Shiva Rajkumar: ಜೊತೆಯಾಗಲಿದ್ದಾರೆ ಶಿವಣ್ಣ- ಪ್ರಭುದೇವ! ಯೋಗರಾಜ್ ಭಟ್ ಹೊಸ ಸಿನಿಮಾ ಘೋಷಣೆ

ಗಾಳಿಪಟ 2 ಸಕ್ಸಸ್ ಖುಷಿಯಲ್ಲಿರುವ ಯೋಗರಾಜ್ ಭಟ್ ಈಗ ತಮ್ಮ ಮುಂದಿನ ಸಿನಿಮಾವನ್ನು ಎನೌನ್ಸ್ ಮಾಡಿದ್ದಾರೆ. ಸಖತ್ ಸ್ಟಾರ್ಸ್ ಈ ಸಿನಿಮಾದಲ್ಲಿ ಜೊತೆಯಾಗ್ತಿದ್ದಾರೆ ಅನ್ನೋದೆ ವಿಶೇಷ.

ಶಿವಣ್ಣ - ಪ್ರಭು ದೇವ ಜೊತೆ ಯೋಗರಾಜ್ ಭಟ್

ಶಿವಣ್ಣ - ಪ್ರಭು ದೇವ ಜೊತೆ ಯೋಗರಾಜ್ ಭಟ್

  • Share this:
ಗಾಳಿಪಟ 2 ಸಿನಿಮಾದ ಸಕ್ಸಸ್ ಖುಷಿಯಲ್ಲಿರುವ ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ (Yogaraj Bhat) ಅವರು ಈಗ ಅದೇ ಖುಷಿಯಲ್ಲಿ ಮತ್ತೊಂದು ಸಿನಿಮಾವನ್ನು (Cinema) ಎನೌನ್ಸ್ ಮಾಡಿದ್ದಾರೆ. ಈ ಸಿನಿಮಾದ ಹೈಲೈಟ್ ಏನಪ್ಪಾ ಎಂದರೆ ಇದರಲ್ಲಿ ಡ್ಯಾನ್ಸರ್, ಆ್ಯಕ್ಟರ್, ಡೈರೆಕ್ಟರ್ ಆಗಿರೋ ಪ್ರಭು ದೇವ (Prabhu Deva) ಅವರು ಶಿವಣ್ಣನ (Shiva Rajkumar) ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ. ಹಾಗಾಗಿ ಇದು ಸಖತ್ ಕ್ರೇಜ್ ಹುಟ್ಟಿಸುತ್ತಿದೆ. K ಕಂಟಕ D ದಮನಕ (K Kantaka D Damanaka) ಎಂದು ಹೆಸರಿಸಲಾಗಿರೋ ಸಿನಿಮಾ ಎನೌನ್ಸ್ ಮಾಡಿದ್ದು ಇದನ್ನು ರಾಕ್​ಲೈನ್ ವೆಂಕಟೇಶ್ ಹಾಗೂ ಯೋಗರಾಜ್ ಭಟ್ ನಿರ್ಮಿಸುತ್ತಿದ್ದಾರೆ. ಮುಂದಿನ ಚಿತ್ರ ಎಂದಷ್ಟೇ ಕ್ಯಾಪ್ಶನ್ ಕೊಟ್ಟು ಯೋಗರಾಜ್ ಭಟ್ ಅವರು ಫೋಟೋವನ್ನು ಫೇಸ್​ಬುಕ್​ನಲ್ಲಿ ಶೇರ್ ಮಾಡಿದ್ದಾರೆ.

ಗಾಳಿಪಟ 2 ಭರ್ಜರಿ ಪ್ರದರ್ಶನ

ನಿರ್ದೇಶಕ ಯೋಗರಾಜ್ ಭಟ್ ಹಾಗೂ ಗೋಲ್ಡನ್​​ ಸ್ಟಾರ್ ಗಣೇಶ್ ಕಾಂಬಿನೇಷನ್​ ​ ತೆರೆ ಮೇಲೆ ಮತ್ತೆ ಮೋಡಿ ಮಾಡಿದೆ. ಆಗಸ್ಟ್​ 12 ರಂದು ಕರ್ನಾಟಕ ಸೇರಿದಂತೆ, ಹೊರ ರಾಜ್ಯ ಹಾಗೂ ದೇಶ ವಿದೇಶಗಳಲ್ಲೂ ಗಾಳಿಪಟ-2 ಚಿತ್ರ ಬಿಡುಗಡೆಯಾಗಿದ್ದು, ಭರ್ಜರಿ ಪ್ರದರ್ಶನ ಕಾಣ್ತಿದೆ. ಮೊದಲ ದಿನವೇ ಬಾಕ್ಸ್​ ಆಫೀಸ್​ನಲ್ಲಿ ಗಾಳಿಪಟ-2 ಚಿತ್ರದ ಕಲೆಕ್ಷನ್​ ಸಖತ್ ಆಗಿಯೇ ಸದ್ದು ಮಾಡಿತ್ತು, ಇದೀಗ ಸಾಲು ಸಾಲು ರಜೆ ಹಿನ್ನೆಲೆ ಗಾಳಿಪಟ 2 ಸಿನಿಮಾ ಕಲೆಕ್ಷನ್ ಡಬಲ್ ಆಗಿದೆ.ಬಾಕ್ಸ್​ ಆಫೀಸ್​ನಲ್ಲಿ ಸಖತ್ ಸೌಂಡ್​

ರಾಜ್ಯದಲ್ಲಿ 700 ಶೋ, ಹೊರ ರಾಜ್ಯಗಳಲ್ಲಿ 200, ವಿದೇಶಗಳಲ್ಲಿ 250 ಶೋ ಸೇರಿ ಮೊದಲ ದಿನವೇ 1000ಕ್ಕೂ ಅಧಿಕ ಶೋಗಳಲ್ಲಿ 'ಗಾಳಿಪಟ'-2 ಪ್ರದರ್ಶನ ಕಂಡಿದೆ. ಪ್ರೀಮಿಯರ್‌ ಶೋಗಳ ಕಲೆಕ್ಷನ್ ಕೂಡ ಸೇರಿ ಮೊದಲ ದಿನ ಅಂದಾಜು 15 ಕೋಟಿಗೂ ಅಧಿಕ ಕಲೆಕ್ಷನ್ ಮಾಡಿದ್ದ ಗಾಳಿಪಾಟ ಎರಡನೇ ದಿನವೂ 10 ಕೋಟಿ ಕಲೆಕ್ಷನ್​ ಮಾಡಿದ್ದು, ಒಟ್ಟು ಚಿತ್ರದ ಕಲೆಕ್ಷನ್​ 25 ಕೋಟಿಯಾಗಿದೆ ಎಂದು ಮೂಲಗಳು ತಿಳಿಸಿದೆ. ಗೋಲ್ಡನ್ ಸ್ಟಾರ್ ಗಣೇಶ್‌ ಸಿನಿಕರಿಯರ್‌ನಲ್ಲಿ ಇದು ಭಾರೀ ಓಪನಿಂಗ್ ಎನ್ನಬಹುದಾಗಿದೆ.

ಇದನ್ನೂ ಓದಿ: Brahmastra Movie: ಹೈದ್ರಾಬಾದ್​ನಲ್ಲಿ ಬ್ರಹ್ಮಾಸ್ತ್ರ ಟೀಮ್; ಆಲಿಯಾ ಹಾಡಿಗೆ ಅಭಿಮಾನಿಗಳು ಫುಲ್ ಫಿದಾ!

ಭಟ್ರು ಹಾಗೂ ಗೋಲ್ಡನ್​ ಸ್ಟಾರ್​ ಗ್ಯಾಂಗ್​

ಚಿತ್ರದಲ್ಲಿ ಗೋಲ್ಡನ್‌ ಸ್ಟಾರ್ ಗಣೇಶ್, ದೂದ್ ಪೇಡ ದಿಗಂತ್ ಹಾಗೂ ನಿರ್ದೇಶಕ ಪವನ್ ಕುಮಾರ್ ನಾಯಕರಾಗಿ ಕಾಣಿಸಿಕೊಂಡಿದ್ದಾರೆ. ಇನ್ನು 'ಗಾಳಿಪಟ' ಚಿತ್ರದಲ್ಲಿ ನಟಿಸಿದ್ದ ರಾಜೇಶ್ ಕೃಷ್ಣನ್ ಬದಲು 'ಲೂಸಿಯ' ನಿರ್ದೇಶಕ ಪವನ್ ಕುಮಾರ್ ಅಭಿನಯಿಸಿದ್ದಾರೆ. ನಿರ್ದೇಶಕ ಪವನ್ ಕುಮಾರ್ ಈ ಹಿಂದೆ ಯೋಗರಾಜ್ ಭಟ್ಟರ 'ಮನಸಾರೆ' ಮತ್ತು 'ಪಂಚರಂಗಿ' ಸಿನಿಮಾಗಳಲ್ಲಿ ನಟಿಸಿದ್ದಾರೆ. ಚಿತ್ರದ ನಾಯಕಿಯರಾಗಿ ವೈಭವಿ ಶಾಂಡಿಲ್ಯ, ಸಂಯುಕ್ತ ಮೆನನ್, ಶರ್ಮಿಳಾ ಮಾಂಡ್ರೆ ಕಾಣಿಸಿಕೊಂಡಿದ್ದಾರೆ. ಇನ್ನು ಈ ಚಿತ್ರದಲ್ಲಿ ಗಣೇಶ್‌ ಅವರ ಪುತ್ರ ವಿಹಾನ್‌ ಸಹ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾನೆ.

ಇದನ್ನೂ ಓದಿ: Vijay Deverakonda - Samantha: ಸಮಂತಾ - ವಿಜಯ್ ದೇವರಕೊಂಡ ಸಿನಿಮಾ ಶೂಟಿಂಗ್ ರೀಸ್ಟಾರ್ಟ್

ಅನಂತ್ ನಾಗ್ ಅವರು ಕನ್ನಡ ಮೇಷ್ಟ್ರು

ಈ ಸಿನಿಮಾದಲ್ಲಿ ಹಿರಿಯ ನಟ ಅನಂತ್ ನಾಗ್ ಅವರು ಕನ್ನಡ ಮೇಷ್ಟ್ರು ಪಾತ್ರದಲ್ಲಿ ನಟಿಸಿದ್ದಾರೆ. ಸಂತೋಷ್‌ ರೈ ಪಾತಾಜೆ ಸಿನಿಮಾಟೋಗ್ರಫಿಯಿರುವ ಈ ಚಿತ್ರದಲ್ಲಿ ಪದ್ಮಜಾ ರಾವ್‌, ಸುಧಾ​ ಬೆ​ಳ​ವಾಡಿ, ರಂಗಾ​ಯಣ ರಘು ಸೇರಿದಂತೆ ಮುಂತಾದವರು ನಟಿಸುತ್ತಿದ್ದಾರೆ. ರಮೇಶ್‌ ರೆಡ್ಡಿ ಚಿತ್ರದ ನಿರ್ಮಾಪಕರು. 'ಗಾಳಿಪಟ 2' ಚಿತ್ರದ ಸ್ಯಾಟಲೈಟ್ ಮತ್ತು ಡಿಜಿಟಲ್ ಹಕ್ಕನ್ನು ಜೀ ಕನ್ನಡ ಮತ್ತು ಜೀ5 ಭಾರೀ ಮೊತ್ತಕ್ಕೆ ಖರೀದಿಸಿವೆ. ಮಾತ್ರವಲ್ಲದೇ ಆಡಿಯೋ ಹಕ್ಕುಗಳನ್ನು ಆನಂದ್ ಆಡಿಯೋ ಸಂಸ್ಥೆ ಪಡೆದುಕೊಂಡಿದೆ.
Published by:Divya D
First published: