Yogaraj Bhat: ಗರಡಿ ಸಿನಿಮಾದ ಸ್ಪೆಷಲ್ ಪೋಸ್ಟರ್ ರಿಲೀಸ್, ಕುಸ್ತಿ ಅಖಾಡದಲ್ಲಿ ನಟ ಸೂರ್ಯ ಭರ್ಜರಿ ಪೋಸ್​

Garadi Film: ಚಿತ್ರದ ಪ್ರಮುಖ ಅಂಶವಾಗಿರುವ ಕುಸ್ತಿ ದೃಶ್ಯಗಳನ್ನು ಸೆರೆಹಿಡಿಯಲು ತಂಡವು ಈಗಾಗಲೇ ವಿಶೇಷ ಸೆಟ್ ಅನ್ನು ನಿರ್ಮಿಸಿದೆ. ಗರಡಿ ಸಿನಿಮಾದಲ್ಲಿ ನಾಯಕಿಯಾಗಿ ಸೋನಾಲ್ ಮಾಂಟೆರೋ ಅಭಿನಯಿಸುತ್ತಿದ್ದಾರೆ

ಗರಡಿ ಸಿನಿಮಾದ ಪೋಸ್ಟರ್

ಗರಡಿ ಸಿನಿಮಾದ ಪೋಸ್ಟರ್

  • Share this:
ಸ್ಯಾಂಡಲ್‌ವುಡ್‌ನ (Sandalwood) ಖ್ಯಾತ ನಿರ್ದೇಶಕ ಯೋಗರಾಜ್ ಭಟ್ (Director Yogaraj Bhat) ಅವರ ಮುಂಬರುವ ಬಹು ನಿರೀಕ್ಷಿತ ‘ಗರಡಿ’ ಸಿನಿಮಾದ ನಾಯಕ ನಟ ಸೂರ್ಯ ಅವರ ಜನ್ಮದಿನದ (Birthday)  ಹಿನ್ನೆಲೆ ವಿಶೇಷ ಪೋಸ್ಟರ್ ರಿಲೀಸ್​ ಮಾಡಲಾಗಿದೆ. ಈಗಾಗಲೇ ಈ ಚಿತ್ರದ ಮುಕ್ಕಾಲು ಭಾಗ ಶೂಟಿಂಗ್ ಮುಗಿದಿದ್ದು, ಟೈಟಲ್ ಸಾಂಗ್ ಚಿತ್ರೀಕರಣ ಸಹ ಆಗಿದ್ದು, ಈ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿದೆ. ಇಂದು ನಾಯಕ ನಟ ಸೂರ್ಯ ಅವರ ಜನ್ಮದಿನ, ಹಾಗಾಗಿ ಅವರ ಸ್ಪೆಷಲ್ ಪೋಸ್ಟರ್ ರಿಲೀಸ್ ಮಾಡಿದ್ದು, ಅದರಲ್ಲಿ ಅವರ ಲುಕ್ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.

ಬರ್ತ್ ಡೇ ಸ್ಪೆಷಲ್ ಪೋಸ್ಟರ್ ರಿಲೀಸ್​

ನಾಯಕ ನಟ ಯಶಸ್ ಸೂರ್ಯ (Yashas Surya) ಕುಸ್ತಿಪಟುವಿನ ಪಾತ್ರ ನಿರ್ವಹಿಸುತ್ತಿರುವ ಬಗ್ಗೆ ಈಗಾಗ್ಲೇ ಮಾಹಿತಿಗಳು ಹೊರಬಿದ್ದಿವೆ. ಗರಡಿ ಚಿತ್ರದಲ್ಲಿ ಇಂತಹ ಹಲವಾರು ವಿಶೇಷತೆಗಳಿದ್ದು, ‘ಕೌರವ’ ಖ್ಯಾತಿಯ, ಸಚಿವ ಬಿ.ಸಿ.ಪಾಟೀಲ್ (B.C. Patil) ಅವರು ಅಭಿನಯಿಸುತ್ತಿರುವುದು ಇನ್ನೊಂದು ವಿಶೇಷ. ಚಿತ್ರದ ಚಿತ್ರೀಕರಣ (Shooting) ಭರದಿಂದ ಸಾಗುತ್ತಿದ್ದು, ಕುಸ್ತಿ ಅಖಾಡದಲ್ಲಿ ಚಿತ್ರ ತಂಡ ಬ್ಯುಸಿಯಾಗಿದೆ. ಗರಡಿ ಚಿತ್ರದಲ್ಲಿ ಸೂರಿ ಪಾತ್ರ ನಿರ್ವಹಿಸುತ್ತಿರುವ ಶಿಶಿರ, ಚಿಂಗಾರಿ, ಕುರುಕ್ಷೇತ್ರ, ಒಡೆಯ ಸಿನಿಮಾದ ಖ್ಯಾತಿಯ ನಟ ಯಶಸ್ ಸೂರ್ಯ ಚಿತ್ರದಲ್ಲಿ ಕುಸ್ತಿಪಟುವಾಗಿ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಕುಸ್ತಿಪಟುವಿನ ಪಾತ್ರಕ್ಕಾಗಿ ಯಶಸ್ ಸೂರ್ಯ ಇನ್ನಿಲ್ಲದ ಕಸರತ್ತುಗಳನ್ನು ನಡೆಸಿ ಬಾಡಿ ಬಿಲ್ಡ್ (Body Build) ಮಾಡಿದ್ದು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: ಕೆಜಿಎಫ್ ತಾತನಿಗೆ ಮತ್ತೊಂದು ಅವಕಾಶ, ಸಲಾರ್ ಸಿನಿಮಾದಲ್ಲಿ ನಟಿಸ್ತಾರಂತೆ ಈ ನಟ

ಚಿತ್ರದ ಪ್ರಮುಖ ಅಂಶವಾಗಿರುವ ಕುಸ್ತಿ ದೃಶ್ಯಗಳನ್ನು ಸೆರೆಹಿಡಿಯಲು ತಂಡವು ಈಗಾಗ್ಲೇ ವಿಶೇಷ ಸೆಟ್ ಅನ್ನು ನಿರ್ಮಿಸಿದೆ. ಗರಡಿ ಸಿನಿಮಾದಲ್ಲಿ ನಾಯಕಿಯಾಗಿ ಸೋನಾಲ್ ಮಾಂಟೆರೋ ಅಭಿನಯಿಸುತ್ತಿದ್ದಾರೆ. ಇನ್ನು ಬಹಳ ವರ್ಷಗಳ ನಂತರ ಸಚಿವ ಹಾಗೂ ನಟ ಬಿ.ಸಿ ಪಾಟೀಲ್ ಕುಸ್ತಿಪಟುವಾಗಿ ಚಿತ್ರರಂಗಕ್ಕೆ ಕಮ್ ಬ್ಯಾಕ್ ಮಾಡಿದ್ದಾರೆ. ಈ ಸಿನಿಮಾದಲ್ಲಿ. ಸಚಿವ ಎಸ್. ಟಿ ಸೋಮಶೇಖರ್ ಕೂಡ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ನಿರ್ದೇಶಕ ಯೋಗರಾಜ್ ಭಟ್ ಹೇಳಿದ್ದಾರೆ.

ಬಹುದೊಡ್ಡ ತಾರಾಂಗಣದ ಸಿನಿಮಾ

ಇನ್ನು ಈ ಮೊದಲು ಈ ಚಿತ್ರಕ್ಕೆ ರಚಿತ ರಾಮ್ ನಾಯಕಿಯಾಗಿ ಆಯ್ಕೆಯಾಗಿದ್ದರು. ಆದರೆ ಡೇಟ್​ ಹೊಂದಾಣಿಕೆ ಆಗದ ಹಿನ್ನೆಲೆ ನಟಿ ಸೋನಾಲ್ ಮೊಂಟೆರೋ ನಾಯಕಿಯಾಗಿ ಮಾಡಿದ್ದಾರೆ. ಪಂಚತಂತ್ರ ಚಿತ್ರದಲ್ಲಿ ನಟಿಸಿದ್ದ ಸೋನಾಲ್ ಈಗ ಗರಡಿ ಚಿತ್ರಕ್ಕೆ ಆಯ್ಕೆ ಆಗಿದ್ದಾರೆ. ಪಂಚತಂತ್ರ ಸಿನಿಮಾದ ನಂತರ ಯೋಗರಾಜ್ ಭಟ್ ಜೊತೆ ಸೋನಾಲ್ ಮೊಂತೆರೋ ಕೆಲಸ ಮಾಡುತ್ತಿದ್ದಾರೆ.

ಇದನ್ನೂ ಓದಿ: ನಯನತಾರಾ ಮದುವೆಗೆ ಬಂದ್ ಶಾರುಖ್ ಖಾನ್ ಟ್ರೋಲ್, ಇಷ್ಟ್​ ಬೇಗ ಕೊರೊನಾ ಹೋಯ್ತಾ ಎಂದ ನೆಟ್ಟಿಗರು

ಸ್ಯಾಂಡಲ್​ವುಡ್​ನಲ್ಲಿ ಅತಿ ಹೆಚ್ಚು ಬೇಡಿಕೆ ಇರುವ ನಟಿ ಅಂದರೆ ರಚಿತಾ ರಾಮ್​. ಹೀಗಾಗಿ ಸಾಲು ಸಾಲು ಸಿನಿಮಾಗಳಲ್ಲಿ ರಚಿತಾ ಬ್ಯುಸಿಯಾಗಿದ್ದಾರೆ. ಅದರಿಂದ ಗರಡಿ ಚಿತ್ರಕ್ಕೆ ಡೇಟ್ಸ್ ಹೊಂದಾಣಿಕೆ ಆಗಿಲ್ಲ ಎಂಬ ಕಾರಣಕ್ಕೆ ಗರಡಿ ತಂಡದಿಂದ ಹೊರಬಂದಿದ್ದಾರೆ. ಅಭಿಮಾನಿಗಳಿಗೆ ಇದು ಬೇಸರ ಮೂಡಿಸಿದ್ದು, ಚಿತ್ರತಂಡಕ್ಕೂ ಕೂಡ ನಿರಾಸೆ ಆಗಿದೆ. ಯಾಕೆಂದರೇ ಯಶಸ್ ಸೂರ್ಯ ಮತ್ತು ರಚಿತಾ ರಾಮ್ ಇದೇ ಮೊದಲ ಬಾರಿಗೆ ಜೋಡಿಗಳಾಗಿ ತೆರೆಮೇಲೆ ಕಾಣಿಸೋದ್ರಲ್ಲಿ ಇದ್ದರು. ಆದರೇ ಇದೆಲ್ಲದಕ್ಕೂ ಈಗ ಫುಲ್‌ಸ್ಟಾಪ್ ಬಿದ್ದಿದೆ. ಕಾರಣ ನಟಿ ರಚಿತಾ ರಾಮ್ ಗರಡಿ ತಂಡದಿಂದ ಹೊರನಡೆದಿದ್ದಾರೆ.
Published by:Sandhya M
First published: