ಗಲ್ಲಾ ಪೆಟ್ಟಿಗೆಯಲ್ಲಿ ದ್ವಿಶತಕ ಬಾರಿಸಿದ ಕೆಜಿಎಫ್​; ಹೊಸ ದಾಖಲೆ ಬರೆದ ಯಶ್​ ಚಿತ್ರ

ಮಂಗಳವಾರ ಯಶ್​ ಹುಟ್ಟುಹಬ್ಬ ಒಂದೆಡೆಯಾದರೆ, ಕೆಜಿಎಫ್​ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿ ಕ್ಲಬ್ ಸೇರಿದ ಸಂಭ್ರಮ ಇನ್ನೊಂದೆಡೆ. ಇದರಿಂದ ಯಶ್​ ಹುಟ್ಟುಹಬ್ಬಕ್ಕೆ ದೊಡ್ಡ ಕೊಡುಗೆ ಸಿಕ್ಕಂತಾಗಿದೆ.

Latha CG | news18india
Updated:January 9, 2019, 12:10 PM IST
ಗಲ್ಲಾ ಪೆಟ್ಟಿಗೆಯಲ್ಲಿ ದ್ವಿಶತಕ ಬಾರಿಸಿದ ಕೆಜಿಎಫ್​; ಹೊಸ ದಾಖಲೆ ಬರೆದ ಯಶ್​ ಚಿತ್ರ
ಕೆಜಿಎಫ್​
  • Share this:
'ರಾಕಿಂಗ್​ ಸ್ಟಾರ್​' ಯಶ್​ ನಟನೆಯ 'ಕೆಜಿಎಫ್​' ಕನ್ನಡ ಚಿತ್ರರಂಗದಲ್ಲಿ ಅತಿ ಹೆಚ್ಚು ಸದ್ದು ಮಾಡಿದ ಚಿತ್ರ. ದಾಖಲೆಯ ಮೇಲೆ ದಾಖಲೆ ಬರೆಯುತ್ತಿರುವ ಈ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ ತನ್ನ ನಾಗಾಲೋಟ ಮುಂದುವರಿಸಿದೆ. ಈ ಸಿನಿಮಾ ಬಿಡುಡೆ ಆದ ಮೂರೇ ವಾರಕ್ಕೆ 200 ಕೋಟಿ ಕ್ಲಬ್​ ಸೇರಿ ದಾಖಲೆ ಬರೆದಿದೆ.

ಕ್ರಿಸ್​ಮಸ್​ ಪ್ರಯುಕ್ತ ಡಿ.21ರಂದು ಚಿತ್ರ ತೆರೆಕಂಡಿತ್ತು. ಘಟಾನುಘಟಿ ನಟರ ಸಿನಿಮಾಗಳ ಮಧ್ಯೆಯೇ ತೆರೆಕಂಡು ಗೆಲುವಿನ ನಗೆ ಬೀರಿತ್ತು. ಈಗ ಬಿಡುಗಡೆಯಾದ 18 ದಿನಗಳಲ್ಲಿ 200 ರೂ. ಸೇರಿದೆ. ಈ ಮೂಲಕ ಗಳಿಕೆಯಲ್ಲಿ ದ್ವಿಶತಕ ಗಳಿಕೆ ಮಾಡಿದ ಕನ್ನಡದ ಮೊದಲ ಸಿನಿಮಾ ಎಂಬ ಹೆಗ್ಗಳಿಕೆಗೆ 'ಕೆಜಿಎಫ್' ಪಾತ್ರವಾಗಿದೆ​.

ಇದನ್ನೂ ಓದಿ: ಯಶ್​ ಆಫರ್​ ನೀಡಿದರೆ ಈ ಬಾಲಿವುಡ್​ ನಟಿ ಕನ್ನಡ ಚಿತ್ರರಂಗಕ್ಕೆ ಕಾಲಿಡ್ತಾರಂತೆ!


ಮಂಗಳವಾರ ಯಶ್​ ಹುಟ್ಟುಹಬ್ಬ ಒಂದೆಡೆಯಾದರೆ, ಕೆಜಿಎಫ್​ ಚಿತ್ರ ಬಾಕ್ಸ್​ ಆಫೀಸ್​ನಲ್ಲಿ 200 ಕೋಟಿ ಕ್ಲಬ್ ಸೇರಿದ ಸಂಭ್ರಮ ಇನ್ನೊಂದೆಡೆ. ಇದರಿಂದ ಯಶ್​ ಹುಟ್ಟುಹಬ್ಬಕ್ಕೆ ದೊಡ್ಡ ಕೊಡುಗೆ ಸಿಕ್ಕಂತಾಗಿದೆ.ಇದನ್ನೂ ಓದಿ: ಸಿನಿಮಾ ಜತೆಗೆ ಕಟ್ಟಡ ನಿರ್ಮಾಣ ಕ್ಷೇತ್ರದಲ್ಲೂ 'ಕೆ.ಜಿ.ಎಫ್'​ ನಿರ್ಮಾಪಕರ ಕರಾಮತ್ತು..!

'ಕೆಜಿಎಫ್' ತಮಿಳು ಮತ್ತು ತೆಲುಗು ಭಾಷೆಗಳಲ್ಲೂ ಭರ್ಜರಿ ಗಳಿಕೆ ಮಾಡುತ್ತಿದೆ. ತೆಲುಗು ಅವತರಣಿಕೆಯಲ್ಲಿ​ ಈಗಾಗಲೇ 20 ಕೋಟಿ ರೂ.ಗೂ ಹೆಚ್ಚು ಹಣ ಬಾಚಿಕೊಂಡಿದೆ. ಹಿಂದಿ ಅವರತರಣಿಕೆಯಿಂದ 40 ಕೋಟಿ ರೂ. ಗಳಿಕೆ ಮಾಡಿದೆ. ಶಾರುಖ್​ ಅಭಿನಯದ 'ಝೀರೋ' ಹಾಗೂ ರಣವೀರ್​ ಸಿಂಗ್​ ನಟನೆಯ 'ಸಿಂಬಾ' ಚಿತ್ರಗಳ ಭಾರೀ ಪೈಪೋಟಿಯ ನಡುವೆಯೂ 'ಕೆಜಿಎಫ್​' ಬಾಲಿವುಡ್​ನಲ್ಲಿ ಸ್ಥಿರತೆ ಕಾಯ್ದುಕೊಂಡಿದೆ.

ಈ ಚಿತ್ರ ಕರ್ನಾಟಕವೊಂದರಲ್ಲೇ ಈ ಚಿತ್ರವು 120 ಕೋಟಿ ರೂ. ಗಳಿಕೆ ಮಾಡಿದೆ ಎನ್ನಲಾಗಿದೆ. ಇನ್ನು ಅಮೆರಿಕದಲ್ಲಿ ಕೆಜಿಎಫ್ ಚಿತ್ರ ದೊಡ್ಡ ಸಾಧನೆ ಮಾಡಿದೆ. ಅಮೆರಿಕದಲ್ಲಿ ಕೆಜಿಎಫ್​ ಚಿತ್ರ 5.31 ಕೋಟಿ ರೂ. ಗಳಿಕೆ ಮಾಡಿದ್ದು ಕನ್ನಡ ಚಿತ್ರವೊಂದು ಅಮೆರಿಕದಲ್ಲಿ ಮಾಡಿದ ಅತಿ ಹೆಚ್ಚು ಕಲೆಕ್ಷನ್ ಇದಾಗಿದೆ.

First published:January 9, 2019
ಮತ್ತಷ್ಟು ಓದಿರಿ
ಮುಂದಿನ ಸುದ್ದಿ
corona virus btn
corona virus btn
Loading