ಕನ್ನಡದಲ್ಲೊಬ್ಬ ಕಟ್ಟಪ್ಪನನ್ನೂ ಮೀರಿಸುವ ಖಳ: ಸ್ಯಾಂಡಲ್‌ವುಡ್‌ಗೆ ಹೊಸ ವಿಲನ್‌ ಎಂಟ್ರಿ!

ಲೇಟಾದರೂ ಲೇಟೆಸ್ಟಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿರುವ ದೈತ್ಯ ಯೋಗೀಶ್‌ ಕುಮಾರ್‌ ಕನ್ನಡದಲ್ಲಿ ಒಬ್ಬ ಉತ್ತಮ ಖಳನಾಯಕನಾಗುವ ಭರವಸೆ ಮೂಡಿಸಿದ್ದಾರೆ.

Yogish Kumar

Yogish Kumar

  • Share this:
ಸಾಮಾನ್ಯವಾಗಿ ಸಿನಿಮಾಗಳಲ್ಲಿ ಹೀರೋಗಳು ಎಷ್ಟು ಮುಖ್ಯನೋ, ಅಷ್ಟೇ ಪ್ರಾಮುಖ್ಯತೆಯನ್ನು ವಿಲನ್‌ಗಳಿಗೂ ನೀಡಲಾಗುತ್ತದೆ. ಇನ್ನು ಮಾಸ್ಟರ್‌ ಡೈರೆಕ್ಟರ್‌ ರಾಜಮೌಳಿಯ ಸಿನಿಮಾಗಳಲ್ಲಿ ಹೀರೋಗಳಿಗಿಂತ ವಿಲನ್‌ಗಳೇ ಹೆಚ್ಚು ಬಲಿಷ್ಠರಾಗಿರುತ್ತಾರೆ. ಹೀಗಾಗಿಯೇ ಖಳನಾಯಕ ಪಾತ್ರಧಾರಿಗಳಿಗೆ ಎಲ್ಲಿಲ್ಲದೆ ಬೇಡಿಕೆಯಿದೆ. ಅದರಲ್ಲಂತೂ ಕನ್ನಡದಲ್ಲಿ ರವಿಶಂಕರ್‌ ಹಾಗೂ ಭಜರಂಗಿ ಲೋಕಿ ಅವರನ್ನು ಹೊರತುಪಡಿಸಿದರೆ ಸದ್ಯ ಕನ್ನಡದಲ್ಲಿ ಹೇಳಿಕೊಳ್ಳುವಂತಹ ವಿಲನ್‌ಗಳು ಇಲ್ಲ. ಭರವಸೆ ಮೂಡಿಸಿದ್ದ ಅಜಾನುಬಾಹುಗಳಾದ ಉದಯ್‌ ಹಾಗೂ ಅನಿಲ್‌ ಇಬ್ಬರೂ ಇಂದು ನಮ್ಮೊಂದಿಗಿಲ್ಲ.

ಹೀಗಾಗಿಯೇ ಕನ್ನಡದಲ್ಲಿ ಸೋನು ಸೂದ್‌, ಸಯಾಜಿ ಶಿಂಧೆ, ಆಶಿಷ್‌ ವಿದ್ಯಾರ್ಥಿ ಸೇರಿದಂತೆ ಪರಭಾಷೆಗಳಿಂದ ವಿಲನ್‌ಗಳನ್ನು ಆಮದು ಮಾಡಿಕೊಳ್ಳುವುದೂ ಇದೆ. ಆದರೆ, ಈಗ ಪರಭಾಷಾ ವಿಲನ್‌ಗಳ ಇಂಪೋರ್ಟ್‌ಗೆ ಬ್ರೇಕ್‌ ಬೀಳುವ ಸಾಧ್ಯತೆಯಿದೆ. ಯಾಕೆಂದರೆ ಕನ್ನಡದಲ್ಲೇ ಬಾಹುಬಲಿಯ ಕಟ್ಟಪ್ಪನನ್ನೂ ಮೀರಿಸುವ ಖಡಕ್‌ ವಿಲನ್‌ ಒಬ್ಬರು ತಯಾರಾಗಿದ್ದಾರೆ.

Shruthi: 15 ವರ್ಷಗಳ ನಂತರ ಮೈಸೂರಿನ ಕರೀಘಟ್ಟಕ್ಕೆ ಹೋದ ಶ್ರುತಿಗೆ ಸಿಕ್ಕ ಆತ್ಮೀಯರಿವರು: ಇಲ್ಲಿವೆ ಚಿತ್ರಗಳು..!

ಲೇಟಾದರೂ ಲೇಟೆಸ್ಟಾಗಿ ಸ್ಯಾಂಡಲ್‌ವುಡ್‌ಗೆ ಎಂಟ್ರಿ ಕೊಟ್ಟಿರುವ ದೈತ್ಯ ಯೋಗೀಶ್‌ ಕುಮಾರ್‌ ಕನ್ನಡದಲ್ಲಿ ಒಬ್ಬ ಉತ್ತಮ ಖಳನಾಯಕನಾಗುವ ಭರವಸೆ ಮೂಡಿಸಿದ್ದಾರೆ. ಮೂಲತಃ ಬೆಂಗಳೂರಿನವರೇ ಆದ ಯೋಗೀಶ್‌, ಐಟಿ ವೃತ್ತಿಯಲ್ಲಿದ್ದವರು. ಬರೋಬ್ಬರಿ 20 ವರ್ಷಗಳ ಕಾಲ ಹೆಚ್‌ಪಿ ಸೇರಿದಂತೆ ಹಲವು ಕಂಪನಿಗಳಲ್ಲಿ ಕೆಲಸ ಮಾಡಿ, ಯೂರೋಪ್‌, ಅಮೆರಿಕಾ ಅಂತ ಹತ್ತಾರು ವರ್ಷಗಳ ಕಾಲ ವಿದೇಶಗಳಲ್ಲಿದ್ದು ಮತ್ತೆ ಬೆಂಗಳೂರಿಗೆ ಮರಳಿದ್ದಾರೆ.

Yogish Kumar A New Villain entering to kannada cinema industry who can beat Kattappa of Bahubali
ಯೋಗೀಶ್‌ ಕುಮಾರ್.


ಬಾಲ್ಯದಿಂದಲೂ ಸಿನಿಮಾ ಆಸೆಯಿದ್ದರೂ, ಆರ್ಥಿಕವಾಗಿ ಸದೃಢರಾಗದಿದ್ದರೆ, ಇಲ್ಲಿ ಉಳಿವಿಲ್ಲ ಎಂಬುದನ್ನೂ ಅರಿತಿದ್ದರು. ಹೀಗಾಗಿಯೇ 2 ದಶಕಗಳ ಕಾಲ ಐಟಿಯಲ್ಲಿ ದುಡಿದು, ಒಂದೂವರೆ ವರ್ಷಗಳ ಹಿಂದಷ್ಟೇ ಕನ್ನಡ ಕಿರುತೆರೆ ಹಾಗೂ ಬೆಳ್ಳಿತೆರೆಗೆ ಎಂಟ್ರಿ ಕೊಟ್ಟಿದ್ದಾರೆ. ಪ್ರಾರಂಭದಲ್ಲಿ ಕಲಾಸ್ಮೃತಿ ಹಾಗೂ ಡ್ರಾಮಾಟಿಕ್ಸ್‌ ಸೇರಿದಂತೆ ಕೆಲ ನಾಟಕ ತಂಡಗಳಲ್ಲಿ ಸೇರಿ, ಅಭಿನಯಿಸತೊಡಗಿದರು. ಹಲವು ಬಗೆಯ ಪಾತ್ರಗಳಲ್ಲಿ ನಟಿಸುತ್ತಾ, ಪಳಗಿದ ಅವರು, ಕ್ರಮೇಣ ಸ್ಮಾಲ್‌ ಸ್ಕ್ರೀನ್‌ಗೆ ಎಂಟ್ರಿ ಕೊಟ್ಟರು.

Jogi Prem: ಕಾಶ್ಮೀರದಲ್ಲಿ ಏಕ್​ ಲವ್​ ಯಾ ಚಿತ್ರತಂಡ: ವಿಡಿಯೋ ಹಂಚಿಕೊಂಡ ನಿರ್ದೇಶಕ ಪ್ರೇಮ್​..!

ವಿಶೇಷ ಅಂದರೆ ಈ ಕಡಿಮೆ ಅವಧಿಯಲ್ಲೇ ಐದಾರು ಧಾರಾವಾಹಿ ಹಾಗೂ ಮೂರ್ನಾಲ್ಕು ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ ಯೋಗಿ. ಶಾಂತಮ್‌ ಪಾಪಂ, ಸರ್ವಮಂಗಳ ಮಾಂಗಲ್ಯೇ, ಮಾಂಗಲ್ಯಂ ತಂತು ನಾನೇನಾ, ಮಹಾದೇವಿ, ಉಘೇ ಉಘೇ ಮಾದೇಶ್ವರ ಧಾರಾವಾಹಿಗಳಲ್ಲಿ ನಟಿಸಿದ್ದು ಸದ್ಯ ಅಮ್ಮೋರು ಎಂಬ ಸೀರಿಯಲ್‌ನಲ್ಲಿ ಅಭಿನಯಿಸುತ್ತಿದ್ದಾರೆ.

ಐರಾ ಹಾಗೂ ರಿವೈಂಡ್‌ ಸಿನಿಮಾಗಳಲ್ಲಿ ಸಣ್ಣ ಪಾತ್ರಗಳ ಮೂಲಕ ಸ್ಯಾಂಡಲ್‌ವುಡ್‌ಗೆ ಪದಾರ್ಪಣೆ ಮಾಡಿದ ಯೋಗೀಶ್‌, ದಂಡಪಿಂಡಗಳು ಚಿತ್ರದಲ್ಲಿ ಮೇನ್‌ ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ. ವಿಶೇಷ ಅಂದರೆ ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌ ನಟಿಸಿರುವ, ಎ. ಹರ್ಷ ಆಕ್ಷನ್‌ ಕಟ್‌ ಹೇಳುತ್ತಿರುವ ಬಹುನಿರೀಕ್ಷಿತ ಚಿತ್ರ ಭಜರಂಗಿ 2 ಚಿತ್ರದಲ್ಲೂ ವಿಲನ್‌ ಪಾತ್ರದಲ್ಲಿ ನಟಿಸಿದ್ದಾರೆ ಯೋಗಿ. ಒಟ್ಟಾರೆ ಯೋಗಿ ಕನ್ನಡದಲ್ಲಿ ಒಬ್ಬ ಉತ್ತಮ ವಿಲನ್‌ ಆಗುವ ಎಲ್ಲ ಭರವಸೆಯನ್ನೂ ಮೂಡಿಸಿದ್ದಾರೆ.
Published by:Vinay Bhat
First published: