ಸ್ಯಾಂಡಲ್ವುಡ್ ಪ್ರಿನ್ಸೆಸ್ ರಾಧಿಕಾ ಪಂಡಿತ್ ಮದುವೆಯಾದ ನಂತರ ಚಿತ್ರರಂಗದಿಂದ ಕೊಂಚ ದೂರವೇ ಉಳಿದಿದ್ದರು. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ 'ಆದಿ ಲಕ್ಷ್ಮೀ ಪುರಾಣ' ಸಿನಿಮಾ ತೆರೆಕಂಡಿದ್ದು ಬಿಟ್ಟರೆ ರಾಧಿಕಾ ಬೇರಾವ ಸಿನಿಮಾವನ್ನೂ ಒಪ್ಪಿಕೊಂಡಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿರುವ ಅವರು ತಮ್ಮ ಕುಟುಂಬದ ಬಗ್ಗೆ ಅಪ್ಡೇಟ್ ಕೊಡುತ್ತಾ ಇರುತ್ತಾರೆ. ಯಶ್ ಹಾಗೂ ರಾಧಿಕಾ ಪಂಡಿತ್ ರೀತಿಯಲ್ಲೇ ಈಗ ಅವರ ಮಕ್ಕಳಿಗೂ ಅಪಾರ ಅಭಿಮಾನಿಗಳು ಹುಟ್ಟಿಕೊಂಡಿದ್ದಾರೆ. ಅದರಲ್ಲೂ ಆಯ್ರಾ ಯಶ್ಗೆ ಫ್ಯಾನ್ ಪೇಜ್ ಕೂಡ ಹುಟ್ಟಿಕೊಂಡಿದೆ.
ಮಗಳ ಮುದ್ದಾದ ಫೋಟೋ, ವಿಡಿಯೋ ತುಣುಕುಗಳನ್ನು ಇನ್ಸ್ಟಾಗ್ರಾಂನಲ್ಲಿ ಆಗಾಗ ಅಪ್ಲೋಡ್ ಮಾಡುತ್ತಿರುವ ರಾಧಿಕಾ ಪಂಡಿತ್ ಮತ್ತೊಂದು ವಿಡಿಯೋ ಶೇರ್ ಮಾಡಿಕೊಂಡಿದ್ದಾರೆ. ಉಗುರು ಕಟ್ ಮಾಡುವಾಗ ಮಗಳು ಆಯ್ರಾ ಎಂಜಾಯ್ ಮಾಡುವ ವಿಡಿಯೋವನ್ನು ರಾಧಿಕಾ ಪಂಡಿತ್ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: Happy Birthday Ayra: ಮಗಳು ಆಯ್ರಾ ಹುಟ್ಟುಹಬ್ಬಕ್ಕೆ ವಿಭಿನ್ನವಾಗಿ ಶುಭಾಶಯ ಕೋರಿದ ರಾಧಿಕಾ ಪಂಡಿತ್
ಸಾಮಾನ್ಯವಾಗಿ ಉಗುರು ಕಟ್ ಮಾಡುವಾಗ ಮಕ್ಕಳು ಹಠ ಮಾಡುತ್ತಾರೆ. ಅದಕ್ಕೆಂದೇ ನೇಲ್ ಕಟರ್ನಲ್ಲಿ ಮಗಳ ಉಗುರು ಕಟ್ ಮಾಡುವಾಗ ಆಕೆಯ ಗಮನವನ್ನು ಬೇರೆಡೆಗೆ ಸೆಳೆದು, ಮಗಳನ್ನು ನಗಿಸುತ್ತಾ, ತಾವೂ ಆಕೆಯೊಂದಿಗೆ ಸಂಭ್ರಮಿಸುತ್ತಾ ಉಗುರು ತೆಗೆಯುತ್ತಿರುವ ರಾಧಿಕಾ ಪಂಡಿತ್ ವಿಡಿಯೋ ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ