Yashoda Teaser: ಯಶೋದಾ ಚಿತ್ರದ ಟೀಸರ್​ ಔಟ್​; ಗರ್ಭಿಣಿ ಪಾತ್ರದಲ್ಲಿ ಕಾಣಿಸಿಕೊಂಡ ಸಮಂತಾ

ಯಶೋದ ಚಿತ್ರದ ಟೀಸರ್​ ನನ್ನು ಸಮಂತಾ ಶೇರ್ ಮಾಡಿಕೊಂಡಿದ್ದಾರೆ. ತನ್ನ ಟ್ವಿಟ್ಟರ್ ಪುಟದಲ್ಲಿ ಟೀಸರ್ ಹಂಚಿಕೊಂಡಿರುವ ಸಮಂತಾ, ಶಕ್ತಿ, ದೃಢತೆ ಎಂದು ಬರೆದಿದ್ದಾರೆ. ಈ ಟೀಸರ್‌ನಲ್ಲಿ ತೋರಿಸಿರುವ ಪ್ರತಿಯೊಂದು ದೃಶ್ಯವೂ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ.

ಯಶೋದಾ ಚಿತ್ರದ ಪೋಸ್ಟರ್​

ಯಶೋದಾ ಚಿತ್ರದ ಪೋಸ್ಟರ್​

  • Share this:
ಸಮಂತಾ ರುತ್ ಪ್ರಭು (Samantha) ಅವರ ಮುಂಬರುವ ಬಹುಭಾಷಾ ಚಿತ್ರ ಯಶೋದಾ ಟೀಸರ್ ರಿಲೀಸ್ (Yashoda Teaser Released)​ ಆಗಿದೆ. ಟೀಸರ್​ನಲ್ಲಿರೋ ದೃಶ್ಯಗಳನ್ನು ನೋಡಿದ್ರೆ ಗರ್ಭಿಣಿ (Pregnant) ಮಹಿಳೆ ಸುತ್ತ ನಡೆಯೋ ಥ್ರಿಲ್ಲರ್​ (Thriller) ಕಥೆ ಒಳಗೊಂಡಿರುವಂತಿದೆ. ಗರ್ಭಿಣಿ ಮಳೆಯಾಗಿ ಕಾಣಿಸಿಕೊಂಡಿರೋ ಸಮಂತಾ ಅವರು ಸಾಹಸಮಯ ದೃಶ್ಯಗಳಲ್ಲಿ ಕಾಣಿಸಿಕೊಂಡಿದ್ದಾರೆ. ಮೂಲತಃ ತೆಲುಗಿನಲ್ಲಿ (Telugu) ಚಿತ್ರೀಕರಣಗೊಂಡಿರುವ ಈ ಚಿತ್ರವನ್ನು ತಮಿಳು, ಮಲಯಾಳಂ, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಡಬ್ ಮಾಡಿ ಬಿಡುಗಡೆ ಮಾಡಲಾಗುವುದು.



ಗರ್ಭಿಣಿ ಪಾತ್ರದಲ್ಲಿ ಯಶೋಧ

ಯಶೋದಾ ಪಾತ್ರದಲ್ಲಿ ಕಾಣಿಸಿಕೊಂಡಿರೋ ಸಮಂತಾ ಅವರಿಗೆ ಡಾಕ್ಟರ್​ ನೀವು ಗರ್ಭಿಣಿ ಎಂದು ಹೇಳುವ ಮೂಲಕ ಟೀಸರ್ ಬಿಡುಗಡೆಯಾಗಲಿದೆ. ಈ ವೇಳೆ ಗರ್ಭಾವಸ್ಥೆಯ ಅವಧಿಯಲ್ಲಿ ತನ್ನನ್ನು ತಾನು ಹೆಚ್ಚು ಕಾಳಜಿ ವಹಿಸುವಂತೆ ವೈದ್ಯರು ಸಲಹೆ ನೀಡುತ್ತಿದ್ದಂತೆ, ಆಕೆಯನ್ನು ಯಾರೋ ಬೆನ್ನಟ್ಟಿದ ದೃಶ್ಯಗಳು ನಾವು ನೋಡಬಹುದು. ಇದು ಬದುಕುಳಿಯುವ ಥ್ರಿಲ್ಲರ್‌ಗಾಗಿ ಸೀಟಿನ ಅಂಚಿನ ಹೋರಾಟದಂತೆ ತೋರುತ್ತಿದೆ.

ಟೀಸರ್​ ಹಂಚಿಕೊಂಡ ಸಮಂತಾ

ಯಶೋದ ಚಿತ್ರದ ಟೀಸರ್​ ನನ್ನು ಸಮಂತಾ ಶೇರ್ ಮಾಡಿಕೊಂಡಿದ್ದಾರೆ. ತನ್ನ ಟ್ವಿಟ್ಟರ್ ಪುಟದಲ್ಲಿ ಟೀಸರ್ ಹಂಚಿಕೊಂಡಿರುವ ಸಮಂತಾ, ಶಕ್ತಿ, ದೃಢತೆ ಎಂದು ಬರೆದಿದ್ದಾರೆ. ಈ ಟೀಸರ್‌ನಲ್ಲಿ ತೋರಿಸಿರುವ ಪ್ರತಿಯೊಂದು ದೃಶ್ಯವೂ ಸಿನಿಮಾದ ಬಗ್ಗೆ ಕುತೂಹಲ ಮೂಡಿಸಿದೆ. ಅಂದಹಾಗೆ ಈ ಸಿನಿಮಾದಲ್ಲಿ ಸಮಂತಾ ಪಾತ್ರ ಹಿಂದೆಂದೂ ಕಂಡಿರದ ರೀತಿ ಇರಲಿದೆ.



ಯಶೋಧ ವೈಜ್ಞಾನಿಕ ಥ್ರಿಲ್ಲರ್​ ಚಿತ್ರ

ಹರಿ-ಹರೀಶ್ ನಿರ್ದೇಶಿಸಿದ ಯಶೋದಾ ಒಂದು ವೈಜ್ಞಾನಿಕ ಥ್ರಿಲ್ಲರ್​ ಚಿತ್ರ ಎಂದು ಹೇಳಲಾಗುತ್ತದೆ. ಇದನ್ನು ತೆಲುಗು ಮತ್ತು ತಮಿಳಿನಲ್ಲಿ ಚಿತ್ರೀಕರಿಸಲಾಗಿದೆ. ಈ ಎರಡು ಭಾಷೆಗಳಲ್ಲದೆ ಹಿಂದಿ, ಮಲಯಾಳಂ ಮತ್ತು ಕನ್ನಡದಲ್ಲೂ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಚಿತ್ರದಲ್ಲಿ ವರಲಕ್ಷ್ಮಿ ಶರತ್‌ಕುಮಾರ್, ಉನ್ನಿ ಮುಕುಂದನ್, ರಾವ್ ರಮೇಶ್ ಮತ್ತು ಸಂಪತ್ ರಾಜ್ ಕೂಡ ನಟಿಸಿದ್ದಾರೆ.

ಸಾಲು ಸಾಲು ಸಿನಿಮಾಗಳಲ್ಲಿ ಸಮಂತಾ ಬ್ಯುಸಿ

ನಾಗ ಚೈತನ್ಯ ಅವರೊಂದಿಗಿನ ವಿಚ್ಛೇದನದ ನಂತರ, ಸಮಂತಾ ಸಿನಿಮಾ ಕ್ಷೇತ್ರದಲ್ಲಿ ಹೆಚ್ಚು ಸಕ್ರೀಯರಾಗಿದ್ದಾರೆ. ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿರುವ ಅವರು ಶೂಟಿಂಗ್​ನಲ್ಲಿ ಬ್ಯುಸಿ ಆಗಿದ್ದಾರೆ. ಒಂದು ನಿಮಿಷವೂ ಬಿಡುವಿಲ್ಲದೇ ಕಮಿಟ್ ಮಾಡಿದ ಸಿನಿಮಾಗಳನ್ನೆಲ್ಲಾ ಮುಗಿಸುತ್ತಿದ್ದಾರೆ. ಇದೀಗ ಸಮಂತಾ ಅಭಿನಯದ ಶಾಕುಂತಲಂ ಸಿನಿಮಾ ಮುಗಿಸಿರುವ ಸ್ಯಾಮ್ ಈಗ ಯಶೋದಾ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಈ ಸಿನಿಮಾ ಬಿಡುಗಡೆಗೆ ಸಿದ್ಧತೆ ನಡೆಸಿರುವ ಹಿನ್ನೆಲೆಯಲ್ಲಿ ಚಿತ್ರದ ಟೀಸರ್ ಬಿಡುಗಡೆ ಮಾಡಿದ್ದಾರೆ.

ಸಮಂತಾ ಮುಂಬರುವ ಸಿನಿಮಾಗಳು 

ವಿಜಯ್ ಸೇತುಪತಿ ಮತ್ತು ನಯನತಾರಾ ಅವರೊಂದಿಗೆ ವಿಘ್ನೇಶ್ ಶಿವನ್ ಅವರ ಕಾತುವಾಕುಲ ಎರಡು ಕಾದಲ್ ನಲ್ಲಿ ಸಮಂತಾ ಕೊನೆಯದಾಗಿ ಕಾಣಿಸಿಕೊಂಡಿದ್ದರು . ಅವರ ಮುಂಬರುವ ಚಿತ್ರಗಳಲ್ಲಿ ಗುಣಶೇಖರ್ ಅವರ ಶಾಕುಂತಲಂ ಸೇರಿವೆ, ಅಲ್ಲಿ ಅವರು ಪ್ರಮುಖ ಪಾತ್ರವನ್ನು ನಿರ್ವಹಿಸುತ್ತಾರೆ. ಅವರು ವಿಜಯ್ ದೇವರಕೊಂಡ ಜೊತೆಗೆ ಕುಶಿ ಚಿತ್ರದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ರಾಜ್ ಮತ್ತು ಡಿಕೆ ಅವರ ಅಮೆಜಾನ್ ಪ್ರೈಮ್ ವೀಡಿಯೊ ಸರಣಿ, ದಿ ಫ್ಯಾಮಿಲಿ ಮ್ಯಾನ್‌ನಲ್ಲಿ ಕಾಣಿಸಿಕೊಂಡ ನಂತರ ಸಮಂತಾ ಬಾಲಿವುಡ್​​ ಅಭಿಮಾನಿಗಳನ್ನು ಗಳಿಸಿದ್ದಾರೆ.
Published by:ಪಾವನ ಎಚ್ ಎಸ್
First published: