'ಸಂಜು' ಸಿನಿಮಾದಲ್ಲಿ ರಣಬೀರ್​ ಜತೆ ಕಾಣಿಸಿಕೊಂಡಿದ್ದಾರೆ ಸಂಜಯ್​ ದತ್​

news18
Updated:June 29, 2018, 3:51 PM IST
'ಸಂಜು' ಸಿನಿಮಾದಲ್ಲಿ ರಣಬೀರ್​ ಜತೆ ಕಾಣಿಸಿಕೊಂಡಿದ್ದಾರೆ ಸಂಜಯ್​ ದತ್​
news18
Updated: June 29, 2018, 3:51 PM IST
ನ್ಯೂಸ್ 18 ಕನ್ನಡ 

ರಣಬೀರ್​ ಕಪೂರ್​ ಅಭಿನಯದ ಸಿನಿಮಾ ಬಿಡುಗಡೆಯಾಗಿದೆ. ಸಂಜಯ್​ ದತ್​ ಅವರ ಜೀವನವನ್ನು ತೆರೆ ಮೇಲೆ ನೋಡಲು ಕಾಯುತ್ತಿದ್ದವರ ಆಸೆಯೂ ಪೂರೈಸಿದೆ. ಆದರೆ ಬೆಳಿಗ್ಗೆ ಮೊದಲ ಪ್ರದರ್ಶನ ಆರಂಭವಾಗುವ ಮೊದಲೇ ಸಿನಿಮಾಗೆ ಸಂಬಂಧಿಸಿದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ತಮ್ಮ ಜೀವನಾಧಾರಿತ 'ಸಂಜು' ಸಿನಿಮಾದಲ್ಲಿ ಖುದ್ದು ಸಂಜಯ್​ ದತ್ ಅಭಿನಯಿಸಿದ್ದಾರೆ. ರಣಬೀರ್ ಸಿಂಗ್​ ಜತೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ನಿಮಗೆ ನಂಬಿಕೆ ಬರಲಿಲ್ಲ ಎಂದರೆ ಈ ಫೋಟೋ ನೋಡಿ.

 


Loading...ರಣಬೀರ್​ ಹಾಗೂ ಸಂಜಯ್​ ಅವರ ಈ ಫೋಟೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿದೆ. ಈ ದೃಶ್ಯ ಸಿನಿಮಾದ ಹಾಡಿನಲ್ಲಿ ಅಥವಾ ಕೊನೆಗೆ ಬರಬಹುದಾಗಿದೆ.

ಆದರೆ ಸಿನಿಮಾ ಚಿತ್ರೀಕರಣದ ಹಂತದಲ್ಲಿರುವಾಗ ಸಿನಿಮಾದಲ್ಲಿ ಮಧ್ಯಂತರದ ನಂತರ ಸಂಜಯ್​ ಕಾಣಿಸಿಕೊಳ್ಳಲಿದ್ದಾರೆ ಅನ್ನೋ ಸುದ್ದಿ ಹರಡಿತ್ತು. ಆದರೆ ನಿರ್ದೇಶಕ ಹಿರಾನಿ ಈ ಸುದ್ದಿಯ ಬಗ್ಗೆ ಪ್ರತಿಕ್ರಿಯೆ ನೀಡುವ ಮೂಲಕ ಎಲ್ಲರ ಬಾಯಿ ಮುಚ್ಚಿಸಿದರು.

'ನಾನು ಸಹ ಮೊದಲು ವಯಸ್ಸಾದಾಗಿ ಸಂಜಯ್​ ಪಾತ್ರಕ್ಕೆ ಸಂಜು ಬಾಬಾರನ್ನೇ  ಅಭಿನಯಿಸಲು ಆಯ್ಕೆ ಮಾಡುವವನಿದ್ದೆ. ಆದರೆ ಅರ್ಧ ಸಿನಿಮಾಗೆ ರಣಬೀರ್​ ಹಾಗೂ ಅರ್ಧ ಸಿನಿಮಾಗೆ ಸಂಜಯ್​ ಅವರನ್ನು ತಂದರೆ ಪ್ರೇಕ್ಷಕರಿಗೆ ಸಿನಿಮಾದ ಮೇಲಿನ ಆಸಕ್ತಿ ಕಡಿಮೆ ಆಗಬಹದು ಎಂದು ಈ ನಿರ್ಧಾರವನ್ನು ಕೈಬಿಡಲಾಯಿತು' ಎಂದು ಹಿರಾನಿ ಹೇಳಿಕೆ ನೀಡಿದ್ದರು.

 
First published:June 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ