Yashika Aannand: ನಟಿ ಯಶಿಕಾ ಆನಂದ್​ಗೆ ಭೀಕರ ಅಪಘಾತ; ಸಾವು-ಬದುಕಿನ ನಡುವೆ ಹೋರಾಟ

ಈ ಶಾಕಿಂಗ್​ ಸುದ್ದಿ ಕೇಳಿದ ಬಳಿಕ ದಿಗ್ಭ್ರಮೆಗೊಂಡ ಯಶಿಕಾ ತಂದೆ ದೆಹಲಿಯಿಂದ ಚೆನ್ನೈಗೆ ಧಾವಿಸಿದ್ದಾರೆ.

ಯಶಿಕಾ ಆನಂದ್

ಯಶಿಕಾ ಆನಂದ್

 • Share this:
  ಬೆಂಗಳೂರು(ಜು.25): ದಕ್ಷಿಣ ಭಾರತ ಚಲನಚಿತ್ರರಂಗದ ನಟಿ ಹಾಗೂ ಮಾಡೆಲ್​ ಯಶಿಕಾ ಆನಂದ್ ಶನಿವಾರ ಮಧ್ಯರಾತ್ರಿ 1 ಗಂಟೆಗೆ ಕಾರು ಅಪಘಾತಕ್ಕೀಡಾಗಿದ್ದಾರೆ. ಮಹಾಬಲಿಪುರಂ ಸಮೀಪದ ಈಸ್ಟ್​ ಕೋಸ್ಟ್​ ರಸ್ತೆಯಲ್ಲಿ ಶನಿವಾರ ಮಧ್ಯರಾತ್ರಿ ಅಪಘಾತ ಸಂಭವಿಸಿದೆ. ಯಶಿಕಾ ಜೊತೆಗೆ ಆಕೆಯ ಮೂವರು ಗೆಳತಿಯರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಚಾಲಕನ ನಿಯಂತ್ರಣ ತಪ್ಪಿ ಈ ದುರಂತ ಸಂಭವಿಸಿದೆ ಎಂದು ಮೂಲಗಳು ತಿಳಿಸಿವೆ. ಯಶಿಕಾ ಅವರ ಇಬ್ಬರು ಗೆಳೆಯರು ತೀವ್ರ ಗಾಯಗೊಂಡಿದ್ದು, ಮತ್ತೋರ್ವ ಗೆಳತಿ ವಾಲಿಚೆಟ್ಟಿ ಭವಾನಿ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ. ನಟಿ ಯಶಿಕಾ ಆನಂದ್​ ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸದ್ಯದ ಮಾಹಿತಿ ಲಭಿಸಿದೆ.

  ಗಾಯಗೊಂಡ ಯಶಿಕಾ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದ್ದು, ಅವರ ಪರಿಸ್ಥಿತಿ ತೀರಾ ಗಂಭೀರವಾಗಿದೆ ಎಂದು ತಿಳಿದು ಬಂದಿದೆ. ಈ ಶಾಕಿಂಗ್​ ಸುದ್ದಿ ಕೇಳಿದ ಬಳಿಕ ದಿಗ್ಭ್ರಮೆಗೊಂಡ ಯಶಿಕಾ ತಂದೆ ದೆಹಲಿಯಿಂದ ಚೆನ್ನೈಗೆ ಧಾವಿಸಿದ್ದಾರೆ.

  ಇದನ್ನೂ ಓದಿ:Karnataka Rains: ರಾಜ್ಯದಲ್ಲಿ ಭಾರೀ ಮಳೆಗೆ 9 ಜನ ಬಲಿ, ಮೂವರು ಕಣ್ಮರೆ; ಕೃಷ್ಣಾ ನದಿ ತೀರದಲ್ಲಿ ಪ್ರವಾಹ

  ಸಹ ನಟ ಎಸ್​ಜೆ ಸೂರ್ಯ ಈ ಸುದ್ದಿಯನ್ನು ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದು, ಯಶಿಕಾ ಶೀಘ್ರ ಗುಣಮುಖ ಆಗಲಿ ಎಂದು ಪ್ರಾರ್ಥಿಸಿದ್ದಾರೆ. ಯಶಿಕಾ ಮತ್ತು ಎಸ್​​ಜೆ ಸೂರ್ಯ ಕದಾಮೈಯಿ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದರು.

  ಯಶಿಕಾ ಇನ್​​ಸ್ಟಾಗ್ರಾಂ ಮಾಡೆಲ್​​ ಆಗುವ ಮೂಲಕ ತನ್ನ ನಟನೆಯನ್ನು ಆರಂಭಿಸಿದ್ದರು. ತಮ್ಮ 14ನೇ ವಯಸ್ಸಿನಲ್ಲೇ ಸಾಂತಾನಮ್​ ಚಿತ್ರದಲ್ಲಿ ನಟಿಸಿದ್ದರು. ಯಶಿಕಾ ಅನೇಕ ತಮಿಳು ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದಾರೆ.
  Published by:Latha CG
  First published: