ರಾಯಚೂರಿನ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಯೋಗರಾಜ್​ ಭಟ್ಟರ ಮನಮುಟ್ಟುವ ಪತ್ರ

ವಿಕೃತನೊಬ್ಬನ ಕೆಲಸಕ್ಕೆ ಹೂವೊಂದು ಸುಟ್ಟು ಹೋಗಿದೆ. ಎಲ್ಲೆಡೆ ಮರುಕ ಮಡುಗಟ್ಟುತ್ತಿದೆ, ಮಧು ಎಂಬ ಅಮಾಯಕಿಯ ಕೊಲೆಗೆ.... ಇದು ನಿರ್ದೇಶಕ ಯೋಗರಾಜ್​ ಭಟ್​ ಅವರು ಬರೆದ ಹೃದಯ ಸ್ಪರ್ಶಿ ಪತ್ರ.

Anitha E | news18
Updated:April 21, 2019, 3:07 PM IST
ರಾಯಚೂರಿನ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು: ಯೋಗರಾಜ್​ ಭಟ್ಟರ ಮನಮುಟ್ಟುವ ಪತ್ರ
ಯೋಗರಾಜ್​ ಭಟ್ಟರ ಮನಮುಟ್ಟುವ ಪತ್ರ
  • News18
  • Last Updated: April 21, 2019, 3:07 PM IST
  • Share this:
- ಅನಿತಾ ಈ, 

ರಾಯಚೂರಿನ ಎಂಜಿನಿಯರಿಂಗ್​ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವಿಗೆ ಎಲ್ಲೆಡೆ ಖಂಡನೆ ವ್ಯಕ್ತವಾಗುತ್ತಿದೆ. ರಾಯಚೂರಿನ ಜನರು, ವಿದ್ಯಾರ್ಥಿಗಳು, ಸಿನಿ ತಾರೆಯರು ಸೇರೊದಂತೆ ಎಲ್ಲರೂ ಈ ಸಾವಿಗೆ ನ್ಯಾಯ ಸಿಗಬೇಕೆಂದು #JusticeForMadhu ಎಂಬ ಅಭಿನಯಾನ ಆರಂಭಿಸಿದ್ದಾರೆ.

ಇದನ್ನೂ ಓದಿ: ಮುದ್ದಿನ ಮಗಳ ಮದುವೆಗೆ ತಾನೇ ಲಗ್ನಪತ್ರಿಕೆ ವಿನ್ಯಾಸ ಮಾಡಿದ ಕ್ರೇಜಿಸ್ಟಾರ್​ ರವಿಮಾಮ..!

ಅದಕ್ಕಾಗಿ ಸಾಮಾಜಿಕ ಜಾಲತಾಣದಲ್ಲಿ ಎಲ್ಲರೂ ನ್ಯಾಯಕ್ಕಾಗಿ ಆಗ್ರಹಿಸುತ್ತಾ ಪೋಸ್ಟ್​ ಮಾಡುತ್ತಿದ್ದಾರೆ. ಈ ಘಟನೆಗೆ ಆಕ್ರೋಶ ವ್ಯಕ್ತಪಡಿಸುತ್ತಾ ನಿರ್ದೇಶಕ ಯೋಗರಾಜ ಭಟ್​ ಸಹ ಒಂದು ಮನಮುಟ್ಟುವ ಪತ್ರವನ್ನು ಬರೆದಿದ್ದಾರೆ.ಹೌದು, ಅವರು ಬರೆದಿರುವ ಪತ್ರ ಈಗ ವೈರಲ್​ ಆಗುತ್ತಿದೆ. ಆಗಷ್ಟೆ ಅರಳುತ್ತಿದ್ದ ಹೂವು ಸುಟ್ಟುಹೋಗಿದೆ ಎಂದು ವಿದ್ಯಾರ್ಥಿನಿ ಮಧುವನ್ನು ಹೂವಿಗೆ ಹೋಲಿಸುತ್ತಾ ಬರೆದಿದ್ದಾರೆ. ಅದರಲ್ಲೂ ಮಧುವನ್ನು ತಾಯಿ ಎಂದು ಕರೆದು ನೀ ಇಲ್ಲದಿದ್ದರೂ ನಿನಗೆ ನ್ಯಾಯ ಸಿಗಲೆಂದು ಭಾರದ ಮನಸ್ಸಿನಿಂದ ಬಯಸಿದ್ದಾರೆ.

ಯೋಗರಾಜ ಭಟ್ಟರ ಅಕ್ಷರ ಕಮಾಲ್​ ಹೇಗಿರುತ್ತೆ ಅಂತ ಎಲ್ಲರಿಗೂ ಗೊತ್ತೇ ಇದೆ. ಆದರೆ ಪುಟ್ಟ ವಿದ್ಯಾರ್ಥಿನಿಯ ಸಾವಿನ ಕುರಿತು ಅವರು ಬರೆದಿರುವ ಸಾಲುಗಳು ಎಂಥಾ ಕಲ್ಲು ಮನಸ್ಸನ್ನೂ ಕರಗಿಸುವಂತಿದೆ.ಇದನ್ನೂ ಓದಿ: ಮಡದಿ ರಾಧಿಕಾ ಜತೆ ಸ್ಪರ್ಧೆಗಿಳಿದ ರಾಕಿಂಗ್​ ಸ್ಟಾರ್​ ಯಶ್​..!

ವಿದ್ಯಾರ್ಥಿನಿ ಮಧು ಆತ್ಮಕ್ಕೆ ಶಾಂತಿ ಕೋರುವುದು ಪ್ರತಿಯೊಬ್ಬರ ಕರ್ತವ್ಯ. ಅತ್ಯಾಚಾರ ಹಾಗೂ ಕೊಲೆಯಂತಹ ಕೃತ್ಯಗಳನ್ನು ತಡೆಯಲು ತಡವಾದರೂ ಪರವಾಗಿಲ್ಲ, ಇಂತಹ ವಿಷಯಗಳಿಗೆ ಪ್ರತಿಕ್ರಿಯಿಸಿ.... ಭವಿಷ್ಯದ ಹೂಗಳನ್ನು ಸುಡಲು ಬರುವ ಬೆಂಕಿಯ ಕಿಡಿಗಳಲ್ಲಿ ಒಂದೇ ಒಂದು ಉಳಿಯದಂತೆ ಮಾಡಿ ಎಂದು ಜನರದಲ್ಲಿ ಮನವಿ ಮಾಡಿದ್ದಾರೆ.

PHOTOS: ಫೋಟೋ ಶೂಟ್​ಗಳಲ್ಲಿ ಬ್ಯುಸಿಯಾದ ನಗು ಮೊಗದ ಶಾಲಿನಿ ಪಾಂಡೆ

First published:April 21, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading