ಪ್ರಭುದೇವ(Prabhu Deva) ಅಂದರೆ ಎಲ್ಲರೂ ಭಾರತದ ಮೈಕಲ್ ಜಾಕ್ಸನ್(Michael Jackson) ಎಂದೇ ಗುರುತಿಸುತ್ತಾರೆ. ಅದರಲ್ಲೂ ಪ್ರಭುದೇವ ನಮ್ಮ ಕನ್ನಡದವರು. ಅವರ ತಂದೆ ಕೂಡ ಹೆಸರಾಂತ ಡಾನ್ಸ್ ಮಾಸ್ಟರ್(Dance Master). ಭಾರತ ಚಿತ್ರರಂಗದಲ್ಲಿ ಸುಂದರಂ(Sundaram) ಮಾಸ್ಟರ್ ಸಖತ್ ಹೆಸರು ಮಾಡಿದ್ದಾರೆ. ಎಲ್ಲ ಭಾಷೆಗಳ ಸ್ಟಾರ್ ನಟ(Star Actor)ರಿಗೆ ನೃತ್ಯ ಸಂಯೋಜಿಸಿ ಸೈ ಎನಿಸಿಕೊಂಡಿದ್ದಾರೆ. ಇವಾಗ ಯಾಕಪ್ಪ ಅವರ ವಿಚಾರ ಅಂತ ಯೋಚನೆ ಮಾಡ್ತಿದ್ದೀರ? ಅದಕ್ಕೂ ಒಂದು ಕಾರಣ ಇದೆ. ಸುಂದರಂ ಮಾಸ್ಟರ್ ಬಗ್ಗೆ ಹೊಸದೊಂದು ಆರೋಪ ಕೇಳಿಬಂದಿದೆ. ಇವರ ಬಗ್ಗೆ ನಟಿಯೊಬ್ಬರು ಆರೋಪ ಮಾಡಿದ್ದು, ಸಾಮಾಜಿಕ ಜಾಲತಾಣ(Social Media)ದಲ್ಲಿ ಭಾರಿ ಚರ್ಚೆಗೆ ಎಡೆಮಾಡಿಕೊಟ್ಟಿದೆ. ನೂರಾರು ಸಿನಿಮಾಗಳು, ಹಲವಾರು ಸ್ಟಾರ್ಗಳ ಜೊತೆ ನೃತ್ಯ ನಿರ್ದೇಶಕರಾಗಿ ಸುಂದರಂ ಮಾಸ್ಟರ್ ಕೆಲಸ ಮಾಡಿದ್ದಾರೆ. 130ಕ್ಕೂ ಹೆಚ್ಚು ಚಿತ್ರಗಳಿಗೆ ನೃತ್ಯ ಸಂಯೋಜನೆ ಮಾಡಿದ್ದಾರೆ. ಇದೀಗ ಅವರ ಬಗ್ಗೆ ಗಂಭೀರ ಆರೋಪವೊಂದು ಕೇಳಿಬಂದಿದೆ. ಅದೇನು ಅಂತೀರಾ? ಮುಂದೆ ನೋಡಿ..
ಸುಂದರಂ ಮಾಸ್ಟರ್ ಮೇಲೆ ನಟಿ ಸುಧಾ ಆರೋಪ!
ತೆಲುಗು ನಟಿ ಸುಧಾ ಅವರು
ಹಲವು ವರ್ಷಗಳ ಹಿಂದೆ ಸಿನಿಮಾ ಸೆಟ್ನಲ್ಲಿ ಆದ ಅನುಭವವನ್ನ ಈಗ ನೆನಪಿಸಿಕೊಂಡಿದ್ದಾರೆ. ಜೊತೆಗೆ ಕೆಲ ವರ್ಷಗಳ ಬಳಿಕ ಸುಂದರಂ ಮಾಸ್ಟರ್ ಅವರೇ, ಸುಧಾ ಅವರ ಬಳಿ ಕ್ಷಮೆ ಕೇಳಿದ್ದಾರಂತೆ. ಆದರೂ, ಈ ವಿಚಾರ ಇದೀಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸುಂದರಂ ಮಾಸ್ಟರ್ ನಿಜಕ್ಕೂ ಹಾಗೇ ಮಾಡಿದ್ದರಾ? ಎಂಬ ಪ್ರಶ್ನೆಯನ್ನು ನೆಟ್ಟಿಗರು ಕೇಳುತ್ತಿದ್ದಾರೆ. ಹಿರಿಯ ನಟಿ ಸುಧಾ ಅವರು ಈ ಹಿಂದೆ ಸುಂದರಂ ಮಾಸ್ಟರ್ ನನ್ನನ್ನು ಕೆಟ್ಟದಾಗಿ ಬೈದು, ಅವಮಾನಿಸಿದ್ದರು ಎಂದು ಹೇಳಿಕೊಂಡಿದ್ದಾರೆ. ಸಿನಿಮಾವೊಂದರ ಶೂಟಿಂಗ್ ಟೈಮ್ನಲ್ಲಿ ಡಾನ್ಸ್ ಸರಿಯಾಗಿ ಮಾಡದೇ ಇದ್ದಿದ್ದಕ್ಕೆ ಸುಧಾ ಅವರನ್ನು ಕೆಟ್ಟ ಪದಗಳಿಂದ ಸುಂದರಂ ಮಾಸ್ಟರ್ ಬೈದಿದ್ದರಂತೆ. ಇದನ್ನು ಕೇಳಿ ಸುಧಾ ಅವರು ಸೆಟ್ನಲ್ಲೇ ಗಳ ಗಳನೇ ಕಣ್ಣೀರಿಟ್ಟಿದ್ದರಂತೆ.
ಇದನ್ನೂ ಓದಿ: ಜಸ್ಟ್ 40 ರೂಪಾಯಿಯಲ್ಲಿ ಆರಂಭವಾಗಿತ್ತಂತೆ `ಸಲಗ’ ಸಿನಿಮಾ.. ಸಕ್ಸಸ್ ಮೀಟ್ನಲ್ಲಿ ಕಣ್ಣೀರಿಟ್ಟ ದುನಿಯಾ ವಿಜಯ್!
ವೇಶ್ಯಾವಾಟಿಕೆಗೂ ನೀನು ಯೋಗ್ಯಳಲ್ಲ ಅಂದಿದ್ರಂತೆ ಮಾಸ್ಟರ್!
ಹೌದು, ಸರಿಯಾಗಿ ಡಾನ್ಸ್ ಮಾಡಲಿಲ್ಲ ಎಂಬ ಕಾರಣಕ್ಕೆ ಸುಂದರಂ ಮಾಸ್ಟರ್ ಹೀಗೆ ಬೈದಿದ್ದರು ಎಂದು ನಟಿ ಆರೋಪಿಸಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ ಹಿರಿಯ ನಟಿ ಸುಧಾ. ’ನನಗೆ ಸುಂದರಂ ಮಾಸ್ಟರ್ ಅವರು ಡಾನ್ಸ್ ಹೇಳಿಕೊಡುತ್ತಿದ್ದರು. ಆದರೆ, ನನಗೆ ಐದು ಟೇಕ್ ಆದರೂ ಡ್ಯಾನ್ಸ್ ಬರಲಿಲ್ಲ. ಆಗ ನೀನು ವೇಶ್ಯಾವಾಟಿಕೆಗೂ ಯೋಗ್ಯಳಲ್ಲ ಎಂದಿದ್ದರು. ಆ ಸಂದರ್ಭದಲ್ಲಿ ಪ್ರಭು, ಪಿ.ವಾಸು ಸೇರಿದಂತೆ ಹಲವು ದೊಡ್ಡವರು ಸೆಟ್ಟಿನಲ್ಲಿದ್ದರು. ಆಗ ನಾನು ಅಳುತ್ತಿದ್ದೆ, ಎಲ್ಲರ ಮುಂದೆ ಇಷ್ಟು ದೊಡ್ಡ ಅವಮಾನ ಮಾಡಿದರು. ಅಳುತ್ತಲೇ ಸೆಟ್ನಿಂದ ಹೊರಗೆ ಹೋಗಿದ್ದೆ. ಯಾರೇ ಆದರೂ ಈ ರೀತಿಯ ಬಳಸಬಾರದು’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ: ಪುನೀತ್ ಅಭಿಮಾನಿಯ ವಿನೂತನ ಶ್ರದ್ಧಾಂಜಲಿಗೆ ಮೊಳಕೆಯೊಡೆದ ಪೈರು; ಇಲ್ಲಿವೆ ಅದ್ಭುತ ಚಿತ್ರಗಳು
ಕೆಲ ವರ್ಷಗಳ ಬಳಿಕ ಕ್ಷಮೆ ಕೇಳಿದ್ದರಂತೆ ಸುಂದರಂ ಮಾಸ್ಟರ್!
‘ನಾನು ಅಳುತ್ತಾ ಮನೆಗೆ ಹೊಗಿ ಈ ವಿಚಾರವನ್ನು ನನ್ನ ತಾಯಿಗೆ ಹೇಳಿದೆ. ಅವರು ಇರುವ ಈ ಚಿತ್ರತಂಡದಲ್ಲಿ ನಾನು ಇರುವುದಿಲ್ಲ ಎಂದೆ. ಆದರೆ ನನ್ನ ತಾಯಿ ಸಮಾಧಾನಪಡಸಿ, ಇದಕ್ಕೆ ಹೆದರದೆ ನೀನು ನಟನೆಯಿಂದಲೇ ಉತ್ತರ ನೀಡಬೇಕು ಎಂದು ಧೈರ್ಯ ತುಂಬಿದ್ದರು. ಬರೋಬ್ಬರಿ 6 ವರ್ಷಗಳ ಬಳಿಕ ಅವರು ಕ್ಷಮೆ ಕೇಳಿದ್ದರು ಎಂದು ನಟಿ ಸುಧಾ ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ