Gaalipata 2: ಗೆದ್ದ ಖುಷಿಯಲ್ಲಿ 'ಗೋಲ್ಡನ್​' ಗ್ಯಾಂಗ್​; ಗಾಳಿಪಟ 3 ಹಾರಿಸಲು ಸಜ್ಜಾಗ್ತಿದೆ ಭಟ್ರ ಟೀಮ್​

ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಗಣೇಶ್​,  ಯೋಗರಾಜ್​ ಭಟ್ ಅವರ ಹುಚ್ಚುತನವೇ ನಮಗೆ ಇಷ್ಟ. ಇಂತಹ ಚಿತ್ರ ಮಾಡಲು ಅವರ ಹುಚ್ಚುತನದಿಂದಲೇ ಸಾಧ್ಯ ಎಂದ್ರು. ಇದೇ ವೇಳೆ ನಟ ಗಣೇಶ್ ಹಾಗೂ ಪವನ್ (Pawan) ಇಬ್ಬರು ಗಾಳಿಪಟ ಪಾರ್ಟ್​ 3 ಬಗ್ಗೆ ಸುಳಿವು ಕೊಟ್ಟಿದ್ದಾರೆ.

ಗಾಳಿಪಟ 2

ಗಾಳಿಪಟ 2

  • Share this:
ಕಳೆದ ವಾರ ರಿಲೀಸ್​ ಆದ ಗೋಲ್ಡನ್​ ಸ್ಟಾರ್​ ಗಣೇಶ್ (Golden Star Ganesh) ಅಭಿನಯದ ಹಾಗೂ ನಿರ್ದೇಶಕ ಯೋಗರಾಜ ಭಟ್ (Yogaraj Bhat) ನಿರ್ದೇಶನದ ಗಾಳಿಪಟ 2  (Gaalipata 2) ಚಿತ್ರ ಭರ್ಜರಿ ಪ್ರದರ್ಶನ ಕಾಣ್ತಿದೆ. ಸಿನಿಮಾ ಹಿಟ್ ಆದ ಖುಷಿಯಲ್ಲಿ ಚಿತ್ರ ತಂಡ ಇಂದು ಸುದ್ದಿಗೋಷ್ಠಿ ನಡೆಸಿದೆ. ಸುದ್ದಿಗೋಷ್ಠಿಯಲ್ಲಿ ಮಾತಾಡಿದ ನಟ ಗಣೇಶ್ ಹಾಗೂ ಪವನ್ (Pawan) ಇಬ್ಬರು ಗಾಳಿಪಟ ಪಾರ್ಟ್​ 3 ಬಗ್ಗೆ ಸುಳಿವು ಕೊಟ್ಟಿದ್ದಾರೆ. ನಿರ್ದೇಶಕ ಯೋಗರಾಜ್​ ಭಟ್ರನ್ನು ಹೊಗಳಿದ ಗಣೇಶ್, ನಿಮ್ಮನು ನಂಬಿ ಈ ಚಿತ್ರ ಮಾಡ್ತಿದ್ದೀನಿ ಎಂದೆ. ಭಟ್ರ ಹುಚ್ಚು ತನ ಹಾಗೇ ಇರ್ಬೇಕು ಎಂದ್ರು. ನೀವು ಮಾಡೋ ಪ್ರತಿ ಸಿನಿಮಾಗಗೂ ನೀವು ಥಿಯೇಟರ್​ಗೆ ಹೋದಾಗ ಪಪ್ಪಿಕೊಡೋದಾನಾ ಬಿಡ್ಬೇಡಿ ಎಂದ್ರು. 

ಗಾಳಿಪಡ 3 ಸುಳಿವು ಕೊಟ್ಟು ಗಣೇಶ್

ಸುದ್ದಿಗೋಷ್ಠಿಯಲ್ಲಿ ಮಾತಾಡಿದ ಗಣೇಶ್​,  ಯೋಗರಾಜ್​ ಭಟ್ ಅವರ ಹುಚ್ಚುತನವೇ ನಮಗೆ ಇಷ್ಟ. ಇಂತಹ ಚಿತ್ರ ಮಾಡಲು ಅವರ ಹುಚ್ಚುತನದಿಂದಲೇ ಸಾಧ್ಯ ಎಂದ್ರು. ನನ್ನನ್ನು ನಂಬಿ ಅವರು ಬರೆಯೋ ಕಥೆಗಳೇ ಸ್ಪೂರ್ತಿ, ನಂಗೆ ಬರೆಯೋ ಡೈಲಾಗ್ ನನ್ನು ನಾನು ಬೆಸ್ಟ್​ ಆಗಿ ಕೊಡ್ಬೇಕು ಅನ್ನೋ ಆಸೆ ಇದೆ. ನೀವು ಸರಸ್ವತಿ ಪುತ್ರ ಎಂದ ಗಣೇಶ್​, ಗಾಳಿಪಟ 3 ಬಗ್ಗೆ ಚರ್ಚೆ ಮಾಡೋಣ ಎಂದಿದ್ದಾರೆ.

ganesh starrer gaalipata 2 worldwide box office day 2 collection pvn
ಗಾಳಿಪಟ-2


ಗಾಳಿಪಟ 3 ನಲ್ಲೂ ನಾನೇ ಇರ್ತೀನಿ ಎಂದ್ರು ಪವನ್​

ಪವನ ಕೂಡ ಗಾಳಿಪಟ-2 ಚಿತ್ರದಲ್ಲಿ ತನ್ನ ಪಾತ್ರದ ಬಗ್ಗೆ ಮಾತಾಡಿದ್ರು. ನಿರ್ದೇಶಕರು ಹಾಗೂ ಗಣೇಶ್ ಅವರಿಗೆ ಧ್ಯಾನವಾದ ತಿಳಿಸಿದ ಅವರು ಗಾಳಿಪಟ 3 ನಲ್ಲೂ ನಾನೇ ಇರ್ತೀನಿ ಎಂದು ಹೇಳಿದ್ದಾರೆ. ಈ ಮೂಲಕ ಗಾಳಿಪಟ 2 ಚಿತ್ರ ತಂಡ ಗಾಳಿಪಟ 3 ಸುಳಿವುಕೊಟ್ಟಿದೆ.

 ಗಣಿ ಈಸ್​ ಬ್ಯಾಕ್​
ಗಾಳಿಪಟ-2 ನೋಡಿದ ಜನರು ಕೂಡ ಗಣೇಶ್​ ನಟನೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ. ಸಿನಿಮಾದಲ್ಲಿ ಮೊದಲ ಮೊದಲು ಜನರನ್ನು ನಕ್ಕು ನಗಿಸಿ  ಭಾವುಕರನ್ನಾಗಿ ಮಾಡೋ ಗೋಲ್ಡನ್​ ಸ್ಟಾರ್​ ನಟನೆಗೆ ಪ್ರೇಕ್ಷಕರು ಫಿದಾ ಆಗಿದ್ದು, ಗಣಿ ಈಸ್​ ಬ್ಯಾಕ್​ ಎನ್ನುತ್ತಿದ್ದಾರೆ. 14 ವರ್ಷಗಳ ಹಿಂದೆ ಗಾಳಿಪಟ 175 ದಿನ ಪ್ರದರ್ಶನ ಕಂಡು ಭರ್ಜರಿ ಯಶಸ್ಸು ಕಂಡಿತ್ತು. ಇದೀಗ ಗಾಳಿಪಟ-2 ಕೂಡ ಯಶಸ್ವಿ ಪ್ರದರ್ಶನ ಕಾಣುತ್ತಿದ್ದು, ತೆರೆಕಂಡ ಮೊದಲು ಹಾಗೂ 4ನೇ ದಿನವೇ ಭರ್ಜರಿ ಕಲೆಕ್ಷನ್ ಮಾಡಿದೆ.ಬಾಕ್ಸ್​ ಆಫೀಸ್​ನಲ್ಲಿ ಭರ್ಜರಿ ಕಲೆಕ್ಷನ್

ರಾಜ್ಯದಲ್ಲಿ 700 ಶೋ, ಹೊರ ರಾಜ್ಯಗಳಲ್ಲಿ 200, ವಿದೇಶಗಳಲ್ಲಿ 250 ಶೋ ಸೇರಿ ಮೊದಲ ದಿನವೇ 1000ಕ್ಕೂ ಅಧಿಕ ಶೋಗಳಲ್ಲಿ 'ಗಾಳಿಪಟ'-2 ಪ್ರದರ್ಶನ ಕಂಡಿದೆ. ಪ್ರೀಮಿಯರ್‌ ಶೋಗಳ ಕಲೆಕ್ಷನ್ ಕೂಡ ಸೇರಿ ಮೊದಲ ದಿನ ಅಂದಾಜು 15 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಗಾಳಿಪಾಟ ಎರಡನೇ ದಿನವೂ  10 ಕೋಟಿ ಕಲೆಕ್ಷನ್​ ಮಾಡಿದ್ದು,  ಮೂರನೇ ದಿನ 5 ಕೋಟಿ ಕಲೆಕ್ಷನ್​ ಆಗಿದ್ದು 4ನೇ ದಿನ 5 ಕೋಟಿ ಕಲೆಕ್ಷನ್ ಆಗಿದೆ.  5ನೇ ದಿನ 2 ಕೋಟಿ ದಾಟಿದ್ದು, ಒಟ್ಟು ಚಿತ್ರದ ಕಲೆಕ್ಷನ್​  37 ಕೋಟಿ ದಾಟಿದೆ ಎಂದು ಮೂಲಗಳು ತಿಳಿಸಿದೆ.   ಗೋಲ್ಡನ್ ಸ್ಟಾರ್ ಗಣೇಶ್‌ ಸಿನಿಕರಿಯರ್‌ನಲ್ಲಿ ಇದು ಭಾರೀ ಓಪನಿಂಗ್ ಎನ್ನಬಹುದಾಗಿದೆ.

ಇದನ್ನೂ ಓದಿ: Gaalipata 2: ಸಾವಿರಕ್ಕೂ ಹೆಚ್ಚು ಸ್ಕ್ರೀನ್​ಗಳಲ್ಲಿ ಹಾರಾಡ್ತಿದೆ ಗಾಳಿಪಟ-2; 3ನೇ ದಿನವೂ ಭರ್ಜರಿ ಕಲೆಕ್ಷನ್​

ಗಣೇಶ್​ಗೆ ದಿಗಂತ್​, ಪವನ್ ಸಾಥ್​

ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು 'ಗಾಳಿಪಟ' ಚಿತ್ರದಲ್ಲಿ ನಟಿಸಿದ್ದ ರಾಜೇಶ್ ಕೃಷ್ಣನ್ ಬದಲು 'ಲೂಸಿಯ' ನಿರ್ದೇಶಕ ಪವನ್ ಕುಮಾರ್ ಅಭಿನಯಿಸಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ಟರ 'ಮನಸಾರೆ' ಮತ್ತು 'ಪಂಚರಂಗಿ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಣೇಶ್‌ ಅವರ ಪುತ್ರ ವಿಹಾನ್‌ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾನೆ.
Published by:Pavana HS
First published: