗಿದೆ. ಕಾರ್ಯಕ್ರಮದ ನಿರ್ದೇಶಕ ಪರಮೇಶ್ವರ ಗುಂಡ್ಕಲ್​ ಅವರು ಇತ್ತೀಚೆಗಷ್ಟೆ ಬಿಗ್​ಬಾಸ್​ ಮನೆಯ ಅಡುಗೆ ಮನೆಯಲ್ಲಿ ನಿಂತು ತೆಗೆಸಿಕೊಂಡಿದ್ದ ಫೋಟೋವೊಂದನ್ನು ತಮ್ಮ ಇನ್​ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.  
View this post on Instagram


A post shared by Param (@parameshwargundkal)


ಈ ಸಲ ಈ ಕಾರ್ಯಕ್ರಮದಲ್ಲಿ ಕೇವಲ ಸೆಲೆಬ್ರಿಟಿಗಳು ಅಂದರೆ ಕಾಮನ್​ ಮ್ಯಾನ್​ ಇರುವುದಿಲ್ಲ. ಇವರ ಜೊತೆಗೆ ರಾಜಕೀಯದಲ್ಲಿ ಸಕ್ರಿಯವಾಗಿರುವ ರಾಜಕಾರಣಿ ಒಬ್ಬರು ಇರಲಿದ್ದಾರಂತೆ. ಇನ್ನು ಬಿಗ್​ ಬಾಸ್​ ಕಾರ್ಯಕ್ರಮ ಪ್ರಸಾರವಾಗಲಿರುವ ಸಮಯ ಸಹ ಈ ಸಲ ಬದಲಾಗಿದ್ದು, ಅದನ್ನು ಹಿಂದೆ ಪ್ರಸಾರ ಮಾಡುತ್ತಿದ್ದ ಸಮಯಕ್ಕೆ ಪ್ರಸಾರ ಮಾಡುವಂತೆ ಪ್ರೇಕ್ಷಕರು ಒತ್ತಾಯಿಸುತ್ತಿದ್ದಾರೆ.

ಇದನ್ನೂ ಓದಿ: Galipata 2: ಕಜಕಿಸ್ತಾನದಲ್ಲಿ ಗಾಳಿಪಟ 2 ಚಿತ್ರತಂಡ: ಇವರೇ ಸಿನಿಮಾದ ನಾಯಕಿಯರು..!

ಕೊರೋನಾ ಕಾರಣದಿಂದಾಗಿ ಕಳೆದ ವರ್ಷವೇ ಆರಂಭವಾಗಬೇಕಿದ್ದ ಸೀಸನ್​ 8 ಈಗ ಪ್ರಾರಂಭವಾಗುತ್ತಿದೆ . ಈ ವರ್ಷ ಎಲ್ಲ ಸರಿ ಇದ್ದರೆ ಅಕ್ಟೋಬರ್​-ನವೆಂಬರ್​ ಹೊತ್ತಿಗೆ ಸೀಸನ್​ 9 ಸಹ ಆರಂಭವಾಗಲಿದೆ ಎಂದು ಸುದೀಪ್​ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.
Published by:Anitha E
First published: