ಹಿಮಾಚಲ ಪ್ರದೇಶದತ್ತ ಹಾರಲು ರೆಡಿಯಾದ ಭಟ್ರ ಗಾಳಿಪಟ

ಸದ್ಯ ಚಿತ್ರೀಕರಣಕ್ಕಾಗಿ ಯುರೋಪ್​ಗೆ ತೆರಳಲು ಸಾಧ್ಯವೇ ಇಲ್ಲ. ಹಾಗಾಗಿ ಯೋಗರಾಜ್​ ಭಟ್​​ ವಿದೇಶದಲ್ಲಿ ಚಿತ್ರೀಕರಿಸುವ ಬದಲು ಹಿಮಾಚಲ ಪ್ರದೇಶದಲ್ಲಿ ಶೂಟಿಂಗ್​ ಮಾಡಲು ಪ್ಲಾನ್​ ಮಾಡಿಕೊಂಡಿದ್ದಾರೆ.

ಗಾಳಿಪಟ-2

ಗಾಳಿಪಟ-2

 • Share this:
  ಯೋಗರಾಜ್​ ಭಟ್​​ ಗಾಳಿಪಟ-2 ಸಿನಿಮಾವನ್ನುಮಾಡುತ್ತಿದ್ದಾರೆ. ಈಗಾಗಲೇ ಈ ಸಿನಿಮಾದ ಅರ್ಧದಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಇನ್ನು ಉಳಿದ ಚಿತ್ರೀಕರಣ ಲಾಕ್​ಡೌನ್​ನಿಂದಾಗಿ ಸ್ಥಗಿತವಾಗಿದೆ. ಈ ಮೊದಲು ಸಿನಿಮಾ ಚಿತ್ರೀಕರಣಕ್ಕಾಗಿ ಗಾಳಿಪಟ ಚಿತ್ರತಂಡ ಯುರೋಪ್​ಗೆ ತೆರಳಿ ಚಿತ್ರೀಕರಣ ನಡೆಸಬೇಕು ಎಂದು ಯೋಜನೆ ಹಾಕಿಕೊಂಡಿದ್ದರು. ಪೋಲೆಂಡ್​, ಜಾರ್ಜಿಯಾಗೆ ತೆರಳಿ ಶೂಟಿಂಗ್​​ ಮಾಡಬೇಕೆಂದು ತಿರ್ಮಾನಿಸಿದ್ದರು. ಆದರೆ ಲಾಕ್​ಡೌನ್​ನಿಂದಾಗಿ ಭಟ್ರು ಹಾಕಿಕೊಂಡ ಯೋಜನೆಗಳೆಲ್ಲಾ ಉಲ್ಟಾ-ಪಲ್ಟಾ ಆಗಿದೆ.

  ಸದ್ಯ ಚಿತ್ರೀಕರಣಕ್ಕಾಗಿ ಯುರೋಪ್​ಗೆ ತೆರಳಲು ಸಾಧ್ಯವೇ ಇಲ್ಲ. ಹಾಗಾಗಿ ಯೋಗರಾಜ್​ ಭಟ್​​ ವಿದೇಶದಲ್ಲಿ ಚಿತ್ರೀಕರಿಸುವ ಬದಲು ಹಿಮಾಚಲ ಪ್ರದೇಶದಲ್ಲಿ ಶೂಟಿಂಗ್​ ಮಾಡಲು ಪ್ಲಾನ್​ ಮಾಡಿಕೊಂಡಿದ್ದಾರೆ.

  ಈ ಬಗ್ಗೆ ಮಾತನಾಡಿದ್ದ ಯೋಗರಾಜ್​ ಭಟ್​​ ‘ನಾನು ಈ ಸಿನಿಮಾದ ಕಥೆ ಬರೆಯುವಾಗ ಉತ್ತರ ಭಾರತದಲ್ಲಿ ಸಿನಿಮಾ ಶೂಟಿಂಗ್​ ಮಾಡಬೇಕು ಎಂದುಕೊಂಡಿದ್ದೆ. ಆ ನಂತರ ಕೆಲ ಬದಲಾವಣೆಗಳಾಗಿ ಯರೋಪ್​ನಲ್ಲಿ ಚಿತ್ರೀಕರಣ ನಡೆಸುವ ಪ್ಲಾನ್​ ಹಾಕಿಕೊಂಡೆವು. ಆದರೀಗ ಲಾಕ್​ಡೌನ್​ ಸಂದರ್ಭ ಬೇರೆ ದೇಶಗಳಿಗೆ ಹೋಗುವ ಹಾಗಿಲ್ಲ. ಹಾಗಾಗಿ ಹಿಮಾಚಲ ಪ್ರದೇಶದಲ್ಲಿ ಚಿತ್ರೀಕರಣ ಮಾಡಲಿದ್ದೇವೆ ಎನ್ನುತ್ತಾರೆ ಯೋಗರಾಜ್​ ಭಟ್ಟರು.

  ಯೋಗರಾಜ್​ ಭಟ್​​ ಚಿತ್ರೀಕರಿಸಿದ ಗಾಳಿಪಟ ಸಿನಿಮಾ ದೊಡ್ಡ ಯಶಸ್ಸುಗಳಿಸಿತ್ತು. ಇದೀಗ ಗಾಳಿಪಟ-2 ಸಿನಿಮಾವನ್ನು ಮಾಡುತ್ತಿದ್ದಾರೆ. ಈ ಸಿನಿಮಾದಲ್ಲಿ ಗೋಲ್ಡನ್​ ಸ್ಟಾರ್​ ಗಣೇಶ್​, ದಿಗಂತ್​, ಲೂಸಿಯಾ ಪವನ್​​​, ಅನಂತ್​ ನಾಗ್​​ ನಟಿಸುತ್ತಿದ್ದಾರೆ.

  ಕನ್ನಡ ಸಿನಿರಂಗಕ್ಕೂ ವಿಶೇಷ ಪ್ಯಾಕೇಜ್​ ಘೋಷಿಸಿ ಎಂದು ಸಿಎಂಗೆ ತಾರಾ ಮನವಿ
  First published: