Nimmi Passes Away: ಬಾಲಿವುಡ್​ ನಟಿ ನಿಮ್ಮಿ ಇನ್ನಿಲ್ಲ: ಅಗಲಿದ ಕಲಾವಿದೆಗೆ ನಮನ ಸಲ್ಲಿಸಿದ ರಿಷಿ ಕಪೂರ್​..!

Actress Nimmi Passes Away: ಆನ್​, ಬರ್ಸಾತ್ ​ಹಾಗೂ ದೀದಾರ್​ ಸಿನಿಮಾಗಳಲ್ಲಿ ನಿಮ್ಮಿ ನಟಿಸಿದ್ದಾರೆ. ನಿಮ್ಮಿ ಅವರ ನಿಜವಾದ ಹೆಸರು ನವಾಬ್​ ಬಾನು. ರಾಜ್​ ಕಪೂರ್ ಅವರು ಬಾನು ಅವರಿಗೆ ನಿಮ್ಮಿ ಎಂದು ಸಿನಿಮಾಗೆ ಬಂದ ನಂತರ ಮರುನಾಮಕರಣ ಮಾಡಿದ್ದರು.

Anitha E | news18-kannada
Updated:March 26, 2020, 1:45 PM IST
Nimmi Passes Away: ಬಾಲಿವುಡ್​ ನಟಿ ನಿಮ್ಮಿ ಇನ್ನಿಲ್ಲ: ಅಗಲಿದ ಕಲಾವಿದೆಗೆ ನಮನ ಸಲ್ಲಿಸಿದ ರಿಷಿ ಕಪೂರ್​..!
ಬಾಲಿವುಡ್​ ನಟಿ ನಿಮ್ಮಿ
  • Share this:
1950-60ರ ಸಮಯದಲ್ಲಿ ಪ್ರೇಕ್ಷಕರನ್ನು ರಂಜಿಸಿದ್ದ ನಟಿ ನಿಮ್ಮಿ ಇನ್ನಿಲ್ಲ. ವಯೋ ಸಹಜ ಕಾಯಿಲೆಯಿಂದ ಬಳಲುತ್ತಿದ್ದ ನಟಿ 88ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ನಿನ್ನೆ ಉಸಿರಾಟದ ತೊಂದರೆಯಿಂದ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ಸಂಜೆ ಹೊತ್ತಿಗೆ ಸಾವನ್ನಪ್ಪಿದ್ದಾರೆ.

'ಆನ್'​, 'ಬರ್ಸಾತ್' ​ಹಾಗೂ 'ದೀದಾರ್'​ ಸಿನಿಮಾಗಳಲ್ಲಿ ನಿಮ್ಮಿ ನಟಿಸಿದ್ದಾರೆ. ನಿಮ್ಮಿ ಅವರ ನಿಜವಾದ ಹೆಸರು ನವಾಬ್​ ಬಾನು. ರಾಜ್​ ಕಪೂರ್ ಅವರು ಬಾನು ಅವರಿಗೆ ನಿಮ್ಮಿ ಎಂದು ಸಿನಿಮಾಗೆ ಬಂದ ನಂತರ ಮರುನಾಮಕರಣ ಮಾಡಿದ್ದರು.

Yesteryear Actress Nimmi Passes Away Aged 88; Rishi Kapoor, Mahesh Bhatt Pay Moving Tributes
ಬಾಲಿವುಡ್​ ನಟಿ ನಿಮ್ಮಿ


'ಅಂದಾಜ್'​ ಸಿನಿಮಾದ ಸೆಟ್​ನಲ್ಲಿ ನಿಮ್ಮಿಯನ್ನು ರಾಜ್​ ಕಪೂರ್​ ಮೊದಲ ಬಾರಿಗೆ ನೋಡಿದ್ದರು. ಹೆಸರಿಕೊಂಡಿದ್ದ ಯುವತಿಯನ್ನು ನೋಡಿದ್ದ ರಾಜ್​ಕಪೂರ್​ ಅವರು 1949ರಲ್ಲಿ ಬರ್ಸಾತ್​ ಸಿನಿಮಾದಲ್ಲಿ ಎರಡನೇ ನಾಯಕಿ ಪಾತ್ರದಲ್ಲಿ ನಟಿಸುವ ಅವಕಾಶ ನೀಡಿದ್ದರು.

ಇದನ್ನೂ ಓದಿ: Roberrt Movie Release Date Postponed: ರಾಬರ್ಟ್​ ಸಿನಿಮಾ ರಿಲೀಸ್​ ದಿನಾಂಕ ಮುಂದಕ್ಕೆ: ನೆಮ್ಮದಿಯ ನಿಟ್ಟುಸಿರು ಬಿಟ್ಟ ದರ್ಶನ್​ ಅಭಿಮಾನಿಗಳು..!

'ಹವಾ ಮೆ ಉಡ್ತಾ ಜಾಯೆ.... ', 'ಮೇರಿ ಪತಲಿ ಕಮರ್...'​ ಹಾಡುಗಳಲ್ಲಿ ನಿಮ್ಮಿ ಹೆಜ್ಜೆ ಹಾಕಿದ್ದಾರೆ.

'ಬರ್ಸಾತ್' ಸಿನಿಮಾದ ಯಶಸ್ಸಿನ ನಂತರ ನಿಮ್ಮಿ ಹಿಂದೆ ತಿರುಗಿ ನೋಡಿದ್ದೇ ಇಲ್ಲ. ಆಗಿನ ಕಾಲದ ಟಾಪ್​ ನಟರಾದ ದಿಲೀಪ್​ ಕುಮಾರ್, ರಾಜ್​ ಕಪೂರ್​, ದೇವ್​ ಆನಂದ್​ ಹಾಗೂ ಅಶೋಕ್​ ಕುಮಾರ್​ ಅವರೊಂದಿಗೆ ತೆರೆ ಹಂಚಿಕೊಂಡಿದ್ದಾರೆ.

ನಟ ರಿಷಿ ಕಪೂರ್​ ಸಹ ಹಿರಿಯ ನಟಿ ಹಾಗೂ ಆಂಟಿ ನಿಮ್ಮಿ ಅವರ ನಿಧನಕ್ಕೆ ಕಂಬನಿ ಮಿಡಿದಿದ್ದಾರೆ. ಜೊತೆಗೆ ಸಿನಿ ಸೆಲೆಬ್ರಿಟಿಗಳೂ ನಮನ ಸಲ್ಲಿಸಿದ್ದಾರೆ.ನಿಮ್ಮಿ ಅವರು 'ಸಜಾ', 'ಆನ್', 'ಭಾಯ್​ ಭಾಯ್',​' ಕುಂದನ್', 'ಮೇರೆ ಮೆಹೆಬೂಬ್'​, 'ಪೂಜಾ ಕಿ ಫೂಲ್'​, 'ಆಕಾಶ್​ದೀಪ್' ಹಾಗೂ ​' ಲವ್​ ಆ್ಯಂಡ್​ ಗಾಡ್'​ ಸಿನಿಮಾಗಳಲ್ಲಿ ನಟಿಸಿದ್ದಾರೆ. 'ಲವ್ ​ಆ್ಯಂಡ್​ ಗಾಡ್'​ ಅವರ ಅಭಿನಯದ ಕೊನೆಯ ಸಿನಿಮಾ. ಸಿನಿಮಾ ಬಿಟ್ಟ ನಂತರ ನಿಮ್ಮಿ ನಿರ್ದೇಶಕ ಎಸ್.​ ಅಲಿ ರಜಾ ಅವರನ್ನು ವಿವಾಹವಾಗಿದ್ದರು. ಆದರೆ 2007ರಲ್ಲಿ ಅವರ ಪತಿಯೂ ಮರಣ ಹೊಂದಿದರು.

Nikhil-Revathi: ಬೇವು ಬೆಲ್ಲ ಹಂಚಿಕೊಂಡು ಸುಖ-ದುಖಃದಲ್ಲಿ ಸಮಪಾಲು ಸ್ವೀಕರಿಸುವುದಾಗಿ ಸಾರಿದ ನಿಖಿಲ್​-ರೇವತಿ..! 
First published: March 26, 2020, 1:41 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading