ಭಟ್ರ ಗಾಳಿಪಟಕ್ಕೂ ಕೊರೋನಾ ಭೀತಿ!: ಶೂಟಿಂಗ್​ ಇನ್ನೆರಡು ತಿಂಗಳು ಮುಂದಕ್ಕೆ

ಗಾಳಿಪಟ-2 ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್, ದಿಗಂತ್, ಪವನ್ ಕುಮಾರ್, ನಿಶ್ವಿಕಾ ನಾಯ್ಡು, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ವೈಭವಿ ಶಾಂಡಿಲ್ಯ ಅಭಿನಯಿಸುತ್ತಿದ್ದಾರೆ

‘ಗಾಳಿಪಟ-2‘

‘ಗಾಳಿಪಟ-2‘

 • Share this:
  ಜಗತ್ತಿನಾದ್ಯಂತ ಆತಂಕ ಸೃಷ್ಠಿಸಿದ್ದ  ಕೊರೋನಾ ವೈರಸ್​ ಭೀತಿ ಇದೀಗ ಚಿತ್ರರಂಗಕ್ಕೂ ತಟ್ಟಿದೆ. ಹಾಗಾಗಿ ಕೆಲವು ನಿರ್ದೆಶಕರು ತಮ್ಮ ಸಿನಿಮಾಗಳ ಚಿತ್ರೀಕರಣವನ್ನು ಮುಂದಕ್ಕೆ ಹಾಕುತ್ತಿದ್ದಾರೆ. ಅದರಂತೆ ಗೋಲ್ಡನ್​ ಸ್ಟಾರ್​ ಗಣೇಶ್​ ಅಭಿನಯದ ಗಾಳಿಪಟ-2 ಸಿನಿಮಾದ ಚಿತ್ರೀಕರಣವನ್ನು ಎರಡು ತಿಂಗಳು ಮುಂದಕ್ಕೆ ಹಾಕಲಾಗಿದೆ.

  ಯೋಗರಾಜ್​ ಭಟ್​ ನಿರ್ದೇಶನದ ‘ಗಾಳಿಪಟ‘ ಸಿನಿಮಾ ಬಿಡುಗಡೆಗೊಂಡು ಭರ್ಜರಿ ಯಶಸ್ವಿಯಾಗಿತ್ತು. ಇದೀಗ ‘ಗಾಳಿಪಟ-2‘ ಸಿನಿಮಾಗೆ ಆ್ಯಕ್ಷನ್​ ಕಟ್​ ಹೇಳುತ್ತಿದ್ದಾರೆ.  ಇಲ್ಲಿಯವರೆಗೆ 30 ದಿನಗಳ ಕಾಲ ಶೂಟಿಂಗ್​ ಮಾಡಲಾಗಿದೆ.  ಇನ್ನು ಕೆಲವು ದೃಶ್ಯಗಳಿಗಾಗಿ ಚಿತ್ರತಂಡ ವಿದೇಶ ತೆರಳಲು ಪ್ಲಾನ್​ ಮಾಡಿಕೊಂಡಿತ್ತು. ಆದರೀಗ ಕೊರೊನಾ ಭೀತಿಯಿಂದಾಗಿ ವಿದೇಶ ಪ್ರವಾಸವನ್ನು ರದ್ದುಮಾಡಿದೆ.

  ಗಾಳಿಪಟ-2


  ಇನ್ನು ಗಾಳಿಪಟ-2 ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್, ದಿಗಂತ್, ಪವನ್ ಕುಮಾರ್, ನಿಶ್ವಿಕಾ ನಾಯ್ಡು, ಶರ್ಮಿಳಾ ಮಾಂಡ್ರೆ, ಸಂಯುಕ್ತಾ ಮೆನನ್, ವೈಭವಿ ಶಾಂಡಿಲ್ಯ ಅಭಿನಯಿಸುತ್ತಿದ್ದಾರೆ.

  ಈ ಹಿಂದೆ ದರ್ಶನ್​ ನಟನೆಯ ರಾಬರ್ಟ್​ ಚಿತ್ರತಂಡ ಕೂಡ ಹಾಡುಗಳ ಚಿತ್ರೀಕರಣಕ್ಕಾಗಿ ವಿದೇಶಕ್ಕೆ ತೆರಳಲು ಪ್ಲಾನ್​ ಹಾಕಿಕೊಂಡಿತ್ತು. ಆದರೆ ವಿದೇಶದಲ್ಲೂ ಕೊರೊನಾ ವೈಸರ್​ಗಳು ಕಂಡುಬಂದಿದ್ದು, ಈ ಕಾರಣಕ್ಕಾಗಿ ವಿದೇಶ ಪ್ರವಾಸವನ್ನು ರದ್ದುಮಾಡಿತ್ತು. ಸದ್ಯ ಗುಜರಾತ್​ನ ಕಚ್​ನಲ್ಲಿ ರಾಬರ್ಟ್​ ಚಿತ್ರತಂಡ ಶೂಟಿಂಗ್​ಗೆ ಪ್ಲಾನ್​ ಹಾಕಿಕೊಂಡಿದೆ.

  ಇದನ್ನೂ ಓದಿ: ಸ್ಟಾರ್ ನಟನ ಮದುವೆಗೂ ಕುತ್ತು ತಂದಿತೆ ಕೊರೊನಾ?
  First published: